Police Bhavan Kalaburagi

Police Bhavan Kalaburagi

Saturday, October 8, 2016

KALABURAGI DISTRICT REPORTED CRIMES.

ಜೇವರಗಿ ಪೊಲೀಸ್ ಠಾಣೆ : ದಿನಾಂಕ  07.10.2016 ರಂದು ಮುಂಜಾನೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿ ಜನರಾದ ಶ್ರೀ ಮಲ್ಲಿಕಾರ್ಜುನ ಹೆಚ್.ಸಿ-383, ಶ್ರೀ ಶಿವರಾಜಕುಮಾರ ಸಿಪಿಸಿ-498, ಶ್ರೀ ಬಾಗಣ್ಣ ಸಿಪಿಸಿ-701 ರವರೊಂದಿಗೆ ರೋಡ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಬಾತ್ಮಿದಾರನಿಂದ ಖಚಿತ ಬಾತ್ಮಿ ಬಂದಿದ್ದೆನಂದರೆ, ಅವರಾದ ಕ್ರಾಸ ಹತ್ತಿರ ಅವರಾದ ರೋಡಿನ ಪಕ್ಕದಲ್ಲಿ ಅಕ್ರಮವಾಗಿ ಮದ್ಯ (ಸರಾಯಿ) ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮಾನ್ಯ ಸಿಪಿಐ ಸಾಹೇಬರಿಗೆ ವಿಷಯ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚ ಜನರಾದ 1) ಶ್ರೀ ಸೈಯದ ಹುಸೇನ ತಂದೆ ದಾವಲಸಾಬ ಜಮಾದಾರ ಸಾ: ಮುದಬಾಳ (ಕೆ) 2) ಶರಣಪ್ಪ ತಂದೆ ಹಣಮಂತ ದಿವಣ ಸಾ: ಶಖಾಪೂರ ಎಸ್ ಇವರಿಗೆ ಬರಮಾಡಿಕೊಂಡು ಪಂಚರಿಗೆ ಮತ್ತು ಸಿಬ್ಬಂದಿ ಜನರಿಗೆ ಸರಾಯಿ ದಾಳಿ ಮಾಡುವ ವಿಷಯ ತಿಳಿಸಿ ಸರಕಾರಿ ಜೀಪ ನಂ ಕೆಎ-32,ಜಿ-351 ನೇದ್ದರಲ್ಲಿ ಕುಳಿತು ಅವರಾದ ಕ್ರಾಸ ಹತ್ತಿರ ಹೋಗಿ ಹೊಟೇಲ ಪಕ್ಕದಲ್ಲಿ ನಿಂತು ನೋಡಲು ಒಬ್ಬ ಮನುಷ್ಯನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವದು ಖಚಿತ ಪಡಿಸಿಕೊಂಡು ಏಕ ಕಾಲಕ್ಕೆ ಪಂಚ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿ ಜನರು ಕೂಡಿ ದಾಳಿ ಮಾಡಿ ಹಿಡಿದು ಹೆಸರು ಕೇಳಲು ವಿಜಯಕುಮಾರ ತಂದೆ ನಿಂಗಪ್ಪ ಅವಟೆ ಸಾ: ಶಖಾಪೂರ ಎಸ್.ಎ ಅಂತ ಹೇಳಿದನು. ನಂತರ ನಾವು ಮದ್ಯ ಪರಿಶೀಲಿಸಿ ನೋಡುತ್ತಿದ್ದಾಗ ಅವನು ತಪ್ಪಿಸಿಕೊಂಡು ಓಡಿ ಹೋದನು ಅವನಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನ ಮಾಡಿದರು ಅವನು ಸಿಗಲಿಲ್ಲಾ. ನಂತರ ಮದ್ಯ ಇಟ್ಟ ಜಾಗಕ್ಕೆ ಬಂದು ಪರಿಶೀಲಿಸಿ ನೋಡಲು 1 ) ಒಂದು ಬಾಕ್ಸದಲ್ಲಿ 96 Original Choice Deluxe Wisky 90 ml ಪೌಚಗಳಿದ್ದು ಒಂದ ಬೆಲೆ 26/-ರೂ ಒಟ್ಟು 2,496/-ರೂ 2) ಕಪ್ಪು ಪ್ಲಾಸ್ಟಿಕದಲ್ಲಿ 12 Old Tavaran Wisky 180 ml ಪೌಚಗಳಿದ್ದು ಒಂದ ಬೆಲೆ 62/-ರೂ ಒಟ್ಟು 744/-ರೂ ಕಿಮ್ಮಿತಿವುಗಳು ಇದ್ದವು. ಹೀಗೆ ಒಟ್ಟು 3240/-ರೂ ಸದರಿಯವುಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು. ಆರೊಪಿತ ವಿಜಯಕುಮಾರ ತಂದೆ ನಿಂಗಪ್ಪ ಅವಟೆ ಸಾಃ ಶಖಾಪೂರ ಎಸ್.ಎ ಇತನು ಯಾವುದೇ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳದೇ ಅನಧಿಕೃತವಾಗಿ ( ಅಕ್ರಮವಾಗಿ ) ಕಳ್ಳತನದಿಂದ ಸರಾಯಿ ಮಾರಾಟ ಮಾಡುತ್ತಿದ್ದು ಅವನ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಅಂತ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ ಅಂತ ವರದಿ. 

No comments: