ಜೇವರಗಿ ಠಾಣೆ : ಮಹ್ಮದ ತಾಲೀಬ ಹುಸೇನ ತಂದೆ ಲಾಲೀಮ್ ಹುಸೇನ ಶೇಖ ವಯಾಃ 56 ವರ್ಷ, ಜಾತಿಃ ಮುಸ್ಲಿಂ ಉಃ ಸ್ಟೇಷನರಿ ಕೆಲಸ ಸಾಃ ಓಂನಗರ
ಜೇವರಗಿ ಇವರು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ನನಗೆ ವಯಾಃ 17 ವರ್ಷದ ಮಗಳಿರುತ್ತಾಳೆ ಅವಳು ಜೇವರಗಿ ಪಟ್ಟಣದ ವಿದ್ಯಾಬ್ಯಾಸ
ಮಾಡುತ್ತಾಳೆ, ನಮ್ಮ ಮನೆಯ ಸಮೀಪ ಗಣೇಶ ಜಾದವ ಇತನ ಮನೆ ಇರುತ್ತದೆ. ಅವನ ಪರಿಚಯ ಕೂಡಾ ಇರುತ್ತದೆ. ಅವನು
ಆಗಾಗ ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಿದ್ದನು. ಅಲ್ಲದೆ ಅವನು ನಮ್ಮ ಮನೆಯವರ ಸಂಗಡ ಮತ್ತು ನಮ್ಮ
ಮಗಳು ಇವಳೊಂದಿಗೂ ಕೂಡಾ ಸಲುಗೆಯಿಂದ ಮಾತನಾಡುವದು ಮಾಡುತ್ತಿದ್ದನು. ಅದಕ್ಕೆ ನಾವು ಒಂದು ದಿವಸ
ಅವನಿಗೆ ನೀವು ನಮ್ಮ ಮಗಳ ಸಂಗಡ ಹೀಗೆ ಮಾತನಾಡುವುದು ಸರಿ ಇಲ್ಲಾ ಅಂತಾ ಅವನಿಗೂ ಮತ್ತು ಅವನ
ಮನೆಯವರಿಗೂ ಬುದ್ದಿ ಹೇಳಿದ್ದೆವು. ದಿ. 26.10.2016 ರಂದು ಮುಂಜಾನೆ ನಾನು ಮನೆಯಿಂದ ಜೇವರಗಿ ಪಟ್ಟಣದ ಪೊಸ್ಟ
ಆಫೀಸ್ ಹತ್ತಿರ ಇರುವ ನಮ್ಮ ಸ್ಟೇಶನರಿ ಅಂಗಡಿಗೆ ಬಂದಿದ್ದೆನು. ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಸಮೀನಾ ಖಾತುನ್
ಇವಳು ಪೋನ ಮಾಡಿ ಮಗಳು ಇವಳು ಮದ್ಯಾಹ್ನ 2.00 ಗಂಟೆಗೆ ಮನೆಯಿಂದ ಬಿಸ್ಕಿಟ್ ತರುತ್ತೆನೆ ಅಂತಾ ಅಂಗಡಿಗೆ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ
ಬಂದಿರುವುದಿಲ್ಲಾ. ನಮ್ಮ ಸ್ಟೇಶನರಿ ಅಂಗಡಿಗೆ ಬಂದಿದ್ದಾಳೆ ಹೇಗೆ? ಅಂತಾ ಕೇಳಿದಳು. ಅದಕ್ಕೆ ನಾನು ನನ್ನ ಹತ್ತಿರ
ಬಂದಿರುವುದಿಲ್ಲಾ ಅಂತಾ ತಿಳಿಸಿ, ನಾನು ಮತ್ತು ನನ್ನ ಮಗ ಮಹ್ಮದ ಮುಜಾಫರ್ ಇಬ್ಬರೂ ಕೂಡಿ ಮನೆಗೆ ಹೋಗಿ ಮನೆಯಲ್ಲಿ
ವಿಚಾರಿಸಿದೆವು. ನಂತರ ನಾವಿಬ್ಬರೂ ಕೂಡಿ ಇವಳ ಬಗ್ಗೆ ಓಂ ನಗರದಲ್ಲಿ ಮತ್ತು
ಜೇವರಗಿ ಪಟ್ಟಣದಲ್ಲಿ ಹುಡುಕಾಡಿದ್ದೇವು. ಆದರು ಅವಳು ಸಿಕ್ಕಿರುವುದಿಲ್ಲಾ, ಸಾಯಂಕಾಲ 6.00 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದಲ್ಲಿ
ಹುಡುಕಾಡುತ್ತಿದ್ದಾಗ ಜೊಪಡಪಟ್ಟಿ ಏರಿಯಾದ ಮಹ್ಮದಗೌಸ ತಂದೆ ಅಹೇಮದಸಾಬ ಇನಾಮದಾರ ಇವರು ಸಿಕ್ಕಾಗ
ಅವರು ಹೇಳಿದ್ದನೆಂದರೆ ನಾನು ಇಂದು ಮದ್ಯಾಹ್ನ 2.30 ಗಂಟೆಗೆ ಜೇವರಗಿ ಪಟ್ಟಣದ
ಜ್ಯೋತಿ ಹೊಟೇಲ ಹತ್ತಿರ ಇದ್ದಾಗ ನೀಮ್ಮ ಮಗಳಾದ ಇವಳಿಗೆ ಗಣೇಶ ತಂದೆ ಧರ್ಮಸಿಂಗ್ ಜಾದವ, ಇತನು ಯಾವುದೋ ಒಂದು ಅಟೋದಲ್ಲಿ ಕೂಡಿಸಿಕೊಂಡು
ಹೋಗುವದನ್ನು ನೋಡಿರುತ್ತೆನೆ ಅಂತಾ ತಿಳಿಸಿದನು. ಅವನು ನಿಮ್ಮ ಮನೆಯ ಹತ್ತಿರ ಇರುವದರಿಂದ ನಾನು
ಅವರಿಗೆ ಮಾತಾಡಿಸಿರುವದಿಲ್ಲಾ ಅಂತ ಹೇಳಿದನು. ನಂತರ ನಾನು ಮತ್ತು ನನ್ನ ಮಗ ಇಬ್ಬರೂ ಗಣೇಶನ
ಮನೆಗೆ ಹೋಗಿ ವಿಚಾರಿಸಲು ಅವನು ಮನೆಯಲ್ಲಿ ಇರಲಿಲ್ಲಾ, ನಾನು ಮತ್ತು ನಮ್ಮ ಮನೆಯವರು ನಮ್ಮ ಮಗಳು ಹೊದ
ದಿವಸದಿಂದ ಇಂದಿನವರೆಗೆ ಹುಡುಕಾಡಿದರೂ ನನ್ನ ಮಗಳು ಸಿಕ್ಕಿರುವುದಿಲ್ಲಾ. ಅಪ್ರಾಪ್ತ ನನ್ನ ಮಗಳಾದ
17 ವರ್ಷ ಇವಳಿಗೆ ಗಣೇಶ
ಜಾದವ ಇತನು ಯಾವುದೋ ಉದ್ದೇಶಕ್ಕೆ ಅವಳಿಗೆ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಕಾರಣ
ನನ್ನ ಮಗಳಿಗೆ ಪತ್ತೆ ಹಚ್ಚಿ ಗಣೇಶ ಜಾಧವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವರದಿ ಇರುತ್ತದೆ.
ಅರ್. ಜಿ. ನಗರ ಠಾಣೆ : ಶ್ರೀ ಮೊಹ್ಮದ
ಇಸೂಫ್ ತಂದೆ ಮೊಹ್ಮದ ಇಸ್ಮಾಯಿಲ್ ವ:51 ಜಾ:ಮುಸ್ಲೀಂ ಉ:ಹೋಟಲದಲ್ಲಿ
ಕೆಲಸ ಸಾ:ರುದ್ರವಾಡಿ ತಾ:ಡಾಲಫೀನ್ ಶಾಲೆ ಹತ್ತಿರ
ಮದಿನಾ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೆಳಿಕೆ ನೀಡಿದ್ದು ಅದರ ಸಾರಾಂಶ ವೇನೆಂದರೆ.
ದಿನಾಂಕ:24/10/2016 ರಂದು ಬೇಳಗ್ಗೆ 10-00 ಗಂಟೆಗೆ ಮನೆಗೆ ಬೀಗ ಹಾಕಿ
ನಾನು ನನ್ನ ಹೆಂಡತಿ ಮಕ್ಕಳೋಂದಿಗೆ ನನ್ನ ಹೆಂಡತಿಯ ತವರೂರಾದ ಕಲಬುರಗಿ ನಗರದ ಊಮರ ಕಾಲೋನಿಗೆ
ಹೊಗಿದ್ದು ಇಂದು ದಿನಂಕ:28/10/2016 ರಂದು ಬೆಳಗ್ಗೆ 05-00 ಗಂಟೆಗೆ ಮನೆಗೆ ಬಂದಿದ್ದು ಮನೆಯ
ಮುಖ್ಯ ಬಾಗಿಲು ತೆರೆದಿದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಬೇಡ್ ರೂಮಿನ ಅಲಮಾರಿ
ತೆರೆದಿದ್ದು ಇದ್ದು ಅಲಮಾರಿಯಲ್ಲಿದ್ದ 5 ಗ್ರಾಂ ಬಂಗಾರದ ಒಂದು ಉಂಗುರ
ಮತ್ತು ನಗದು ಹಣ 8,000/-ರೂ ಇರಲಿಲ್ಲಾ ಯಾರೋ ಕಳ್ಳರು ಕಳುವು ಮಾಡಿಕೊಂಡು
ಹೋಗಿದ್ದು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ವರದಿ ಇರುತ್ತದೆ.
No comments:
Post a Comment