¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-12-2016
ಬಸವಕಲ್ಯಾಣ ಸಂಚಾರ ಪೊಲೀಸ
ಠಾಣೆ ಗುನ್ನೆ ನಂ. 132/2016, ಕಲಂ
279, 337, 338, 304(ಎ) ಐ.ಪಿ.ಸಿ ಜೊತೆ
187 ಐಎಂವಿ ಕಾಯ್ದೆ :-
ದಿನಾಂಕ: 05-12-2016 ಫಿರ್ಯಾದಿ ಅತೀಶ ತಂದೆ ವಿಲಾಸ ಹುಲಗುತ್ತೆ,
ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ನಾರಾಯಣಪೂರ ಬಸವಕಲ್ಯಾಣ ರವರ ಅಜ್ಜಿ ಗುರಮ್ಮಾ ಗಂಡ
ಕಾಶಪ್ಪಾ ಹುಲಗುತ್ತೆ, ವಯ: 68 ವರ್ಷ ರವರಿಗೆ ಆರಾಮ ಇಲ್ಲದ ಕಾರಣ
ಚಿಕಿತ್ಸೆ ಕುರಿತು ಬಸವಕಲ್ಯಾಣಕ್ಕೆ ಬಂದು ಮರಳಿ ಊರಿಗೆ ಹೋಗಲು ನಾರಾಯಣಪೂರ ಕ್ರಾಸ್ ಹತ್ತಿರ
ಅಪ್ಪಿ ಅಟೊ ನಂ. ಕೆಎ-39/1951 ನೇದರಲ್ಲಿ ಅಜ್ಜಿಯೊಂದಿಗೆ ಕುಳಿತಿದ್ದು, ಫಿರ್ಯಾದಿಯಂತೆ
ಸರಸ್ವತಿ ಗಂಡ ಮಾಣಿಕ ಕಡ್ಲೆ ವಯ: 56 ವರ್ಷ ಮತ್ತು ಸಲಿಮೊದ್ದಿನ ತಂದೆ ಅಲ್ಲಾವುದ್ದಿನ ಮುತವಲ್ಲಿ
ವಯ: 55 ವರ್ಷ ಇಬ್ಬರು ಸಾ: ನಾರಾಯನಪೂರ ಇವರಿಬ್ಬರು ಸದರಿ ಆಟೋದಲ್ಲಿ ಕುಳಿತ್ತಿದ್ದು, ಸದರಿ
ಅಪ್ಪಿ ಆಟೊ ಚಾಲಕನಾದ ಆರೋಪಿಯು ತನ್ನ ಆಟೊವನ್ನು ಚಲಾಯಿಸಿಕೊಂಡು ನಾರಾಯಣಪೂರ ಕಡೆಗೆ
ಹೋಗುತ್ತಿರುವಾಗ ಬಸವಕಲ್ಯಾಣ-ನಾರಾಯಣಪೂರ ರಸ್ತೆಯ ಮೇಲೆ ಮಹಾತ್ಮಾ ಗಾಂಧಿ ಐ.ಟಿ.ಐ ಕಾಲೇಜ ಹತ್ತಿರ
ಸದರಿ ಆರೋಪಿಯು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ
ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬೆನ್ನಲ್ಲಿ ಗುಪ್ತಗಾಯವಾಗಿರುತ್ತದೆ,
ಫಿರ್ಯಾದಿ ಅಜ್ಜಿಯ ತಲೆಗೆ ರಕ್ತಗಾಯ, ಎರಡೂ ಕೈಗಳಿಗೆ ರಕ್ತಗಾಯ ಮತ್ತು ಹೊಟ್ಟೆ
ಮತ್ತು ಎದೆಗೆ, ಭಾರಿ ಗುಪ್ತಗಾಯವಾಗಿ ಆಸ್ಪತ್ರೆಗೆ ಬರುವಾಗ ಮೃತಪಟ್ಟಿರುತ್ತಾಳೆ, ಮತ್ತು
ಅಟೊದಲ್ಲಿದ್ದ ಸರಸ್ವತಿಗೆ ಎಡ ತಲೆಗೆ ರಕ್ತಗಾಯ ಮತ್ತು ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ,
ಸಲಿಮೊದ್ದಿನರವರಿಗೆ ಬಲಗಣ್ಣಿನ ಹತ್ತಿರ ರಕ್ತಗಾಯ ಮತ್ತು ಬೆನ್ನಲ್ಲಿ ಭಾರಿ
ಗುಪ್ತಗಾಯವಾಗಿರುತ್ತದೆ, ಸದರಿ ಆರೋಪಿಯು ಫಿರ್ಯಾದಿಯವರು ಆಸ್ಪತ್ರೆಗೆ ಬರುವಾಗ ತನ್ನ ಅಟೊ
ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment