ಚೌಕ ಪೊಲೀಸ್ ಠಾಣೆ : ದಿನಾಂಕ 28.12.2016 ರಂದು ನಸುಕಿನ ಜಾವ 2.00 ಗಂಟೆಯ ಸುಮಾರಿಗೆ ಚೌಕ ಪೋಲೀಸ ಠಾಣೆ
ವ್ಯಾಪ್ತಿಯ ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ
ಪಕ್ಕದ ರಸ್ತೆಯ ಮೇಲೆ 7-8 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಡಕಾಯಿತಿದಾರರು, ಗುಂಪು ಕಟ್ಟಿಕೊಂಡು
ಕೈಯಲ್ಲಿ ತಲವಾರ, ಮಚ್ಚು, ಲಾಂಗ, ಜಂಬ್ಯಾವನ್ನು ಹಿಡಿದುಕೊಂಡು ಮೋಟಾರ ಸೈಕಲಗಳು
ಇಟ್ಟುಕೊಂಡು ದರೋಡ ಮಾಡುವ ಕುರಿತು ಹೊಂಚು ರೂಪಿಸಿಸುತ್ತಿದ್ದಾರೆಂದು ಖಚಿತವಾದ ಭಾತ್ಮಿ ಬಂದ
ಮೇರೆಗೆ ನಾನು ಕೂಡಲೇ ನಮ್ಮ ಠಾಣೆಯ ಶ್ರೀ ಜಾಫರ ಅಲಿ ಎಎಸ್ಐ, ವಿಶ್ವನಾಥ ಪಿಸಿ 686, ಮೀರಯಾಸಿನ್ ಪಿಸಿ 948, ಬಂದೇನವಾಜ ಪಿಸಿ 429, ರಮೇಶ ಪಿಸಿ 1239,
ಪ್ರೇಮಸಿಂಗ್ ಪಿಸಿ 972, ಕನಯ್ಯಾಲಾಲ ಪಿಇಸ 438, ನರೇಂದ್ರ ಹೆಚ್‌ಜಿ 30 ರವರಿಗೆ ಠಾಣೆಗೆ ಬರಮಾಡಿಕೊಂಡು ಮತ್ತು ಇಬ್ಬರು ಪಂಚಜನರಾದ 1)
ಶ್ರೀ ಮಹ್ಮದ ಜಾವೀದ @ ಪಪ್ಪು ತಂದೆ ಮಹ್ಮದ ಜಿಲಾನಿ ಶೇಕ ವಯಃ
23 ವರ್ಷ ಜಾಃ ಮುಸ್ಲಿಂ ಉಃ ಸೆಂಟರಿಂಗ್ ಕೆಲಸ ಸಾಃ ಫಿಲ್ಟರ್ ಬೆಡ್ ಆಶ್ರಯ ಕಾಲೋನಿ ಕಲಬುರಗಿ
2) ಶ್ರೀ ಅಂಬರೇಶ ತಂದೆ ಭಗವಾನರಾವ ಪುರಮಕರ ವ: 32 ಜಾತಿ: ಭೋವಿ ಉ: ವ್ಯಾಪಾರ ಸಾ: ಬಂಬು ಬಜಾರ
ಕಲಬುರಗಿ ರವರಿಗೆ ಠಾಣೆಗೆ
ಬರಮಾಡಿಕೊಂಡು ಅವರಿಗೂ ಸಹ ಮೇಲಿನ ವಿಷಯ ತಿಳಿಸಿ ಪಂಚರಾಗಲು ವಿನಂತಿಸಿಕೊಂಡಿದ್ದು ಅವರು
ಒಪ್ಪಿಕೊಂಡ ನಂತರ ಈ ಮೇಲಿನ ಎಲ್ಲಾ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಮಾನ್ಯ ಎಸ್.ಪಿ.
ಸಾಹೇಬರು ಕಲಬುರಗಿ, ಮಾನ್ಯ ಅಪರ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಡಿ.ಎಸ್.ಪಿ. ಸಾಹೇಬರು, ಬಿ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ
ಮಾರ್ಗದರ್ಶನದಲ್ಲಿ, ನಮ್ಮ ಠಾಣೆಯ ಸರಕಾರಿ ಜೀಪಿ ನಂ ಕೆಎ-32 ಜಿ-668 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 2.30 ಎಎಮ್ ಕ್ಕೆ
ಹೋರಟು, ಬಾತ್ಮೀ ಬಂದ ಸ್ಥಳದ ಸಮೀಪದಲ್ಲಿ 2.45 ಗಂಟೆಗೆ ತಲುಪಿ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ ಪಕ್ಕದಲ್ಲಿ ಮರೆಯಾಗಿ ಹೊಗಿ ಜಾಡು ಹಿಡಿದು ನೋಡಲು
ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು
ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ
ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಒಮ್ಮಲೆ
ಎಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವರಿದು ಧಾಳಿ ಮಾಡಿ ಹಿಡಿಯುವಷ್ಟರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು, ನಾಲ್ಕು ಜನರು ಕತ್ತಲಲ್ಲಿ
ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು
ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು ತನ್ನ ಹೆಸರು 1) ಕುಮಾರ ಜಾಧವ ತಂದೆ
ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ
ಕಾಲೋನಿ ಕಲಬುರಗಿ, 2) ಓಂಕಾರ @ ವಕೀಲ ತಂದೆ ಸೋಮಸಿಂಗ್ ರಾಠೋಡ
ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ
ಕಲಬುರಗಿ, 3) ಬೀರಪ್ಪ ತಂದೆ ಪ್ರಕಾಶ
ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ
ಆಶ್ರಯ ಕಾಲೋನಿ ಕಲಬುರಗಿ, 4) ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ
ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು, ಓಡಿ ಹೋದ ಆರೋಪಿತರ
ಬಗ್ಗೆ ಕುಮಾರ ಜಾಧವ ಇತನಿಗೆ ವಿಚಾರಿಸಲು 1] ಕಿರಣ 2) ಜಾಫರ 3) ಆಕಾಶ 4) ಹೀರಾ ಅಂತಾ ಕುಮಾರ ಇತನು ತಿಳಿಸಿದ್ದು ಇರುತ್ತದೆ. ನಂತರ ಇಬ್ಬರು ಪಂಚರ ಸಮಕ್ಷಮ ಕಚೇರಿಗೆ ಒದಗಿಸಿದ ಪವರ
ರ್ಫುಲ್ ಸರ್ಚಲೈಟ ಬೆಳಕಿನಲ್ಲಿ ಮತ್ತು ನಮ್ಮ
ಪೊಲೀಸ್ ವಾಹನದ ಲೈಟಿನ ಬೆಳಕಿನಲ್ಲಿ ನಾವೆಲ್ಲರು ಹಿಡಿದ 4 ಜನ ದರೊಡೆ ಮಾಡಲು ಸಂಚು ರೂಪಿಸಿ
ಪ್ರಯತ್ನಿಸಿದವರನ್ನು ಅಂಗ ಶೋದನೆಯನ್ನು ಪ್ರತ್ಯೇಕವಾಗಿ ಪಂಚರ ಸಮಕ್ಷಮ ಮಾಡಲಾಗಿ 1] ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ
ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಅಂತಾ ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 20 ರೂ
ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00 ಹಾಗೂ ಒಂದು ಹೀರೋ ಹೊಂಡಾ ಹಿರೋ
ಕೆಎ-32 ಇಜೆ-1746 ಅಃಕಿಃ 30,000/- ನೇದ್ದು, 2) ಓಂಕಾರ @ ವಕೀಲ ತಂದೆ ಸೋಮಸಿಂಗ್ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ
ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ,
ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 25 ರೂ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ
ಬಟ್ಟೆ ಅಃಕಿಃ 00, ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಬಿ-4736 ಅಃಕಿಃ 30,000/-, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ
ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಎಂಬುವವನ ಹತ್ತಿರ ಒಂದು
ಲಾಂಗ ಅಃಕಿಃ 20 ರೂ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00, ಹಾಗು
ಖಾರದ ಪುಡಿ ಪ್ಯಾಕೇಟ ಅಃಕಿಃ 00 4) ಪಿಂಟಪ್ಪ
ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ
ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಎಂಬುವವನ
ಹತ್ತಿರ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳು ಅಃಕಿಃ 00 ಹಾಗು ಜೇಬಿನಲ್ಲಿ ಮುಖಕ್ಕೆ
ಕಟ್ಟಿಕೊಳ್ಳುವ ಮುಖವಾಡ ಕರಿ ಬಣ್ಣದ ಬಟ್ಟೆ ಅಃಕಿಃ 00, ಒಂದು ಹಗ್ಗ ಅಃಕಿಃ
00, ದೊರೆತಿದ್ದು ಮತ್ತು ಅಲ್ಲೇ ಇದ್ದ ಎರಡು ಮೋಟಾರ ಸೈಕಿಲ್‌ಗಳ ಬಗ್ಗೆ ಸದರಿ ಆರೋಪಿತರಿಗೆ
ವಿಚಾರಿಸಿದ್ದಾಗ ಸದರಿ ಮೋಟಾರ ಸೈಕಿಲ್‌ಗಳಲ್ಲಿ ಈ ಹೀರೋ ಹೊಂಡಾ ಹಿರೋ ಕೆಎ-32 ಇಎಪ್-6725
ನೇದ್ದು ಕಿರಣ ಇತನು ಉಪಯೋಗಿಸಿದ್ದು ಹಾಗೂ ಮತ್ತು
ಈ ಹೊಂಡಾ ಸೈನ್ ಕೆಎ-32 ಯು-1513 ನೇದ್ದು ಜಾಫರ
ಇತನು ಉಪಯೋಗಿಸಿದ್ದು ಇರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ. ಸ್ಥಳದಲ್ಲಿಯೆ ಬಿದ್ದಿರುವ ಹೀರೋ ಹೊಂಡಾ ಹಿರೋ ಕೆಎ-32
ಇಎಪ್-6725 ಅಃಕಿಃ 30,000/- ಹಾಗೂ ಹೊಂಡಾ ಸೈನ್ ಕೆಎ-32 ಯು-1513 ಅಃಕಿಃ 40,000/- ರೂ ಹೀಗೆ ದರೊಡೆ ಮಾಡಲು ಸಂಚು ರೂಪಿಸಿ ಸಿದ್ದತೆ
ಮಾಡಕೊಂಡಿರುವವರಿಂದ ಒಟ್ಟು ಅಂದಾಜು 1,30,065/- ರೂ ಬೆಲೆ
ಬಾಳುವದನ್ನು ಪಂಚರ ಸಮಕ್ಷಮ ಇಂದು ದಿನಾಂಕ 28.12.2016
ರಂದು ಬೆಳಗಿನ ಜಾವ 03-00 ಗಂಟೆಯಿಂದ 04.30 ಗಂಟೆಯವರೆಗೆ ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರಗಿಸಿ ನಂತರ ಸದರಿ ವಸ್ತಗಳನ್ನು
ಪ್ರತ್ಯೇಕವಾಗಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಇರುತ್ತದೆ, ಈ ಮೇಲೆ ನಮೂದ ಮಾಡಿದ 8 ಜನ
ಆರೋಪಿತರಲ್ಲಿ ಓಡಿಹೋದವ 4 ಜನರ ಆರೋಪಿತರನ್ನು ಬಿಟ್ಟು ನಾಲ್ಕು ಜನರನ್ನು ಸಿಬ್ಬಂದಿಯವರ
ಬೆಂಗಾವಲಿನಲ್ಲಿ ದಿನಾಂಕ: 28.12.2016 ರಂದು ಬೆಳಗಿನ ಜಾವ 05.15 ಗಂಟೆಗೆ ಠಾಣೆಗೆ ತಂದು ಈ ವರದಿಯೊಂದಿಗೆ ಜಪ್ತಿ
ಪಂಚನಾಮೆ ಮತ್ತು ಜಪ್ತಿ ಮಾಡಲಾದ ಮುದ್ದೆ ಮಾಲನ್ನು ಠಾಣಾಧಿಕಾರಿ ಚೌಕ ಪೊಲೀಸ ಠಾಣೆ ರವರಿಗೆ
ಒಪ್ಪಿಸಿದ್ದು ಅಲ್ಲದೆ ಇವರೆಲ್ಲರು ಈ ಮೊದಲಿನಿಂದಲೂ ಇಂತಹ ಕೃತ್ಯವನ್ನು ಮಾಡುವ ಅಪರಾಧ ಹಿನ್ನಲೆ
ವುಳ್ಳವರಾಗಿರುವದ್ದಾರೆಂದು ವಿಚಾರಣೆಯಿಂದ ತಿಳಿದು ಬಂದಿದ್ದು ಸದರಿ 8 ಜನರ
ವಿರುದ್ಧ ಕಾನೂನು ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:28/12/2016 ರಂದು ಮದ್ಯಾನ 3.30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರೀನ್ ಸಕಲ್
ಹತ್ತಿರ ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹೀತಿ ಬಂದಿದ್ದು ಆತನ ಮೇಲೆ
ದಾಳಿ ಮಾಡುವುದು ಗೋಸ್ಕರ ಇಬ್ಬರೂ ಪಂಚರನ್ನು
ಬರಮಾಡಿಕೊಂಡು ಜೊತೆಯಲ್ಲಿ ಸಿಬ್ಬಂದಿ ಜನರಾದ 1)ಕಿಶೋರ ಪಿಸಿ.1010 2) ಗಂಗಾಧರ ಪಿ,ಸಿ, 642 ಮತ್ತು ಜೀಪ ಚಾಲಕ 3)ಶಿವಲಿಂಗಪ್ಪ ಪಿ,ಸಿ, 1241 ರವರನ್ನು ಜೊತೆಯಲ್ಲಿ ಕರೆದುಕೊಂಡು ಜೀಪಿನಲ್ಲಿ ಕುಳಿತು ಮದ್ಯಾನ 3.45 ಗಂಟೆಗೆ ಠಾಣೆಯಿಂದ ಹೋರಟು ಮದೀನಾ ಕಾಲೋನಿ ಗ್ರೀನ್ ಸರ್ಕಲ್ ಸ್ವಲ ಮುಂದೆ ಇದ್ದಂತೆ ಜೀಪ ನಿಲ್ಲಿಸಿ
ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ
ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು
ರೂ ಗೆ 90 ರೂ ಕೊಡುತ್ತೇನೆ ಅಂತಾ
ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು
ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ತನ್ನ ಹತ್ತಿ ಇಟ್ಟುಕೊಂಡು ಇನ್ನೊಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಿದ್ದನು ಇದನ್ನು ನೋಡಿ
ಖಚಿತ ಪಡಿಸಿಕೊಂಡು ಸಾಯಂಕಾಲ 4.15 ಗಂಟೆಗೆ ದಾಳಿ ಮಾಡಿ ಹಿಡಿದು
ಆತನ
ಹೆಸರು ವಿಳಾಸ ವಿಚಾರಿಸಲು ಅವನು ತನ್ನ
ಹೆಸರು ತಜಮಲ್ ತಂದೆ ಫಕ್ರುದ್ದಿನ ಕಮಲಾಪುರವಾಲೆ ವ||36 ಉ|| ಆಟೋ ಚಾಲಕ ಸಾ|| ಇಲಾಹಿ ಮಜೀದ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದನು ಆತನ ಅಂಗಶೋಧನೆ ಮಾಡಲು ಮಟಕಾ
ಜುಜಾಟಕ್ಕೆ ಸಂಬಂದಿಸಿದ ನಗದು ಹಣ 780=00
ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಮುಂದಿನ ಪುರಾವೆ ಕುರಿತು
ವಶಕ್ಕೆ ತೆಗೆದುಕೊಂಡಿದ್ದು ಒಪ್ಪಿಸಿದ್ದು ಸದರಿಯವನ ಮೇಲೆ
ಕಲಂ 78(3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ
ವರದಿಯಾದ ಬಗ್ಗೆ ಮಾಹಿತಿ.
No comments:
Post a Comment