¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-01-2017
§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß
£ÀA. 09/2017, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 22-01-2017 ಫಿರ್ಯಾದಿ ರಮೇಶ ತಂದೆ ಈಶ್ವರ ಮನಕಾರೆ ವಯ:
55 ವರ್ಷ, ಜಾತಿ: ಕಬ್ಬಲಿಗ, ಸಾ: ಚಂದನಹಳ್ಳಿ, ತಾ: ಹುಮನಾಬಾದ ರವರ ಮಗನಾದ ಚಂದ್ರಕಾಂತ ತಂದೆ
ರಮೇಶ ಮಾನಕರೆ ವಯ 26 ವರ್ಷ, ಜಾತಿ: ಕಬ್ಬಲಿಗ, ಸಾ: ಚಂದನಹಳ್ಳಿ, ತಾ: ಹುಮಾನಾಬಾದ ಇತನು ತನ್ನ
ಪಲ್ಸರ ಮೋಟಾರ ಸೈಕಲ ನಂ. ಕೆಎ-65/ಇ-2461 ನೇದರ ಮೇಲೆ ರಾಜೇಶ್ವರ ರಾಜೋಳಾ ರೋಡ ಮುಖಾಂತರ ರೋಡಿನ ಮೇಲೆ
ಹೋಗುತ್ತಿರುವಾಗ ಎದುರಿನಿಂದ ಅಂದರೆ ರಾಜೋಳಾ ಕಡೆಯಿಂದ ಹೊಂಡಾ ಶೈನ್ ಮೋಟಾರ ಸೈಕಲ ನಂ.
ಎಮ್.ಎ.ಚ್.-248/ಎ.ಎನ್.-4206
ನೇದರ
ಚಾಲಕನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಚಂದ್ರಕಾಂತ ಇತನ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಸ್ವಲ್ಪ ನಿಂತ ಹಾಗೆ ಮಾಡಿ
ನಂತರ ಅವನು ಅಲ್ಲಿಂದ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ
ಚಂದ್ರಕಾಂತ ಇತನ ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆಂದು ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 11/2017, PÀ®A 307, 324 eÉÆvÉ 34 L¦¹ :-
ದಿನಾಂಕ 16-12-2016 ರಂದು ಮದ್ಯರಾತ್ರಿ 1200
ರಿಂದ 1230 ಗಂಟೆಯ ಸುಮಾರಿಗೆ ನಂದಕಿಶೋರ ತಂದೆ ಬಾಬುರಾವ ಸಿರಗಿರೆ ಸಾ: ಚಾಂಡೇಶ್ವರ ರವರು ಮನೆಯಲ್ಲಿದ್ದಾಗ
ಆರೋಪಿತರಾದ 1) ಸಂಗಮೇಶ್ವರ ಸಿರಗಿರೆ,
2) ಅಮರೇಶ @ ಅಮರ ಸಿರಗಿರೆ, 3) ಬಸವರಾಜ
ಸಿರಗಿರೆ, 4) ಶಾಲಮ್ಮ ಸಿರಗಿರೆ ಎಲ್ಲರೂ ಸಾ:
ಚಾಂಡೇಶ್ವರ ಹಾಗೂ ಇನ್ನೂ ಇಬ್ಬರು ಈ 6-ಜನ ಸೇರಿಕೊಂಡು ಫಿರ್ಯಾದಿಯ ಕೈಕಾಲು ಹಿಡಿದು ಕಾರಿನೊಳಗೆ ದಬ್ಬಿ ಪೆಟ್ರೋಲ್
ಸುರಿದು ಡೋರ ಲಾಕ್ ಮಾಡಿ ಓಡಿ ಹೋಗಿರುತ್ತಾರೆ, ಫಿರ್ಯಾದಿಯು ಇನ್ ಸೈಡ ಗ್ಲಾಸ ಒಡೆದು ಹೊರಗೆ
ಬರುವಷ್ಟರಲ್ಲಿ ಫಿರ್ಯಾದಿಯ ಕೈ, ಮುಖ, ತಲೆ
ಕೂದಲು, ಕಣ್ಣಿನ ರೆಪ್ಪೆ ಸುಟ್ಟು ಹೋಗಿರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-01-2017 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 08/2017, ಕಲಂ 279, 338 ಐಪಿಸಿ :-
ದಿನಾಂಕ 22-01-2017 ರಂದು ಫಿರ್ಯಾದಿ ಜಗನ್ನಾಥ
ತಂದೆ ಶಿವರಾಜ ಹಾಳದೋಡ್ಡಿ ವಯ: 33 ವರ್ಷ, ಜಾತಿ: ಲಿಂಗಾಯತ, ಸಾ: ಬೆಮಳಖೇಡಾ ರವರು ನಾನು ಹಾಗೂ
ರೇವಣಸಿದ್ದಪ್ಪಾ ತಂದೆ ನಾಗಶೇಟೆಪ್ಪಾ ಬೋರಳೆ ವಯ: 35 ವರ್ಷ, ಸಾ: ಬೆಮಳಖೇಡಾ ಇಬ್ಬರೂ
ಕೂಡಿಕೊಂಡು ಹಿರೋ ಹೊಂಡಾ ಪ್ಯಾಶನ ಮೊಟಾರ ಸೈಕಲ್ ನಂ. ಎಪಿ-09/ಎಜೆ-7571 ನೇದರ ಮೇಲೆ
ಹುಮನಾಬಾದದಿಂದ ತಮ್ಮ ಸಂಬಂಧಿಕರ ಮನೆ ಹಳ್ಳಿಖೇಡ(ಕೆ) ಗ್ರಾಮಕ್ಕೆ ಹೋಗುವಾಗ ಆರೋಪಿ
ರೇಣಸಿದ್ದಪ್ಪಾ ಬೋರಳೆ ಇತನು ಕಲಬುರ್ಗಿ-ಹುಮನಾಬಾದ ರಾಜ್ಯ ಹೆದ್ದಾರಿ ಮೇಲೆ ಲಾಲಧರಿ ಗುಂಪ್ಪಾ
ಸ್ಲಲ್ಪ ಮುಂದಗಡೆ ಸದರಿ ಮೊಟಾರ ಸೈಕಲ್ ಅತಿ ವೇಗ ಹಾಗೂ ನಿಸ್ಕಾಳಜಿಯಿಂದ ಅಲ್ಲದೇ ಅಜಾಗ್ರಕತೆಯಿಂದ
ಓಡಿಸಿ ರೋಡಿನ ಬದಿಗೆ ಸುರಕ್ಷತೆ ಕ್ರಮಕ್ಕೆ ಹಾಕಿದ ಕಲ್ಲಿಗೆ ಡಿಕ್ಕಿ ಮಾಡಿರುತ್ತಾನೆ ಇದರಿಂದ
ರೆವಸಿದ್ದಪ್ಪಾ ಇತನ ತಲೆಗೆ ಭಾರಿ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ
ಮುರಿದಂತೆ ಕಂಡು ಬಂದಿರುತ್ತದೆ, ಮೊಟಾರ ಸೈಕಲ್ ಹಿಂದೆ ಕುಳಿತ ಫಿರ್ಯಾದಿಗೆ ಯಾವುದೇ
ಗಾಯವಾಗಿರುದಿಲ್ಲಾ, ನಂತರ 108 ಅಂಬುಲೆನ್ಸಗೆ ಕರೆ ಮಾಡಿ ಸದರಿ ಅಂಬುಲೆನ್ಸದಲ್ಲಿ
ರೆವಣಸಿದ್ದಪ್ಪಾ ಅವನಿಗೆ ಹಾಕಿಕೊಂಡು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಹುಮನಾಬಾದಕ್ಕೆ ತಂದು
ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 11/2017, ಕಲಂ 279, 338 ಐಪಿಸಿ ಜೊತೆ 187
ಐಎಂವಿ ಕಾಯ್ದೆ :-
ದಿನಾಂಕ 22-01-2017 ರಂದು ಫಿರ್ಯಾದಿ ಸುನೀಲ ತಂದೆ ವೈಜಿನಾಥ ಸಂಗನಬಟ್ಟೆ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ ರವರು ತಮ್ಮ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆ ಹತ್ತಿರ ನಿಂತಾಗ ಅದೇ ವೇಳೆಗೆ ತಮ್ಮೂರ ಕೇರೆಯ ಹತ್ತಿರ ಶಾಂತಕುಮಾರ ತಂದೆ ರಾಜಕುಮಾರ ಸಜ್ಜನಶೆಟ್ಟಿ ವಯ: 12 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ ರವರು ಸಂಡಾಸಕ್ಕೆ ಹೋಗಿ ಮನೆಯ ಕಡೆಗೆ ನಡೆದುಕೊಂಡು ಬರುವಾಗ ದಾರಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಹತ್ತಿರ ರೂದನೂರ ಕಡೆಯಿಂದ ಟ್ರ್ಯಾಕ್ಟರ ನಂ. ಕೆಎ-38/ಟಿ–1048 ನೇದರ ಚಾಲಕನಾದ ಆರೋಪಿಯು
ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಶಾಂತಕುಮಾರನಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪಡರಿಣಾಮ ಟ್ರ್ಯಾಕ್ಟರ ಮುಂದಿನ ಟೈರ ಸೊಂಟದ ಮೇಲಿನಿಂದ ಹೋಗಿ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ ಮತ್ತು ಮೈಯಲ್ಲಿ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತದೆ, ಗಾಯಗೊಂಡ ಶಾಂತಕುಮಾರನಿಗೆ ಗುರುನಾನಕ ಆಸ್ಪತ್ರೆ ಬೀದರಕ್ಕೆ ಖಾಸಗಿ ಜೀಪನಲ್ಲಿ ಕರೆದುಕೊಂಡು ಹೋಗಿ ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
zsÀ£ÀÆßgÀ ¥Éưøï oÁuÉ UÀÄ£Éß £ÀA. 12/2017, PÀ®A 87
PÉ.¦ PÁAiÉÄÝ :-
ದಿನಾಂಕ 22-01-2017
ಜಾಂತಿ ಗ್ರಾಮದ ಹನುಮಾನ ಮಂದಿರದ ಸಾರ್ವಜನಿಕ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು
ಕುಳಿತು ಆಕ್ರಮವಾಗಿ ಹಣಹಚ್ಚಿ ಪಣತೊಟ್ಟು ಪರೇಲ ಎಂಬ ನಸಿಬಿನ ಇಸ್ಪೀಟ್ ಜೂಜಾಟ
ಆಡುತ್ತಿದ್ದಾರೆಂದು ವಿಜಯಕುಮಾರ ಎನ್. ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ
ಮಾಹಿತಿ ಬಂದ ಮೇರೆಗೆ ಪಿಎಸಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ
ವೀರಶೇಟ್ಟಿ ನಿಡವಾದೆ ರವರ ಮನೆಯ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಜಗನ್ನಾಥ ತಂದೆ ಮಲ್ಲಪ್ಪ ಮೇತ್ರೆ ವಯ: 36 ವರ್ಷ, ಜಾತಿ: ಎಸ್.ಟಿ, 2) ಶಾಂತಕುಮಾರ ತಂದೆ ಮಲ್ಲಶೇಟ್ಟಿ ಪಾಟೀಲ ವಯ: 60 ವರ್ಷ, ಜಾತಿ: ಲಿಂಗಾಯತ, 3) ಮಲ್ಲಿಕಾರ್ಜುನ ತಂದೆ ರೇವಣಪ್ಪಾ ಬೊಳಶೇಟ್ಟಿ
ವಯ: 52 ವರ್ಷ, ಜಾತಿ: ಲಿಂಗಾಯತ, 4) ಜ್ಯೋತಿರ್ಲಿಂಗ ತಂದೆ ಕಂಠಯ್ಯ ಮಠಪತಿ ವಯ: 33 ವರ್ಷ, ಜಾತಿ: ಸ್ವಾಮಿ ಎಲ್ಲರೂ ಸಾ: ಜಾಂತಿ ಇವರೆಲ್ಲರೂ ಅಕ್ರಮವಾಗಿ ಕುಳಿತು ಹಣಹಚ್ಚಿ ಪಣತೊಟ್ಟಿ ಪರೇಲ
ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯ ಸಹಾಯದಿಂದ ಹಠಾತ್ತನೆ ದಾಳಿ ಮಾಡಿ ಅವರಿಂದ ಒಟ್ಟು ನಗದು ಹಣ 1900/- ರೂ., 52
ಇಸ್ಪಿಟ್ ಎಲೆಗಳು ಹಾಗೂ 1000/- ರೂಪಾಯಿ ಬೆಲೆ ಬಾಳುವ 2 ಹಳೆ ಮೊಬೈಲಗಳು ಜಪ್ತಿ ಮಾಡಿಕೊಂಡು,
ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment