ಅಪಘಾತ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ ಗಂಗಾರಾಮ ಮತ್ತು
ತಿಮ್ಮಯ್ಯಾ ಇಬ್ಬರು ಕೂಡಿ ಹೊಂಡಾ ಶೈನ್ ಮೋಟಾರ ಸೈಕಲ್ ನಂ ಕೆಎ-01 ಇಎಮ್-0016
ನೇದ್ದರ ಮೇಲೆ ಕುಳಿತುಕೊಂಡು ಮಹಾಗಾಂವದಿಂದ ಕೆಲಸದ ಕುರಿತು ಕಲಬುರಗಿಗೆ ಬಂದು ಕೆಲಸ
ಮುಗಿಸಿಕೊಂಡು ಮರಳಿ ಮಹಾಗಾಂವ ಹುಮನಾಬಾದ ರೋಡ ಇರುವ ಸಫಾರಿ ದಾಬಾ ಎದುರಗಡೆ ಹೊರಟಿದ್ದು ಅದೇ ವೇಳೆಗೆ ಹಿಂದಿನಿಂದ ಅಂದರೇ ಕಲಬುರಗಿ
ಕಡೆಯಿಂದ ಒಬ್ಬ ಕ್ರೋಜರ್ ಜೀಪ ನಂ ಕೆಎ-32 ಎಂ-7005 ನೇದ್ದರ ಚಾಲಕನು ತನ್ನ ವಶದಲ್ಲಿದ್ದ
ಕ್ರೋಜರನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು
ಬಂದವನೇ ಸದರಿಯವರಿಬ್ಬರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ
ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ ಫಿರ್ಯಾದಿ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರಿಗೆ ಭಾರಿ
ಸ್ವರೂಪದ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಅದರ ಉಪಚಾರ ಕುರಿತು ಕಲಬುರಗಿ ನಗರದ
ಎ.ಎಸ್.ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರ ಪ್ರಕರಣದಲ್ಲಿ ಗಾಯಾಳುದಾರನಾದ ಶ್ರೀ
ತಿಮ್ಮಯ್ಯಾ ತಂದೆ ಶರಣಪ್ಪ ಒಡ್ಡರ ಸಾ:ಸೂಗುರ ತಾ:ಚಿತ್ತಾಪುರ ಇತನು ಗುಣ ಮುಖ ಹೊಂದದೇ ದಿನಾಂಕ 25-12-2016 ರಂದು ಸಾಯಂಕಾಲ
ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರತ್ನಮ್ಮಾ ಗಂಡ ತಿಪ್ಪಯ್ಯಾ ಒಡ್ಡರ ಸಾ ಸೂಗುರ ತಾ :
ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ
ಠಾಣೆ : ಜೇವರಗಿ ಠಾಣೆ : ದಿನಾಂಕ 24/12/16 ರಂದು ಬೆಳಗಿನ ಜಾವ 1-00 ಯಿಂದ 3-00 ಗಂಟೆಯ ಅವಧಿಯ
ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 6 ಚೀಲ
ಹತ್ತಿ ಅಂ.ಕಿ. 21,000/- ರೂ ಕಿಮ್ಮತ್ತಿನದ್ದು ಕಳವು ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಶ್ರೀ ರುದ್ರಮುನಿ ತಂದೆ
ಅಮರಯ್ಯ ಹಿರೆಮಠ ಸಾ: ಆಂದೋಲಾ ಇವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment