ಆಳಂದ ಪೊಲೀಸ್ ಠಾಣೆ : ದಿನಾಂಕ:27/12/2016 ರಂದು 08:30 ಪಿ.ಎಂ.ಕ್ಕೆ ಪಿರ್ಯಾದಿ
ಶ್ರೀ.ರಾಜಾಬಾಹು ತಂದೆ ಶ್ರೀರಂಗ ಕಾಂಬಳೆ ವಯ: 51 ವರ್ಷ ಜಾ: ಬುದ್ದಿಷ್ಟ್ ಉ: ಟ್ರಾನ್ಸಪೋರ್ಟ
ವ್ಯಾಪಾರ ಸಾ: ವೈಶಾಲಿ ಬುದ್ದ ವಿಹಾರ ಬೌದ್ದನಗರ ತಾ;ಜಿ ಲಾತೂರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಅರ್ಜಿ
ತಂದು ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಮಾನ್ಯರಲ್ಲಿ ದೂರು ಸಲ್ಲಿಸುವದೇನೆಂದರೆ ನನ್ನದೊಂದು
ಸೌತ್ ಇಂಡಿಯಾ ಟ್ರಾನ್ಸಪೋರ್ಟ ಸೈಲಾನಿ ಬಾಬಾ ದರ್ಗಾ ಎದರುಗಡೆ ಹೌಸಾ ರೋಡ ಖೋಪೆಗಾಂವ ಲಾತೂರ ದಲ್ಲಿ ನನ್ನದೊಂದು ಟ್ರಾನ್ಸಪೋರ್ಟ
ಇದ್ದು ಲಾರಿಯಲ್ಲಿ ಮಾಲು ತುಂಬಿ ಕಳುಹಿಸುತ್ತಾ ಬಂದಿರುತ್ತೇನೆ. ದಿನಾಂಕ: 22/12/2016 ರಂದು
ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ಲಾರಿ
ನಂ:ಟಿ.ಎನ್ 88-ವಾಯ್-4199 ನೇದ್ದರಲ್ಲಿ ಲಾತೂರದಿಂದ ಸದರ ಲಾರಿಯ ಒಳಗಡೆ 70 ಕ್ವಿಂಟಲ್
ಹೆಸರು, ಮತ್ತು 30 ಕ್ವಿಂಟಲ್ ಉದ್ದು ಹಾಗು 110 ಕ್ವಿಂಟಲ್ ತೊಗರೆ ಹೀಗೆ ಒಟ್ಟು 21 ಟನ್
ದಾನ್ಯಗಳು ಅಕಿ: 12,80,000/- ರೂ
ಕಿಮ್ಮತ್ತಿನ ಮಾಲು ತುಂಬಿರುತ್ತೇನೆ. ಸದರ ಲಾರಿಯ ಮೇಲೆ ಚಾಲಕ ಎಂದು ಸತೀಶಕುಮಾರ ತಂದೆ
ಕಾರ್ತಿಯನ್ ವಯ: 36 ವರ್ಷ ಜಾ: ಮುತ್ತುರಾಜ ಉ: ಲಾರಿ ಚಾಲಕ ಸಾ: ಮೀನಾಕ್ಷಿಪುರಂ ಪೋಷ್ಟ್
ಕರಟಾಮಡ್ಡಿ ತಾ: ಮುಸರಿ ಜಿ: ತ್ರಿಚಿರಾಪಲ್ಲಿ ತಮಿಳುನಾಡು ಈತನಿರುತ್ತಾನೆ, ಈತನು ವಿಶ್ರಾತಿ ಮಾಢಿ ಬೆಳಗ್ಗೆ ಹೋಗುತ್ತೇನೆ ಎಂದು ಹೇಳಿದ್ದರಿಂದ 23/12/2016 ರಂದು
ಬೆಳಗ್ಗೆ 10-00 ಎಎಮ್ ವೇಳೆಗೆ ಲಾತೂರದಿಂದ ತೂತ್ತುಕುಡಿ( ತುತ್ತುಕೋರಿನ್) ದಲ್ಲಿ ಧಾನ್ಯಗಳು
ಮಾಲು ಕೊಟ್ಟು ಬರಲು ಹೇಳಿ ಕಳುಹಿಸಿರುತ್ತೇನೆ. ನಂತರ ದಿನಾಂಕ: 24/12/2016 ರಂದು ಮದ್ಯಾಹ್ನ
1-00 ಗಂಟೆಯ ಸುಮಾರಗೆ ಯಾರೋ ಮೋಬೈಲ್ ನಂ: 9960524408 ನೇದ್ದರಿಂದ ನನಗೆ ಮೊಬೈಲ್ ನಂ:
9156588555 ನೇದ್ದಕ್ಕೆ ಫೊನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿಮ್ಮ ಲಾರಿ ನಂ: ಟಿ.ಎನ್ 88-ವಾಯ್-4199 ನೇದ್ದು ಹಂಗರಗಾ ನಳ್ ನಂದಗಾಂವ ರೋಡ ಹತ್ತಿರ ನಿಂತಿದ್ದು
ನಿಮ್ಮ ಲಾರಿ ಚಾಲಕನಿಗೆ ಯಾರೋ ಬಹಳಷ್ಟು ಹೊಡೆದಿದ್ದಾರೆ ಆತನಿಗೆ ಮಾತಾಡಲು ಬರುತ್ತಿಲ್ಲ ಕೂಡಲೆ
ಬರಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಪಾರ್ಟನರ್ ಇಕ್ರಾಮ್ ಸೈಯದ್, ತಂದೆ ಸಮ್‌ದಾನಿ ಸೈಯದ್ ಹಾಗು ಸತೀಶ ಸಾಟೆ (ಮಾಸ್ತರ್), ಸೇಂದಿಲ್ ತಂದೆ ಚಂದ್ರಶೇಖರ್ ನಾಡರ ಇವರು ಕೂಡಿ ಸ್ಥಳಕ್ಕೆ ಹೋಗಿ
ನೋಡಲು ನಮ್ಮ ಚಾಲಕನಿಗೆ ಎಡ ಕೈ ಮೆಲೆ ರಕ್ತಗಾಯವಾಗಿದ್ದು ಹೆಡಕಿಗೆ ಹೊಡೆದಿದ್ದರಿಂದ ಮಾತಾಡಲು
ಸರಿಯಾಗಿ ಬರುತ್ತಿರಲಲ್ಲ ನಂತರ ನಮ್ಮ ಲಾರಿ ಚಾಲಕ ಸತೀಶಕುಮಾರ ಈತನಿಗೆ ವಿಚಾರಿಸಲು ವಿಷಯ
ತಿಳಿಸಿದ್ದೇನೆಂದರೆ; ದಿನಾಂಕ: 23/12/2016 ರಂದು ಸಾಯಂಕಾಲ 6—30 ಗಂಟೆಯ ಸುಮಾರಿಗೆ ಆಳಂದ ಆರ್‌ಟಿಓ ಚೆಕ್‌ಪೋಷ್ಟ ದಾಟಿ ಮುಂದೆ
ಸ್ವಲ್ಪ ದೂರದಲ್ಲಿ ಹೋದಾಗ ಯಾರೋ ಇಬ್ಬರು ಜನರು
ಮೋಟಾರ್ ಸೈಕಲ್ ಮೇಲೆ ಬಂದು ನಮ್ಮ ಲಾರಿಯ ಎದುರಿಗೆ
ಅಡ್ಡ ಹಾಕಿ ಲಾರಿ ನಿಲ್ಲಿಸಿ ಲಾರಿಯಲ್ಲಿ ಹತ್ತಿ ಭೋಸಡಿ ಮಗನೆ ಸೂಳೆ ಮಗನೆ ನೀನು ಲಾರಿ ಸೀದಾ
ನಡೆಸಲು ಬರುವದಿಲ್ಲ ಎಂದು ಬೈದು ನನಗೆ ಕೈಯಿಂದ ಹೊಡೆದರು. ಮತ್ತು ಇನ್ನು 4 ಜನರು ಬಂದು ನನಗೆ
ಬಾಯಿ ಒತ್ತಿ ಹಿಡಿದು ಚಾಕು ತೋರಿಸಿ ಆವಾಜ ಮಾಡಿದಿ
ಎಂದರೆ ನನಿಗೆ ಖಲಾಸ್ ಮಾಡುತ್ತೇವೆ ಎಂದು ಹೆದರಿಸಿ ನನ್ನ ಎರಡು ಕೈಗಳು ಹಿಂದೆ ಕಟ್ಟಿ
ನನ್ನ ಲುಂಗಿಯಿಂದ ಎರಡು ಕಣ್ಣುಗಳು ಕಟ್ಟಿ ನನಗೆ ಕೆಳಗೆ ಹಾಕಿ ಇಬ್ಬರು ನನ್ನ ಮೇಲೆ ಕುಳಿತು
ಒಬ್ಬನು ಲಾರಿಯನ್ನು ಚಲಾಯಸಿಕೊಂಡು ಹೋಗಿ ಎಲ್ಲಿಯೋ ಒಂದು ಕಡೆ ಲಾರಿ ನಿಲ್ಲಿಸಿ ಲಾರಿಯಲ್ಲಿದ್ದ
21 ಟನ್ ಧಾನ್ಯಗಳು ಖಾಲಿ ಮಾಡಿ ನಂತರ ನನಗೆ ನಳದುರ್ಗದ ಹತ್ತಿರ ಇರುವ ಹಂಗರಗಾ-ನಳ್ ಗ್ರಾಮ
ನಂದಗಾಂವ ರೋಡ ಹತ್ತಿರ ನನಗೆ ಹೊಡದು ಇಲ್ಲಿಯೆ ಲಾರಿಯಲ್ಲಿ ಬಿಟ್ಟು ಹೋಗಿರುತ್ತಾರೆ ನಾನು
ಲಾರಿಯಲ್ಲಿ ಟೂಲ್ ಭಾಕ್ಸದಲ್ಲಿಟ್ಟಿದ್ದ 20,000/- ನಗದು ಹಣ ಮತ್ತು 30,680/-ರೂ ಬೆಲೆ ಬಾಳುವ
ಚೆಕ್ ಹಣ ಮತ್ತು ಓರಿಜನಲ್ ಲೈಸನ್ಸ ಹಾಗು 03 ತಾಡಪತ್ರೆಗಳು ಅಕಿ: 12000/- ರೂ ಇರಲಿಲ್ಲ ಎಲ್ಲ
ತೆಗೆದುಕೊಂಡು ಹೋಗಿರುತ್ತಾರೆ. ಎಂದು ತಿಳಿಸಿದನು. ನಂತರ ನಾವು ಲಾರಿ ಚೆಕ್ ಮಾಡಲಾಗಿ
ಲಾರಿಯಲ್ಲಿ ಯಾವುದೆ ಧಾನ್ಯಗಳು ಮತ್ತು ಹಣವಾಗಲಿ ಚೆಕ್ಕಾಗಲಿ ಇರಲಿಲ್ಲ. ನಂತರ ನಾವು ನಳದುರ್ಗ
ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದಾಗ ಅವರು ಆಳಂದಕ್ಕೆ ಹೋಗಿ ದೂರು ಕೊಡಲು ತಿಳಿಸಿದ್ದರಿಂದ
ನಾವು ಮಾಲಿನವರೊಂದಿಗೆ ವಿಚಾರಿಸಿಕೊಂಡು ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಯಾರೋ 6
ಜನರು ಕೂಡಿ ಆಳಂದ ಚೆಕ್ ಪೋಷ್ಟ ದಾಟಿ ಸ್ವಲ್ಪ ಮುಂದೆ ಹೋದಾಗ ಅಡ್ಡಗಟ್ಟಿ ಲಾರಿ ನಿಲ್ಲಿಸಿ ನಮ್ಮ
ಲಾರಿ ನಂ; ಟಿ.ಎನ್ 88-ವಾಯ್-4199 ನೇದ್ದರ ಚಾಲಕನಿಗೆ ಹೊಡೆದು ಲಾರಿಯ ಒಳಗಡೆ ಇದ್ದ 70 ಕ್ವಿಂಟಲ್
ಹೆಸರು ಮತ್ತು 30 ಕ್ವಿಂಟಲ್ ಉದ್ದು ಹಾಗು 110 ಕ್ವಿಂಟಲ್ ತೊಗರೆ ಹೀಗೆ ಒಟ್ಟು 21 ಟನ್
ಧಾನ್ಯಗಳು ಅಕಿ: 12,80,000/- ರೂ ಮತ್ತು ಲಾರಿಯಲ್ಲಿ ಟೂಲ್ ಭಾಕ್ಸದಲ್ಲಿಟ್ಟಿದ್ದ 20,000/-
ನಗದು ಹಣ ಮತ್ತು 30,680/- ರೂ ಬೆಲೆ ಬಾಳುವ ಚೆಕ್ ಹಣ ಹಾಗು 03 ತಾಡಪತ್ರೆಗಳು ಅಕಿ: 12000/-
ರೂ ಬೆಲೆ ಬಾಳುವ ಮಾಲು ದರೋಡೆ ಮಾಡಿಕೊಂಡು
ಹೋಗಿರುತ್ತಾರೆ. ಸದರ ದರೋಡೆಕೋರರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಿಲಾದ ಬಗ್ಗೆ ವರದಿ.
ಅಫಜಲಪೊರ ಪೊಲೀಸ್ ಠಾಣೆ : ದಿನಾಂಕ 27-12-2016 ರಂದು 07:00 ಪಿ.ಎಮ್ ಕ್ಕೆ ಶ್ರೀ ಲಕ್ಷ್ಮಿಕಾಂತ ವಿತ್ರಾ
ಸಹಾಯಕ ಕಾರ್ಯನಿರ್ವಾಹ ಅಭಿಯಂತರರು ಲೋಕಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ-ವಿಭಾಗ ಅಫಜಲಪೂರ ರವರ ಠಾಣೆಗೆ ಹಾಜರಾಗಿ
ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೇನೆಂದರೆ ಶೀವಪೂರ ಸೀಮಾಂತರದ ಹೊಲ ಸರ್ವೇ
ನಂ 5, 2/2/4 ರಲ್ಲಿ 330.00 ಘನ ಮೀಟರ ಮರಳು ಅಂದಾಜು ಕಿಮ್ಮತ್ತು 2,14,500/- ನೇದ್ದು ಅಕ್ರಮ ಮರಳಿನ ಗುಡ್ಡೆಗಳನ್ನು
ಸಂಗ್ರಹಿಸಿದ್ದು ಸದರಿ ಭೂ ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೊರಿಕೊಂಡ ಮೇರೆಗೆ ಪ್ರಕಾರ
ಪ್ರಕರಣ ದಾಖಿಲಾದ ಬಗ್ಗೆ ವರದಿ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ :ದಿನಾಂಕ. 27/12/2016 ರಂದು 11-30 ಪಿ.ಎಮ್ ಕ್ಕೆ ಪಿರ್ಯಾಧಿ ರಾಜಕುಮಾರ ತಂದೆ ಧರ್ಮಪಾಲ ಕಿವುಡೆ ವ: 52 ಉ:
ಖಾಸಗಿ ಕೆಲಸ ಜಾತಿ: ಜೈನ್ ಸಾ: ಮನೆ ನಂ. 8-589 ಭಗವಾನ ಮಾಹಾವೀರ ಮಾರ್ಗ ಆಸೀಪ್ ಗಂಜ ಮೇನ್ ರೋಡ ಕಲಬುರಗಿ
ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ದಿನಾಂಕ. 15/10/2016
ರಂದು 9.00 ಪಿ.ಎಂ ಸುಮಾರಿಗೆ ನಾನು ನನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. KA-32 VB-8442 ಚೆಸ್ಸಿನಂ.
ME4JC365H98082675, ಇ.ನಂ. JC36E0172217 ಅ,ಕಿ|| 25,000/- ರೂ ನೇದ್ದು ರೇಲ್ವೆ ಸ್ಟೇಷನ ಹತ್ತಿರ ಇರುವ ಮಾಹಾರಾಜ
ಹೊಟೇಲ ಮುಂದುಗಡೆ ನಿಲ್ಲಿಸಿ ಹೊಟೇಲದಲ್ಲಿ ಚಹಾ ಕುಡಿದು ಮರಳಿ 9:20 ಪಿಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹೊಂಡಾ ಶೈನ್ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹೊಂಡಾ ಶೈನ್ ಮೋಟಾರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಗೈರೆ ಪಿರ್ಯಾಧಿಯ ಪ್ರಕಾರ ದಾಖಿಲಾದ
ಬಗ್ಗೆ ವರದಿ.
No comments:
Post a Comment