Police Bhavan Kalaburagi

Police Bhavan Kalaburagi

Saturday, December 17, 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ: ದಿನಾಂಕ 16.12.2016 ರಂದು ಶ್ರೀ ಬಸಪ್ಪ ತಂದೆ ಶಿವಪ್ಪ ಯಾಳವಾರ ಸಾ:ಹರನೂರ ಠಾಣೆಗೆ ಹಾಜರಾಗಿ ನನ್ನ ತಮ್ಮನಾದ ಮರೆಪ್ಪ ಯಾಳವಾರ ಈತನು ಕಲಬುರಗಿ ಕೆ.ಎಸ.ಆರ್.ಟಿ.ಸಿ ಡಿಪೋ ನಂ 4 ರಲ್ಲಿ ಚಾಲಕ ಕಂ ನಿರ್ವಾಹಕ ಅಂತಾ ಕೆಲಸ ಮಾಡಿಕೊಂಡಿದ್ದು. ದಿನಾಂಕ: 12.12.16 ರಂದು ಮುಂಜಾನೆ ಜೇವರಗಿ ಪಟ್ಟಣದ ಸಿಂದಗಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಬರುತ್ತಿದ್ದ ಒಂದು ಗೂಡ್ಸ ವಾಹನ ಚಾಲಕನು ತನ್ನ ಗೂಡ್ಸ ವಾಹನದಲ್ಲಿ ಹೊಸ ಮೊಟಾರ ಸೈಕಲಗಳನ್ನು ತುಂಬಿಕೊಂಡು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ರೋಡಿನ ಸೈಡಿನಿಂದ ಹೋಗುತ್ತಿದ್ದ ಮರೆಪ್ಪನಿಗೆ ಹಿಂದಿನಿಂದ ಅಪಘಾತ ಪಡಿಸಿದನು ಅಲ್ಲಿದ್ದವರು ನೋಡಲಾಗಿ ಅದರ ನಂಬರ ಕೆಎ-33-ಎ-3739 ನೇದ್ದು ಇತ್ತು ಅದರ ಚಾಲಕ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು. ನಂತರ ನನ್ನ ತಮ್ಮ ಮರೆಪ್ಪ ಯಾಳವಾರನಿಗೆ ಅಲ್ಲಿದ್ದವರು ಆಟೋದಲ್ಲಿ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನಾನು ಅಂಬುಲೆನ್ಸ ವಾಹನದಲ್ಲಿ ಕಲಬುರಗಿ ಸರಕಾರಿ ಆಸ್ಪತ್ರೆಯ ಮತ್ತು ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ದಿನಾಂಕ: 16.12.16 ರಂದು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ದಯಲ್ಲಿ ಮೃತ ಪಟ್ಟಿದ್ದು. ನನ್ನ ತಮ್ಮನಿಗೆ ಅಪಘಾತ ಪಡಿಸಿದ ಗುಡ್ಸ ವಾಹನ ನಂ ಕೆಎ-33-ಎ-3739 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಪ್ರಕರಣ:

ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ: 16/12/2016 ರಂದು ಶ್ರೀ ಗುರುನಾಥ ತಂದೆ ಸಾಯಬಣ್ಣ ಪಿ.ಡಿ.ಓ ಗ್ರಾಮ ಪಂಚಾಯತ ಮರತೂರ ಇವರು ಠಾಣೆಗೆ ಹಾಜರಾಗಿ ದಿನಾಂಕ: 16/12/2016 ರಂದು ಮರತೂರ ಗ್ರಾಮದ ಹರಿಜನ ವಾಡದಲ್ಲಿರುವ ಸಾರ್ವಜನಿಕ ರಸ್ತೆ ಕಟ್ಟಿದ ಗೋಡೆಯನ್ನು ತೆರವುಗೊಳಿಸಲು ಹೋದಾಗ ಯಾರೋ ಎರಡು ಜನ ಅಪರಿಚಿತರು ಬಂದು ನನಗೆ ಆಕ್ರಮ ತಡೆ ಮಾಡಿ  ಗೋಡೆಯನ್ನು ತೆರವುಗೊಳಿಸಲು ಬಿಡದೇ ನನ್ನ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಅರ್ಜಿ ಸಾರಂಶದ ಮೇಲಿಂದ ಶಹಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: