ಕೊಲೆ ಪ್ರಕರಣ:
ಕಮಲಾಪೂರ ಪೊಲೀಸ್
ಠಾಣೆ: ದಿನಾಂಕ:07.11.2016
ರಂದು ಶ್ರೀಮತಿ ಮಹಾದೇವಿ ಗಂಡ ಶಿವರುದ್ರಪ್ಪ ಕಲಕುಟಗಿ ಸಾ: ಜೀವಣಗಿ ತಾ:ಜಿ: ಕಲಬುರಗಿ ಇವರು
ಠಾಣೆಗೆ ಹಾಜರಾಗಿ ತಾನು ತನ್ನ ಗಂಡ ಸುಮಾರು 30
ವರ್ಷಗಳಿಂದ ಜೀವಣಗಿ ಗ್ರಾಮದಲ್ಲಿ ಮನೆ ಮಾಡಿ ಕಿರಾಣ ಅಂಗಡಿ ಮತ್ತು ಹಿಟ್ಟಿನ ಗಿರಿಣಿ ಹಾಕಿಕೊಂಡು
ವ್ಯಾಪಾರ ಮಾಡಿಕೊಂಡು ಬಂದಿದ್ದು ಇರುತ್ತದೆ. ಎಂದಿನಂತೆ ದಿನಾಂಕ 07-11-2016
ರಂದು ನನ್ನ ಗಂಡ ಎದ್ದು ಬೆಳ್ಳಿಗ್ಗೆ 5:00
ಗಂಟೆಯ ಸುಮಾರಿಗೆ ಮಲ ವಿಸರ್ಜನೆಗೆ ಹೋಗಿ ಬರುತ್ತೆನೆ ಅಂತ ಹೇಳಿ ನಮ್ಮ ಗ್ರಾಮದಿಂದ ಬ್ಯೂಯಾರ
ಕಡೆಗೆ ಹೊಗುವ ರಸ್ತೆಯ ಕಡೆಗೆ ಮಲ ವಿಸರ್ಜನೆಗೆ ಹೋಗಿದ್ದು ನಾನು ಮನೆಯಲ್ಲಿ ಕೆಲಸ
ಮಾಡಿಕೊಂಡಿದ್ದು. ಬೆಳ್ಳಿಗ್ಗೆ 6:00
ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ಮಲ್ಲಪ್ಪ ತಂದೆ ಈರಣ್ಣ ಒಳದೊಡ್ಡಿ ಇವರು ನಮ್ಮ ಮನೆಗೆ ಬಂದು ಬೆಳ್ಳಿಗ್ಗೆ
5:30 ಗಂಟೆಯ ಸುಮಾರಿಗೆ ನಾನು ಹೊಲದಲ್ಲಿ ಇದ್ದಾಗ ಗುತ್ತಪ್ಪ
ಸಾಲಹಳ್ಳಿ ಇವರ ಹೊಲದ ಹತ್ತಿರ ಯಾರೊ ಚಿರಾಡುವ ಸಪ್ಪಳ ಕೇಳಿ ನಾನು ಹೋಗಿ ನೋಡಲು ಯಾರೊ ಒಬ್ಬ
ವ್ಯಕ್ತಿ ಶಿವರುದ್ರಪ್ಪನ ಸಂಗಡ ಜಗಳ ಮಾಡುತ್ತಿದ್ದು ಜಗಳದ ಸಪ್ಪಳ ಕೇಳಿ ಹೊಲದಲ್ಲಿದ್ದ ಗುತ್ತಪ ಸಹ
ಅಲ್ಲಿಗೆ ಬಂದಿದ್ದು ಆಗ ನಾನು ಮತ್ತು ಗುತ್ತಪ್ಪ ಇಬ್ಬರು ಶಿವರುದ್ರಪ್ಪನ ಹತ್ತಿರ ಹೊಗಿ
ಶಿವರುದ್ರಪ್ಪನಿಗೆ ಬಿಡಿಸಿಕೊಳ್ಳಬೇಕು ಎನ್ನುವಷ್ಠರಲ್ಲಿ ಶಿವರುದ್ರಪ್ಪನ ಸಂಗಡ ಜಗಳ
ಮಾಡುತ್ತಿದ್ದ ವ್ಯಕ್ತಿ ತನ್ನ ಹತ್ತಿರ ಇದ್ದ ಚಾಕು ತೆಗೆದು ಶಿವರುದ್ರಪ್ಪನಿಗೆ ಚಾಕುದಿಂದ ಎಡಭಾಗದ
ಎದೆಯ ಮೇಲೆ ಜೋರಾಗಿ ಚುಚ್ಚಿ ಭಾರಿ ರಕ್ತಗಾಯ ಪಡಿಸಿ ಬಿಡಿಸಲು ಹೋದ ನನಗೆ ಮತ್ತು ಗುತ್ತಪ್ಪನಿಗೆ
ಆ ವ್ಯಕ್ತಿ ಚಾಕು ದಿಂದ ನನಗೆ ಹೊಡೆಯಲು ಬಂದಿದ್ದು ಆಗ ನನಗೆ ಸಹ ಚಾಕು ನನ್ನ ಹಣೆಯ ಹತ್ತಿರ
ಹತ್ತಿ ಸಣ್ಣ ರಕ್ತಗಾಯವಾಗಿದ್ದು ಇರುತ್ತದೆ . ನಂತೆ ಆ ವ್ಯಕ್ತಿಗೆ ಹಿಡಿಯಬೇಕು ಎನ್ನುವಷ್ಠರಲ್ಲಿ
ಅವನು ಅಲ್ಲಿಂದ ಓಡಿ ಹೋಗಿದ್ದು. ಶಿವರುದ್ರಪ್ಪನು ಅಲ್ಲೆ ರಸ್ತೆಯ ಮೇಲೆ ಬಿದ್ದಿರುತ್ತಾನೆ ಅಂತ
ತಿಳಿಸಿದ್ದು ಗಾಬರಿಗೊಂಡ ನಾನು, ನನ್ನ ಮಕ್ಕಳು ಪಕ್ಕದ
ಮನೆಯವರು ಹೋಗಿ ನೋಡಲು ನನ್ನ ಗಂಡ ನರಳಾಡುತ್ತಾ ರಸ್ತೆಯ ಮೇಲೆ ಬಿದ್ದಿದ್ದು ನನ್ನ ಗಂಡನ ಎಡಭಾಗದ
ಎದೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಮತ್ತು ಎಡಗೈ ಮುಂಗೈ
ಹತ್ತಿರ ರಕ್ತಗಾಯವಾಗಿದ್ದು ನನ್ನ ಗಂಡನ ಉಟ್ಟಿಕೊಂಡು ಬಟ್ಟೆಗಳ ಮೇಲೆ ರಕ್ತ ಕಲೆಗಳಾಗಿದ್ದು
ಇರುತ್ತದೆ. ಉಪಚಾರ ಕುರಿತು ಜೀಪಿನಲ್ಲಿ ನನ್ನ ಗಂಡನಿಗೆ ಕಮಲಾಪೂರ ಸರಕಾರಿ ಆಸ್ಪತ್ರೇಗೆ ತರುವಾಗ ಮಾರ್ಗ
ಮಧ್ಯದಲ್ಲಿ ಮೃತ ಪಟ್ಟಿದ್ದು. ನನ್ನ ಗಂಡನಿಗೆ ಚಾಕುದಿಂದ ಎದೆಗೆ
ಚೂಚ್ಚಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿದ ಅಪರಿಚಿತ ವ್ಯಕ್ತಿಯ ವಿರುದ್ದ ಕಾನೂನು ಕ್ರಮ
ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಮಹಾಗಾಂವ ಪೊಲೀಸ್
ಠಾಣೆ : ದಿನಾಂಕ- 07-11-2016 ರಂದು ಶ್ರೀ ಮಂಜುನಾಥ ಜಿ. ಹೂಗಾರ ಪಿಎಸ್ಐ ಮಹಾಗಾಂವ ಪೊಲೀಸ ಠಾಣೆ ರವರು ಠಾಣೆಯಲ್ಲಿರುವಾಗ ಠಾಣೆಯ ವ್ಯಾಪ್ತಿಯ ನಾಗೂರ ತಾಂಡಾದ ಸರ್ಕಾರಿ ಹಳೆಯ ಶಾಲೆ ಎದುರುಗಡೆ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರೂ ಗುಂಪಾಗಿ ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ 1)ಅಶೋಕ ಪಿಸಿ. 2) ಲಕ್ಷ್ಮೀಕಾಂತ ಪಿಸಿ. 3) ರೇವಣಸಿದ್ದಪ್ಪಾ ಪಿಸಿ. 4) ಭೀಮಾಶಂಕರ ಪಿಸಿ, ವರರೊಂದಿಗೆ,
ನಾಗೂರ ತಾಂಡಾದ ಸರ್ಕಾರಿ ಶಾಲೆ ಎದುರುಗಡೆ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರೂ ಗುಂಪಾಗಿ ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದದ್ದನ್ನು ನೋಡಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟ ಆಡುತ್ತಿದ್ದ 1) ಬಸವರಾಜ ತಂದೆ ಮಲ್ಲಿನಾಥ ಸಾಲಿ, 2) ಸುರೇಶ ತಂದೆ ರೇಖು ರಾಠೋಡ, 3) ಮೋಹನ ತಂದೆ ದಶರಥ ಪವಾರ, 4) ರಾಜು ತಂದೆ ಗೋವಿಂದ ಚವ್ಹಾಣ, 5) ಜೈರಾಮ ತಂದೆ ಕಿಶನ ಚವ್ಹಾಣ, 6) ವೆಂಕಟ ತಂದೆ ರೇಖು ಚವ್ಹಾಣ, 7) ಮನೋಹರ ತಂದೆ ಗುರಣ್ಣಾ ರಾಠೋಡ, 8) ಸುರೇಶ ತಂದೆ ಶ್ರೀಮಂತ ಪವಾರ, 9)ಮಿಥುನ ತಂದೆ ಬಾಬು ರಾಠೋಡ, 10) ಸಿದ್ದಪ್ಪಾ ತಂದೆ ಗಿರಿಮಲ್ಲಪ್ಪಾ ಹೆರೂರ, 11)ದೇವಿಂದ್ರ ತಂದೆ ಲಕ್ಷ್ಮಣ ಬೀರನೂರ ಇವರನ್ನು ವಶಕ್ಕೆ ತೆಗೆದುಕೊಂಡು, ಜೂಜಾಟದಲ್ಲಿ ಬಳಸಿದ 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 6,111/- ರೂ ಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಮಹಾಗಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಯಡ್ರಾಮಿ ಪೊಲೀಸ್
ಠಾಣೆ: ದಿನಾಂಕ 08-11-2016 ರಂದು ಶ್ರೀ ನಿಂಗಣ್ಣ ತಂದೆ ಖ್ಯಾತಪ್ಪ ಹೂಗಾರ
ಸಾ: ಅರಳಗುಂಡಗಿ
ರವರು ಠಾಣೆಗೆ ಹಾಜರಾಗಿ ಸುಮಾರು ವರ್ಷಗಳ ಹಿಂದೆ ತಮ್ಮ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ
ಶಿವಲಿಂಗೇಶ್ವರ ಮತ್ತು ಖ್ಯಾತಲಿಂಗೇಶ್ವರ ದೇವರ ಪಂಚ ಲೋಹದ ಮೂರ್ತಿಗಳು ಪ್ರತಿಷ್ಠಾಪಿಸಿದ್ದು.
ದಿನಾಲು ತಾನು ಗುಡಿಗೆ ಹೋಗಿ ಮೂರ್ತಿಗಳ ಪೂಜೆ ಮಾಡಿ ನಂತರ ಬಾಗಿಲ ಕೀಲಿ
ಹಾಕಿಕೊಂಡು ಮನೆಗೆ ಹೊಗುತ್ತೇನೆ ಗುಡಿಯಲ್ಲಿ ರಾತ್ರಿ ವೇಳೆಯಲ್ಲಿ ಗ್ರಾಮದ ಕೆಲವು ಜನರು
ಮಲಗಿಕೊಳ್ಳುತ್ತಿದ್ದು. ಎಂದಿನಂತೆ ದಿನಾಂಕ 08-11-2016 ರಂದು
ಬೆಳಿಗ್ಗೆ 06;00 ಗಂಟೆಗೆ ನಾನು ಗುಡಿಗೆ
ಹೋಗಿ ನೋಡುವಷ್ಟರಲ್ಲಿ ಗುಡಿ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಓಳಗೆ ನೋಡಲಾಗಿ
ಶಿವಲಿಂಗೇಶ್ವರ ಮತ್ತು ಖ್ಯಾತಲಿಂಗೇಶ್ವರ ದೇವರ ಮೂರ್ತಿಗಳು ಇರಲಿಲ್ಲಾ.
ಆಗ ಅಲ್ಲೆ ಮಲಗಿಕೊಂಡ ಗ್ರಾಮದ 1) ಗುರುಸಿದ್ದಪ್ಪ
ತಂದೆ ನಾಗಪ್ಪ ದಾದಾಗೋಳ, 2)
ಶೀವಶರಣಪ್ಪ ತಂದೆ ಶಿವರಾಯ ಕುಕ್ಕನೂರ, 3) ಗುರುಲಿಂಗಪ್ಪ ತಂದೆ ಕಲ್ಲಪ್ಪ ತಮ್ಮಾಗೋಳ,
4) ಸುನೀಲ ತಂದೆ ಮಲ್ಲೇಶಪ್ಪ
ಬಳೂರಗಿ ರವರಿಗೆ ಎಬ್ಬಿಸಿ ವಿಚಾರಿಸಿದಾಗ ಈ ಘಟನೆಯ ಬಗ್ಗೆ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದರು.
ದೇವಸ್ಥಾನದಲ್ಲಿ ಕಳುವಾದ 1) ಶಿವಲಿಂಗೇಶ್ವರ ದೇವರ ಪಂಚ ಲೋಹದ ಮೂರ್ತಿ ಅಂದಾಜ
5 ಕೆ.ಜಿ ಇದ್ದು,
ಅದರ ಅದಾಜ ಕಿಮ್ಮತ್ತ 50,000/- ರೂ,
2) ಖ್ಯಾತಲಿಂಗೇಶ್ವರ ದೇವರ
ಪಂಚ ಲೋಹದ ಮೂರ್ತಿ ಅಂದಾಜ 4 ಕೆ.ಜಿ
ಇದ್ದು, ಅದರ ಅದಾಜ ಕಿಮ್ಮತ್ತ 40,000/-
ರೂ ಹೀಗೆ ಒಟ್ಟು 90,000/- ರೂ
ಕಿಮ್ಮತ್ತಿನ ದೇವರ ಪಂಚ ಲೋಹದ ಮೂರ್ತಿಗಳನ್ನು ಯಾರೋ ಕಳ್ಳರು ದಿನಾಂಕ
07-11-2016 ರಂದು ರಾತ್ರಿ 11;30 ಪಿ.ಎಂ
ದಿಂದ ದಿನಾಂಕ 08-11-2016 ರಂದು
ಬೆಳಗಿನ ಜಾವ 04;00 ಗಂಟೆ ಮದ್ಯದಲ್ಲಿ ಕಳ್ಳತನ
ಮಾಡಿಕೊಂಡು ಹೋಗಿದ್ದು. ಕಳುವಾದ ದೇವರ ಮೂರ್ತಿಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ
ಕಾನೂನು ರೀತಿ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಯಡ್ರಾಮಿ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment