ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸಂಗೀತಾ ಗಂಡ ಶಿವಾನಂದ ಬಮ್ಮನಹಳ್ಳಿ ಮಡ್ಡಿ ಸಾ
ಬಮ್ಮನಹಳ್ಳಿ ತಾ ಆಳಂದ ರವರ ಶಿಖರಪ್ಪ @ ಚುಕ್ಕಾ ವ:8 ವರ್ಷ ಇತನು ಕಪನೂರ ಗ್ರಾಮದ ಸರಕಾರಿ ಶಾಲೆಯ ಎದುರುಗಡೆ ಮೇನ ರೋಡಿನ ಬದಿಯಿಂದ
ನಡೆದುಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ
ಹನುಮನಾಬಾದ ರಿಂಗ ರೋಡ ಕಡೆಯಿಂದ ಟಂಟಂ ಕೆಎ 32 9592 ನೇದ್ದರ ಚಾಲಕನು ತನ್ನ ಟಂಟಂನ್ನು ಅತಿವೇಗ
ಮತ್ತು ನಿಷ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಶಿಖರಪ್ಪ @ ಚುಯಕ್ಕಾ ಇತನಿಗೆ ಜೋರಾಗಿ ಡಿಕ್ಕಿ
ಕೊಟ್ಟು ಅಪಘಾತಪಡಿಸಿದ್ದರಿಂದ ಶಿಖರಪ್ಪ ಇತನು ಕೆಳೆಗೆ ಬಿದ್ದು ಆತನಿಗೆ ಎಡ ಎದೆ ಭಾರಿ ರಕ್ತಗಾಯ,
ಬಲಕಪಾಳಕ್ಕೆ ಭಾರಿ ಗಾಯ ಮತ್ತು ಬಲಗೈ ಮೊಳಕೈಗೆ
ಮೊಳಕೈಗೆ ಕೆಳೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ. ಹಾಗೂ ಅಪಘಾತವಾದ ಟಂಟಂ ಚಾಲಕನು
ಅಲ್ಲಿ ಜನರು ನೆರೆತ್ತಿದ್ದಾಗ ಚಾಲಕ ಟಂಟಂನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ
ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ದಿವ್ಯಶ್ರೀ ಗಂಡ ನಾಗರಾಜ
ದರಬಾರಿ ಇವರು ದಿನಾಂಕ 08.08.2011 ರಂದು ಶಹಾಪೂರದ ನಾಗರಾಜ ದರಬಾರಿ ಇತನೊಂದಿಗೆ ಸಂಪ್ರದಾಯದಂತೆ ಮದುವೆ
ಮಾಡಿಕೊಂಡಿರುತ್ತೇನೆ ಅವನು ಯಾವುದೇ ಕೆಲಸ ಮಾಡದೇ ಮತ್ತು ನಾನು ದುಡಿದ
ಹಣವನ್ನು ಕೂಡ ತನಗೆ ಕೊಡು ಮತ್ತು ನಮ್ಮ ತಂದೆ ತಾಯಿ ಇವರಿಂದ 20 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತಾ ದಿನಾಲು ಕುಡಿದು ಬಂದು ನನಗೆ
ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾನೆ ಮತ್ತು ನನ್ನ ಮೇಲೆ ಸಂಶಯ ಪಡುತ್ತಾನೆ ನನ್ನ ಗಂಡ
ಕೊಡುವ ಹಿಂಸೆಯನ್ನು ನೋಡಲಾರದೇ ನನ್ನ ತಾಯಿ ಉಮಾ ಇವರು ಮೈಸೂರನಲ್ಲಿರುವ ನಮ್ಮ ಸೈಟ್ ಕೂಡ ಮಾರಾಟ
ಮಾಡಿ ನನ್ನ ಗಂಡನಿಗೆ 20 ಲಕ್ಷ
ಹಣ ಕೊಟ್ಟಿದ್ದಾರೆ.ಆದರೂ ಕೂಡ ನನ್ನ ಗಂಡ ತನ್ನ ಚಟವನ್ನು ಬಿಡದೇ ರಂಡಿ ಬೋಸಡಿ ಸೂಳೆ ಮಗಳು
ನೀನಾದರು ಕಲಬುರಗಿಯಲ್ಲಿ ಇರಬೇಕು ಇಲ್ಲ ನಾನು ಇರಬೇಕು
ಅಂತಾ ಹಿಂಸೆ ಕೊಡುತ್ತಾನೆ. ದಿನಾಂಕ 14.10.2016 ರಂದು ಮದ್ಯ ರಾತ್ರಿ 1 ಗಂಟೆಯ ಸುಮಾರಿಗೆ ನನ್ನ ಗಂಡ ನಾಗರಾಜ ಇತನು ಕುಡಿದು ಬಂದು ರಂಡಿ ನೀನು
ಯಾರ ಜೊತೆ ಮಲಗಿಕೊಂಡಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಇವತ್ತು
ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಕೂದಲು ಹಿಡಿದು ಎಳದಾಡಿ ನೀನು ಪೊಲೀಸ ಠಾಣೆಗೆ ಹೋದರೆ
ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ನಾನು ಚಿರಾಡುವದನ್ನು ಕಂಡು
ನಮ್ಮ ಅಕ್ಕಪಕ್ಕದ ಮನೆಯವರು ಬಂದು ಜಗಳ ಬಿಡಿಸಿರುತ್ತಾರೆ.ಆಗ ನನ್ನ ಗಂಡ ಅಲ್ಲಿಂದ ಓಡಿ ಹೋದನು.
ಅಲ್ಲಿಂದ ಇಲ್ಲಿಯವರೆಗೆ ಪೋನಿನಲ್ಲಿ ದಿನಾಲು ನನಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ
ಬಂದಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ
ಸಾವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 21/10/2016 ರಂದು
ನಮ್ಮ ಅಣ್ಣನಾದ ಶಿವಲಿಂಗಪ್ಪ ರವರ ಮಗಳಾದ ಅಶ್ವಿನಿ ಇವಳ ಮಗನಾದ ಅವಿನಾಶ 9 ತಿಂಗಳು ಇತನ
ಜವಳ ಕಾರ್ಯಕ್ರಮ ಅಫಜಲಪೂರ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ
ದೇವಿಯ ದೇವಸ್ಥಾನದಲ್ಲಿ ಇದ್ದ ಪ್ರಯುಕ್ತ ಸದರಿ ಕಾರ್ಯಕ್ರಮಕ್ಕೆ ನಾನು ನನ್ನ ಮಗಳಾದ ಕು. ಪ್ರತಿಭಾ ವ||17 ವರ್ಷ,
ನಮ್ಮ ಅಣ್ಣನಾದ ಶಿವಲಿಂಗಪ್ಪ ಅಣ್ಣನ ಮಕ್ಕಳಾದ ವಿಲಾಸ, ವಿನೋದ , ನಮ್ಮ ಗ್ರಾಮದ ಭಿಮವ್ವ ಗಂಡ ಚನ್ನಪ್ಪ , ಚಂದ್ರಭಾಗಮ್ಮ ಗಂಡ ಮಲ್ಲಿಕಾರ್ಜುನ ಹೊಸ್ಮನಿ ಹಾಗೂ ಅಶ್ವಿನಿ ಮತ್ತು ಅವಳ ಗಂಡನಾದ ರಾಘು ಕೆಂಗನಾಳ ಎಲ್ಲರು ಕೂಡಿ ಒಂದು ಖಾಸಗಿ ವಾಹನದಲ್ಲಿ
ನಿನ್ನೆ ಮದ್ಯಾಹ್ನ 12.00 ಗಂಟೆ
ಸುಮಾರಿಗೆ ಘತ್ತರಗಾ
ಗ್ರಾಮಕ್ಕೆ ಬಂದು ನಾವು ಗ್ರಾಮದ ಭೀಮಾನದಿಯಲ್ಲಿ ಜಳಕ ಮಾಡಲು ಹೋಗಿದ್ದು ನನ್ನ ಮಗಳಾದ ಪ್ರತಿಭಾ ಇವಳು ಜಳಕ ಮಾಡುತ್ತಾ
ಭೀಮಾನದಿಯಲ್ಲಿ ಸ್ವಲ್ಪ ಒಳಗೆ ಹೋಗಿ ನೀರಿನ ಆಳಕ್ಕೆ ಸಿಕ್ಕು
ಮುಳಗುತಿದ್ದಾಗ ನಾವೇಲ್ಲರು ಚಿರಾಡುತಿದ್ದಾಗ ನಮ್ಮಂತೆ ದೇವಸ್ಥಾನಕ್ಕೆ ಬಂದು ಅಲ್ಲೆ ಭೀಮಾನದಿಯಲ್ಲಿ ಈಜಾಡುತಿದ್ದ ಒಬ್ಬ
ಹುಡುಗ ನಮ್ಮ ಮಗಳು ನೀರಿನಲ್ಲಿ ಮುಳಗುವದನ್ನು ನೋಡಿ
ಅವಳಿಗೆ ಹಿಡಿಯಲು ಈಜಾಡುತ್ತಾ ಹೋಗಿ ಅವನು ನೀರಿನ ಆಳಕ್ಕೆ ಸಿಕ್ಕು ಇಬ್ಬರು ನೀರಿನಲ್ಲಿ ಮುಳಗಿರುತ್ತಾರೆ ನಂತರ ಹುಡುಗನ ಹೆಸರು
ವಿರೇಶ ತಂದೆ ನಾಗರಾಜ ಚಿಕಟಿಮಲ್ಲ ವ||20 ವರ್ಷ ಜಾ|| ಕೋಮಟಗಾ ಸಾ|| ಗಂಡವಿಡ ತಾ|| ಮಂಡಲ ಜಿ||
ಮಹಿಬೂಬನಗರ ಅಂತ ಗೊತ್ತಾಗಿರುತ್ತದೆ, ನಂತರ ನಾವು ಹಾಗೂ ವಿರೇಶನ ಸಂಬಂದಿಕರು ಎಲ್ಲರು ಕೂಡಿ ನೀರಿನಲ್ಲಿ ಹುಡುಕಾಡಿದರು ನಮ್ಮ ಮಗಳು ಹಾಗೂ ವಿರೇಶ ಇಬ್ಬರು ಪತ್ತೆ
ಯಾಗಿರುವುದಿಲ್ಲ ಇಂದು
ದಿನಾಂಕ 22/10/2016 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ನನ್ನ ಮಗಳು ಹಾಗು ವಿರೇಶ
ಇಬ್ಬರ ಶವ ಭಿಮಾನದಿಯಲ್ಲಿ ತೆಲಾಡುತಿದ್ದಾಗ ನಾವು ಎಲ್ಲರು ಕೂಡಿ ಇಬ್ಬರು ಶವವನ್ನು ನೀರಿನಿಂದ ಹೊರಗೆ ತಗೆದು ಒಂದು ಖಾಸಗಿ
ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಹಾಕಿರುತ್ತೆವೆ ಅಂತಾ ಶ್ರೀ ಮಲ್ಲಪ್ಪ
ತಂದೆ ಶಿವಪ್ಪ ಹೊಸ್ಮನಿ ಸಾ||ಕಗ್ಗೋಡ ತಾ||ಜಿ||
ವಿಜಯಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ. ಈಗ ಠಾಣೆಗೆ ಬಂದಿದ್ದು ಇರುತ್ತದೆ.
No comments:
Post a Comment