ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಕವಿತಾ ಗಂಡ
ಪ್ರಶಾಂತ ಡಾಕು ಪವಾರ ಸಾ: ಬಾಪು ನಾಯಕ ತಾಂಡಾ ನಂದೂರ [ಬಿ] ಹಾ.ವ. ಕಿಂಗ ಪ್ಯಾಲೇಸ ಪಂಕ್ಷನ ಹಾಲ
ಹತ್ತಿರ ಚಿತ್ತಾಪುರ ರವರ ಗಂಡ ಪ್ರಶಾಂತ ಇವರು ದಿನಾಂಕ:02/10/2016 ರಂದು 8.30 ಪಿಎಮ್ ಸುಮಾರಿಗೆ ಯಾದಗಿರದಲ್ಲಿರುವ
ಗ್ರಾಮಿಣ ಕೋಡಾ ಪೈನಾನ್ಸ ಪ್ರಾ.ಲಿ ಯಲ್ಲಿ ಮಿಟಿಂಗ ಇದ್ದ ಕಾರಣ ತನ್ನ ಮೊ/ಸೈ ಕೆಎ-29/ಆರ್-8280
ನೇದ್ದನ್ನು ಚಲಾಯಿಸಿಕೊಂಡು ನನಗೆ ಹೇಳಿ ಹೋಗಿದ್ದು ನಂತರ ನನಗೆ ದಿನಾಂಕ:03/10/2016 ರಂದು ಬೆಳಗಿನ
ಜಾವದಲ್ಲಿ ಲಾಡ್ಲಾಪೂರದ ಶರಣಬಸಪ್ಪಾ ಗಣಿಮನಿ ಇವರು ಪೊನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಗಂಡನಾದ ಪ್ರಶಾಂತ ಪವಾರ
ಇತನ ತಮ್ಮ ಮೊ/ಸೈ ನಂ; ಕೆ.ಎ-29/ಆರ್-8280 ನೇದ್ದರ
ಚಾಲಕನ ತನ್ನ ಮೊ/ಸೈ ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಲಾಡ್ಲಾಪೂರ ದಾಟಿ
1 ½ ಕಿ.ಮಿ ಅಂತರದಲ್ಲಿ ಸ್ಕಿಡ ಆಗಿ
ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮೈದುನ ಕುಮಾರ, ಶಂಕರ ತಂದೆ ಸಿದ್ರಾಮಪ್ಪಾ ಕಡಬೂರ , ರವಿ ತಂದೆ ಪಾಂಡು ಚವ್ಹಾಣ, ಶಂಕರ ತಂದೆ ಭೀಮಸಿಂಗ ಚವ್ಹಾಣ ರವರು ಕೂಡಿ ಘಟನಾ ಸ್ಥಳಕ್ಕೆ ಬಂದು
ನೋಡಲಾಗಿ ನನ್ನ ಗಂಡನಿಗೆ ತಲೆಗೆ, ಮುಖಕ್ಕೆ, ಬಲ & ಎಡ ಮೇಲಕಿಗೆ ಭಾರಿ
ರಕ್ತಗಾಯವಾಗಿದ್ದು ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬಂದಿರುತ್ತದೆ. ನನ್ನ ಗಂಡನು ಸ್ಥಳದಲ್ಲಿ
ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಲ್ಲಯ್ಯ ತಂದೆ ಶಂಕ್ರಯ್ಯಾ ಹಿರೇಮಠ ಸಾ: ಚಟ್ನಳ್ಳಿ ತಾ:ಸಿಂದಗಿ ಹಾ.ವ: ಕೆಂಭಾವಿ ತಾ:ಶೋರಾಪೂರ
ಜಿ:ಯಾದಗಿರಿ ರವರು ಈಗ 1 ವರ್ಷದ ಹಿಂದೆ ಶರಣಯ್ಯ ಸುರಗಿ ಮಠ ಸಾ: ತಾಳಿಕೋಟಿ ಇವರ
ಟಾಟಾ ಕಂಪನಿಯ ಲಾರಿ ನಂ, ಕೆ.ಎ.-28 ಎ-5582 ಅ.ಕಿ:
8,50,000=00 ರೂ ಗೆ ಖರಿದಿಸಿದ್ದು, ನಾನು ಶ್ರೀರಾಮ
ಪೈನಾನ್ಸದಲ್ಲಿ ಪೈನಾನ್ಸ ಮಾಡಿಸಿದ್ದು ಇರುತ್ತದೆ. ಲಾರಿಗೆ ನಾನೆ ಡ್ರೈವರ/ಕ್ಲೀನರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ: 23-09-16 ರಂದು ರಾತ್ರಿ
11-30 ಪಿ.ಎಂ ಕ್ಕೆ ಸಿಂದಗಿಯಿಂದ ನನ್ನ ಖಾಲಿ ಲಾರಿಯ ನಂ: ನಂ
ಕೆ.ಎ-28 ಎ-5582 ನೇದ್ದು, ತೆಗೆದುಕೊಂಡು ಕೆಂಭಾವಿಗೆ ಬರುತ್ತಿದ್ದಾಗ ಮಾಗಣಗೇರಾ ಕ್ರಾಸ ಹತ್ತಿರ ದಿನಾಂಕ:
24-09-16 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ
ಲಾರಿಯ ಹೌಜಿಂಗನಲ್ಲಿ ಅವಾಜ ಕೇಳಿ ಬರುತ್ತಿದ್ದಾಗ ನಾನು ತಕ್ಷಣ ನನ್ನ ಲಾರಿಯನ್ನು ಮಾಗಣಗೇರಿ ಕ್ರಾಸ
ಹತ್ತಿರ ನಿಲ್ಲಿಸಿದೇನು. ಅಲ್ಲಿಂದ ಇನ್ನೊಂದು ಲಾರಿ ಹಿಡಿದುಕೊಂಡು ಮಲ್ಲಾಕ್ಕೆ
ಹೋಗಿ ನಂತರ ಅಲ್ಲಿಂದ
ಬೇರೆಯವರ ಮೊಟಾರ ಸೈಕಲ್ ಮೇಲೆ ಬೆಳಗ್ಗೆ 6 ಗಂಟೆಗೆ ಕೆಂಭಾವಿಗೆ ಹೋಗಿ
ಕೆಂಬಾವಿಯಲ್ಲಿ ಮ್ಯಾಕ್ಯಾನಿಕನಿಗೆ ಹೇಳಿ ಜಳಕ ಮಾಡಿ ಮರಳಿ ನಾನು ಮತ್ತು ಮ್ಯಾಕ್ಯಾನಿಕ್ ನನ್ನ ಗೆಳೆಯ
ರಮೇಶನೊಂದಿಗೆ ಸ್ಥಳಕ್ಕೆ ಬಂದೆನು. ಅಲ್ಲಿ ನನ್ನ ಲಾರಿ ಇರಲಿಲ್ಲ.
ನಾನು ಲಾರಿ ಬಿಟ್ಟು ಹೋಗಿದ್ದು, ಯಾರೋ ಕಳ್ಳರು
ನನ್ನ ಲಾರಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅದರ ಅಂದಾಜು ಕಿಮ್ಮತ್ತು
8,50,000=00 ರೂ. ನೇದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment