Police Bhavan Kalaburagi

Police Bhavan Kalaburagi

Monday, October 3, 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ನಿಂಗಣ್ಣಗೌಡ ತಂದೆ ಹೊನ್ನಪ್ಪಗೌಡ ನಂದಿಹಳ್ಳಿ ಸಾ: ವಿದ್ಯಾನಗರ ಜೇವರಗಿ ರವರ ತಮ್ಮ  ಸಂಗಣ್ಣ @ ಸಂಗಮೇಶ ತಂದೆ ನಿಂಗಣ್ಣಾ ಬಸವ ಪಟ್ಟಣ ಇತನು ಕಟ್ಟಿ ಸಂಗಾವಿ ಗ್ರಾಮದಲ್ಲಿ ಇರುತ್ತಾನೆ. ಸಂಗಣ್ಣನ ಹೆಂಡತಿ ತವರು ಮನೆ ಜೇವರಗಿ ಪಟ್ಟಣದ ಓಂ ನಗರದಲ್ಲಿ ಇರುತ್ತದೆ. ಇಂದು ದಿ: 02.10.16 ರಂದು ಮದ್ಯಾಹ್ನ 12.00 ಗಂಟೆಗೆ ನಾನು ಜೇವರಗಿ ಪಟ್ಟಣದಲ್ಲಿದ್ದಾಗ ನಮ್ಮ ಅಳಿಯ ಶರಣು ದಂಡಗುಂಡ ಹಾಗೂ ನನಗೆ ಪರಿಚಯದ ಮಹ್ಮದ ಹನೀಫ್ ಬಾಬಾ ಇವರು ಫೋನ ಮಾಡಿ ನಿಮ್ಮ ಸಡ್ಡಕ್ ಸಂಗಣ್ಣ ಬಸವಪಟ್ಟಣ ಇತನಿಗೆ ಜೇವರಗಿ ಕೆ ಬ್ರಿಡ್ಜ ಹತ್ತಿರ ರೋಡಿನಲ್ಲಿ ಎಕ್ಸಿಡೆಂಟ ಆಗಿರುತ್ತದೆ ಅವನಿಗೆ ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿದ್ದೆವೆ ಅಂತ ಹೇಳಿದ ಕೂಡಲೆ ನಾನು ಜೇವರಗಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ಸಂಗಣ್ಣ ಬಸವಪಟ್ಟಣ ಇತನು ಉಪಚಾರ ಪಡೆಯುತ್ತಿದ್ದನು. ನೋಡಲು ಎರಡು ಕಾಲಿನ ಮೇಲ್ಬಾಗದಲ್ಲಿ ಭಾರಿ ರಕ್ತಗಾಯ, ಬಲ ತೊಡೆಯ ಹತ್ತಿರ ತರಚಿದ ರಕ್ತಗಾಯ, ತಲೆಗೆ ಭಾರಿ ಗಾಯ, ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಕಿವಿಯಿಂದ ರಕ್ತ ಹೊರ ಬಂದಿರುತ್ತದೆ. ಘಟನೆ ಬಗ್ಗೆ ಶರಣು ದಂಡಗುಂಡ ಇವರಿಗೆ ಕೇಳಲು ತಿಳಸಿದೆನೆಂದರೆ, ನಾನು ಮತ್ತು ಮಹ್ಮದ ಹನೀಫ್ ಬಾಬಾ ಇಬ್ಬರು ಕೂಡಿ ಜ್ಯೋತಿ ಹೊಟೆಲದ ಹತ್ತಿರ ರೋಡಿನಲ್ಲಿ ನಿಂತಾಗ, ಮುಂಜಾನೆ ಅಂದಾಜು 11.30 ಗಂಟೆ ಸುಮಾರಿಗೆ ಜೇವರಗಿ ಕೆ ಬ್ರಿಡ್ಜ ಹತ್ತಿರ ಒಬ್ಬ ಲಾರಿ ಚಾಲಕನು ಜೇವರಗಿ ಕಡೆಯಿಂದ ಸಿಂದಗಿ ಕಡೆಗೆ ರೋಡಿನಲ್ಲಿ ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಮುಂದೆ ಬರುತ್ತಿದ್ದ ಮೊಟಾರ ಸೈಕಲ ಸವಾರನಿಗೆ ಎದುರಾಗಿ ಡಿಕ್ಕಿ ಪಡಿಸಿದರಿಂದ ಅವನು ಮೊಟಾರ ಸೈಕಲದೊಂದಿಗೆ ಬಿದ್ದನು ನಾವು ಓಡಿ ಹೋಗಿ ನೋಡಲು ಅವನು ಸಂಗಣ್ಣ ಬಸವಪಟ್ಟಣ ಇತನು ಇದ್ದನು. ಲಾರಿ ನಂಬರ ನೋಡಲು ಅದು ಕೆಎ-32 ಎ-5998 ಇತ್ತು ಅದರ ಚಾಲಕನು ಲಾರಿ ಬಿಟ್ಟು ಓಡಿ ಹೋದನು ಅವನಿಗೆ ನೋಡಿದಲ್ಲಿ ಗುರುತಿಸುತ್ತೇನೆ ನಂತರ ಸಂಗಣ್ಣನ ಮೊಟಾರ ಸೈಕಲ ನಂಬರ ನೋಡಲು ಅದು ಕೆಎ-32,ಇಎಫ್-7493 ಇತ್ತು. ನಂತರ ನಾವು ಇಬ್ಬರು ಸಂಗಣ್ಣನಿಗೆ ಉಪಚಾರ ಕುರಿತು ಒಂದು ಖಾಸಗಿ ಆಟೋದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತ ಹೇಳಿದನು. ನಂತರ ವೈದ್ಯರು ಸಂಗಣ್ಣನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ಹೇಳಿದ್ದರಿಂದ ನಾನು ಮತ್ತು ಶರಣು ದಂಡುಗುಂಡ, ವಿರೇಶ ಉಪ್ಪಿನ ಮೂವರು ಕೂಡಿ 108 ಅಂಬುಲೇನ್ಸ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ನಂತರ ಸಂಗಣ್ಣನ ಹೆಂಡತಿ ಗುರುಬಾಯಿ ಇವರು ಆಸ್ಪತ್ರೆಗೆ ಬಂದಿರುತ್ತಾರೆ. ನಂತರ ಸಂಗಣ್ಣನು ಉಪಚಾರ ಪಡೆಯುತ್ತಾ ಇಂದು ಮದ್ಯಾಹ್ನ 2.00 ಗಂಟೆಗೆ ಉಪಚಾರ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ ನಾಗಪ್ಪ ತಂದೆ ಈರಪ್ಪ ದೊಡ್ಡಮನಿ ವಯ ಸಾ: ಸೋಮನಾಥ ಹಳ್ಳಿ ತಾ: ಕಲಬುರಗಿ ಇವರ ಮಗ ಕಲ್ಪಣ್ಣ ಅಂತ 16 ವರ್ಷ ಅವನು  ಯಾದಗಿರಿ ಪಟ್ಟಣದ ಜವಾರ ಪ್ರೌಡ ಶಾಲೆಯಲ್ಲಿ, 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು, ಅಲ್ಲಿಯೇ ಸರಕಾರಿ ಬಾಲಕರ ವಸತಿ  ನಿಲಯದಲ್ಲಿ ಇರುತ್ತಿದ್ದನು. ಆಗಾಗ ಊರಿಗೆ ಬಂದು ಹೋಗುವದು ಮಾಡುತ್ತಿದ್ದನು. ದಿನಾಂಕ: 02.09.16 ರಂದು ನನ್ನ ಮಗ ಕಲ್ಪಣ್ಣನು ಊರಿಗೆ ಬಂದು ಊರಲ್ಲಿ ಇದ್ದನು.  ದಿನಾಂಕ: 06.09.2016 ರಂದು ಮುಂಜಾನೆ 06.00 ಗಂಟೆ ಸುಮಾರಿಗೆ ಮಗ ಕಲ್ಪಣ ಇತನು ಶಾಲೆಗೆ ಹೋಗುತ್ತೇನೆ ಅಂತ ಹೇಳಿ ಅವನ ಸಂಗಡ ಇನ್ನೊಬ್ಬ ಮಗ ವಿರೇಶ ಇತನ ಸಂಗಡ ಸೋಮನಾಥ ಹಳ್ಳಿ ರೋಡಿನ ತನಕ ಬಿಟ್ಟು ಬಾ ಅಂತ ಹೇಳಿ  ಕಳಹಿಸಿದ್ದೇನು. ಮಗ ವಿರೇಶ ಇತನು ಮರಳಿ ಊರಿಗೆ ಬಂದು ಅಣ್ಣ ಕಲ್ಪಣ್ಣ ಇತನು ಒಂದು ಲಾರಿಯಲ್ಲಿ ಕುಳಿತು ಶಹಾಬಾದ ಕ್ರಾಸ ತನಕ  ಹೋಗುತ್ತೇನೆ ಅಂತ ಹೇಳಿ ಹೋಗಿರುತ್ತಾನೆ ಅಂತ ಹೇಳಿದನು. ನಂತರ ಮುಂಜಾನೆ 11.00 ಗಂಟೆ ಸುಮಾರಿಗೆ ಕಲ್ಪಣ್ಣ ಇತನು ಫೋನ ಮಾಡಿ  ನನಗೆ ನಾನು ಯಾದಗಿರಿಗೆ ಬಂದಿರುತ್ತೇನೆ ಅಂತ ಹೇಳಿದನು. ನಂತರ ನಮ್ಮ ಅಳಿಯಾ ಬಾಲಪ್ಪ ತಂದೆ ಮರೆಪ್ಪ ಮೇಟಿ ಸಾ: ಕೂಲೂರ  ಇವರಿಗೆ ಫೋನ ಮಾಡಿ ಮಗ ಕಲ್ಪಣ್ಣ ಇತನು ಯಾದಗಿರಿಗೆ ಹೋಗಿರುತ್ತಾನೆ ಅವನ ಹತ್ತಿರ ಸ್ವಲ್ಪ ಹೋಗಿ ಬಾ ಅಂತ ಹೇಳಿದಾಗ  ಆದರಾಯಿತು ಅಂತ ಹೇಳಿದನು. ನನ್ನ ಮಗ ಕಲ್ಪಣ್ಣನು 2-3 ದಿವಸಗಳಾದರು ಅವನು ಫೋನ ಮಾಡದೇ ಇರುವದರಿಂದ ನನಗೆ ಸಂಶಯ  ಬಂದಿದ್ದರಿಂದ ದಿನಾಂಕ: 09.09.16 ರಂದು ನಾನು ಯಾದಗಿರಿಗೆ ಹೋಗಿ ಅವನು ಓದುತಿದ್ದ ಶಾಲೆಯ ಪ್ರಾರ್ಯಚಾ ರ್ಯರಿಗೆ ವಿಚಾರಿಸಲು ದಿನಾಂಕ: 01.09.16 ರಿಂದ ಶಾಲೆಗೆ ಬಂದಿರುವದಿಲ್ಲಾ ಅಂತ ಹೇಳಿದ್ದರಿಂದ ಮರಳಿ ಸರಕಾರಿ ಬಾಲಕರ ವಸತಿ ನಿಲಯದದಲ್ಲಿ ಬಾಲಪ್ಪ ಇತನು ವಸತಿ ನಿಲಯಕ್ಕೆ ಹೋಗಿ ವಿಚಾರಿಸಲು ಅಲ್ಲಿ ವಿದ್ಯಾರ್ಥಿಗಳು ದಿ: 06.09.16 ರಂದು ಕಲ್ಲಣ್ಣನು ಬಂದಿರುತ್ತಾನೆ ಅಂತ ತಿಳಿಸಿದ್ದು ಆದೆರೆ ಮೇಲ್ವಿಚಾರಕರಿಗೆ ವಿಚಾರಿಸಲು ಕಲ್ಪಣ್ಣ ಇತನು ದಿನಾಂಕ: 01.09.16 ರಿಂದ ಇಲ್ಲಿವರೆಗೆ ವಸತಿ ನಿಲಯಕ್ಕೆ ಬಂದಿರುವದಿಲ್ಲಾ. ಅಂತ ಹೇಳಿದರಿಂದ ನಾನು ನಮ್ಮ ಅಳಿಯ ಬಸವರಾಜನಿಗೆ ಫೋನ ಮಾಡಿ ಯಾದಗಿರಿಗೆ ಕರೆಯಿಸಿಕೊಂಡು ನನ್ನ ಮಗನು ನಮ್ಮ ಸಂಬಂಧಿಕರ  ಮನೆಗೆ ಹೋಗಿರಬಹುದು ಅಂತ ಹುಡುಕಾಡಿದೇವು. ಆದರೂ ನನ್ನ ಮಗನ ಪತ್ತೆಯಾಗಿರುವದಿಲ್ಲಾ. ನಂತರ ಮರಳಿ ನಮ್ಮೂರಿಗೆ ಬಂದು ಪುನ: ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಸಂಬಂಧಿಕರ ಊರುಗಳಲ್ಲಿ ಹುಡುಕಾಡಿದೇವು. ಅಲ್ಲದೇ ನಾನು ಮತ್ತು ನನ್ನ ಅಳಿಯ ಬಸವರಾಜ ಇಬ್ಬರು ಕೂಡಿ ಬೆಂಗಳೂರಿಗೆ ಹೋಗಿ ಅಲ್ಲಿ ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದರು ನನ್ನ ಮಗನ ಪತ್ತೆಯಾಗಿರುವದಿಲ್ಲಾ. ಯಾರೊ ಅಪರಿಚಿತ ವ್ಯಕ್ತಿಗಳು ನನ್ನ ಮಗನಿಗೆ ಅಪರಣ ಮಾಡಿಕೊಂಡು ಹೋದಂತೆ ಸಂಶಯ ಬಂದಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು  ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸುಲಿಗೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಹಣಮಂತರೆಡ್ಡಿ ಇವರ ಹೇಳಿಕೆ ಸಾರಾಂಶವೆನೆಂದರೆ ನಾನು ಈಗ ಸುಮಾರು 2 ವರ್ಷಗಳಿಂದ  ಕಮಲಾಪೂರ ಪೊಲೀಸ ಠಾಣೆಯಲ್ಲಿ ಪೊಲೀಸ ಪೇದೆ ಅಂತ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೆನೆ. ನನ್ನ ಸ್ವಂತ ಕಲಬುರಗಿ ಜಿಲ್ಲೆಯ ಗೊಬ್ಬೂರವಾಡಿ ಗ್ರಾಮವಾಗಿದ್ದು. ನಾನು ನಮ್ಮ ಗ್ರಾಮದಲ್ಲಿ ಮನೆ ಮಾಡಿದ್ದು ನಾನು ಪ್ರತಿ ದಿವಸ ನಮ್ಮ ಗ್ರಾಮದಿಂದ ಕಮಲಾಪೂರಕ್ಕೆ ಬಂದು ನನ್ನ ಕರ್ತವ್ಯ ನಿರ್ವಹಿಸಿಕೊಂಡು ಕರ್ತವ್ಯ ಮುಗಿದ ನಂತರ ನಮ್ಮ ಗ್ರಾಮಕ್ಕೆ ಹೊಗುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 30.09.2016 ರಂದು ರಾತ್ರಿ 8 ಗಂಟೆಯಿಂದ ಠಾಣೆಯಲ್ಲಿ ನನ್ನ ಪಹರೆ ಕರ್ತವ್ಯ ಇದ್ದ ಪ್ರಯುಕ್ತ ನಾನು ರಾತ್ರಿ 7:15 ಗಂಟೆಯ ಸುಮಾರಿಗೆ ನಮ್ಮ ಗ್ರಾಮದಿಂದ ನನ್ನ ಮೋಟಾರ ಸೈಕಲ ತೆಗೆದುಕೊಂಡು ಕಮಲಾಪೂರಕ್ಕೆ ಬರುವ ಕುರಿತು ಹಳ್ಳಿಖೆಡ ಗ್ರಾಮಕ್ಕೆ ಬಂದು ಎನ್.ಎಚ್. 218ರ ಮೇಲೆ ನನ್ನ ಮೋಟಾರ ಸೈಕಲ ನಡೆಯಿಸಿಕೊಂಡು ಕಮಲಾಪೂರ ಕಡೆಗೆ ಬರುತ್ತಿದ್ದು ರಾತ್ರಿ 7:45 ಗಂಟೆಯ ಸುಮಾರಿಗೆ ನಾನು ಡೊಂಗರಗಾವ ಸಿಮಾಂತರದ ಮಹೀಬೂಬಸುಬಾನಿ ದರ್ಗಾ ದಾಟಿ ಸ್ವಲ್ಪ ಮುಂದೆ ಹೊಗುತ್ತಿದ್ದಾಗ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ನನಗೆ ಕೈ ಮಾಡಿ ಹಿಂದಿ ಭಾಷೆಯಲ್ಲಿ ಟೈರೊ ಅಂತ ಹೇಳಿದ್ದು. ಆಗ ನಾನು ನನ್ನ ಮೋಟಾರ ಸೈಕಲನ್ನು ನಿಲ್ಲಿಸಿದ್ದು ಅದೆ ವೇಳಗೆ ರಸ್ತೆಯ ಪಕ್ಕದಲ್ಲಿ ಕುಳಿತ್ತಿದ್ದ ಇನ್ನೂ ಮೂರು ಜನರು ಬಂದು ನನಗೆ ಸುತ್ತುವರೆದು ಪೈಸಾ ನಿಕಾಲೊ ಅಂತ ಅನ್ನುತ್ತಾ ಅವರಲ್ಲಿ ಒಬ್ಬನು ಬಡಿಗೆಯಿಂದ ನನ್ನ ತಲೆಯ ಹಿಂದೆ ಜೋರಾಗಿ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು, ಉಳಿದವರು ತಮ್ಮ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಭಾಗದ ಪಕ್ಕೆಗೆ, ಬಲಗೈ ತೋಳಿನ ಹತ್ತಿರ, ಎದೆಯ ಕೇಳಗೆ ಹೊಟ್ಟೆಯ ಹತ್ತಿರ, ಬಲಗಾಲ ಮಳಕಾಲ ಕೆಳಗೆ ಹೊಡೆದು ಗುಪ್ತಗಾಯ ಪಡಿಸಿದ್ದು. ಆಗ ನಾನು ಸದರಿಯವರಿಗೆ ನನಗೆ ಹೊಡೆಯ ಬೇಡಿರಿ ನನ್ನ ಹತ್ತಿರ ಇದ್ದ ಹಣ ಕೊಡುತ್ತೆನೆ ಅಂತ ಹೇಳಿದರು ಕೂಡಾ ಸದರಿಯವನು ನನ್ನ ಹೊಡೆಯುತ್ತಾ ನನ್ನ ಅಂಗಿ ಮತ್ತು ಪ್ಯಾಂಟಿನ ಜೇಬುಗಳನ್ನು ಚೆಕ್ಕ ಮಾಡಿ ನನ್ನ ಜೇಬಿನಲ್ಲಿದ್ದ ನಗದು ಹಣ 3200/-ರೂಪಾಯಿ ಮತ್ತು ನನ್ನ ಒಂದು ಮೊಬೈಲ ತೆಗೆದುಕೊಂಡು ಮತ್ತೆ ಬಡಿಗೆಯಿಂದ ನನ್ನ ಬಾಯಿ ಮೇಲೆ ಹೊಡೆದಿದ್ದು ಆಗ ನಾನು ಕುಸಿದು ಕೆಳಗೆ ಬಿದಿದ್ದು, ನಾನು ಕೆಳಗೆ ಬಿದ್ದಾಗ ಸದರಿಯವರು ನನ್ನ ಮೋಟಾರ ಸೈಕಲನ್ನು ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ಮೋಟಾರ ಸೈಕಲ ಬಿಟ್ಟು ಹೋಗಿದ್ದು ಇರುತ್ತದೆ. ಸದರಿಯವರು ಅಲ್ಲಿಂದ ಹೊಗಿರುವದನ್ನು ನೋಡಿ ನಂತರ ನಾನು ರಸ್ತೆಯ ಮೇಲೆ ಬರುತ್ತಿದ್ದ ವಾಹನಗಳಿಗೆ ಕೈ ಮಾಡಿದ್ದು ಯಾವುದೆ ವಾಹನ ನಿಲ್ಲದಕ್ಕೆ, ನಾನು ನಡೆದುಕೊಂಡು ಡೊಂಗರಗಾವ ಕ್ರಾಸಿಗೆ ಬಂದಿದ್ದು ಕ್ರಾಸಿನಲ್ಲಿ ಒಂದು ಹೊಟೇಲ ಚಾಲು ಇದ್ದು ಅಜ್ಜಿ ಹೊಟೇಲದಲ್ಲಿದ್ದು, ಕ್ರಾಸಿನ ಹತ್ತಿರ ಒಬ್ಬ ವ್ಯಕ್ತಿ ಬಸ್ಸಿಗೆ ಕಾಯುತ್ತಾ ನಿಂತ್ತಿದ್ದು ಸದರಿ ವ್ಯಕ್ತಿಯಿಂದ ಮೊಬೈಲ ಪಡೆದುಕೊಂಡು ನಮ್ಮ ಮನೆಗೆ ಪೋನ ಮಾಡಿ ವಿಷಯ ತಿಳಿಸಿದ್ದು ಮತ್ತು ಕಮಲಾಪೂರ ಪೊಲೀಸ ಠಾಣೆಗೆ ಪೋನ ಮಾಡಿ ಶ್ರೀ ಸೈಯದ ಇಸಾ ಜಮಾದಾರ ಸಾಹೇಬರಿಗೆ ವಿಷಯ ತಿಳಿಸಿ, 108 ಅಂಬುಲೇನ್ಸಕ್ಕೆ ಕಳುಹಿಸುವಂತೆ ಹೇಳಿದ್ದು. ನನ್ನ ಗ್ರಾಮ ಹತ್ತಿರದಲ್ಲೇ ಇರುವದರಿಂದ ಸ್ವಲ್ಪ ಸಮಯದಲ್ಲಿ ನಮ್ಮ ಚಿಕ್ಕಪ್ಪ ಬಸವರಾಜ, ಅಣ್ಣತಮ್ಮಕಿಯ ಸಂಗಾರಡ್ಡಿ ಪಾಟೀಲ ಮತ್ತು ನನ್ನ ಹೆಂಡತಿ ಜೋತಿ ಕೂಡಿಕೊಂಡು ಸ್ಥಳಕ್ಕೆ ಬಂದಿದ್ದು ಅದೆ ವೇಳೆಗೆ 108 ಅಂಬುಲೇನ್ಸ ಸ್ಥಳಕ್ಕೆ ಬಂದಿದ್ದು. ಸದರಿಯವರು ನನಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ.ಪ್ರಮೋದ ತಂದೆ ಜಯಕುಮಾರ ಶಾಹಾ ಸಾ: ಆಳಂದರವರು ರವರದೊಂದು ತಡಕಲ ರೋಡಿಗೆ 136 ಸರ್ವೆ ನಂಬರದಲ್ಲಿ ಹೊಲ ಇದ್ದು ಅದನ್ನು ಸಾಗುವಳಿ ಮಾಡುತ್ತಾ ಬಂದಿದ್ದು ಅದನ್ನು ಒಬ್ಬ ಆಳು ಮಗ ನೋಡಿಕೊಳ್ಳುತ್ತಿದ್ದು ಅದಕ್ಕೆ ಒಬ್ಬ ಆರೀಪ್‌ ಸಿದ್ದಕಿ ಎಂಬ ಸುಪರವೈಜರ ಅಂತಾ ನೇಮಿಸಿದ್ದು ಇರುತ್ತದೆ. ಹೊಲದಲ್ಲಿ ಒಂದು ಎರಡು ರೂಮ್ಮಿನ ಮಳಿಗೆ ಇದ್ದು ಅದರಲ್ಲಿ ಬೆಳೆದ ಬೆಳೆ ಹಾಗು ಒಕ್ಕಲತನದ ಸಾಮಗ್ರಿಗಳು ಇಡುತ್ತಾ ಬಂದಿರುತ್ತೇವೆ .ನಾನು ಆಗಾಗ ಬಂದು ನೋಡಿಕೊಂಡು ಹೋಗುತ್ತೇನೆ. ದಿನಾಂಕ 27/09/2016 ರಂದು ನಮ್ಮ ಸುಪರವೈಜರ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಪೂನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಾನು ಇಂದು ಹೊಲಕ್ಕೆ ಹೋದಾಗ ಹೊಲದಲ್ಲಿ ಎರಡು ಕೋಣೆಗಳ ಬಾಗಿಲಿಗೆ ಇರುವ ಕೊಂಡಿ ಮುರಿದಂತೆ ಆಗಿದ್ದು ಅದರ ಒಳಗಡೆ ಹೋಗಿ ನೋಡಲು ರೂಮಿನಲ್ಲಿ ಇದ್ದ ಎರಡು ಚೀಲ ಉದ್ದು ಹಾಗು ಒಂದೂವರೆ ಚೀಲ ಜೋಳ ಮತ್ತು ಒಂದು ಹಳೆಯ ಹಾಂಡ್ಯಾ ಇರಲಿಲ್ಲ. ಇವುಗಳನ್ನು ಯಾರೋ ಕಳ್ಳರು ದಿನಾಂಕ 26/09/2016 ರ ರಾತ್ರಿಯಿಂದ ದಿನಾಂಕ 27/09/2016 ರ ಬೆಳಗಿನ ಜಾವದ ಮದ್ಯದ ಅವಧಿಯಲ್ಲಿ ಹೊಲದಲ್ಲಿ ಯಾರೂ ಇಲ್ಲದನ್ನು ಗಮನಿಸಿ ಹೊಲದಲ್ಲಿ ಇದ್ದ ಎರಡು ಚೀಲ ಉದ್ದು ಅಂದಾಜು ಕಿಮತ್ತು 12,000/- ರೂಪಾಯಿ ಹಾಗು ಒಂದೂವರೆ ಚೀಲ ಜೋಳ ಅ:ಕಿ: 8000/- ರೂಪಾಯಿ ಹಾಗು ಒಂದು ಹಳೆಯ ಹಾಂಡ್ಯಾ ಅ:ಕಿ: 3000/- ಕಿಮ್ಮತ್ತಿ  ಹೀಗೆ ಒಟ್ಟು 23,000/- ಸಾವಿರ ರೂಫಾಯಿ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: