ವರದಕ್ಷಿಣೆ
ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ
ಠಾಣೆ: ದಿನಾಂಕ 5-12-2016 ರಂದು ಶ್ರೀಮತಿ ತೇಜಸ್ವಿನಿ ಗಂಡ ಸಚಿನ ಪಾಟೀಲ ಸಾ: ಸ್ಟೇಶನ ಬಜಾರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನಗೆ ಮದುವೆ ಆದ
ದಿನದಿಂದ ನನಗೆ ನನ್ನ ಗಂಡ, ಭಾವ ನನಗೆ ಹಿಂಸೆ ನೀಡಿ ಮತ್ತು ನನ್ನ ತವರು ಮನೆಯಿಂದ ಒಟ್ಟು 7ಲಕ್ಷ
ರೂಪಾಯಿ ಮತ್ತು 21 ತೊಲೆ ಬಂಗಾರ ಒತ್ತಾಯಪೂರ್ವಕವಾಗಿ ತೆಗೆದುಕೊಂಡಿದ್ದು. ಮತ್ತೇ ಇನ್ನೂ 10ಲಕ್ಷ ರೂಪಾಯಿ ತೆಗೆದುಕೋಂಡು ಬಾ ಎಂದು ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದ ಕಾರಣ ದಿನಾಂಕ
3-12-2016 ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಗಂಡನ ವಿರುದ್ದ ದಾವೆ ಹಾಕಿದ್ದು. ವಿಚಾರಣೆ
ಇದ್ದ ಪ್ರಯುಕ್ತ ತಾನು ತನ್ನ ತಂದೆ ತಾಯಿ ಕಾಕಾ ಪ್ರಕಾಶ ಮತ್ತು ಅಣ್ಣ ಮಲ್ಲಿಕಾರ್ಜುನ, ನಿಲೇಶ ,ಪ್ರದೀಪ ಇವರೊಂದಿಗೆ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿದ್ದಾಗ
ನನ್ನ ಗಂಡ ಸಚಿನ ಅವನ ಅಣ್ಣ ಸಂದೀಪ ಮತ್ತು ಅವರ ಗೆಳೆಯರೊಬ್ಬರು ನಿನ್ನ ಜೊತೆ ಏಕಾಂತದಲ್ಲಿ ಮಾತನಾಡುವುದಿದೆ ಎಂದು
ತಿಳಿಸಿ ಕೌಟುಂಬಿಕ ನ್ಯಾಯಾಲಯದ ಮುಂದೆ ಎ.ಡಿ ಆರ
ಕಟ್ಟಡದ ಹತ್ತಿರ ಕರೆದೊಯ್ದುನೀನು ನಮ್ಮ ಮೇಲೆ ಹಾಕಿರುವ ಕೇಸುಗಳನ್ನು ಹಿಂದೆ ಪಡೆಯಬೇಕು
ಇಲ್ಲದಿದ್ದರೆ ನಿನ್ನ ಗ್ರಹಚಾರ ಚೆನ್ನಾಗಿರುವುದಿಲ್ಲಾ ಎಂದು ನನ್ನ ಕೂದಲು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು.
ನನ್ನ ಭಾವ ಸಂದೀಪ ಸಹ ಅಲ್ಲಿಗೆ ಬಂದು ನೀನು ನಮ್ಮ ಮೇಲೆ ಕೇಸು ಹಾಕುತ್ತಿಯಾ ಎಂದು ನನ್ನ
ಮೇಲೆ ಹಲ್ಲೆ ಮಾಡಿ ಎಳೆದಾಡಿದ್ದು. ನನ್ನ ಗಂಡ
ನನ್ನ ಕತ್ತು ಹಿಡಿದು ಇಂದು ನಾವು ನಿನ್ನನು ಮಗಿಸಿ ಬಿಡುತ್ತೇವೆ ಅಂತಾ ಹೇಳಿತ್ತಾ ಅವರ ಜೊತೆಗೆ
ಬಂದಿದ್ದ ಇನ್ನೊಬ್ಬ ವ್ಯಕ್ತಿ ಅವಳನ್ನು ಚೆನ್ನಾಗಿ ಹೊಡೆಯಿರಿ ಅಂತಾ ಪ್ರಚೋದಿಸುತ್ತಿದ್ದನು.
ನನ್ನ ಕಿರುಚಾಟ ಕೇಳಿ ನನ್ನ ತಂದೆ ತಾಯಿ ಕಾಕಾ ಪ್ರಕಾಶ ಮತ್ತು ಅಣ್ಣ ಮಲ್ಲಿಕಾರ್ಜುನ, ನಿಲೇಶ, ಪ್ರದೀಪ ಇವರೆಲ್ಲರೂ ನನ್ನ ಹತ್ತಿರ ಬರುವಷ್ಟರಲ್ಲಿ ಅವರೆಲ್ಲರೂ
ಅಲ್ಲಿಂದ ಓಡಿಹೋಗಿದ್ದು. ಕಾರಣ ನನ್ನ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಲು
ಪ್ರಯತ್ನಿಸಿದ ನನ್ನ ಗಂಡ ಸಚಿನ, ಭಾವ ಸಂದೀಪ ಮತ್ತು ಅವರ ಸ್ನೇಹಿತ ಹಾಗೂ ಇದಕ್ಕೆ ಕಾರಣಳಾದ ಅಪರ್ಣಾ ಇವರೆಲ್ಲರ ಮೇಲೆ ಕಾನೂನು
ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment