Police Bhavan Kalaburagi

Police Bhavan Kalaburagi

Sunday, November 20, 2016

BIDAR DISTRICT DAILY CRIME REPORT UPDATE 20/11/2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20/11/2016
ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ಸಂ.130/2016, ಕಲಂ 279,304(ಎ) ಐ.ಪಿ.ಸಿ.:-
ದಿನಾಂಕ.18/11/2016 ರಂದು ರಾತ್ರಿ 11.50 ಗಂಟೆಗೆ ಆರೋಪಿ ಶಂಕರಪ್ಪ ತಂದೆ ಅಮರಪ್ಪಾ ಗುರೆಕರ, ವಯ: 44ವರ್ಷ, ಜಾತಿ: ಬೇಡರ, ಸಾ: ಭವಾನಿ ಪೇಟ ಮಡ್ಡೆ ವಸ್ತಿ ಸೋಲಾಪೂರ ಲಾರಿ ನಂ.ಎಂಎಚ-13-ಆರ್-4609 ನೇದ್ದರ ಚಾಲಕ ಇತನು ಹಾಗೂ ಮೃತ ಸುರೇಶ ತಂದೆ ವಸಂತ ಗವಾನೆ, ವಯ: 40 ವರ್ಷ, ಮರಾಠಾ, ಸಾ: ಧೈಟನೆ ತಾ: & ಜಿ: ಸೋಲಾಪೂರ ಇತನು ಲಾರಿ ನಂ.ಎಂಎಚ-13-ಆರ್-4609 ನೇದ್ದರ ಕ್ಲೀನರನಾಗಿ ಕೆಲಸ ಮಾಡುತ್ತಿದ್ದು, ಆರೋಪಿ ಶಂಕರಪ್ಪಾ ಗೆರೆಕರ್‌ ಈತನು ತನ್ನ ಲಾರಿ ನಂ.ಎಂಎಚ-13-ಆರ್-4609 ನೇದ್ದರಲ್ಲಿ ಇರುಳಿ ಲೋಡ ಮಾಡಿದ ಲೋಡನ್ನು ಬೇಗನೆ ಮುಟ್ಟಿಸುವ ಆತುರದಲ್ಲಿ ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಚಂಡ್ಕಾಪೂರ ಗ್ರಾಮದ ಹತ್ತಿರ ರೋಡಿನ ಪಕ್ಕದಲ್ಲಿ ಇದ್ದ ಒಂದು ಧಾಬಾದಲ್ಲಿಂದ ಒಂದು ಲಾರಿ ಟ್ಯಾಂಕರ ರಿವರ್ಸದಲ್ಲಿ ಬರುತ್ತಿರುವದನ್ನು ನೋಡದೇ ಮತ್ತು ಲಾರಿಯನ್ನು ಕಂಟ್ರೋಲ ಮಾಡದೆ ಒಮ್ಮೇಲೆ ಟ್ಯಾಂಕರ ಲಾರಿಗೆ ಡಿಕ್ಕಿ ಹೊಡೆದ ಹಡೆದಿರುತ್ತಾನೆ. ಸದರಿ ಅಪಘಾತದಿಂದ ಲಾರಿಯಲ್ಲಿ ಕುಳಿತ ಮೃತ ಕ್ಲೀನರ್‌ ಸುರೇಶ ಈತನಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು,  ಉಪಚಾರ ಕುರಿತು 108 ಆಂಬುಲೆನ್ಸದಲ್ಲಿ ಹಾಕಿಕೊಂಡು ಉಮರ್ಗಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೆ ಸುರೇಶ ಇತನು ಮೃತ ಪಟ್ಟಿರುತ್ತಾನೆ ಎಂದು ಕೊಟ್ಟ ಫಿರ್ಯಾದಿ ತುಕಾರಾಮ ತಂದೆ ವಿಠ್ಠಲ ಶಿಂಧೆ, ವಯ: 33 ವರ್ಷ, ಜಾ: ಮರಾಠಾ, : ವ್ಯಾಪಾರ ಮತ್ತು ಲಾರಿ ನಂ.ಎಂಎಚ-13-ಆರ್-4609 ನೇದ್ದರ ಮಾಲಿಕ, ಸಾ: ತುಳಜಾಪೂರ ನಾಕಾ ಮಡ್ಡೆ ವಸ್ತಿ ಸೋಲಾಪೂರ ಇವರ ಸಾರಾಂಶ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß ¸ÀA.145/216, PÀ®A ಕಲಂ 366 () ಐಪಿಸಿ ಮತ್ತು ಕಲಂ 12 ಪೋಕ್ಸೋ ಕಾಯ್ದೆ -2012 ಹಾಗೂ ಕಲಂ 3 (1)(11) ಎಸ್.ಸಿ/ಎಸ್.ಟಿ ಎಕ್ಟ್-1989:-
ದಿನಾಂಕ : 16/11/2016 ರಂದು ಮಧ್ಯಾಹ್ನ 02:00 ಗಂಟೆಗೆ ಫಿರ್ಯಾದಿ ಶೋಭಾವತಿ ಗಂಡ ಚಂದ್ರಕಾಂತ ಹಿರನಾಗಾಂವ, ವಯ: 40 ವರ್ಷ ಜಾ: ಎಸ್.ಟಿ ಗೊಂಡ ಉ: ಕೂಲಿ ಕೆಲಸ ಸಾ: ನಂದಗಾಂವ ನಾನು ಮತ್ತು ಫಿರ್ಯಾದಿಯ ಮಗಳು ಇಬ್ಬರು ಹಸೇನ ಪೀರ ದರ್ಗಾದ ಹತ್ತಿರದಿಂದ ಮನೆಗೆ ಹೊಗುವಾಗ ಫಿರ್ಯದಿಯ ಮಗಳನ್ನು ಆರೋಪಿ ನಯೀಮ ತಂದೆ ಸಲೀಮ ಬಡಿಗೇರ ವಯ: 30 ವರ್ಷ ಜಾತಿ: ಮುಸ್ಲಿಂ ಉ: ಕೂಲಿ ಕೆಲಸ ಸಾ: ನಂದಗಾಂವ ಈತನು ಫಿರ್ಯಾದಿಯ ಮಗಳ ಕೈ ಹಿಡಿದು ಎಳೆದುಕೊಂಡು ಹೊಲದಲ್ಲಿ ಓಡಿ ಹೋಗಿ ಕಣ್ಮರೆಯಾಗಿರುತ್ತಾನೆ. ನಂತರ ಫಿರ್ಯಾದಿಯು ಚೀರಾಡಲು ಅಲ್ಲಿ ಯಾರು ಜನರು ಇದ್ದಿರುವುದಿಲ್ಲ. ನಂತರ ಅಲ್ಲಿನ ಹೊಲದಲ್ಲಿ ಎಲ್ಲಾ ಕಡೆ ಹುಡುಕಾಡಲು ಎಲ್ಲಿಯು ಸಿಕ್ಕಿರುವುದಿಲ್ಲ.ಆರೋಪಿ ನಯೀಮ ಈತನು ಫಿರ್ಯಾದಿಯ ಮಗಳಿಗೆ ಕಿಡ್ನಾಪ ಮಾಡಿಕೊಂಡು ಹೋಗಿರುತ್ತನೇಂದು ಕೊಟ್ಟ ಫಿರ್ಯಾದು ಸಾರಾಂಶ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA.138/2016, PÀ®A 279, 337 304 (J) L¦¹ :-
ದಿನಾಂಕ:19/11/2016 ರಂದು ಫಿರ್ಯಾದಿ ವೆಂಕಟರಮಣ ತಂದೆ ರಾಮಕೃಷ್ಣಯ್ಯಾ ಸೋನ್ನತಿ ವಯ: 36 ವರ್ಷ, ಜಾತಿ: ವೈಶ್ಯ ಉ:ಫೈನಾನ್ಸ  ಸಾ: ಮನೆ ನಂ ಬಿ.-2/201 ಕುಮಾರ ಪ್ರಿಮರೋಜ ಖರಾಡೆ ಪುನೆ(ಎಮ್.ಎಸ್.) ಇತನು ತನ್ನ   ಹೆಂಡತಿ ಅಂಜನಾ ವಯ: 32 ವರ್ಷ ಹಾಗೂ ತನ್ನ ತಾಯಿಯವರಾದ ಜಾನಕಮ್ಮ ವಯ: 50 ವರ್ಷ ಎಲ್ಲರು ಕೊಡಿಕೊಂಡು ಫಿರ್ಯಾದಿಯ ಕಾರ ನಂ. ಎಮ್.ಎಚ್.14.ಯು.5137 ನೇದರಲ್ಲಿ ಪುನಾ ದಿಂದ ಹೈದ್ರಾಬಾದಕ್ಕೆ ಹೋಗುವಾಗ ರಾಹೆ ನಂ 9 ಮೋಳಕೇರಾ ಬಸನಿಲ್ದಾಣದ ಹತ್ತಿರ ಮಧ್ಯಾಹ್ನ 02.45 ಗಂಟೆಗೆ ಆರೋಪಿ ಶೇಕ ವೈಜೋದ್ದಿನ ತಂದೆ ಶೇಕ ಬಸಿರ ವಯ 35 ವರ್ಷ ಸಾ: ಕನ್ನಾಡ ಜಿ: ಔರಂಗಾಬಾದ(ಎಮ್.ಎಸ್.) ಕಾರ ನಂ ಎಮ್.ಎಚ್.20ಡಿ.ಜೆ.9786  ಇನತು ತನ್ನ ಕಾರನ್ನು ಅತಿ ವೇಗವಾಗಿ ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಎದುರಿನಿಂ ಬಂದು ಫಿರ್ಯಾದಿಯ ಕಾರಿಗೆ ಮುಖಾಮುಖಿ ಡಿಕ್ಕಿಮಾಡಿ ಅಪಘಾತ ಪಡಿಸಿರುತ್ತಾನೆ. ಸದರಿ ಅಪಘಾತದಿಂದ ಎರಡು ವಾಹನಗಳು ಡ್ಯಾಮೇಜಾಗಿ ಫಿರ್ಯಾದಿ ಹಾಗು ಫಿರ್ಯದಿಯ ಹೆಂಡತಿಗೆ ರಕ್ತ ಮತ್ತು ಗುಪ್ತ ಗಾಯಗಳಾಗಿ ಫಿರ್ಯಾದಿಯ ತಾಯಿಯವರಾದ ಜಾನಕಮ್ಮಾ ಇವರಿಗೆ ಎದೆಗೆ ಭಾರಿ ಗುಪ್ತಗಾಯವಾಗಿ ಮೂಳೆ ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಎಂದು ಕೊಟ್ಟ ಫಿರ್ಯಾದು ಸಾರಾಂಶ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನುರ ಪೊಲೀಸ್ ಠಾಣೆ ಗುನ್ನೆ ಸಂ.29/2016. ಕಲಂ 174 ಸಿ ಆರ್ ಪಿ ಸಿ :-
ಫಿರ್ಯಾದಿ ಶಾಂತಮ್ಮಾ ಗಂಡ ಮಾಣಿಕರಾವ ಮಡಿವಾಳ, ವಯ:45 ಜಾ:ಧೋಭಿ ಉ:ಕೂಲಿ ಕೆಲಸ ಸಾ:ಖಾನಾಪೂರ ತಾ:ಭಾಲ್ಕಿ ಇವರಿಗೆ 3 ಜನ ಗಂಡು ಮಕ್ಕಳು ಕ್ರಮವಾಗಿ 1) ವೈಜಿನಾಥ 2) ವಿಶ್ವನಾಥ 3) ಮಹೇಶ ವಯ:21 ವರ್ಷ ಹೀಗೆ ಮಕ್ಕಳಿರುತ್ತಾರೆ, ಹಿಗಿರುವಾಗ ಫಿರ್ಯಾದಿಯ ಮೂರನೆ ಮಗ ಮೃತ ಮಹೇಶ ಈತನಿಗೆ ಸೂಮಾರು 3-4 ವರ್ಷಗಳಿಂದ ಹೊಟ್ಟೆ ನೋವು ಕಾಯಿಲೆ  ಇದ್ದು ಎಲ್ಲಾ ಕಡೆ ತೋರಿಸಿದರು ಕಾಯಿಲೆ ಕಡಿಮೆ ಆಗಿರುವುದಿಲ್ಲ. ಮೃತ ಮಹೆಶನು ತನ್ನ ಹೊಟ್ಟೆ ನೋವು ಕಾಯಿಲೆ ವಾಸಿಯಾಗುವುದಿಲ್ಲವೆಂದು ತನ್ನ ಮನಸ್ಸಿನ ಮೇಲೆ ಪ್ರಭಾವ ಮಾಡಿಕೊಂಡು ಕೂಲಿ ಕೆಲಸಕ್ಕೆಂದು ಹೇಳಿ ಮನೆಯಿಂದ ಹೊರಗೆ ಹೋಗಿ ಖಾನಾಪೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಒಂದು ಬೇವಿನ ಮರಕ್ಕೆ ಪ್ಲಾಸ್ಟೀಕ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೋಂಡು ದಿನಾಂಕ:15/11/2016 ರಂದು ಅಂದಾಜ ಸಾಯಾಂಕಾಲ 1800 ಗಂಟೆಗೆ ಮರಣ ಹೊಂದಿರುತ್ತಾನೆ. ಫಿರ್ಯಾದಿಯ ಮಗನ ಸಾವಿನಲ್ಲಿ ಯಾರ ಮೇಲು ಯಾವುದೆ ರೀತಿಯ ಸಂಶಯವಿರುವಿದಿಲ್ಲ. ಎಂದು ಕೊಟ್ಟ ಫಿರ್ಯಾದು ಸಾರಾಂಶ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪಲೀಸ್ ಠಾಣೆ ಗುನ್ನೆ ಸಂ.146/2016 ಕಲಂ 147, 148, 341, 448, 324, 323, 504, 506 ಮತ್ತು 498 () ಐಪಿಸಿ ಹಾಗು ಕಲಂ 3 & 4 ಡಿ.ಪಿ ಆಕ್ಟ್ :-
ಫಿರ್ಯಾದಿಯಾದ ವಿಜಯಲಕ್ಷ್ಮಿ ಗಂಡಿ ವಿಜಯ ಪಾಟೀಲ ವಯ: 29 ವರ್ಷ ಜಾತಿ:  ಕುರುಬುರ ಉ: ಮನೆ ಕೆಲಸ  ಸಾ: ಹಳ್ಳಿಖೇಡ (ಬಿ) ಮತ್ತು ಆರೋಪಿ ವಿಜಯ.ಹೆಚ್.ಪಾಟೀಲ ತಂದೆ ಹಣಮಂತ ಪಾಟೀಲ ವಯ: 38 ವರ್ಷ ಉ: ಭಾರತಿಯ ಸೈನಿಕ ಇವರಿಗೆ ದಿನಾಂಕ : 15/02/2009 ರಂದು ಹಿಂದು ಸಂಸ್ಕ್ರತಿ ಪ್ರಕಾರ ಶ್ರೀ ಸೀಮಿ ನಾಗನಾಥ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದು ಅದರಂತೆ ಅವರಿಗೆ ಎರಡು ಮಕ್ಕಳು ಇರುತ್ತವೆ. ಹೀಗಿರಲು ಈಗ ಕೆಲವು ವರ್ಷಗಳಿಂದ ಫಿರ್ಯಾದಿದಾರಳ ಗಂಡನಾದ ಆರೋಪಿ ವಿಜಯ.ಹೆಚ್.ಪಾಟೀಲ, ಅತ್ತೆಯಾದ ಶಾರದಮ್ಮಾ, ಮಾವನಾದ ಹಣಮಂತ, ಮೈದುನನಾದ ಮಲ್ಲೇಶ, ನೆಗೆಣಿಯಾದ ಶಿಲ್ಪಾ, ನಾದನಿಯಾದ ಮಮಿತಾ, ಹಾಗು ಅತ್ತೆಯ ತಮ್ಮನಾದ ಬಸವರಾಜಪ್ಪಾ, ಬಾಬುರಾವ ರವರು ಫಿರ್ಯಾದಿತಳಿಗೆ ಜಗಳ ಮಾಡಿ ತವರು ಮನೆಗೆ ಕಳುಹಿಸಿಕೊಟ್ಟಿದ್ದು, ತವರು ಮನೆಯಿಂದ ಇನ್ನು ಹೆಚ್ಚಿನ ಬಂಗಾರ ಬೆಳ್ಳಿ ಮತ್ತು ಮೋಟಾರ ಸೈಕಲ ತರುವಂತೆ ಕಿರುಕೂಳ ನೀಡಿ ತವರು ಮನೆಗೆ ಕಳುಹಿಸಿರುತ್ತಾರೆ. ಹೀಗಿರಲು ದಿನಾಂಕ : 31/08/2016 ರಂದು ಸಾಯಂಕಾಲ 1630 ಗಂಟೆಗೆ ಆರೋಪಿ ಗಂಡನಾದ ವಿಜಯ.ಹೆಚ್.ಪಾಟೀಲ, ಅತ್ತೆಯಾದ ಶಾರದಮ್ಮಾ, ಮಾವನಾದ ಹಣಮಂತ, ಮೈದುನನಾದ ಮಲ್ಲೇಶ, ನೆಗೆಣಿಯಾದ ಶಿಲ್ಪಾ, ನಾದಣಿಯಾದ ಮಮಿತಾ, ಹಾಗು ಅತ್ತೆಯ ತಮ್ಮನಾದ ಬಸವರಾಜಪ್ಪಾ, ಬಾಬುರಾವ ಮತ್ತು ಮದುವೆಯ ಮಧ್ಯಸ್ಥಿಕೆ ವಹಿಸಿದ ಲತಾ ಹಾಗು ಸುಜಾತಾ ಎಲ್ಲರು ಸಾ: ದಾವಣಗೇರಾ ಇವರೆಲ್ಲರು ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿತಳ ತವರು ಮನೆಯಾದ ಹಳ್ಳಿಖೇಡ (ಬಿ) ಗ್ರಾಮಕ್ಕೆ ಬಂದು ಇವರ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿತಳಿಗೆ ಅಕ್ರಮವಾಗಿ ತಡೆದು ಅವಾಚ್ಛವಾಗಿ ಬೈದು ಕೈಯಿಂದ, ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿ ನೀನು ನಮ್ಮ ಮನೆಗೆ ಬರುವುದಾದರೆ 5 ಲಕ್ಷ ರೂ ದುಡ್ಡು, 10 ತೊಲೆ ಬಂಗಾರ, ಸೈಕಲ ಮೋಟರ ಇಲ್ಲಿಯವರೆಗೆ ಏಕೆ ತೆಗೆದುಕೊಂಡು ಬಂದಿಲ್ಲ ಅಂತ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ. ಎಂದು ಕೊಟ್ಟ ಫಿರ್ಯಾದು ಸಾರಾಂಶ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


No comments: