ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ: ದಿನಾಂಕ: 25/10/2016 ರಂದು ವೀರಯ್ಯಾ ಪಂಚಯ್ಯಾ ಮಠ ಸಾ: ಲಾಡ್ಲಾಫೂರ ರವರು ಲಾಡ್ಲಾಫೂರದ ಪೊಸ್ಟ್ ಆಪೀಸದಲ್ಲಿ ಕರ್ತವ್ಯ ಹೋಗಿ ತಮ್ಮ ಮೊ/ಸೈ ನಂ; ಕೆ.ಎ-32/ಕೆ-3422 ನೇದ್ದರ ಮೇಲೆ
ಪೊಸ್ಟದ ಪತ್ರಗಳು ವಿತರಣೆ ಮಾಡುವ ಕುರಿತು ಡಿಗ್ಗಿ ತಾಂಡದ ಕ್ರಾಸ ಹತ್ತಿರ ಲಾಡ್ಲಾಫೂರ ಕಡೆಗೆ
ಹೋಗುತ್ತಿದ್ದಾಗ ಅಂದಾಜು 6.30 ಪಿಎಮ್ ಸುಮಾರಿಗೆ ಯಾದಗಿರ ಕಡೆಯಿಂದ ವಾಡಿ ಕಡೆಗೆ ಬರುತ್ತಿದ್ದ ಲಾರಿ
ನಂ: ಕೆ.ಎ-32-ಬಿ-2135 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ
ಚಲಾಯಿಸಿ ವೀರಯ್ಯಾ ಪಂಚಯ್ಯಾ ಮಠ ಚಲಾಯಿಸುತ್ತಿದ್ದ ಮೊ/ಸೈ ಕ್ಕೆ ಒಮ್ಮೇಲೆ ಅಪಘಾತಪಡಿಸಿದ್ದರಿಂದ
ವೀರಯ್ಯಾ ಪಂಚಯ್ಯಾ ಮಠ ರವರಿಗೆ ಭಾರಿ ಮತ್ತು ಸಾಧಾ ಗಾಯಾಗಳಾಗಿ ಸ್ಥಳದಲ್ಲಿಯೆ ಮೃತ
ಪಟ್ಟಿದ್ದು ಶ್ರೀ ವೀರಯ್ಯಾ ಪಂಚಯ್ಯಾ ಮಠ ರವರ ಮೋಸೈಕಲ್ಗೆ ಅಪಘಾತಪಡಿಸಿದ ಲಾರಿ
ಚಾಲಕನ ವಿರುದ್ದ ಕ್ರಮ ಕೈಕೊಳ್ಳುವಂತೆ ಅವರ ಮಗ ಪಂಚಯ್ಯಾ ತಂದೆ ವೀರಯ್ಯಾ ಮಠ ರವರು ಸಲ್ಲಿಸಿದ
ದೂರು ಸಾರಾಂಶಧ ಮೇಲಿಂದ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನೀರಿನಲ್ಲಿ ಮುಳುಗಿ ಮಹಿಳೆ ಸಾವು:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ
25-10-2016 ರಂದು ಶ್ರೀ ಹಣಮಂತ ತಂದೆ ಮಲ್ಲಪ್ಪ
ಬ್ಯಾಕೋಡ ಸಾ:ಡವಳಗಿ ಮುದ್ದೆ ಬಿಹಾಳ ಇವರು ಠಾಣೆಗೆ ಹಾಜರಾಗಿ ಶ್ರೀಮತಿ ಶಾಂತವ್ವ ಗಂಡ ಚಂದ್ರಶೇಖರ
ಸಾ: ಡವಳಗಿ ಇವಳು ಘತ್ತರಗಾ ಗ್ರಾಮದ ದೇವಸ್ಥಾನಕ್ಕೆ ಬಂದು ದೇವಸ್ಥಾನದ
ಹತ್ತಿರದ ಬೀಮಾನದಿಯಲ್ಲಿ ಸ್ನಾನಮಾಡಲು ಹೋದಾಗ ನದಿಯಲ್ಲಿ ಕಾಲು ಜಾರಿ ಬಿದ್ದು ನಿರಿನಲ್ಲಿ
ಮುಳುಗಿ ಮೃತ ಪಟ್ಟಿದ್ದು. ಸೂಕ್ತ ಕಾನೂನು ಕ್ರಮ ಕೈಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ:
ದಿನಾಂಕ 25-10-2016 ರಂದು ಶ್ರೀ ಮಹಮ್ಮದ ಮಜರ ಅಲಿ ತಂದೆ ಮಹಮ್ಮದ ಮೌಲಾಸಾಬ ಸಾ; ಮದಿನಾ
ಕಾಲೂನಿ ರೋಜಾ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ. 5-10-2016 ರಂದು ಮುಂಜಾನೆ 10-00
ಗಂಟೆಯ ಸುಮಾರಿಗೆ ತನ್ನ ತಮ್ಮ ಮಹಮ್ಮದ
ಅಜರೋದ್ದಿನ ಇತನು ಕೆಲಕ್ಕೆ ಹೋಗುತ್ತೇನೆ ಅಂತಾ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ಕಾರಣ ಕಲಬುರಗಿಯ ಎಲ್ಲಾ
ಕಡೆಗೆ ಹಾಗೂ ನಮ್ಮ ಸಮ್ಮಂದಿಕರಲ್ಲಿ
ವಿಚಾರಿಸಲು ತಮ್ಮನ್ನು ಪತ್ತೆಯಾಗದೆ ಇದ್ದ ಕಾರಣ ದಿನಾಂಕ 15-10-2016 ರಂದು ಕಲಬುರಗಿ
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದ್ದು ಅದರ ಮೇಲಿಂದ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು
ಇರುತ್ತದೆ
ದಿನಾಂಕ. 19-10-2016 ರಂದು ವೆಂಕಟಬೇನೂರ ಗ್ರಾಮದ
ನಮ್ಮ ಪರಿಚಯದವರು ಫೋನ ಮಾಡಿ ತಮ್ಮ ಗ್ರಾಮದ ಸೀಮಾಂತರ
ಮತ್ತು ಖಾಜಾಕೋಟನೂರ ಕೆರೆಯ ಕುಪೆಂದ್ರ ಮಾಲಿಪಾಟೀಲ್ ಇವರ ಹೊಲದ ದಂಡೆಯ ನೀರಿನಲ್ಲಿ ಒಂದು ಗಂಡು
ಮನುಷ್ಯ ಶವ ಬಿದ್ದಿರುತ್ತದೆ ಅಂತಾ ತಿಳಿಸಿದ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಶವವು
ಅಂಗಾತವಾಗಿ ಬಿದಿದ್ದು , ಶವ ಕೊಳೆತು ಶವದ ಅಸ್ತಿಪಂಜರ ಕಾಣುತಿದ್ದು, ಶವದ
ಮೈ ಮೇಲೆ ಹಸಿರು ಬಣ್ಣದ ಶರ್ಟ , ಡಾರ್ಕ ಬಣ್ಣ ಜೀನ್ಸ ಫ್ಯಾಂಟ
, ಗೊಲ್ಡನ
ಮತ್ತು ಕಪ್ಪು ಮಿಶ್ರಿತ ಜಾಕೆಟ ಹಾಗೂ ಜಾಕಲೇಟ
ಕಲರ ಜಾಂಗಾ ಹಾಗೂ ಬೆಲ್ಟನ್ನು ನೋಡಿ ನಾವು ನಮ್ಮ ತಮ್ಮ ಅಜರೊದ್ದಿನ ಇರುವದಾಗಿ ಗುರ್ತಿಸಿದ್ದು. ನನ್ನ
ತಮ್ಮನ ಮರಣದಲ್ಲಿ ಬಲವಾಗಿ ಸಂಶಯ ಬಂದ ಕಾರಣ ಈ ಬಗ್ಗೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪಿರ್ಯಾದಿ
ಹೇಳಿಕೆ ನೀಡಲಾಗಿ ವಿರ್ಶವ ವಿದ್ಯಾಲಯ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಿಸಿದ್ದು
ಇರುತ್ತದೆ.
ನಮ್ಮ ಪರಿಚಯದವರಾದ
ಅಬ್ದುಲ ರಶೀದ ತಂದೆ ಅಬ್ದುಲ ಹಮೀದ ಶೇಖ ಸಾ: ಜುಬೇರ ಕಾಲೋನಿ, ಹಾಗರಗಾ
ರೋಡ್, ಕಲಬುರಗಿ ಇವರು ದಿನಾಂಕ. 5-10-2016 ರಂದು ನನ್ನ ತಮ್ಮ ಅಜರೊದ್ದಿನ್
ನಿಗೆ ಖಾಜಾ ಮೈನೊದ್ದಿನ ಬಾಬಾ ತಂದೆ ಮಹಿಮೂದ ಹುಸೇನ ಇತನು ತನ್ನ ಹೀರೊಹೊಂಡ ಪ್ಯಾಶನ ಮೋಟಾರ
ಸೈಕಲ್ ನಂ.ಕೆ.ಎ.32 ಇ.ಎಫ್. 3915 ನೆದ್ದರ ಮೇಲೆ ಹಿಂದೆ ಇಸಾಕ ತಂದೆ ಅಬ್ದುಲ ಸಾಬ ಇಬ್ಬರೊ ನನ್ನ
ತಮ್ಮ ಮಹಮ್ಮದ ಅಜರೊದ್ದಿನನ್ನು ನಡುವೆ
ಕೂಡಿಸಿಕೊಂಡು ಮಾಲಗತ್ತಿ ಕಡೆಗೆ ಕೂಡಿಸಿಕೊಂಡು ಹೋಗಿರುವದನ್ನು ನೋಡಿದ್ದ ಬಗ್ಗೆ ತಿಳಿಸಿದ್ದು. ಅಲ್ಲದೆ
ಖಾಜಾಕೋಟನೂರ ಕೆರೆದಂಡೆಯಲ್ಲಿ ಕುಪೆಂದ್ರ ಪಾಟೀಲ್ ಇವರ ಹೊಲದ ದಂಡೆಗೆ ಮೀನು ಹಿಡಿಯುವ ನೆಪ ಮಾಡಿ
ಕರೆದುಕೊಂಡು ಹೋಗಿ ಅಲ್ಲಿ ನನ್ನ ತಮ್ಮನಿಗೆ ಖಾಜಾ ಮೈನೊದ್ದಿನ ಬಾಬಾ ಮತ್ತು ಇಸಾಕ ಇವರು ಹಣದ ಮತ್ತು ಮರಳಿನ ಬ್ರೋಕರ ಕೆಲಸದ ದ್ವೇಷದಿಂದ
ಕೊಲೆ ಮಾಡುವ ಉದ್ದೇಶದಿಂದ ಖಾಜಾ ಮೈನೊದ್ದಿನ ಬಾಬಾ ಇತನು ಹತೋಡಿಯಿಂದ ನನ್ನ ತಮ್ಮನ ತಲೆ
ಹಿಂಬಾಗಕ್ಕೆ ಜೋರಾಗಿ ಹೊಡೆದು ,ತಮ್ಮನು ಬೇಹೋಶ ಆಗಿ ಬಿದ್ದು
ಆತನು ಕೊಲೆಯಾಗಿ ಬಿದ್ದಿದ್ದನ್ನು ಕಂಡು ಖಾಜಾ
ಮೈನೊದ್ದಿನ ಮತ್ತು ಇಸಾಕ ಇಬ್ಬರು ಕೆರೆನೀರನಲ್ಲಿ
ಬಿಸಾಕಿ ಸಾಕ್ಷಿಯನ್ನು ನಾಶ ಪಡಿಸಿ ಅದೇ ಮೋಟಾರ ಸೈಕಲ ಮೇಲೆ ಮರಳಿ ಬಂದಿರುವ ಬಗ್ಗೆ ತಿಳಿದು
ಬಂದಿರುತ್ತದೆ. ನನ್ನ ತಮ್ಮ ಮಹಮ್ಮದ ಅಜರೋದ್ದಿನ ಇತನ ಕೊಲೆಮಾಡಿದ ಖಾಜಾ ಮೈನೊದ್ದಿನ ಬಾಬಾ ತಂದೆ ಮಹಿಮೂದ ಹುಸೇನ ಸಾ;ಅಬುಬಕರ
ಕಾಲೂನಿ ಕಲಬುರಗಿ ಮತ್ತು ಇಸಾಕ ತಂದೆ ಅಬ್ದುಲ
ಸಾಬ ಸಾ; ನವಾಬಸಾಬ ಮೊಹಲ್ಲಾ ಅಜಾದಪೂರ ರೋಡ ಕಲಬುರಗಿ ಇವರ ಮೇಲೆ ಕಾನೂನು
ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಲಬುಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ
25-10-2016 ರಂದು ಶ್ರೀ ಚಂದ್ರ @ ಚಂದ್ರು ತಂದೆ ರೂಪಸಿಂಗ ರಾಠೋಡ ಸಾ; ಬಸವನಗರ ತಾಂಡಾ ತಾ:ಜಿ ಕಲಬುರಗಿ
ಠಾಣೆಗೆ ಹಾಜರಾಗಿ ದಿನಾಂಕ 24.10.2016 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಮನೆಯ
ಸಾಮಾನುಗಳಿರುವ ಕೊಣೆಗೆ ಕೀಲಿ ಹಾಕಿ ಪಕ್ಕದಲ್ಲಿ ಕೊಣೆಯಲ್ಲಿ ನಾನು ನನ್ನ ಹೆಂಡತಿ ಮಕ್ಕಳು
ಕೂಡಿಕೊಂಡು ಮಲಗಿಕೊಂಡಿದ್ದು. ಬೆಳ್ಳಿಗ್ಗೆ ಎದ್ದು ಮನೆಯಿಂದ ಹೊರಗೆ ಬಂದು ನೋಡಲು ನಾವು ಕೀಲಿ ಹಾಕಿ
ಮಲಗಿದ ಮನೆಯ ಬಾಗೀಲು ತೆರೆದಿದ್ದು ಆಗ ನಾನು ಬಾಗಿಲ ಹತ್ತಿರ ಹೋಗಿ ನೊಡಲು ಮನೆಯಲ್ಲಿ ಸಾಮಾನುಗಳು
ಚೆಲ್ಲಾ ಪಿಲ್ಲಿಯಾಗಿದ್ದು ಸಂದುಕಗಳು ತೆರೆದು ಅದರಲ್ಲಿ ಸಾಮಾನುಗಳು ಬಟ್ಟೆ ಬರೆ ಹೊರಗೆ
ಬಿಸಾಡಿದ್ದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಮನೆಯ ಒಳಗೆ
ಪ್ರವೇಶ ಮಾಡಿ ಮನೆಯಲ್ಲಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತ ಗೊತ್ತಾಗಿದ್ದು ಮನೆಯಲ್ಲಿ
ಇಟ್ಟ ನಮ್ಮ ಸಾಮಾನುಗಳನ್ನು ಪರಿಶೀಲಿಸಿ ನೋಡಲು ಟಿಜೇರಿಯಲ್ಲಿ ಒಟ್ಟು 4 ತೊಲೆ ಬಂಗಾದ ಆಭರಣಗಳು ಅಂದಾಜ
ಕಿಮ್ಮತ್ತು 1 ಲಕ್ಷ 20 ಸಾವೀರ ರೂ ಮತ್ತು ನಗದು ಹಣ 20,000/- ಹೀಗೆ
ಒಟ್ಟು 1 ಲಕ್ಷ 40 ಸಾವೀರ ಕಿಮ್ಮತ್ತಿನ ಬಂಗಾರ ಮತ್ತು
ಹಣ ಕಳ್ಳತನವಾಗಿದ್ದು ನಾನು ತಾಂಡಾದಲ್ಲಿ ಹೋಗಿ ಜನರಿಗೆ ವಿಚಾರಿಸಲಾಗಿ, ನಮ್ಮ ಮನೆ ಕಳ್ಳತನ ಮಾಡಿದಂತೆ ನಮ್ಮ
ತಾಂಡಾದ ಶ್ರೀಮತಿ ಧರ್ಮಬಾಯಿ ಗಂಡ ಪೋಮು ಚೌವ್ಹಾಣ ಇವರ ಮನೆಯ ಬಾಗೀಲ ಕೀಲಿ ಮುರಿದು ಅವರ ಮನೆಯ
ಸಂದುಕದಲ್ಲಿಟ್ಟಿದ 1 ತೊಲೆ
ಬಂಗಾರದ ಗಂಟಿನ ಹಾರ ಅ:ಕಿ: 30 ಸಾವೀರ, ಮತ್ತು 4 ತೊಲೆ ಬೆಳ್ಳಿ ಕಾಲ ಚೈನಗಳನು ಅ:ಕಿ 2 ಸಾವೀರ ಹೀಗೆ ಒಟ್ಟು 32 ಸಾವೀರ ಕಿಮ್ಮತ್ತಿನ ಆಭರಣಗಳು
ಕಳ್ಳತನ ಮಾಡಿದ್ದು, ಅದರಂತೆ
ಶ್ರೀಮತಿ ಮಂಜುಬಾಯಿ ಗಂಡ ಸುನೀಲ ಚೌವ್ಹಾಣ ಇವರ ಮನೆಯ ಬಾಗೀಲ ಕೀಲಿ ಮುರಿದ್ದು ಅವರ ಮನೆಯಲ್ಲಿ
ಇಟ್ಟಿದ 1 ತೊಲೆ
ಬಂಗಾರದ ನಕಲೇಸ್, ಅ:ಕಿ 30 ಸಾವೀರ ರೂ 5 ಗ್ರಾಂ ಬಂಗಾದ ಉಂಗುರ, ಅ:ಕಿ: 15 ಸಾವೀರ ರೂ ಮತ್ತು 5 ಗ್ರಾಂ ಬಂಗಾರದ ಕಿವಿಯಲ್ಲಿ
ಹುವುಗಳು, ಅ:ಕಿ: 15 ಸಾವೀರ ರೂ 15 ತೋಲೆ ಬೆಳ್ಳಿಯ ಕಾಲ ಚೈನಗಳು ಅ.ಕಿ 7000/- ರೂ ಮತ್ತು
ನಗದು ಹಣ 5 ಸಾವೀರ
ರುಪಾಯಿ, ಹೀಗೆ
ಒಟ್ಟು 67 ಸಾವಿರ
ಕಿಮ್ಮತ್ತಿನ ಆಭರಣ ಮತ್ತು ನಗದು ಹಣ ಕಳ್ಳತನವಾಗಿದ್ದು ಅದರಂತೆ ಶಾಂತಾಬಾಯಿ ಗಂಡ ಗೋಪಾಲ ಚೌವ್ಹಾಣ
ಇವರ ಮನೆಯ ಬಾಗೀಲ ಕೀಲಿ ಮುರಿದು ಮನೆಯಲ್ಲಿ ಇಟ್ಟ ನಗದು ಹಣ 20 ಸಾವೀರ ರುಪಾಯಿ ಕಳ್ಳತನ ಮಾಡಿಕೊಂಡು
ಹೋಗಿದ್ದು ಮತ್ತು ನಮ್ಮ ತಾಂಡಾಕ್ಕೆ ಹೊಂದಿಕೊಂಡಿರುವ ಶ್ರೀ ಸಂಗಶಟ್ಟಿ ತಂದೆ ಶಿವಶರಣಪ್ಪ ರೊಟಿ
ಇವರ ಮನೆಯ ಮುಂದೆ ನಿಲ್ಲಿಸಿದ ಅವರ ಹಿರೊ ಹೊಂಡಾ ಸ್ಲೇಂಡರ ಮೋಟಾರ ಸೈಕಲ ನಂ ಕೆಎ 32 ಕೆ 9087 ಅ:ಕಿ: 10,000 ರೂ
ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಾವೆಲ್ಲರೂ ನಮ್ಮ ನಮ್ಮ ಮನೆಯಲ್ಲಿಯ
ಕಳ್ಳತನವಾದ ಸಾಮಾನುಗಳನ್ನು ಪರಿಶೀಲಿಸಿ ನಂತರ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ.
ಎಲ್ಲರ ಬಂಗಾರ, ಬೆಳ್ಳಿ, ನಗದು ಹಣ ಮತ್ತು ಮೋಟಾರ ಸೈಕಲ ಕೂಡಿ
ಹೀಗೆ ಒಟ್ಟು ಅಂದಾಜ ಕಿಮ್ಮತ್ತು 2 ಲಕ್ಷ 69 ಸಾವೀರ ರೂಪಾಯಿ ಇದ್ದು. ಸದರಿ ಕಳುವಾದ ನಮ್ಮ ಆಭರಣ, ವಸ್ತುಗಳು ಮತ್ತು ನಗದು ಹಣ ಪತ್ತೆ
ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment