ಕೊಲೆ ಯತ್ನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ 14/12/2016 ರಂದು ಸುನೀಲಕುಮಾರ ತಂದೆ ಕಲ್ಯಾಣರಾವ ಸಾಃ ಅನ್ನಪೂರ್ಣ ಕ್ರಾಸ ಜಗತ ಇವರು ಠಾಣೆಗೆ ಹಾಜರಾಗಿ ತಾನು ಕಲಬುರಗಿಯ ಹಳೆ ಮಾರ್ಕೆಟ ರೋಡಿನಲ್ಲಿ ಇರುವ ನನ್ನ ಸ್ವಂತ ಅಂಗಡಿಯಲ್ಲಿ ಸಾಮ್ರಾಟ ಫೂಟವೇಯರ ಎಂಬ ಹೆಸರಿನಲ್ಲಿ ಚಪ್ಪಲಿ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು. ಸುಮಾರು ತಿಂಗಳ ಹಿಂದೆ ನನ್ನ ದೈನಂದಿನ ವ್ಯಾಪಾರದ ಸಲುವಾಗಿ ಹಣದ ಅಡಚಣೆ ಇದ್ದ ಕಾರಣ ನಮಗೆ ಪರಿಚಯದವನಾದ ಸಚೀನ ತಂದೆ ಶಹಿರ ಪಾಟೀಲ ಮಾಂಗರವಾಡಿ ಸಾಃಬಾಪೂನಗರ ಕಲಬುರಗಿ ಇವರಿಂದ ರೂ 2,0,5000/- ಹಣವನ್ನು ತೆಗೆದುಕೊಂಡಿದ್ದು, ನಂತರ ಮೂರು ತಿಂಗಳ ಮೇಲೆ ಅವರಿಗೆ ರೂ2,00,000/- ಸಚೀನನಿಗೆ ಕೊಟ್ಟಿರುತ್ತೇನೆ. ಉಳಿದ ಹಣದ ಸಹ ನವ್ಹಂಬರ ತಿಂಗಳಲ್ಲಿ ಕೊಟ್ಟಿರುತ್ತೇನೆ. ಪ್ರಕಾರ ಸಚೀನ ಮಾಂಗರವಾಡಿ ಇತನಿಗೆ ಕೊಡಬೇಕಾದ ಸಾಲದ ಹಣವನ್ನು ಈಗಾಗಲೆ ಕೊಟ್ಟು ಮುಟ್ಟಿಸಿದ್ದು. ಕಳೆದ ಒಂದುವಾರದಿಂದ ಸಚೀನ ಮಾಂಗರವಾಡಿ ಇತನು ತನ್ನ ಜೊತೆಯಲ್ಲಿ ತಮ್ಮ ಮಾಂಗರವಾಡಿ ಜನರನ್ನು ಕರೆದುಕೊಂಡು ನನ್ನ ಹತ್ತಿರ ಬಂದು ನನಗೆ ಕೊಟ್ಟ ಸಾಲದ ಹಬ ಬಡ್ಡಿ ಸಮೇತ ರೂ 4,50,000/- ಕೊಡುವದಿದೆ ಮಗನೆ ಯಾಕೆ ಕೊಡುತ್ತಿಲ್ಲ. ಒಂದು ವಾರದ ಒಳಗಡೆ ಕೊಡದೆ ಇದ್ದಲ್ಲಿ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಕೊಲೆ ಬೇದರಿಕೆ ಹಾಕುತ್ತಾ ನನಗೆ ವಿಪರಿತ ಮಾನಸಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು, ನಿನ್ನೆ ದಿನಾಂಕ 13/12/2016 ರಂದು ರಾತ್ರಿ 8-30 ಗಂಟೆಯ ಸುಮಾರು ನನ್ನ ಗೆಳಯನಾದ ಅಶೋಕ ಕಾಟವಟೆ ಇವರೊಂದಿಗೆ ಕುಳಗೇರಿ ಕ್ರಾಸದಿಂದ ಮನೆಗೆ ಹೊರಟಾಗ ಸಚೀನ ಮಾಂಗರವಾಡಿ ಇತನು ತನ್ನ ಜೊತೆಯಲ್ಲಿ ಎರಡು ಮೂರು ಬೈಕಗಳ ಮೇಲೆ 4-5 ಜನ ಮಾಂಗರವಾಡಿಗರನ್ನು ಕರೆದುಕೊಂಡು ಬಂದವನೆ ನನ್ನನ್ನು ಬಲವಂತದಿಂದ ಎತ್ತಿಕೊಂಡು ಬೈಕ ಮೇಲೆ ಕೂಡಿಸಿಕೊಂಡು ಮಾಂಗರವಾಡಿ ಓಣಿಯ ಹೊಸದಾಗಿ ಕಟ್ಟುತ್ತಿರುವ ಒಂದು ಮನೆಗೆ ಒಯ್ದು ಅಲ್ಲಿ ನನಗೆ ಕೂಡಿ ಹಾಕಿ ಬೈಯ್ಯುತ್ತಾ ನಮ್ಮಲ್ಲಿ ಹಣ ತಗೆದುಕೊಂಡು ಹೊಗಿದ್ದಿ, ಬಡ್ಡಿ ಸೇರಿ ರೂ 4,50,000/- ಕೊಡ ಅಂತ ಕೇಳಿದರೆ ಮುಖ ತಪ್ಪಿಸಿ ಓಡಿ ಹೋಗುತ್ತಿ ಈಗ ಹಣ ಕೊಟ್ಟು ಹೋಗು ಇಲ್ಲವಾದರೆ ನಿನಗೆ ಇಲ್ಲೇ ಮುಗಿಸಿ ಬಿಡುತ್ತೇವೆ ಎಂದು ಕೊಲೆ ಬೇದರಿಕೆ ಹಾಕುತ್ತಾ ಕೈಯಿಂದ ಹೊಡೆದು ಕಾಲಿನಿಂದ ಒದೆ ಹತ್ತಿದ್ದರು. ನಾನು ಅವನಿಗೆ ನಿನಗೆ ಕೊಡಬೇಕಾದ ಸಾಲದ ಹಣವನ್ನು ಬಡ್ಡಿ ಸಮೇತ ಈಗಾಗಲೆ ಕೊಟ್ಟು ಮುಟ್ಟಿಸಿರುತ್ತೇನೆ. ಈಗ ಏನು ಕೊಡುವದು ಬಾಕಿ ಇಲ್ಲ ಮತ್ತು ನನ್ನಿಂದ ಹಣ ಕೊಡುವದು ಆಗುವದಿಲ್ಲ ಅಂತ ಅವರಿಗೆ ಖಡಾ ಖಂಡಿತವಾಗಿ ಹೇಳಿದಾಗ ಸಚೀನ ಈತನು ಜೊತೆಯಲ್ಲಿ ಇದ್ದವರಿಗೆ ಈ ಮಗನಿಗೆ ಸೊಕ್ಕು ಬಹಳ ಇದೆ, ಬಂದಿದ್ದು ನೋಡಿಕೊಳ್ಳುತ್ತೇನೆ ಇವತ್ತು ಈ ಮಗನಿಗೆ ಬಿಡುವದು ಬೇಡ ಅಂತ ನನ್ನ ಕೈ ಕಾಲು ಹಿಡಿದು. ಸಚಿನನು ಎದೆಯ ಮೇಲೆ ಕುಳಿತು ಕೈಯಿಂದ ನನ್ನ ಕುತ್ತಿಗೆಯನ್ನು ಜೊರಾಗಿ ಹಿಡಿದುಕೊಂಡು ಮಗನೆ ಹಣ ಕೊಡತ್ತಿಯಾ ಇಲ್ಲ ಈಗ ಹೇಳು ಇಲ್ಲವಾದರೆ ನೀನಗೆ ಮುಗಿಸಿ ಬೀಡುತ್ತೇನೆಂದು ಜೋರಾಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಮುಂದಾದಾಗ ನಾನು ಜೋರಾಗಿ ಚೀರಾಟ ಮಾಡುತ್ತಾ ನಾನು ಭಯ ಪಟ್ಟು ಕುತ್ತಿಗೆಗೆ ಗಾಯ ಹೊಂದಿ ಸತ್ತಂತೆ ಬಿದ್ದು ಬಿಟ್ಟೆ ಆಗ ಅವರು ಈ ಮಗ ಸತ್ತು ಹೊದ ನಡರಿ ಹೊಗೊಣ ಅಂತ ಅನ್ನುತ್ತಾ ಹೊರಟು ಹೋದರು. ಸ್ವಲ್ಪ ಹೊತ್ತಿನ ಮೇಲೆ ನಾನು ಚೇತರಿಸಿಕೊಂಡು ಎದ್ದು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದು ರಾತ್ರಿ ಅವರಿಗೆ ಅಂಜಿ ಮನೆಯಲ್ಲಿ ಉಳಿದು ಈಗ ಪೊಲೀಸ ಠಾಣೆಗೆ ಬಂದು ವಿಷಯ ತಿಳಿಸಿ ಈ ಫಿರ್ಯಾದಿ ನೀಡಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ಫಿರ್ಯಾದಿ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment