ಪ್ರತಿಕಾ ಪ್ರಕಟಣೆ
ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಲಬುರಗಿ
ಜಿಲ್ಲೆಯಲ್ಲಿ ಡ್ರಗ್ ಡಿಸ್ಪೋಜಲ್ ಕಮಿಟಿ ರಚಿಸಲಾಗಿತ್ತು, ಅದರಂತೆ ಕಲಬುರಗಿ ಜಿಲ್ಲೆಯ ವಿವಿಧ
ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ (N.D.P.S. Act ) ಅಡಿಯಲ್ಲಿ ಒಟ್ಟು 21 ಪ್ರಕರಣಗಳಲ್ಲಿ ವಶಪಡಿಸಿಕೊಂಡ 89
ಕೆ.ಜಿ. 95 ಗ್ರಾಂ ಗಾಂಜಾ ಮತ್ತು 790 ಗ್ರಾಂ ನವಸಾಗರವನ್ನು ಡ್ರಗ್ ಡಿಸ್ಪೋಜಲ್ ಕಮಿಟಿ
ಕಲಬುರಗಿಯ ಅಧ್ಯಕ್ಷರಾದ ಶ್ರೀ ಎನ್. ಶಶಿಕುಮಾರ ಆರಕ್ಷಕ ಅಧೀಕ್ಷಕರು ಕಲಬುರಗಿ, ಹಾಗೂ
ಡ್ರಗ್ ಡಿಸ್ಪೋಜಲ್ ಕಮಿಟಿಯ ಸದಸ್ಯರಾದ ಶ್ರೀ ಪಿ.ಡಿ.ಗಜಕೋಶ ಡಿ.ಎಸ್.ಪಿ ಆಳಂದ ಉಪ ವಿಭಾಗ ಮತ್ತು
ಶ್ರೀ ಎಸ್.ಜಾಹ್ನವಿ ಡಿ.ಎಸ್.ಪಿ (ಎ) ಉಪ ವಿಭಾಗ ಕಲಬುರಗಿ ಮತ್ತು ಶ್ರೀ ಎಸ್.ಎಸ್.ಹುಲ್ಲೂರು
ಡಿ.ಎಸ್.ಪಿ ಡಿ.ಸಿ.ಆರ್.ಬಿ. ಘಟಕ ಕಲಬುರಗಿ ಹಾಗೂ ಶ್ರೀ ದಿವಾಕರ ಪರಿಸರ ಅಧಿಕಾರಿ ಕಲಬುರಗಿ, ಶ್ರೀ
ಆದಮ ಪಟೇಲ್, ಸಹಾಯಕ ಪರಿಸರ ಅಧಿಕಾರಿ ಕಲಬುರಗಿ, ರವರ ಸಮ್ಮುಖದಲ್ಲಿ ಚಿತ್ತಾಪೂರ ತಾಲೂಕಿನ ವಾಡಿ
ಪಟ್ಟಣದ ಮೇ|| ಎ.ಸಿ.ಸಿ. ಪ್ರೈವೆಟ್ ಲಿಮಿಟೆಡ್ ವಾಡಿಯಲ್ಲಿ ದಿನಾಂಕ;18-10-2016 ರಂದು ನಾಶಗೊಳಿಸಲಾಯಿತು
ಪೊಲೀಸ್ ಅಧೀಕ್ಷಕರು
ಕಲಬುರಗಿ
ಅತ್ಯಾಚಾರ ಪ್ರಕರಣ :
ಮುಧೋಳ ಠಾಣೆ : ದಿನಾಂಕ: 18-10-2016 ರಂದು ಕುಮಾರಿ.
ಇವರು ತಂದೆ ತಾಯಿಯೊಂದಿಗೆ ನಮ್ಮ ಮನೆಯಲ್ಲಿ
ವಾಸವಾಗಿದ್ದು ನಾನು ನಮ್ಮ ತಂದೆ ತಾಯಿಗೆ ಒಬ್ಬಳೆ ಮಗಳು ಇದ್ದು ನಮ್ಮುರ ಸರಕಾರಿ ಪದವಿ ಪೂರ್ವ ಕಾಲೇಜ ಮುಧೋಳದಲ್ಲಿ
ಪಿ.ಯು.ಸಿ 1 ನ್ನೆ ವರ್ಷದಲ್ಲಿ ಓದುತಿದ್ದೆನೆ . ನಮ್ಮ ಮನೆಯ ಹತ್ತಿರ ನಮ್ಮ ಜಾತಿಯ ನಮ್ಮುರ
ಕಿಷ್ಟಪ್ಪಾ ತಂದೆ ನರಸಪ್ಪಾ ಮಾವುರ ಇವರ ಮನೆ ಇದ್ದು ಸದರಿ ಕಿಷ್ಟಪ್ಪನ ಅಳಿಯನಾದ ಯಲ್ಲಪ್ಪಾ ತಂದೆ
ಬಂದೆಪ್ಪಾ ಮಾವುರ ಸಾ|| ನಾವಲ್ಗಾ ಮಂಡಲ;ಬಸೀರಬಾದ ಇತನು ಅವರ ಸೊದರ ಮಾವನಾದ ಕಿಷ್ಟಪ್ಪನ ಮನೆಯಲ್ಲಿ
ಇರುತ್ತಾನೆ ಸದರಿ ಯಲ್ಲಪ್ಪಾ ಇತನು ಇಗ
ಒಂದುವರ್ಷದಿಂದ ನನಗೆ ಪ್ರೀತಿ ಮಾಡುತಿದ್ದು ನಾನು ಅವನಿಗೆ ಪ್ರಿತಿಮಾಡುತಿದ್ದು ನಾವಿಬ್ಬರು ಒಬ್ಬರಿಗೊಬ್ಬರು ಪ್ರಿತಿಮಾಡುತಿದ್ದು ನನಗೆ
ಯಲ್ಲಪ್ಪಾ ಇತನು ಮದುವೆ ಮಾಡಿಕೋಳ್ಳುತ್ತೆನೆ ಅಂತಾ ಹೇಳಿದ್ದು ನಾನು ಈ ವಿಷಯವನ್ನು ನಮ್ಮ ತಂದೆ
ತಾಯಿ ಹತ್ತಿರ ಇಗ ಒಂದು ತಿಂಗಳ ಹಿಂದೆ ತಿಳಿಸಿದ್ದು ನಮ್ಮ ತಂದೆ ತಾಯಿಯವರು ಸದರಿ ಯಲ್ಲಪ್ಪಾ
ಹಾಗು ಅವರ ಮಾವನಾದ ಕಿಷ್ಟಪ್ಪಾ ಇವರಿಗೆ ಮನೆಗೆ ಕರೆದು ಯಲ್ಲಪ್ಪಾ ಇತನಿಗೆ ನಿನು ನಮ್ಮ ಮಗಳ
ಹಿಂದೆ ಬಿಳಬೇಡ ಅವಳೊಂದಿಗೆ ಮಾತಾಡಬೇಡ ಅವಳು ಇನ್ನು ಚಿಕ್ಕವಳು ಇದ್ದಾಳೆ ಅವಳಿಗೆ ನಾವು ಇಗ
ಮದುವೆ ಮಾಡುವದಿಲ್ಲಾ ಅಂತಾ ಹೇಳಿದ್ದು ಅಲ್ಲದೆ ಅವರ ಮಾವನಾದ ಕಿಷ್ಟಪ್ಪಾ ಇವರಿಗೆ ನಿಮ್ಮ
ಅಳಿಯನಿಗೆ ಬುದ್ದಿ ಹೇಳು ಅವನು ನಮ್ಮ ಮಗಳಿಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಅವಳ ಹಿಂದೆ
ಬಿದ್ದಿದ್ದಾನೆ ಅಂತಾ ಹೇಳಿದ್ದು ಅದಕ್ಕೆ ಅವರ ಮಾವನಾದ ಕಿಷ್ಟಪ್ಪಾ ಇತನು ನಮ್ಮ ಅಳಿಯ ಯಲ್ಲಪ್ಪಾ
ಇತನಿಗೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವದಿಲ್ಲಾ ಅವರ ಊರಿಗೆ ಕಳಿಸುತ್ತೆನೆ ಅಂತಾ ಹೇಳಿ
ಯಲ್ಲಪ್ಪನಿಗೆ ಮನೆ ಬಿಟ್ಟು ಕಳಿಸಿದನು ನಮ್ಮ ಮನೆಯಲ್ಲಿ ನಮ್ಮ ತಂದೆ ತಾಯಿವರು ನನಗೆ ಮದುವೆ
ಮಾಡಬೆಕು ಅಂತಾ ಗಂಡು ಹುಡುಕುತಿದ್ದರು ಆದ್ದರಿಂದ ನಾನು
ನಿನ್ನೆ ದಿನಾಂಕ 17-10-2016 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ಸದರಿ ಯಲ್ಲಪ್ಪಾ
ತಂದೆ ಬಂದೆಪ್ಪಾ ಮಾವುರ ಸಾ|| ನಾವಲ್ಗಾ ಇತನಿಗೆ ಪೋನ ಮಾಡಿ ಕರೆಸಿದ್ದು ಸದರಿ ಯಲ್ಲಪ್ಪಾ ಇತನು
ನಿನ್ನೆ ಮುಂಜಾನೆ 10-00 ಗಂಟೆ ಸುಮಾರಿಗೆ ನಮ್ಮುರ ಹೊರಗಡೆ ಬಂದಿದ್ದು ನಾನು ಮನೆಯಿಂದ ಹೊರಗಡೆ
ಬಯಲು ಕಡೆ ಹೊಗುವದಾಗಿ ಹೇಳಿ ನಾನು ಮನೆಯಿಂದ ಊರ ಹೊರಗಡೆ
ಸದರಿ ಯಲ್ಲಪ್ಪನ ಹತ್ತಿರ ಹೊಗಿದ್ದು ಸದರಿ ಯಲ್ಲಪ್ಪಾ ಇತನು ನನಗೆ
ಮದುವೆ ಮಾಡಿಕೋಳ್ಳುತ್ತನೆ ಅಂತಾ ತನ್ನ ಸಂಗಡ ಕೊತ್ತಾಪಲ್ಲಿಗೆ ಹೊಗುವ ರಸ್ತೆಯ
ಪಕ್ಕದಲ್ಲಿರುವ ತೊಗರಿ ಹೊಲದಲ್ಲಿ ಕರೆದುಕೊಂಡು
ಹೊಗಿ ನನ್ನ ಮೈ ಮೆಲಿನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿ ನನಗೆ
ಲೈಂಗಿಕ ದೌರ್ಜನ್ಯ ಮಾಡಿದ್ದು ಅಲ್ಲದೆ ನನಗೆ ತನ್ನ ಸಂಗಡ ಕೊಡಂಗಲಕ್ಕೆ ಕರೆದುಕೊಂಡು ಹೊಗಿದ್ದು
ನಾವು ರಾತ್ರಿ ಕೊಡಂಗಲ ಬಸ್ಸನಿಲ್ದಾಣದ ಹಿಂದುಗಡೆ ಮಲಗಿಕೊಂಡಿದ್ದು ಸದರಿ ಯಲ್ಲಪ್ಪ ಇತನು ಮತ್ತೆ ನನಗೆ ರಾತ್ರಿ ನನ್ನ ಮೆಲೆ ಅತ್ಯಾಚಾರ
ಮಾಡಿ ಲೈಗಿಂಕ ದೌರ್ಜನ್ಯ ಮಾಡಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ
17/10/2016 ರಂದು ಶ್ರೀ ಶಿವಶಂಕರ ತಂದೆ ಬಸವಂತ್ರಾಯ ಬಾಬಾಗೋಳ ಸಾ :
ಕಡಣಿ ರವರು
ತಮ್ಮೂರಾದ ಕಡಣಿ ಗ್ರಾಮದ ಹನುಮಾನ ಗುಡಿಯ ಹತ್ತೀರದ ಕಟ್ಟೆಯ ಮೇಲೆ ಕುಳಿತಿರುವಾಗ ನನ್ನ ಹೆಂಡತಿಯ
ಸಂಬಂದಿಕರಾದ 1) ಭೀಮಾಶಂಕರ ತಂದೆ ಚನ್ನಬಸಪ್ಪ ಕಡಲಪ್ಪಗೊಳ 2) ರಾಜಶೇಖರ ತಂದೆ ಭೀಮಾಶಂಕರ
ಕಟಲಪ್ಪಗೋಳ 3) ಶಾಂತಮಲ್ಲಪ್ಪಾ ತಂದೆ ಶಂಕಣ್ಣಾ ಕಡಲಪ್ಪಗೋಳ ಸಾ// ಎಲ್ಲರೂ ಕಡಣಿ ಇವರು ಬಂದವರೆ
ಭೀಮಾ ಶಂಕರೆನು ನನಗೆ ನೀನು ಯಾಕೆ ಹಾಯಿದಿದಿ ಅಂತಾ ಕೆಳಿದಾಗ ಆಗ ನಾನು ನಾನೆಲ್ಲಿ ನಿಮಗೆ
ಹಾಯಿದಿದಿದ್ದನಿ ಅಂತ ಅಂದು ಅಲ್ಲಿಂದ ಎದ್ದು ಮುಂದೆ ಹೋಗುತ್ತಿದ್ದಾಗ ಅವರಲ್ಲಿ ಭೀಮಾಶಂಕರನು
ನನಗೆ ಏ ಭೋಸಡಿ ಮಗನೆ ನಿಲ್ಲು ನೀನು ಎಲ್ಲಿಗೆ ಹೋಗುತ್ತಿ ಅಂತಾ ತಡೆದು ನಿಲ್ಲಿಸಿ ಕೈಯಿಂದ ಎದೆಯ ಮೇಲೆ
ಹೊಡೆದನು ಆಗ ಅದೇ ಸಮಯಕ್ಕೆ ರಾಜಶೇಖರ ಮತ್ತು ಶಾಂತಮಲ್ಲಪ್ಪಾ ಇವರಿಬ್ಬರೂ ಈ ಭೋಸಡಿ ಮಗನಿಗೆ ಬಹಳ
ಸೋಕ್ಕು ಅದಾ ಅಂತಾ ಅಂದವರೆ ನನಗೆ ಒತ್ತಿಯಾಗಿ ಹಿಡಿದು ಕೈಮುಸ್ಟಿ ಮಾಡಿ ಜೋರಾಗಿ ಬೆನ್ನಿನ ಮೇಲೆ
ಎದೆಯ ಮೇಲೆ ಹೋಟ್ಟೆಯ ಮೇಲೆ ಹೊಡೆದಿರುತ್ತಾರೆ ನಂತರ ನಾನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ
ಕಲಬುರಗಿಗೆ ಬಂದು ಸೇರಿಕೆ ಯಾಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ :
ಶ್ರೀ ರಾಮು ತಂದೆ ಧೇನು ರಾಠೋಡ ಸಾ : ಹಡಗಿಲ ಹಾರೂತಿ ತಾಂಡಾ ತಾ:ಜಿ: ಕಲಬುರಗಿ ಇವರ ತಾಂಡಾದ
ಹಾಗೂ ತಮ್ಮ ಸಂಬಂಬದಿಕರಾದ ಗೌರಾಬಾಯಿ
ಗಂಡ ಹೀರೂ ರಾಠೋಡ ಇವರು ತಮ್ಮ ಮಗನಾದ ರಮೇಶ ರಾಠೋಡ ಇವರೊಂದಿಗೆ ಬೇರೆಯಾಗಿ ವಾಸವಾಗಿದ್ದು ಈ
ಇಬ್ಬರೂ ತಾಯಿ ಮಗನ ನಡುವೆ ತಮ್ಮ ಹೋಲ ಸಾಗೂವಳಿ ಮಡುವ ವಿಷಯದಲ್ಲಿ ತಕರಾರು ಇದ್ದು ಇದೇ ವಿಷಯವಾಗಿ
ಇವರಿಬ್ಬರೂ ಆಗಾಗ ತಕರಾರು ಮಾಡಿಕೊಂಡು ವೈಮನಸ್ಸು ಹೊಂದಿರುತ್ತಾರೆ ನಿನ್ನೆ ದಿನಾಂಕ 17/10/2016 ರಂದು ರಾತ್ರಿ 07-30 ಗಂಟೆಯ ಸುಮಾರಿಗೆ ಸದರಿ ಗೌರಾಬಾಯಿ ರಾಠೋಡ ಮತ್ತು ಇವಳ
ಸೋಸೆ ಶಶಿಕಲಾ ಗಂಡ ರಮೇಶ ರಠೋಡ ಇವರಿಬ್ಬರೂ ತಮ್ಮ ಮನೆಯ ಮುಂದಿನ ರೋಡಿನ ಮೇಲೆ ಜಗಳ
ವಾಡುತ್ತಿದ್ದಾಗ ನಾನು ಬಿಡಿಸಲು ಹೋಗಿದ್ದು ಇದೇ ವೇಳೆಗೆ ಶಶಿಕಲಾ ಇವರ ತಂದೆ ಗುರುನಾಥ ,ತಾಯಿ ಸಂಗೂಬಾಯಿ ಮತ್ತು ಗುರುನಾಥನ ಮಕ್ಕಳಾದ ಆಕಾಶ, ಸುನೀತಾ
ಇವರೆಲ್ಲರೂ ಬಂದವರೆ ನನಗೆ ಎ ರಂಡಿ ಮಗನೆ ರಾಮ್ಯಾ ನೀನು ಗೌರಾಬಾಯಿ ಇವಳ ಪರವಾಗಿ ಮಾತನಾಡುತ್ತಿದ್ದಿ
ಮಗನೆ ಇಂದು ನಿನಗೆ ಜೀವಸಹಿತ ಬಿಡುವದಿಲ್ಲಾ
ಅಂತಾ ಜೀವದ ಬೆದರಿಕೆ ಹಾಕಿ ಆಕಾಶ ಮತ್ತು ಸಂಗೂಬಾಯಿ ಇವರಿಬ್ಬರೂ ತನಗೆ ಗಟ್ಟಯಾಗಿ
ಹಿಡಿದುಕೊಂಡಿದ್ದು ಗುರುನಾಥನು ತನಗೆ ಬಡಿಗಡಯಿಂದ ಬಲಗೈ ಮಣಿ ಕಟ್ಟಿನ ಹತ್ತೀರ ಹೋಡೆದು ತರಚಿದ
ಗಾಯ ಮಾಡಿದ್ದು ಸುನೀತಾ ಮತ್ತು ಸಂಗೂಬಾಯಿ ಇವರಿಬ್ಬರೂ ನನಗೆ ಕೈಯಿಂದ ಹೋಡೆ.ಬಡೆ ಮಾಡಿದ್ದು
ಶಶಿಕಲಾ ಇವಳು ಈ ಹಾಂಟ್ಯನಿಗೆ ಹಿನಾ ಹೊಡಿರಿ ಅಂತಾ ಅಲ್ಲಿಯೇ ನಿಂತು ಪ್ರಚೋದನೆ ನೀಡಿರುತ್ತಾಳೆ ನಂತರ ನಾನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ
ಬಂದು ಸೇರಿಕೆ ಯಾಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ
ಶಶಿಕಲಾ ಗಂಡ ರಮೇಶ ರಾಠೋಡ ಸಾ : ಹಡಗಿಲ ಹಾರೂತಿ ತಾಂಡಾ ತ :ಜಿ: ಕಲಬುರಗಿ ಇವರು ಮತ್ತು ತನ್ನ
ಗಂಡ ರಮೇಶ ಇಬ್ಬರೂ ನನ್ನ ಅತ್ತೇ ಗೌರಾಬಾಯಿ
ಗಂಡ ಹೀರೂ ರಾಠೋಡ ಇವರೊಂದಿಗೆ ಬೇರೆಯಾಗಿ ವಾಸವಾಗಿದ್ದು ನಮ್ಮ ಮತ್ತು ಅತ್ತೆ ಗೌರಾಬಾಯಿ ಇವಳ ನಡುವೆ
ತಮ್ಮ ಹೋಲ ಸಾಗೂವಳಿ ಮಡುವ ವಿಷಯದಲ್ಲಿ ತಕರಾರು ಇದ್ದು ಇದೇ ವಿಷಯವಾಗಿ ಗೌರಾಬಾಯಿ ಇವಳು ಆಗಾಗ ನಮ್ಮೋಂದಿಗೆ ತಕರಾರು
ಮಾಡಿಕೊಂಡು ವೈಮನಸ್ಸು ಹೋಂದಿರುತ್ತಾರೆ ನಿನ್ನೆ
ದಿನಾಂಕ 17/10/2016 ರಂದು ರಾತ್ರಿ 07-30
ಗಂಟೆಯ ಸುಮಾರಿಗೆ ನಾನು ನಮ್ಮ ಅತ್ತೆ ಗೌರಾಬಾಯಿ ಇವಳ ಮನೆಯ ಮುಂದಿನ ಉರುವಲು ಕಟ್ಟಿಗೆ ತೆಗೆದುಕೊಳ್ಳುತ್ತಿದ್ದಾಗ ಸದರಿ ನನ್ನ ಅತ್ತೆ ಗೌರಾಬಾಯಿ
ರಾಠೋಡ ಇವಳು ನನಗೆ ಎ ರಂಡಿ ಶಶಿ
ನೀನು ಯಾಕ ನಾನು ಹೋಲದಿಂದ ತಂದಿರುವ ಉರುವಲು ಕಟ್ಟಿಗೆ ಯಾಕ ತಗೆದುಕೋಳ್ಳುತ್ತಿದ್ದಿ ಅಂತಾ
ತಕರಾರು ಮಡುತ್ತಿದ್ದಾಗ ಇದೇ ವೇಳೆಗೆ ನನ್ನ ಅತ್ತೆ ಗೌರಾಬಯಿ ಇವಳ ಸಂಬಂದಿಕರಾದ ರಾಮು ಧೇನು ರಾಠೋಡ , ವಿಠ್ಠಲ
ತಂದೆ ದೇನು ರಾಠೋಡ , ಅರ್ಜುನ ತಂದೆ ವಿಠ್ಠಲ ರಾಠೊಡ,ಕಿಶೋರ ತಂದೆ ರಾಮು ರಾಠೋಡ , ಅಶೊಕ
ತಂದೆ ರಾಮು ರಾಠೋಡ , ಸೀತಾಬಾಯಿ ಗಂಡ ರಾಮು ರಾಠೋಡ , ಸೋನಾಬಾಯಿ ಗಂಡ ವಿಠ್ಠಲ ರಾಠೋಡ,ಹಾಗೂ
ರಾಮು ತಮದೆ ಧೇನು ರಾಠೋಡ ಸಾ// ಎಲ್ಲರೂ ಹಡಗಿಲ ಹಾರೂತಿ ಇವರೆಲ್ಲರೂ ಬಂದವರೆ ನನಗೆ ಈ ರಂಡಿ
ದಿನಾಲು ವಿನಾಕಾರಣ ಕಿರಿ,ಕಿರಿ ಮಾಡುತ್ತಾಳೆ ಇವಳಿಗೆ ಇಂದು ಖಲಾಸ
ಮಾಡಿಯೇ ಬಿಡೋಣ ಅಂತಾ ಜೀವದ ಬೆದರಿಕೆ ಹಾಕಿ ಸೀತಾಬಾಯಿ, ಮತ್ತು ಸೋನಾಬಾಯಿ ಇವರಿಬ್ಬರೂ ನನಗೆ ಗಟ್ಟಿಯಾಗಿ
ಹಿಡಿದುಕೊಂಡಿದ್ದು ಗೌರಾಬಾಯಿ ಇವಳು ಬಡಿಗೆಯಿಂದ ಎಡಗೈ
ಮಣಿಕಟ್ಟಿನ ಹತ್ತಿರ ಹೋಡೆದು ತರಚಿದ ಗಾಯ ಮಾಡಿದ್ದು , ಅಶೋಕ
ಇತನು ಕೈಹಿಡಿದು ಎಳೆದಾಡಿ ಮಾನಭಂಗ ಮಾಡಿ ಕೈಯಿಂದ ಎದೆಗೆ ಗುದ್ದಿ ಗುಪ್ತಗಾಯ ಮಾಡಿರುತ್ತಾನೆ ಆಗ
ನಾನು ಚೀರಾಡುವದನ್ನು ಕೇಳಿ ಬಿಡಿಸಲು ಬಂದ ನನ್ನ
ತಂದೆ ಗುರುನಾಥ ತಾಯಿ,ಗಂಗಾಬಾಯಿ ಮತ್ತು ಸಹೋದರಿ ಸುನೀತಾ
ಇವರೆಲ್ಲರಿಗೂ ಹೋಡೆ,ಬಡೆ ಮಾಡಿರುತ್ತಾರೆ ನಂತರ ನಾವು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ
ಬಂದು ಸೇರಿಕೆ ಯಾಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment