ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಸಪ್ಪ ತಂದೆ ಶಿವಪ್ಪ ಯಾಳವಾರ ಸಾ: ಹರನೂರ ತಾ: ಜೇವರಗಿ
ಇವರ ತಮ್ಮನಾದ ಮರೆಪ್ಪ ಯಾಳವಾರ ಇತನು ಕಲಬುರಗಿ ಕೆ.ಎಸ.ಆರ್.ಟಿ.ಸಿ ಡಿಪೋ ನಂ 4 ರಲ್ಲಿ ಚಾಲಕ ಕಂ
ನಿರ್ವಾಹಕ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 12.12.16 ರಂದು ಮುಂಜಾನೆ ಮನೆಯಿಂದ
ಕೆಲಸಕ್ಕೆ ಹೋಗುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಅದೆ ದಿವಸ ರಾತ್ರಿ 9.00 ಗಂಟೆ
ಸುಮಾರಿಗೆ ಜೇವರಗಿ ಪಟ್ಟಣದ ರಾಹುಲಕುಮಾರ ತಂದೆ ದತ್ತು ಪಂಚಶೀಲ ಇವರು ಫೋನ ಮಾಡಿ ನಿಮ್ಮ ತಮ್ಮ
ಮರೆಪ್ಪ ಯಾಳವಾರ ಇತನಿಗೆ ಜೇವರಗಿ ಪಟ್ಟಣದಲ್ಲಿ ಎಕ್ಸಿಡೆಂಟ ಆಗಿರುತ್ತದೆ. ಅವನಿಗೆ ಉಪಚಾರಕ್ಕಾಗಿ
ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿದ ಕೂಡಲೇ ನಾನು ಮತ್ತು
ನನ್ನ ತಾಯಿ ಶಾಂತಮ್ಮ ಯಾಳವಾರ, ನಮ್ಮ
ತಮ್ಮನ ಹೆಂಡತಿ ನಿರ್ಮಲಾ ಯಾಳವಾರ ಮೂವರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ನನ್ನ ತಮ್ಮ
ಮರೆಪ್ಪ ಇತನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದನು ಅವನಿಗೆ ಮಾತನಾಡಿಸಲು ಅವನು
ಮಾತನಾಡಲಿಲ್ಲಾ. ಅವನ ತಲೆಯ ಬಲಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿ ಮೂಗಿನಿಂದ ರಕ್ತ ಬಂದಿದ್ದು, ಮತ್ತು ಅವನ ಎಡಕೈಗೆ ರಕ್ತಗಾಯವಾಗಿತ್ತು.
ಅಲ್ಲಿಯೇ ಇದ್ದ ರಾಹುಲಕುಮಾರ ಇತನಿಗೆ ಕೇಳಲಾಗಿ ಅವನು ಹೇಳಿದೆನಂದರೆ, ನಾನು ಮತ್ತು ನನಗೆ ಪರಿಚಯದ ಮಹ್ಮದ
ಫೈಯಾಜ ಬಾಗವಾನ ಇಬ್ಬರು ಕೂಡಿಕೊಂಡು ಸಾಯಾಂಕಾಲ 6.45 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಗೊವಾ
ಹೊಟೇಲ ಎದುರುಗಡೆ ರೊಡಿನ ಸೈಡಿನಲ್ಲಿ ಬರುತ್ತಿದ್ದಾಗ ನಮ್ಮ ಮುಂದೆ ಅಂದರೆ ಸಿಂದಗಿ ಕ್ರಾಸ ಕಡೆಗೆ
ನಿಮ್ಮ ತಮ್ಮ ಮರೆಪ್ಪ ಇತನು ರೋಡಿನ ಸೈಡಿನಿಂದ ನಡೆದುಕೊಂಡು ಹೋಗುತ್ತಿದ್ದನು. ಅದೆ ವೇಳೆಗೆ
ಕಲಬುರಗಿ ಕಡೆಯಿಂದ ಒಂದು ಗೂಡ್ಸ ವಾಹನ ಚಾಲಕನು ತನ್ನ ವಾಹನದಲ್ಲಿ ಹೊಸ ಮೊಟಾರ ಸೈಕಲಗಳನ್ನು
ತುಂಬಿಕೊಂಡು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನ
ಸೈಡಿನಿಂದ ಹೋಗುತ್ತಿದ್ದ ಮರೆಪ್ಪನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದನು ಅಗ ನಿಮ್ಮ ತಮ್ಮ ರೋಡಿನ ಸೈಡಿನಲ್ಲಿ
ಬಿದ್ದನು. ಗೂಡ್ಸ ವಾಹನ ಸ್ವಲ್ಪ ಮುಂದೆ ಹೋಗಿ ನಿಂತಿತ್ತು. ಅದರ ನಂಬರ ನೋಡಲು ಅದು
ಕೆಎ-33-ಎ-3739 ನೇದ್ದು ಇತ್ತು ಅದರ ಚಾಲಕನಿಗೆ ಹೆಸರು ಕೇಳುತ್ತಿದಂತೆ ಅವನು ತನ್ನ
ವಾಹನದೊಂದಿಗೆ ಓಡಿ ಹೋದನು ಅವನಿಗೆ ನೋಡಿದಲ್ಲಿ ಗುರುತ್ತಿಸುತ್ತೇನೆ ಅಂತ ಹೇಳಿದನು. ನಂತರ ನಿಮ್ಮ
ತಮ್ಮನಿಗೆ ನಾವಿಬ್ಬರು ಕೂಡಿಕೊಂಡು ಅಪರಿಚಿತ ಆಟೋದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ
ಆಸ್ಪತ್ರೆಯಲ್ಲಿ ತಂದು ಉಪಚಾರ ಪಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನಾನು ಅಂಬುಲೆನ್ಸ
ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತೇನೆ ಅಂತ
ಹೇಳಿದನು. ಅವನು ಹೇಳಿದರಿಂದ ನನಗೆ ವಿಷಯ ಗೊತ್ತಾಗಿರುತ್ತದೆ. ನನ್ನ ತಮ್ಮನ ಸ್ಥಿತಿ ಸಿರಿಯಾಸ್
ಇದ್ದಿದ್ದರಿಂದ ನಾವು ಹೆಚ್ಚಿನ ಉಪಚಾರ ಕುರಿತು ಅಲ್ಲಿಂದ ಕಲಬುರಗಿ ವಾತ್ಸಲ್ಯ ಆಸ್ಪತ್ರೆಯಲ್ಲಿ
ಒಯ್ದು ಸೇರಿಕೆ ಮಾಡಿರುತ್ತೇವೆ. ಅಲ್ಲಿ ಕೂಡಾ ವೈದ್ಯರು ನನ್ನ ತಮ್ಮನು ಸಿರಿಯಾಸ್
ಇರುವದರಿಂದ ವೈದ್ಯರು ಅವನಿಗೆ ಬೇರೆ ಕಡೆಗೆ ಉಪಚಾರಕ್ಕಾಗಿ ತೆಗೆದುಕೊಂಡು ಹೋಗಲು ಹೇಳಿದರಿಂದ
ಇಂದು ದಿನಾಂಕ: 16.12.16 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮನ ಹೆಂಡತಿ ನಿರ್ಮಲಾ ಹಾಗೂ
ನಮ್ಮ ಸಂಬಂಧಿಕನಾದ ಶಾಂತಪ್ಪ ತಂದೆ ರಾಯಪ್ಪ ದೊಡ್ಡಮನಿ ಸಾ: ಸಿ.ಐ.ಬಿ ಕಾಲೂನಿ ಕಲಬುರಗಿ ಎಲ್ಲರೂ
ಕೂಡಿ ಅವನಿಗೆ ಹೆಚ್ಚಿನ ಉಪಚಾರ ಕುರಿತು ಖಾಸಗಿ ಅಂಬುಲೆನ್ಸ ವಾಹನದಲ್ಲಿ ಜೇವರಗಿ ಮುಖಾಂತರ
ಬೆಂಗಳೂರಿಗೆ ತಗೆದುಕೊಂಡು ಹೋಗುತ್ತಿದ್ದಾಗ ಜೇವರಗಿ ದಾಟಿ ಹೋಗುತ್ತಿದ್ದಾಗ ಮುಂಜಾನೆ 7.00 ಗಂಟೆ
ಸುಮಾರಿಗೆ ವೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಸುಗಣ್ಣಗೌಡ ತಂದೆ ಗುರಪ್ಪಗೌಡ ಕಂಚಗಾರಹಳ್ಳಿ ಸಾಃ ರಾಮಪೂರ
ತಾಃ ಜೇವರಗಿ ಇವರ ಊರಲ್ಲಿ ಬಕ್ಕಪ್ಪಯ್ಯ ದೇವರ ಜಾತ್ರೆ ಪ್ರತಿ ವರ್ಷ ಊರಲ್ಲಿ ಎಲ್ಲರೂ ಕೂಡಿ
ಮಾಡುತ್ತಾ ಬಂದಿರುತ್ತೆವೆ. ಆದರೆ ನಮ್ಮೂರ ಶಂಕರಗೌಡ ಪೊಲೀಸ್ ಪಾಟೀಲ ಇತನು ತನ್ನ ನೇತೃತ್ವದಲ್ಲಿ
ಈ ವರ್ಷ ಜಾತ್ರೆ ಮಾಡಿರುತ್ತಾರೆ. ನಮ್ಮ ಕಂಚಗಾರಹಳ್ಳಿಯ ಮನೆತನ ಅಣ್ಣತಮ್ಮಕಿಯವರಿಗೆ ಊರಿನ
ಜಾತ್ರೆ ಪಟ್ಟಿ ಸಹ ಕೇಳಿರುವುದಿಲ್ಲಾ ಆದರೂ ಸಹ ನಾವು ದೇವರ ಪಟ್ಟಿ ಅಂತಾ ನಮ್ಮ ಕಂಚಗಾರಹಳ್ಳಿಯ
ಮನೆತನ ಅಣ್ಣತಮ್ಮಕಿಯವರೆಲ್ಲರೂ ಕೂಡಿ ದೇವರ ಪಟ್ಟಿ ಜಮಾ ಮಾಡಿ ದೇವರ ಜಾತ್ರೆಗೆ
ಕೊಟ್ಟಿರುತ್ತೆವೆ. ದಿ. 12.12.2016 ರಂದು ನಮ್ಮೂರಲ್ಲಿ ಜಾತ್ರೆ ಆಗಿರುತ್ತದೆ. ಊರಲ್ಲಿ ನಮ್ಮ
ಕಂಚಗಾರಹಳ್ಳಿಯ ಮನೆತನದ ಅಣ್ಣತಮ್ಮಕೀಯವರು ಊರಲ್ಲಿ ಯಾರಿಗೂ ದ್ವೇಷದಿಂದ ಕಾಣದೆ ನಾವು ನಮ್ಮ ಕೆಲಸ
ಮಾಡಿಕೊಂಡು ಊರಲ್ಲಿ ಸರಿಯಾಗಿ ಇರುವುದು ನೋಡಿ ಶಂಕರಗೌಡ ತಂದೆ ಬಸವಂತರಾಯಗೌಡ ಪೊಲೀಸ್ ಪಾಟೀಲ
ಇತನು ಸಹಿಸದೆ ಊರಲ್ಲಿ ತನ್ನದೆ ನಡೆಯಬೇಕು ಅಂತಾ ಅಹಂಕಾರದಿಂದ ನಮ್ಮ ಸಂಗಡ ದ್ವೇಷ ಸಾದಿಸುತ್ತಾ
ಬಂದಿರುತ್ತಾನೆ ಅದರಿಂದ ಅವರ ಮತ್ತು ನಮ್ಮ ಮದ್ಯೆ ವೈಮನಸ್ಸು ಇರುತ್ತದೆ. ಮತ್ತು ಶಂಕರಗೌಡ ಇತನು
ತನ್ನ ಸಂಗಡಿಗರೊಂದಿಗೆ ಕೂಡಿ ಈ ವರ್ಷ ಕಂಚಗರಹಳ್ಳಿಯವರಿಗೆ ಬಿಟ್ಟು ಹೇಗೆ ಜಾತ್ರೆ
ಮಾಡಿರುತ್ತೆವೆ ಅಂತಾ ಬೈದಾಡುತ್ತಾ ಬಂದಿರುತ್ತಾನೆ. ದೇವರ ಹೆಸರಿನಲ್ಲಿ ಅವನ
ಜೊತೆ ಎಲ್ಲಿ ಕಿರಿಕಿರಿ ಅಂತಾ ನಾವು ಸುಮ್ಮನಿದ್ದೆವು.ದಿ. 17.12.2016 ರಂದು ರಾತ್ರಿ 8.30
ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಗುರಣ್ಣಗೌಡ ತಂದೆ
ಮಲ್ಕಣ್ಣಗೌಡ ಕಂಚಗಾರಹಳ್ಳಿ, ಬಸಮ್ಮ ಗಂಡ ಶಿವಣಗೌಡ ಕಂಚಗಾರಹಳ್ಳಿ, ಜಯಶ್ರೀ ಗಂಡ ಶಿವಪುತ್ರಪ್ಪ ಚಾಂದಕವಟೆ ಎಲ್ಲರೂ ನಮ್ಮ ಮನೆಯ
ಹತ್ತಿರದ ಥೆರಿನ ಜಾಗದಲ್ಲಿ ಇದ್ದಾಗ 1) ಶಂಕರಗೌಡ ತಂದೆ ಬಸವಂತರಾಯ ಪೊಲೀಸ್ ಪಾಟೀಲ, 2) ಸಂಗಣ್ಣಗೌಡ ತಂದೆ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ 3)
ಕೊಟ್ರೇಪ್ಪ ತಂದೆ ಮಹಾಂತಗೌಡ ಬಿರಾದಾರ 4) ಶರಣು ತಂದೆ ಸುಬಾಷಚಂದ್ರ ಕೂಟನೂರ, 5) ರುದ್ರಗೌಡ ತಂದೆ ಶಂಕರಗೌಡ ಪೊಲೀಸ್ ಪಾಟೀಲ 6) ಕರಣಪ್ಪ
ತಂದೆ ಶಂಕರಗೌಡ ಪೊಲೀಸ್ ಪಾಟೀಲ 7) ಬಸಲಿಂಗಪ್ಪಗೌಡ ತಂದೆ ಶರಣಪ್ಪಗೌಡ ಪೊಲೀಸ್ ಪಾಟೀಲ 8) ಬಸುಗೌಡ
ತಂದೆ ಗುರುಲಿಂಗಪ್ಪಗೌಡ ಪೊಲೀಸ್ ಪಾಟೀಲ 9) ಸಿದ್ದಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ 10) ಮಲ್ಲಣ್ಣಗೌಡ ತಂದೆ
ಮಹಾಂತಗೌಡ ಬಿರಾದಾರ, 11) ತಾಯಮ್ಮ ಗಂಡ ಸುಬಾಚಂದ್ರ ಕೂಟನೂರ, 12) ಸುಭದ್ರಮ್ಮ ಗಂಡ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ 13)
ನಾಗಮ್ಮ ಗಂಡ ಶಂಕರಗೌಡ ಪೊಲೀಸ್ ಪಾಟೀಲ 14) ರೂಪಾ ಗಂಡ ಸಂಗಣ್ಣಗೌಡ ಪೊಲೀಸ್ ಪಾಟೀಲ 15)
ಅಯ್ಯಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್ ಪಾಟೀಲ 16) ಗುರಣ್ಣಗೌಡ ತಂದೆ ಶರಣಬಸಪ್ಪಗೌಡ ಪೊಲೀಸ್
ಪಾಟೀಲ 17) ರಜನಿ ಗಂಡ ಕೊಟ್ರೇಪ್ಪ ಬಿರಾದಾರ, 18) ಈಶಮ್ಮ ಗಂಡ
ಸಿದ್ದಣ್ಣಗೌಡ ಪೊಲೀಸ್ ಪಾಟೀಲ 19) ಶರಣು ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ 20) ಕವಿತಾ ಗಂಡ
ಕರಣಪ್ಪ ಪೊಲೀಸ್ ಪಾಟೀಲ 21) ನಿರ್ಮಲಾ ಗಂಡ ರುದ್ರಗೌಡ ಪೊಲೀಸ್ ಪಾಟೀಲ ಸಾಃ ಎಲ್ಲರೂ ರಾಮಪೂರ
ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ಈ ವರ್ಷ ಕಂಚಗಾರಹಳ್ಳಿ
ಮನೆತನದವರಿಗೆ ಬಿಟ್ಟು ಹೇಗೆ ಜಾತ್ರೆ ಮಾಡಿದೆವು ಈ ಮಕ್ಕಳಿಗೆ ಸೊಕ್ಕು ಬಹಳ ಇದೆ ಹೀಗೆ ಮಾಡಬೇಕು
ಸೂಳೆ ಮಕ್ಕಳಿಗೆ ಅಂತಾ ಅವಾಚ್ಯವಾಗಿ ಬೈಹತ್ತಿದ್ದರು. ಆಗ ನಾನು ಅವರಿಗೆ ನಾವು ನೀಮಗೆ ಏನು
ಅಂದಿಲ್ಲಾ ಮತ್ತೆ ನಮ್ಮ ಹತ್ತಿರ ಬಂದು ನಮಗೆ ಬೈಯುತ್ತಿರಿ ಅಂತಾ ಅಂದಾಗ ಶಂಕರಗೌಡ ಇತನು ನನಗೆ ಏ ಸೂಳೆ ಮಗನೆ ನನ್ನ
ಎದುರು ಮಾತನಾಡುತಿ ಅಂತಾ ಅಂದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು, ಸಂಗಣ್ಣಗೌಡ ಇತನು ನನಗೆ ನೂಕಿಸಿಕೊಟ್ಟನು ನಾನು ನೇಲಕ್ಕೆ
ಬಿದ್ದಾಗ ಕೊಟ್ರೆಪ್ಪ ಇತನು ಕಾಲಿನಿಂದ ನನ್ನ ಬೇನ್ನು ಮೇಲೆ ಜೋರಾಗಿ ಒದ್ದಿರುತ್ತಾನೆ, ನನಗೆ ಹೊಡೆಯುವುದನ್ನು ನೋಡಿ ನನ್ನ ಸಂಗಡ ಇದ್ದವರು ಬಿಡಿಸಲು
ಬಂದಾಗ ಗುರಣ್ಣಗೌಡ ಇತನಿಗೆ ಶರಣು ಕೂಟನೂರ ಇತನು ಬಡಿಗೆಯಿಂದ ಎರಡು ಕೈಗಳ ಮೇಲೆ ಹೊಡೆದಿರುತ್ತಾನೆ, ಸಂಗಣ್ಣಗೌಡ ಇತನು ಗುರಣ್ಣಗೌಡ ಇತನ ಬಲಗೈ ಮುಳಕೈ ಕೇಳಗೆ
ಕಚ್ಚಿರುತ್ತಾನೆ, ಬಸ್ಸಮ್ಮ ಕಂಚಗಾಹಳ್ಳಿ ಇವಳಿಗೆ
ರುದ್ರಗೌಡ ಇತನು ಅವಳ ಮೈ ಮೇಲಿನ ಸೀರೆ ಹಿಡಿದು ಜಗ್ಗಿ ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ, ಮತ್ತು ಕರಣಪ್ಪ ಇತನು ಕಾಲಿನಿಂದ ಅವಳ ಹೊಟ್ಟೆಯ ಮೇಲೆ
ಒದ್ದಿರುತ್ತಾನೆ, ಮಲ್ಲಣ್ಣಗೌಡ ಇತನು ಕೈ ಮುಷ್ಠಿ ಮಾಡಿ
ಜೋರಾಗಿ ಜಯಶ್ರೀ ಇವಳ ಬಾಯಿಯ ಮೇಲೆ ಹೋಡೆದಾಗ ಅವಳಿಗೆ ರಕ್ತ ಬಂದಿರುತ್ತದೆ. ಮತ್ತು ತಾಯಮ್ಮ ಇವಳು
ಜಯಶ್ರೀ ತಲೆಯ ಕೂದಲು ಹಿಡಿದು ಜಗ್ಗಿರುತ್ತಾಳೆ, ಮತ್ತು ಕೊಟ್ರೆಪ್ಪ ಇತನು
ಕಲ್ಲಿನಿಂದ ಗುರಣ್ಣನಿಗೆ ಬೇನ್ನು ಮೇಲೆ ಹೊಡೆದಿರುತ್ತಾನೆ, ಮತ್ತು ಬಸಮ್ಮಳಿಗೆ ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾನೆ, ಊಳಿದವರೆಲ್ಲರೂ ಈ ಸೂಳಿಮಕ್ಕಳಿಗೆ ಸೊಕ್ಕು ಬಹಳ ಇದೆ
ಬಿಡಬ್ಯಾಡಿರಿ ಹೊಡೆಯಿರಿ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ, ಶಂಕರಗೌಡ ಪೊಲೀಸ್ ಪಾಟೀಲ ಇತನು ಈ ಕಂಚಗಾರಹಳ್ಳಿ ಸೂಳಿ
ಮಕ್ಕಳಿಗೆ ಸೊಕ್ಕು ಬಹಳ ಇದೆ ಇವರಿಗೆ ಹೀಗೆ ಬಿಡಬಾರದು ಈ ಮಕ್ಕಳು ಎನಾದರೂ ಮುಂದೆ ನಮ್ಮ ತಂಟೆಗೆ
ಬಂದರೆ ಇವರಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ
ನಗರ ಠಾಣೆ : ಶ್ರೀ ವಿಶ್ವನಾಥ ತಂದೆ ನಾಮದೇವ್ ಕುಂಬಾರ್ ಸಾ: ಭಂಕೊರ ರವರದು ಭಂಕೊರ ಗ್ರಾಮದಲ್ಲಿ ಜೈ ಭವಾನಿ ವರ್ಕ್ ಶಾಪ್ ಹಾರ್ಡ್ವೇರ್ ಅಂಗಡಿ ಇದ್ದು ಸದರಿ ಅಂಗಡಿಯ ಯಾರೊ ಕಳ್ಳರು ದಿನಾಂಕ 10/12/2016 ರಂದು ರಾತ್ರಿ 10 ಗಂಟೆಯಿಂದ
ದಿನಾಂಕ 11/12/2016 ರ ಬೆಳಗಿನ ಜಾವದ ಅವಧಿಯಲ್ಲಿ ವರ್ಕ್ ಶಾಪಗೆ ಹಾಕಿದ ಕೀಲಿ ಮುರಿದು ಒಳಗಡೆ ಇದ್ದ ಒಂದು ವೆಲ್ಡಿಂಗ್
ಮೆಷಿನ್ ಅ.ಕಿ 12000-00 ರೂ ಮತ್ತು ಕೇಬಲ್ ಹೋಲ್ಡರ್ ಸೆಟ್ ಅ.ಕಿ 3000 -00 ರೂ ನೇದ್ದುಗಳು
ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ
ಠಾಣೆಯಲ್ಲಿ ಪ್ರಕರಣ
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಶಾಹಾಬಾದ
ನಗರ ಠಾಣೆ : ಶ್ರೀ ಗುರುನಾಥ ತಂದೆ ಸಾಯಬಣ್ಣ ಪಿ.ಡಿ.ಓ ಗ್ರಾಮ ಪಂಚಾಯತ ಮರತೂರ ಇವರು ದಿನಾಂಕ:
16/12/2016 ರಂದು ಮದ್ಯಾಹ್ನ 1-00 ಗಂಟೆಗೆ ಸುಮಾರಿಗೆ ಮರತೂರ ಗ್ರಾಮದ ಹರಿಜನ ವಾಡದಲ್ಲಿರುವ
ಸಾರ್ವಜನಿಕ ರಸ್ತೆ ಕಟ್ಟಿದ ಗೋಡೆಯನ್ನು ತೆರವುಗೊಳಿಸಲು ಹೋದಾಗ ಯಾರೋ ಎರಡು ಜನ ಅಪರಿಚಿತರು ಬಂದು
ನನಗೆ ಆಕ್ರಮ ತಡೆ ಮಾಡಿ ಗೋಡೆಯನ್ನು
ತೆರವುಗೊಳಿಸಲು ಬಿಡದೇ ನನ್ನ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ ಕಾರಣ ಅವರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
No comments:
Post a Comment