ಕೊಲೆ ಪ್ರಕರಣ:
ಯಡ್ರಾಮಿ ಪೊಲೀಸ್
ಠಾಣೆ:ದಿನಾಂಕ: 15-11-2016 ರಂದು ಶ್ರೀ ಪರಮಾನಂದ ತಂದೆ ಆನಂದಪ್ಪ ಚಾಂದ
ಕವಟೆ ಸಾ:ಕೊಣಶಿರಸಗಿ ಇವರು ಠಾಣೆಗೆ ಹಾಜರಾಗಿ ಗ 4-5 ವರ್ಷದ ಹಿಂದೆ ನಾವು
ಅಣ್ಣ ತಮ್ಮಂದಿರರು ಬೇರೆಯಾಗಿದ್ದರಿಂದ ನಮ್ಮ ತಂದೆಗೆ ನಮ್ಮ ಮೇಲೆ ಸಿಟ್ಟು ಮಾಡಿಕೊಂಡು ನಮ್ಮ ಮನೆಗೆ ಊಟ ಮಾಡಲು ಬರುತ್ತಿರಲಿಲ್ಲ. ಅವರು ಗ್ರಾಮದ
ಸಿದ್ರಾಮಪ್ಪಗೌಡ ಇವರ ಮನೆಯಲ್ಲಿ ಊಟ ಮಾಡುತ್ತಾ. ಗೊಲ್ಲಾಳಪ್ಪಗೌಡ
ಇವರ ಹೊಲದಲ್ಲಿ ಕಡಕೋಳ ಮಡಿವಾಳೇಶ್ವರ ತಾತನವರು ಕುಳಿತು ಹೋಗಿದ್ದ ಜಾಗದಲ್ಲಿ ನಮ್ಮ ತಂದೆ
ಆನಂದಪ್ಪನವರು ಗದ್ದುಗೆ ಮಾಡಿಕೊಂಡು ಪೂಜೆ
ಪುನಸ್ಕಾರ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದು. ಹೀಗಿದ್ದು,
ದಿ: 14-11-16 ರಂದು ಬೆಳಿಗ್ಗೆ ಎಂದಿನಂತೆ ನನ್ನ ತಂದೆ ಸಿದ್ರಾಮಪ್ಪಗೌಡನ ಮನೆಯಲ್ಲಿ ಊಟ ಮಾಡಿ
ಬುತ್ತಿ ಕಟ್ಟಿಕೊಂಡು ತಾನು ಇರುವ ಗದ್ದುಗೆ ಸ್ಥಳಕ್ಕೆ ಹೋಗಿದ್ದು. ಇಂದು ದಿನಾಂಕ: 15-11-2016
ರಂದು ನನಗೆ ಶಾಂತಪ್ಪ ಇತನು ಪೋನ್ ಮಾಡಿ ನಿನ್ನ ತಂದೆಗೆ ಗವಿಯಲ್ಲಿ ಯಾರೋ ಹೊಡೆದು ಕೊಲೆ
ಮಾಡಿರುತ್ತಾರೆ ಅಂತಾ ಹೇಳಿದ ಕೂಡಲೆ ನಾನು ಮತ್ತು ಬನ್ನೆಪ್ಪ ತಂದೆ ಮಲ್ಲೇಶಪ್ಪ ಕೂಡಲಗಿ, ಬಸವರಾಜ
ತಂದೆ ಮಡಿವಾಳಪ್ಪ ಬಿರಾದಾರ ಹೀಗೆಲ್ಲರೂ ಕೂಡಿಕೊಂಡು ನನ್ನ ತಂದೆ ಇರುವ ಗವಿಯಲ್ಲಿ ಹೋಗಿ ನೋಡಲಾಗಿ
ನನ್ನ ತಂದೆ ಗವಿಯಲ್ಲಿದ್ದ ಪಲಂಗಿನ ಮೇಲೆ ಬೋರಲಾಗಿ ಬಿದ್ದಿದ್ದು, ಹೊರಳಿಸಿ ನೋಡಲಾಗಿ ಹಣೆಯ ಮೇಲೆ
ಗಾಯವಾಗಿ ಮುಖ ಉಬ್ಬಿದಂತಾಗಿ ರಕ್ತ ಬಂದಿತ್ತು. ಅಲ್ಲದೆ ಗುಪ್ತಾಂಗದ ಹತ್ತಿರ ರಕ್ತಗಾಯವಾಗಿದ್ದು. ಗವಿಯಲ್ಲಿ ನೋಡಲಾಗಿ
ಗವಿಯಲ್ಲಿದ್ದ ಪೆಟ್ಟಿಗೆ ಹೊರಗೆ ತಂದು ಅದರಲ್ಲಿನ
ಕಾಗದ ಪತ್ರಗಳು ಸುಟ್ಟು ಹಾಕಿದ್ದು. ಈ ಕೊಲೆ ದಿ: 14-11-16 ರಂದು ಬೆಳಿಗ್ಗೆ 11 ಗಂಟೆಯಿಂದ
ಸಾಯಂಕಾಲ 6 ಗಂಟೆಯ ಅವಧಿಯಲ್ಲಿ ಆಗಿರಬಹುದು ನಮ್ಮ
ತಂಧೆ ವಾಸವಾಗಿದ್ದ ಸ್ಳಳದಲ್ಲಿ ಕಡಕೋಳ ಮಡಿವಾಳೇಶ್ವರ ಮೂರ್ತಿ ಪ್ರತಿಷ್ಟಾಪನೆ ಮಾಡುವ ಸಲುವಾಗಿ ಹೊಲ
ಕೊಡಬಾರದೆಂಬ ಉದ್ದೇಶದಿಂದ ನನ್ನ ತಂದೆಗೆ ಮಡಿವಾಳಪ್ಪಗೌಡ ತಂದೆ ಮುತ್ತಣ್ಣಗೌಡ ಮಾಲಿಪಾಟೀಲನು.
ಗವಿಯಲ್ಲಿದ್ದ ನನ್ನ ತಂದೆಗೆ ಕೊಲೆ ಮಾಡಿ ಕಾಗದ ಪತ್ರಗಳನ್ನು ಸುಟ್ಟು ಹಾಕಿರುತ್ತಾರೆ ಕಾರಣ
ಮೇಲ್ಕಂಡ ಮಡಿವಾಳಪ್ಪಗೌಡನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ,
ಮಟಕಾ ಜೂಜು ಕೋರನ ಬಂಧನ:
ಜೇವರ್ಗಿ ಪೊಲೀಸ್ ಠಾಣೆ: ದಿ
14.11.2016 ರಂದು ಶ್ರೀ ನಾಗಭೂಷಣ ಎ.ಎಸ್.ಐ ಜೇವರಗಿ ಪೊಲೀಸ್ ಠಾಣೆ ರವರು ಜೇವರಗಿ ಪಟ್ಟಣದ
ಸರಕಾರಿ ಆಸ್ಪತ್ರೆ ಪಕ್ಕದ ಮುಖ್ಯ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು
ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ರಾಮಣ್ಣ ತಂದೆ ಕರಣಪ್ಪ ಅವಂಟಿ ಸಾ: ಗುಡೂರ ಎಸ್.ಎ ತಾ: ಜೇವರಗಿ ರವರ ಮೇಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆತನಿಂದ
ನಗದು ಹಣ ರೂ 4,375/- ಮತ್ತು ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನು ಜಪ್ತಿ ಮಾಡಿ
ಸದರಿಯವನ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾರಾಟ
ಪ್ರಕರಣ:
ಫರಹತಾಬಾದ ಪೊಲೀಸ್
ಠಾಣೆ: ದಿನಾಂಕ
14-11-2016 ರಂದು ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ನದಿಸಿನ್ನೂರ ಗ್ರಾಮದ ಸೀಮಾಂತರ
ಭೀಮಾನದಿಯಲ್ಲಿ ಟೆಂಡರುದಾರನಾದ ವಿಜಯಕುಮಾರ ಚವ್ಹಾಣ ಈತನು ನಿಯಮ ಬಾಹೀರವಾಗಿ ಮರಳನ್ನು ಟಿಪ್ಪರಗಳಲ್ಲಿ ತುಂಬುತ್ತಿರುವಾಗ ದಾಳಿ ಮಾಡಿ
ಅಕರಮ ಮರಳು ತುಂಬುತ್ತಿರುವ ಬಗ್ಗೆ ಶ್ರೀ ಕಿರಣಕುಮಾರ ಗ್ರಾಮ ಲೆಕ್ಕಿಗ ನದಿಸಿನ್ನೂರ ಇವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಜಯಕುಮಾಋ ಚವ್ಹಾಣ ಮತ್ತು ಟಿಪ್ಪರ ಚಾಲಕರ ವಿರುದ್ದ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment