ಕೊಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ :
08-10-2016 ರಂದು ಮುಂಜಾನೆ ನಾನು
ಮತ್ತು ನನ್ನ ಹೆಂಡತಿಯಾದ ನಿಂಗಮ್ಮ ಇಬ್ಬರು ಕೂಡಿಕೊಂಡು ಕೊಡ್ಲಾ ಗ್ರಾಮದಿಂದ ತೇಲಕೂರ ಗ್ರಾಮಕ್ಕೆ
ಹೊಗಬೇಕು ಅಂತಾ ಅಟೊದಲ್ಲಿ ಸೇಡಂಕ್ಕೆ ಹೊರಟಾಗ ಸೇಡಂ ಪಟ್ಟಣದ ಕೋಡ್ಲಾ ಕ್ರಾಸ ದಾಟಿ ಕಟ್ಟಿಗೆ
ಅಡ್ಡಾ ಹತ್ತಿರ ಕೆಲವು ಜನರು ಒಬ್ಬ ಹೆಣ್ಣು ಮಗಳ ಹೆಣ ಬಿದ್ದಿರುತ್ತದೆ ಅಂತಾ ಜಮಾಯಿಸಿ ನೋಡುತ್ತಿದ್ದರು. ಆಗ
ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಸದರಿ ಹೆಣವನ್ನು ನೋಡಲಾಗಿ ಅದು ನಮ್ಮೂರ ನಮ್ಮ
ಸೋದರತ್ತೆಯಾದ ಬುಗ್ಗಮ್ಮ ಗಂಡ ಸಿದ್ದಪ್ಪ ಮಾಡನವರ ಸಾ :
ಕೋಡ್ಲಾ ಇವಳು ಇದ್ದಳು ಅವಳು ಈಗ ಸುಮಾರು
ದಿನಗಳಿಂದ ಹುಚ್ಚಳಂತೆ ಸೇಡಂ ಪಟ್ಟಣದಲ್ಲಿ ತಿರುಗಾಡುತ್ತಿದ್ದಳು ಅವಳ ತಲೆಗೆ ಮುಖಕ್ಕೆ,
ಕಣ್ಣಿನ ಹತ್ತಿರ ಯಾವುದೋ ವಸ್ತುವಿನಿಂದ ಹೊಡೆದು ಯಾವುದೋ ದುರುದ್ದೇಶದಿಂದ ಯಾರೋ ದುಷ್ಕರ್ಮಿಗಳು
ಕೊಲೆ ಮಾಡಿರುತ್ತಾರೆ. ಕಾರಣ ಸದರಿ ನನ್ನ ಸೊದರತ್ತೆಯಾದ ಬುಗ್ಗಮ್ಮ ಗಂಡ
ಸಿದ್ದಪ್ಪ ಮಾಡಾನವರು ಸಾ : ಕೋಡ್ಲಾ ಇವಳನ್ನು ಕೊಲೆ ಮಾಡಿದವರನ್ನು ಪತ್ತೆಮಾಡಿ
ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಶ್ರೀ ಬಿಚ್ಚಪ್ಪ
ತಂದೆ ಬುಗ್ಗಪ್ಪ ಮಂಗಾ ಸಾ : ಕೊಡ್ಲಾ ಗ್ರಾಮ ತಾ : ಸೇಡಂ ಇವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸೈಯದ ದಸ್ತಗಿರ ತಂದೆ ಸೈಯದ ಅಬ್ದುಲ ಹಮೀದ ಇವರು ಮತ್ತು ತನ್ನ
ತಮ್ಮ ಎಸ್.ಕೆ ಸೈಯಿದ ಇಬ್ಬರು ಕೂಡಿ ತಮ್ಮ ಗ್ರಾಮವಾದ ರಾಜೋಳ ಗ್ರಾಮದ ಸೀಮಾಂತರದಲ್ಲಿರುವ ತೋಟದ
ಹೊಲಕ್ಕೆ ದಿನಾಂಕ 02/09/2016 ರಂದು ಶಿಪ್ಟ್ ಕಾರ ನಂ. ಕೆಎ 53 - ಸಿ 786 ನೇದ್ದರಲ್ಲಿ ಹೋಗಿ, ರಾತ್ರಿ ಅಲ್ಲಿಯೆ ಉಳಿದುಕೊಂಡು ಮರಳಿ ಕಲಬುರಗಿಗೆ ಬರುವ ಕುರಿತು ಇದೆ
ಕಾರಿನಲ್ಲಿ ಬರುವಾಗ, ಎಸ್.ಕೆ ಸಯೀದ ಇವರ ಕಾರನ್ನು
ನಿಧಾನವಾಗಿ ನಡೆಸಿಕೊಂಡು ಬರುವಾಗ, ಬೆಳಿಗ್ಗೆ 9:30 ಗಂಟಡೆ ಸುಮಾರಿಗೆ ಕಿಣ್ಣಿ ಸಡಕಿನ ಸೀಮಾಂತರದಲ್ಲಿರುವ ಮಹಿಬೂಬ
ಸುಬಾನಿ ದರ್ಗಾ ಹತ್ತಿರ ಹೋಗುತ್ತಿದ್ದಂತೆ, ಅದೆ ವೇಳೆಗೆ ಕಲಬುರಗಿ ರೋಡಿನ
ಕಡೆಯಿಂದ ಒಂದು ಲಾರಿ ನಂ. ಯು.ಪಿ 32 - ಸಿಎನ್ 6344 ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಆಲಕ್ಷತನದಿಂದ
ನಡೆಸಿಕೊಂಡು ಬಂದವನೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ತನಗೆ ಅಂತಹ ಗಾಯವಾಗಲಿಲ್ಲ. ತಮ್ಮ ಎಸ್.ಕೆ
ಸೈಯದನಿಗೆ ತಲೆಗೆ ಮತ್ತು ಇತರೆ ಕಡೆಗಳಲ್ಲಿ ಭಾರಿ ಪ್ರಮಾಣದ ಗಾಯಗಳಾಗಿದ್ದು, ಮುಂದೆ ಉಪಚಾರ ಕುರಿತು ಸಕಕಾರಿ ಆಸ್ಪತ್ರೆ ನಂತರ ಹೆಚ್ಚಿನ
ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ದಿನಾಂಕ 08/10/2016 ರಂದು ಸೈಯದ ದಸ್ತಗಿರ ಇವರು
ಕಮಲಾಪೂರ ಪೊಲೀಸ್ ಠಾಣೆಗೆ ಹಾಜರಾಗಿ ಪುನಃ ಒಂದು ಪುರವಣಿ ಹೇಳಿಕೆ ನೀಡಿದ್ದೆನೆಂದರೆ, ತನ್ನ ತಮ್ಮ ಎಸ್.ಕೆ ಸೈಯಿದ ಇವರಿಗೆ ಈ ಮೇಲಿನ ಘಟನೆಯಲ್ಲಿ ಹೆಚ್ಚಿನ
ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಿಂದ ಹೈದ್ರಾಬಾದಿನ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು
ಹೋಗಿದ್ದು, ಅಲ್ಲಿ ಉಪಚಾರ ಪಡೆಯುವ ಕಾಲಕ್ಕೆ
ಅಲ್ಲಿಂದ ಇಲ್ಲಿಯವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿಯೆ ಇದ್ದು, ಗುಣಮುಖನಾಗದೆ ನಿನ್ನೆ ದಿನಾಂಕ 07/10/2016 ರಂದು ರಾತ್ರಿ 08:02 ನಿಮಿಷಕ್ಕೆ
ಮೃತಪಟ್ಟಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment