ಅಪಘಾತ ಪ್ರಕರಣ:
ಗ್ರಾಮೀಣಪೊಲೀಸ್ ಠಾಣೆ : ದಿನಾಂಕ.
6-10-2016 ರಂದು ಶ್ರೀಮತಿ ನಾಗಮ್ಮಾ ಗಂಡ
ನಾಗಪ್ಪಾ ನವಲೆ ಸಾ; ಕೆರಿಅಂಬಲಗಿ ತಾ;ಆಳಂದ ಇವರು ಕೊಟ್ಟ ಹೇಳಿಕೆ ಫಿರ್ಯಾದಿಯಲ್ಲಿ ತನ್ನ ಗಂಡ
ನಾಗಪ್ಪಾ ನವಲೆ ಇವರು ತಮ್ಮ ಹೀರೋ ಸ್ಪ್ಲೆಂಡರ ಮೋಟಾರ ಸೈಕಲ್ ನಂ.ಕೆ.ಎ.32. ಇಎಲ್. 4983 ನೆದ್ದರ
ಮೇಲೆ ಕಲಬುರಗಿಯಿಂದ ಕೆರಿಅಂಬಲಗಾಕ್ಕೆ ಬರುತ್ತಿರುವಾಗ ಮೋಟಾರ ಸೈಕಲನ್ನು ವೇಗವಾಗಿ ಚಲಾಯಿಸುತ್ತಾ
ಗಣಜಲಖೇಡ ಕ್ರಾಸ ಸಮೀಪ ಎಮ್ಮೆಗೆ ಅಪಘಾತಪಡಿಸಿದ್ದರಿಂಧ ಎಮ್ಮೆಯ ಖೋಡು ಆತನ ಎದೆಯ ಬಲಭಾಗದಲ್ಲಿ ಚುಚ್ಚಿ
ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು. ಸದರಿ ಘಟನೆಯು ತನ್ನ ಗಂಡ ನಾಗಪ್ಪಾ ನವಲೆ ಇವರು
ಮೋಟಾರ ಸೈಕಲನ್ನು ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿದ್ದರಿಂದ ಸಂಭವಿಸಿದ್ದು. ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ದಿ.
06.10.2016 ರಂದು ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರ್ಗಿ ಠಾಣೆರವರು ಠಾಣೆಯಲ್ಲಿದ್ದಾಗ ನರಿಬೊಳ
ಕಡೆಯಿಂದ ಜೇವರಗಿ ಕಡೆಗೆ ಟ್ರ್ಯಾಕ್ಟರ್ ಗಳಲ್ಲಿ ಕಳ್ಳತನದಿಂದ ಮರಳು
ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಇಂಗಳೇಶ್ವರ
ಸಿಪಿಐ ಜೇವರಗಿ ವೃತ್ತ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಠಾಣೆಯ
ಸಿಬ್ಬಂದಿರವರಾದ ಶ್ರೀ ಬಾಗಣ್ಣ ಸಿಪಿಸಿ 701, ಶ್ರೀ
ಶರಣರಾಜ ಸಿಪಿಸಿ 1043, ಶ್ರೀ ಸುರೇಶ ಸಿಪಿಸಿ 391 ರವರಿಗೆ
ಮತ್ತು ಪಂಚರಾದ 1) ದೇವಪ್ಪ ತಂದೆ ಬಸಣ್ಣಾ ನಂದಿಗೊಂಡ ಸಾಃ ನೇಲೊಗಿ, 2)
ಪ್ರೇಮನಗೌಡ ತಂದೆ ಕುಪ್ಪಣ್ಣಾ ಮಂಗಾ ಸಾಃ ನೇಲೊಗಿ ಇವರಿಗೆ ಬರ ಮಾಡಿಕೊಂಡು ಎಲ್ಲರು ಠಾಣೆಯ ಜೀಪ
ನಂ ಕೆಎ-32,ಜಿ-351 ನೇದ್ದರಲ್ಲಿ ಕುಳಿತು ಠಾಣೆಯಿಂದ ಜೇವರಗಿ - ವಿಜಯಪೂರ ರಸ್ತೆಯ
ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರಗಳಿಗೆ ನೋಡಿ ನಿಲ್ಲಿಸಲು
ಹೋದಾಗ ಟ್ರ್ಯಾಕ್ಟರಗಳ ಚಾಲಕರು ತಮ್ಮ
ಟ್ರ್ಯಾಕ್ಟರಗಳನ್ನು ರೋಡಿನ ಸೈಡಿನಲ್ಲಿ ನಿಲ್ಲಿಸಿ ಟ್ರ್ಯಾಕ್ಟರ್ ಬಿಟ್ಟು ಹೊಲದಲ್ಲಿ ಓಡಿ ಹೊಗಿದ್ದು.
ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ಆವರ ಹೆಸರು 1) ಶಿವಲಿಂಗಪ್ಪ ತಂದೆ ಸಂಗಣ್ಣಾ ಗೊಬರಡಗಿ ಸಾಃ
ಕೂಟ್ನೂರ ಇದ್ದು ಆತನು ಸಂಗಣ್ಣಾಗೌಡ ತಂದೆ ಶಿವಲಿಂಗಪ್ಪ ಗೊಬರಡಗಿರವರ ಟ್ರ್ಯಾಕ್ಟರ್ ನಂ
ಕೆಎ-32-ಟಿಬಿ-320 ನೇದ್ದರ ಡ್ರೈವರ್ ಇರುತ್ತಾನೆ, 2)
ಬೈಲಪ್ಪ ತಂದೆ ಸಿದ್ರಾಮಪ್ಪ ಡಿಗ್ಗಿ ಸಾಃಕೂಟ್ನೂರ ಆತನು ಶರಣಬಸ್ಸಪ್ಪ ತಂದೆ ಈರಣ್ಣಾ ಕಾಳಗಿ
ಇವರ ಟ್ರ್ಯಾಕ್ಟರ್ ನಂ 43.1024/ಎಸ್.ಟಿಕೆ 1.6704 ನೇದ್ದರ ಚಾಲಕ ಇರುತ್ತಾನೆ, 3)
ಪ್ರಭುಲಿಂಗ ತಂದೆ ಸಿದ್ರಾಮಪ್ಪ ತಳವಾರ ಸಾಃ ಕೂಟ್ನೂರ ಇತನು ಬಸವರಾಜ ತಂದೆ ಸಾಹೇಬಗೌಡ ಸಾಃ
ಕೂಟ್ನೂರ ಇವರ ಟ್ರ್ಯಾಕ್ಟರ ಚೆಸ್ಸಿ
ನಂ ಡಬ್ಲೂ ಸಿ ಜಿ406099890 ನೇದ್ದರ ಚಾಲಕ ಇರುತ್ತಾನೆ, 4)
ಶ್ರೀಶೈಲ ತಂದೆ ಮಲ್ಲಣ್ಣಾ ಬಂಗಾರಿ ಸಾಃ ನೇಲೊಗಿ ಇತನು
ಸಂಗಯ್ಯ ತಂದೆ ಶಾಂತಯ್ಯ ಹೂಲ್ಲೂರ ಸಾಃ ನೇಲೊಗಿ ಇವರ ಟ್ರ್ಯಾಕ್ಟರ ನಂ ಕೆಎ-32-ಟಿಎ-8395 ನೇದ್ದರ
ಚಾಲಕ ಇರುತ್ತಾನೆ 5) ಭಲಭೀಮ ತಂದೆ ಲಕ್ಮಣ ಕ್ಷೇತ್ರಿ ಸಾಃ
ನೇಲೊಗಿ ಇತನು ಸಿದ್ದಯ್ಯ ತಂದೆ ಅಮೃತರಾಯ ಪ್ಯಾರಸಾಬಾದ ಸಾಃ ನೇಲೊಗಿ ಇವರ ಟ್ರ್ಯಾಕ್ಟರ ಚೆಸ್ಸಿ
ನಂ ಎನ್.ಕೆ.ಜೆಟಿ00109 ನೇದ್ದರ ಚಾಲಕ ಇರುತ್ತಾನೆ. ಅಂತಾ ತಿಳಿಸಿದನು. ನಂತರ ಸ್ಥಳದಲ್ಲಿದ್ದ
ಟ್ರ್ಯಾಕ್ಟರ್ ಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ 1)ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ್
ನಂ ಕೆಎ-32-ಟಿಬಿ-0320 ಇದ್ದು ಅದರಲ್ಲಿ 1 ಬ್ರಾಸ್ ಮರಳು ಅ.ಕಿ 1000/-ರೂ ಆಗಬಹುದು
ಟ್ರ್ಯಾಕ್ಟರ್ ಅ.ಕಿ 3.00.000/- ರೂ 2)ನಂಬರ
ಇರಲಾದ ಸ್ವರಾಜ ಕಂಪನಿ ಟ್ರ್ಯಾಕ್ಟರ್ ಇದ್ದು
ಅದರ ಚೆಸ್ಸಿ ನಂ ಡಬ್ಲೂಸಿಎಲ್ 40622106895, ಇಂಜೀನ
ನಂ 43.1024/ಎಸ್.ಟಿ.ಕೆ 1.6704 ಇದ್ದು ಅದರಲ್ಲಿ 1
ಬ್ರಾಸ್ ಮರಳು ಅ.ಕಿ 1000/-ರೂ ಆಗಬಹುದು ಟ್ರ್ಯಾಕ್ಟರ್ ಅ.ಕಿ
3.00.000/- ರೂ, 3) ನಂಬರ
ಇರಲಾದ ಸ್ವರಾಜ ಕಂಪನಿಯ ಟ್ರ್ಯಾಕ್ಟರ್
ಇದ್ದು ಅದರ ಚೆಸ್ಸಿ ನಂ ಡಬ್ಲೂಎಕ್ಸ್ಸಿಜಿ406099890 ಇದ್ದು
ಅದರಲ್ಲಿ 1 ಬ್ರಾಸ್ ಮರಳು ಅ.ಕಿ 1000/-ರೂ
ಆಗಬಹುದು ಟ್ರ್ಯಾಕ್ಟರ್ ಅ.ಕಿ 3.00.000/- ರೂ, 4)
ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂ ಕೆಎ-32-ಟಿಎ-8395 ಇದ್ದು ಅದರಲ್ಲಿ 1 ಬ್ರಾಸ್ ಮರಳು ಅ.ಕಿ
1000/-ರೂ ಆಗಬಹುದು ಟ್ರ್ಯಾಕ್ಟರ್ ಅ.ಕಿ
3.00.000/- ರೂ 5) ನಂಬರ ಇರಲಾದ ಮಹಿಂದ್ರಾ ಕಂಪನಿ
ಟ್ರ್ಯಾಕ್ಟರ್ ಇದ್ದು ಅದರ ಮಾಡಲ್ ನಂ 575-ಡಿಐ ಅಂತಾ ಚೆಸ್ಸಿ ನಂ, ಎನ್.ಕೆ.ಜೆಟಿ00109
ಇದ್ದು ಅದರಲ್ಲಿ 1 ಬ್ರಾಸ್ ಮರಳು ಅ.ಕಿ 1000/-ರೂ
ಆಗಬಹುದು ಟ್ರ್ಯಾಕ್ಟರ್ ಅ.ಕಿ 3.00.000/- ರೂ ಸದರಿ
ಟ್ರ್ಯಾಕ್ಟರ್ ಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಅಥವಾ ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ
ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಸರಕಾರಕ್ಕೆ ಮೋಸ ಮಾಡಿ ಕಳ್ಳತನದಿಂದ
ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ 5
ಟ್ರ್ಯಾಕ್ಟರಳನ್ನು 5 ಬ್ರಾಸ್ ಮರಳು ಅ.ಕಿ. 5000=00 ರೂ ಕಿಮ್ಮತ್ತಿನ ಮರಳು ಸಮೇತ ಪಂಚರ
ಸಮಕ್ಷಮದಲ್ಲಿ ಮುಂಜಾನೆ 6:00 ಗಂಟೆಯಿಂದ 7:00 ಗಂಟೆಯ ವರೆಗೆ ಜಪ್ತಿ
ಪಂಚನಾಮೆ ಮೂಲಕ ಜಪ್ತ ಮಾಡಲಾಯಿತು. ಸದರಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಸಿಬ್ಬಂದಿಯವರ
ಸಹಾಯದಿಂದ ಮರಳಿ ಠಾಣೆಗೆ ಮುಂಜಾನೆ 8.30 ಗಂಟೆಗೆ ತಂದಿದ್ದು ಇರುತ್ತದೆ. ಮೇಲೆ ನಮೂದಿಸಿದ
ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಮರಳನ್ನು ಸರಕಾರದ ಪರವಾನಿಗೆ ಇಲ್ಲದೇ ಸರಕಾರಕ್ಕೆ ರಾಜ್ಯ
ಧನ ಭರಿಸದೇ ಸರಕಾರಕ್ಕೆ ಮೊಸ ಮಾಡಿ ಕಳ್ಳತನದಿಂದ ಮಾರಾಟ ಮಾಡಲು ಸಾಗಿಸುತ್ತಿದ್ದ ಕಾರಣ ಚಾಲಕರ
ಮತ್ತು ಮಾಲೀಕರ ವಿರುದ್ದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment