ಅಪಘಾತ ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ 17/10/2016
ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಶರಣಸಿರಸಗಿ ಮತ್ತು ತಾಂಡಾದ ಮದ್ಯದಲ್ಲಿ ಚಂದ್ರಕಾಂತ ರಾಯಚೂರಕರ ಇತನು ದರ್ಶನದಾಬದಲ್ಲಿ ಕೆಲಸ
ಮುಗಿಸಿಕೊಂಡು ಮರಳಿ ಮನೆಗೆ ನಡೆದುಕೊಂಡು
ಬರುತಿರುವಾಗ ಬೆಳಿಗ್ಗೆ 10.45 ಗಂಟೆ ಸುಮಾರಿಗೆ ಮನೆಗೆ ಹೋಗುವಾಗ ಮುಂಜಾನೆ 11 ಗಂಟೆ
ಕಾಲಕ್ಕೆ ಅಫಜಲಪೂರ ರೋಡಿನ ಕಡೆಯಿಂದ ಹೊಂಡಾ ಡ್ರಿಮ್ ಯುಗಾ ಹೊಸ ಮೋಟಾರ ಸೈಕಲ್ನ ಮೇಲೆ
ಅತಿವೇಗದಿಂದ ಮತ್ತು ಅಲಕ್ಷತನದಿಂದ ಡಿಕ್ಕಿ ಹೊಡೆದಿದ್ದರಿಂದ ಅವನಿಗೆ ಮೂಗಿಗೆ, ಹಣೆಗೆ, ಇತರ
ಕಡೆಗಳಿಗೆ ಭಾರಿಗಾಯವಾಗಿ ಸ್ಥಳದಲ್ಲೇ
ಮೃತಪಟ್ಟಿರುತ್ತಾರೆ. ಮತ್ತು ಆ ಮೋಟಾರ ಸೈಕಲಿಗೆ
ಇನ್ನು ನಂಬರ ಬಿದ್ದಿರುವುದಿಲ್ಲಾ. ಕಪ್ಪು ಬಣ್ಣದಿದ್ದು ಹೊಂಡಾ ಡ್ರಿಮ್ ಯುಗಾ ಗಾಡಿ ಇರುತ್ತದೆ
ಸದರಿ ಹೊಂಡಾ ಡ್ರಿಮ್ ಯುಗಾ ಮೋಟಾರ ಸೈಕಲ್ ನಡೆಸಿದವನ ಹೆಸರು ಬಸವರಾಜ ತಂದೆ ಜಗದೇವಪ್ಪ ಜಮಾದಾರ
ಮು: ಹಳ್ಳೆಯುಳ ಅಂತಾ ಗೊತ್ತಾಗಿದ್ದುಇರುತ್ತದೆ ಅಂತಾ ಶ್ರೀ ಅಂಬರೀಷ ತಂದೆ
ಚಂದ್ರಕಾಂತ ರಾಯಚೂರಕರ ಮು;ವಿಜಯನಗರ ಕಾಲೂನಿ ಕಲಬುರಗಿ
ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ
ಠಾಣೆ : ಶ್ರೀ ವೆಂಕಟರೆಡ್ಡಿ ತಂದೆ ಲಿಂಗಣ್ಣ ಮಾಲಿ ಸಾ :
ಗುಂಡಗುರ್ತಿ ತಾ : ಶಹಾಪೂರ ಹಾ.ವ : ವಿದ್ಯಾನಗರ ಸೇಡಂ ಇವರು ಶ್ರೀ ಸಿಮೆಂಟ ಕೊಡ್ಲಾ ಕಂಪನಿಯಲ್ಲಿ
ಸೆಕ್ಯೂರಿಟಿ ಸುಪರವೈಜರ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಇದ್ದು
ಉಪಜೀವನ ಸಾಗಿಸುತ್ತೆನೆ. ದಿನಾಂಕ : 14-10-2016 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನನ್ನ
ಹೆಂಡತಿಯು ತನ್ನ ತವರು ಮನೆಯಾದ ಜೊಳದಡಗಿ ಗ್ರಾಮ ತಾ : ದೇವದುರ್ಗಕ್ಕೆ ಹೊಗಿದ್ದು ನಾನು
ಪ್ರತಿದಿವಸದಂತೆ ದಿನಾಂಕ : 15-10-2016 ರಂದು ಸಾಯಂಕಾಲ 6 ಗಂಟೆಗೆ ಶ್ರೀ ಸಿಮೆಂಟ ಕೊಡ್ಲಾ
ಕಂಪನಿಯಲ್ಲಿ ಕೆಲಸಕ್ಕೆ ಹೊದೆನು ನಂತರ ದಿನಾಂಕ : 16-10-2016 ರಂದು ನನ್ನ ಕೆಲಸ ಮುಗಿಸಿಕೊಂಡು
ರಾತ್ರಿ 7-45 ಪಿ.ಎಂಕ್ಕೆ ಮನೆಗೆ ಬಂದೆನು ಆಗ ನನ್ನ ಮನೆಯ ಬಾಗಿಲ ಕಿಲಿ ಕೊಂಡಿ ಮುರಿದಿತ್ತು
ನಾನು ಗಾಬರಿಯಾಗಿ ನಮ್ಮ ಅಕ್ಕಪಕ್ಕದ ಮನೆಯ ಪರಿಚಯದ ಶರಣರೆಡ್ಡಿ ತಂದೆ ಚಂದ್ರರೆಡ್ಡಿ
ಕೊಲ್ಲಂಪಲ್ಲಿ ಮತ್ತು ಸುರೇಶ ತಂದೆ ಬಸವರಾಜ ಅಕ್ಕಂ ಇವರಿಗೆ ಕರೆದು ಮನೆಯೊಳಗೆ ಹೊಗಿ ನೋಡಲಾಗಿ
ಮನೆಯಲ್ಲಿದ್ದ ಒಂದು LED TV ಕಾಣಲಿಲ್ಲ ಮತ್ತು ಬೆಡರೂಮಿನಲ್ಲಿ ನೋಡಲಾಗಿ
ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಶೋಕೇಸದ ಡಬ್ಬದಲ್ಲಿದ್ದ ನಗದು ಹಣ 20000/- ರೂ.
ಇರಲಿಲ್ಲ ದಿನಾಂಕ : 15-10-2016 ರಂದು ಸಾಯಂಕಾಲ 6 ಗಂಟೆಯಿಂದ ನಿನ್ನೆ
ದಿನಾಂಕ : 16-10-2016 ರಂದು 7-45 ಪಿ.ಎಂ ದೊಳಗೆ ಯಾರೊ ಕಳ್ಳರು ನನ್ನ ಮನೆಯ ಬಾಗಿಲ ಕಿಲಿ
ಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ ಮತ್ತು ಟಿ.ವಿ ಕಳ್ಳತನ ಮಾಡಿಕೊಂಡು
ಹೊಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment