ಆಕ್ರಮವಾಗಿ ಮರತಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ
ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ:
10/01/2017 ರಂದು ಸಾಯಂಕಾಲ 6-00 ಗಂಟೆಗೆ ಠಾಣೆಯ ಸಾಹೇಬರು ಠಾಣೆಗೆ ಬಂದು ಒಂದು ಮುದ್ದೆ ಮಾಲು
ಮತ್ತು ಜುಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವನೆಂದರೆ ದಿನಾಂಕ: 10/01/2017 ರಂದು ಹೊನಗುಂಟಾ ಗ್ರಾಮದ ಕಾಗಿಣಾ
ನದಿಯಿಂದ ಟ್ಯಾಕ್ಟರಗಳಲ್ಲಿ ಮರಳು
ಕಳ್ಳತನದಿಂದ ಸಾಗಿಸುತ್ತಿದ್ದಾರೆ ಅಂತಾ
ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್
ಅಸ್ಲಾಂ ಭಾಷ ಪಿ ಐ ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮಕ್ಕೆ ಹೊಗುತ್ತಿದ್ದಾಗ ಹೊನಗುಂಟಾ
ಗ್ರಾಮದ ಪ್ರೌಡ ಶಾಲೆ ಹತ್ತಿರ ರೋಡಿನಲ್ಲಿ ಹೊನಗುಂಟಾ ಕಡೆಯಿಂದ ಐದು ಮರಳು ತುಂಬಿದ
ಟ್ರ್ಯಾಕ್ಟರಗಳು ಬರುತ್ತಿರುವುದು ನೋಡಿ
ಅವುಗಳಿಗೆ ಹಿಡಿಯಲು ಪೊಲೀಸ ಜೀಪ ನಿಲ್ಲಿಸಿದಾಗ ಸದರಿ ಟ್ರ್ಯಾಕ್ಟರ ಚಾಲಕರು ಪೊಲೀಸ ಜೀಪ ನೋಡಿ
ಟ್ರ್ಯಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ
ಹೋದರು. ಸದರಿ ಟ್ರ್ಯಾಕ್ಟರ ಗಳ ನಂಬರ ಪರಿಶೀಲಿಸಿ ನೋಡಲಾಗಿ ಅವುಗಳಲ್ಲಿ ಮರಳು ತುಂಬಿದ್ದು ಅವುಗಳ
ನಂಬರ 1] ಕೆ.ಎ. 32 ಟಿಎ 6804-6805 ಅ.ಕಿ. 2 ಲಕ್ಷ ಅದರಲ್ಲಿಯ ಮರಳಿನ ಅ.ಕಿ. 2000/- ರೂ 2]
ಕೆಎ. 32 ಟಿ.ಬಿ 0785 ಟ್ರಾಲಿ ನಂ ಕೆ.ಎ. 32
ಸಿ.ಎನ.ಪಿ 3468 ಅ.ಕಿ 2 ಲಕ್ಷ ಅದರಲ್ಲಿಯ ಮರಳಿನ ಅ.ಕಿ. 2000/- ರೂ 3] ಕೆ.ಎ. 32 ಟಿ.ಎ 6807-08 ಚಸ್ಸಿ ನಂ ಎಸ್32501 ಸಿ18429 ಅ.ಕಿ 1
ಲಕ್ಷ ಅದರಲ್ಲಿಯ ಮರಳಿನ ಅ.ಕಿ. 2000/- ರೂ 4] ಟ್ರ್ಯಾಕ್ಟರ ನಂಬರ ಇಲ್ಲದ್ದು ಇಂಜನ ನಂ ಎಸ್
325.1 ಸಿ 69166 ಚಸ್ಸಿ ನಂ MF241DI-580801
ಅ.ಕಿ 1 ಲಕ್ಷ ಅದರಲ್ಲಿಯ ಮರಳಿನ ಅ.ಕಿ. 2000/- ರೂ 5] ಟ್ರ್ಯಾಕ್ಟರ ನಂಬರ ಇಲ್ಲದ್ದು ಇಂಜನ ನಂ
ಎಸ್ 337ಎ79650 ಚಸ್ಸಿ ನಂ MEA661E5JG2108607 ಅ.ಕಿ 1 ಲಕ್ಷ ಅದರಲ್ಲಿಯ ಮರಳಿನ ಅ.ಕಿ. 2000/-
ರೂ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಶಾಹಾಬಾದ ನಗರ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಕುಮಾರ ಇವರ ಮಗಳಾದ ಕುಮಾರಿ ಇವಳಿಗೆ ನಾಂದೇಡ ಜಿಲ್ಲೆಯ
ಹತ್ತಗಾವ
ತಾಲೂಕಿನ
ಲಿಂಬಗಾವ
ತಾಂಡಾ
ಇರುತ್ತದೆ
ಸದರಿ ತಾಂಡಾದ
ಸಂಜಯ ತಂದೆ ಗೋವಿಂದ
ಚವ್ಹಾಣ
ಎಂಬಾತನಿದ್ದು
ಅವನು ಕಬ್ಬು
ಕಟಾವು
ಮಾಡುವ
ಲೇಬರ್
ಜನರ ಟೋಳಿಯ
(ಗ್ಯಾಂಗಿನ)
ಮಕಾದಮ್
ಇರುತ್ತಾನೆ
ಸದರಿ ಸಂಜಯನು
ನನ್ನ ತಂಗಿ ಜನಾಬಾಯಿ
ಗಂಡ ರೋಹಿದಾಸ
ಮತ್ತು
ಅವಳ ಗಂಡ ರೋಹಿದಾಸ
ತಂದೆ ಹೀರಾಮನ್
ರಾಠೋಡ
ಸಾ||ಚಾಬ್ರಾತಾಂಡಾ
ತಾ||ಹತ್ತಗಾವ
ಜಿ||ನಾಂದೇಡ
ರವರನ್ನು
ಹಾಗು ಇನ್ನಿತರರನ್ನು ಈಗ ಸುಮಾರು
ಎರಡು ತಿಂಗಳುಗಳ
ಹಿಂದೆ
ಕರ್ನಾಟಕದ
ಬಾಗಲಕೋಟ
ಜಿಲ್ಲೆಯ
ನಿರಾಣಿ
ಸಕ್ಕರೆ
ಕಾರ್ಖಾನೆಗೆ
ಕಬ್ಬು
ಕಟಾವು
ಮಾಡುವ
ಕೆಲಸಕ್ಕೆ
ಕರೆದುಕೊಂಡು
ಬಂದಿರುತ್ತಾನೆ.
ಆಸಮಯದಲ್ಲಿ
ನಾನು ಮತ್ತು
ನನ್ನ ಹೆಂಡತಿ
ನಮ್ಮ ಎರಡನೇಯ
ಮಗಳನ್ನು ಕಬ್ಬು
ಕಟಾವು
ಮಾಡುವ
ಕೂಲಿಕೆಲಸಕ್ಕೆ
ನನ್ನ ತಂಗಿ ಮತ್ತು
ತಂಗಿಯ
ಗಂಡನೊಂದಿಗೆ
ಕಳುಯಿಸಿ
ಕೊಟ್ಟಿರುತ್ತೇವೆ. ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಣಿಕೆ
ಮಾಡಲು
ಭೋಗಾವ
ಗ್ರಾಮದ
ಸದಾನಂದ
ತಂದೆ ಬಾಪುರಾವ
ಗಾಡೆ ಎಂಬಾತನು
ತನ್ನ ಟ್ರ್ಯಾಕ್ಟರಗಳನ್ನು ತಗೆದುಕೊಂಡು ಹೋಗಿದ್ದು ದಿನಾಂಕ 29/12/2016 ರಂದು ಕಲಬುರಗಿ
ಜಿಲ್ಲೆಯ
ಅಫಜಲಪೂರ
ತಾಲೂಕಿನ
ಹಾವಳಗಾ
ರೇಣುಕಾ ಸಕ್ಕರೆ
ಕಾರ್ಖಾನೆಗೆ
ಬಂದಿರುತ್ತಾರೆ
ಸದ್ಯಕ್ಕೆ
ಘತ್ತರಗಾ
ಗ್ರಾಮದ
ಮಲ್ಲು
ಸಾಹುಕಾರ
ಅಮ್ಮಣಿ
ರವರ ಹೊಲದಲ್ಲಿ
ಜೋಪಡಿಗಳು
ಹಾಕಿಕೊಂಡು
ವಾಸಿವಿದ್ದು ದಿನಾಂಕ
06/01/2017 ರಂದು ಮದ್ಯಾಹ್ನ
3.00 ಗಂಟೆ ಸುಮಾರಿಗೆ
ಟ್ರ್ಯಾಕ್ಟರ
ಮಾಲಿಕ
ಸದಾನಂದ
ಗಾಡೆ ಇತನು ನನಗೆ ಪೋನ ಮೂಲಕ ತಿಳಿಸಿದ್ದೇನೆಂದರೆ ದಿನಾಂಕ 05/01/2017 ರಂದು ಸಾಯಂಕಾಲ
ನಿಮ್ಮ
ಮಗಳು ಆರತಿ ತನಗೆ ಹೊಟ್ಟೆ
ನೋವು ಆಗುತಿದೆ
ಅಂತಾ ಹೇಳಿದ್ದರಿಂದ
ಟೋಳಿ ಮಕಾದಮ್
ಸಂಜಯ್
ಚವ್ಹಾಣ ಈತನು ನಿಮ್ಮ
ಮಗಳನ್ನು
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಮಾಡಿಸಿ
ನಿಮ್ಮ
ಊರಿಗೆ
ಬಿಟ್ಟು
ಬರುತ್ತೇನೆ
ಹೇಳಿ ನಿನ್ನೆ
ದಿವಸ ಸಾಯಂಕಾಲವೇ
ನಿಮ್ಮ
ಮಗಳು ಆರತಿಯನ್ನು
ಇಲ್ಲಿಂದ
ಕರೆದುಕೊಂಡು
ಹೋಗಿದ್ದಾನೆ
ಅವರು ಈಗ ಊರಿಗೆ
ಬಂದಿದ್ದಾರೆ
ಹೇಗೆ ಅಂತ ಕೇಳಿದಾಗ
ನಾನು ನನ್ನ ಹೆಂಡತಿ
ಇಬ್ಬರು
ಸದಾನಂದನಿಗೆ
ಸಂಜಯನು
ನಮ್ಮ ಮಗಳಿಗೆ
ಇನ್ನೂ
ಕರೆದುಕೊಂಡು
ಬಂದಿರುವುದಿಲ್ಲ
ಅಂತ ತಿಳಿಸಿದೆವು. ದಿನಾಂಕ 06/01/2017 ರಂದು ರಾತ್ರಿ
8.00 ಗಂಟೆ ಸುಮಾರಿಗೆ
ನಮ್ಮ ಮಗಳು ಒಬ್ಬಳೇ
ನಮ್ಮ ಮನೆಗೆ
ಬಂದಿರುತ್ತಾಳೆ
ಆಗ ನಾನು ಮತ್ತು
ನನ್ನ ಹೆಂಡತಿ
ಇಬ್ಬರು
ನಮ್ಮ ಮಗಳನ್ನು
ವಿಚಾರಿಸಿದಾಗ
ಅವಳು ತಿಳಿಸಿದ್ದೇನೆಂದರೆ ದಿನಾಂಕ 05/01/2017 ರಂದು ಬೆಳಗಿನ
ಜಾವ
03.30 ಗಂಟೆ ಸುಮಾರಿಗೆ
ನಾನು ಘತ್ತರಗಾ
ಗ್ರಾಮದ
ಮಲ್ಲು
ಸಾಹುಕಾರ
ಅಮ್ಮಣಿ
ರವರ ಹೊಲದಲ್ಲಿರುವ ಜೋಪಡಿಯಲ್ಲಿ ಮಲಗಿಕೊಂಡಿದ್ದಾಗ ಸಂಜಯ ಚವ್ಹಾಣ ಬಂದು ನಾನು ಕಬ್ಬು ಕಟಾವು ಮಾಡುವ ಟೋಲಿಯ ಮಕಾದಮ್ ಇದ್ದು, ನನ್ನ ಹತ್ತಿರ ಸಾಕಷ್ಟು ಹಣ ಇದೆ ನಾನು ನಿನ್ನೊಂದಿಗೆ
ಮದುವೆ
ಮಾಡಿಕೊಳ್ಳುತ್ತೇನೆ ಅಂತ ನನಗೆ ಪುಸಲಾಯಿಸಿದನು. ಆಗ ನಾನು ಸದರಿ ಸಂಜಯನಿಗೆ
ನಿನಗೆ
ಈಗಾಗಲೇ
ಮದುವೆಯಾಗಿ
ಹೆಂಡತಿ
ಮಕ್ಕಳಿದ್ದಾರೆ
ನಾನು ನಿನ್ನೊಂದಿಗೆ
ಮದುವೆ
ಮಾಡಿಕೊಳ್ಳುವದಿಲ್ಲ ಅಂತ ತಿಳಿಸಿದೆನು ಆದರೂ ಕೂಡ ಅವನು ನನಗೆ ಪುಸಲಾಯಿಸಿ
ಮತ್ತು
ಒತ್ತಾಯ
ಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯವೆಸಗಿರುತ್ತಾನೆ ಮತ್ತು ಈ ವಿಷಯವನ್ನು ನಿಮ್ಮ ಸೋದರ ಅತ್ತೆ ಗಾಗಲಿ
ಮತ್ತು
ಅವಳ ಗಂಡ ಗಾಗಲಿ
ಹಾಗು ಬೇರೆಯಾರಿಗಾದರು
ಆಗಲಿ ಈ ವಿಷಯವನ್ನು
ಅವರಿಗೆ
ತಿಳಿಸಿದರೆ
ನಾನು ನಿನಗೆ
ಕೆಲಸ ಬಿಡಿಸಿ
ಊರಿಗೆ
ಕಳುಯಿಸುತ್ತೇನೆ
ಅಂತಾ ಹೇಳಿದ್ದರಿಂದ
ನಾನು ಈ ವಿಷಯವನ್ನು
ಯಾರಿಗು
ತಿಳಿಸಿರುವುದಿಲ್ಲ ದಿನಾಂಕ 05/01/2017 ರಂದು ಮದ್ಯಾಹ್ನದಲ್ಲಿ
ನನಗೆ ಹೋಟ್ಟೆ
ನೋವು ಪ್ರಾರಂಭವಾಗಿದ್ದರಿಂದ ಆಗ ನಾನು ಹೊಟ್ಟೆ ನೋವು ಆಗುತ್ತಿರುವ ಬಗ್ಗೆ ನಮ್ಮ ಸೋದರ ಅತ್ತೆ
ಜನಾಬಾಯಿ
ಮತ್ತು
ಅವಳ ಗಂಡ ರೋಹಿದಾಸ
ರವರಿಗೆ
ತಿಳಿಸಿರುತ್ತೇನೆ ಅವರು ಸಂಜಯ ಚವ್ಹಾಣನಿಗೆ ನನಗೆ ಹೊಟ್ಟೆ
ನೋವು ಆಗುತ್ತಿರುವ
ಬಗ್ಗೆ
ತಿಳಿಸಿದ್ದರಿಂದ
ಅವನು ನನಗೆ ಅದೇ ದಿವಸ ಸಾಯಂಕಾಲ
ಘತ್ತರಗಾದಿಂದ
ಕರೆದುಕೊಂಡು
ಹೊರಟು
ನಮ್ಮೂರಿಗೆ
ಕರೆದುಕೊಂಡು
ಹೋಗದೆ
ಬೇರೆ ಯಾವುದೋ
ಒಂದು ಪಟ್ಟಣಕ್ಕೆ
ಅಪಹರಿಸಿಕೊಂಡು
ಹೋಗಿ ಅಲ್ಲಿಯೂ
ನನಗೆ ಒಂದು ನಿರ್ಜನ
ಪ್ರದೇಶದಲ್ಲಿ ಒತ್ತಾಯ ಪೂರ್ವಕವಾಗಿ
ಮತ್ತೆ
ಸಂಭೋಗ
ಮಾಡಿರುತ್ತಾನೆ
ನಾನು ಕಬ್ಬು
ಕಟಾವು
ಕೆಲಸಕ್ಕೆ
ಬಂದಿರುವ
ಸ್ಥಳ ಹೊಸದಾಗಿ
ಇದ್ದುದ್ದರಿಂದ
ನನಗೆ ಊರು ಮತ್ತು
ಪಟ್ಟಣಗಳ
ಹೆಸರು
ಗೊತ್ತಿರುವುದಿಲ್ಲ ಹಾಗು ನನಗೆ ಗುರಿತಿಸಲು ಆಗುವುದಿಲ್ಲ ಸದರಿ ಸಂಜಯನು
ಈ ದಿವಸ ಸಾಯಂಕಾಲ
7.00 ಗಂಟೆ ಸುಮಾರಿಗೆ
ನಮ್ಮ ತಾಂಡಾಕ್ಕೆ
ಬರುವ ಕ್ರಾಸ
ರೋಡಿನ
ಹತ್ತಿರ
ನನಗೆ ಬಿಟ್ಟು
ನಿನು ನಿಮ್ಮ
ಮನೆಗೆ
ಹೋಗು ನಾನು ನಾಳೆ ನಿಮ್ಮ
ಮನೆಗೆ
ಬರುತ್ತೇನೆ
ಅಂತ ನನಗೆ ಬಿಟ್ಟು
ಹೋಗಿರುತ್ತಾನೆ
ನಾನು ಒಬ್ಬಳೆ
ನಡೆದುಕೊಂಡು
ಮನೆಗೆ
ಬಂದಿರುತ್ತೇನೆ
ಅಂತ ತಿಳಿಸಿದಳು. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ರೂಪಸಿಂಗ್ ತಂದೆ ವಾಚು ಚವ್ಹಾಣ ಸಾ||ನರೋಣಾ ಕುಶಪ್ಪನ ತಾಂಡ
ಇವರ ತಮ್ಮನಾದ ಸುಭಾಷ ಈತನ ಮನೆಯ ಪಕ್ಕದಲ್ಲಿಯೇ
ನಮ್ಮ ತಾಂಡಾದ ಸಂಜು ತಂದೆ ಕೃಷ್ಣಾ ಚವ್ಹಾಣ ಇವರ ಮನೆ ಇರುತ್ತದೆ,
ಸದರಿ ಸಂಜು ಈತನ
ಮನೆಯವರು ಭಾಂಡೆ ತೊಳೆದ ನೀರು ಮತ್ತು ಮುಸರಿಯನ್ನು ನಮ್ಮ ತಮ್ಮನ ಮನೆಯ ಮುಂದೆ
ಚೆಲ್ಲುತ್ತಿದ್ದರಿಂದ ಸದರಿ ಸ್ಥಳದಲ್ಲಿ ನೀರು ನಿಂತು ಹೊಲಸಾಗಿ ಸೊಳ್ಳೆಗಳಾಗುತ್ತವೆ ಎಂದು ನನ್ನ
ತಮ್ಮನು ಆಗಾಗ ಸಂಜು ಮತ್ತು ಆತನ ಮನೆಯವರಿಗೆ ಹೇಳಿದ್ದು ಆದರು ಸಹ ಅವರು ಸದರಿಯವರು ನೀರು
ಚೆಲ್ಲುವುದು ಬಿಟ್ಟಿರುವುದಿಲ್ಲ ಅಲ್ಲದೆ ನಾನು ಸಹ ನೀರು ಚೆಲ್ಲಬೇಡಿ ಅಂತ ಹೇಳಿದ್ದು ನನ್ನ ಮಾತು
ಕೂಡಾ ಕೇಳಿರುವುದಿಲ್ಲ. ಈ ವಿಷಯವಾಗಿ ಆಗಾಗ ಸಂಜು ಮತ್ತು ಅವರ ಕುಟುಂಬದವರು ನನ್ನ ತಮ್ಮನೊಂದಿಗೆ
ತಕರಾರು ಮಾಡುತ್ತಾ ಬಂದಿದ್ದು ದಿನಾಂಕ: 09/01/2017 ರಂದು ಮುಂಜಾನೆ ಸಂಜು
ಈತನ ಹೆಂಡತಿಯು ಮತ್ತೆ ನನ್ನ ತಮ್ಮನಾದ ಸುಭಾಷನ ಮನೆಯ ಮುಂದೆ ಮುಸರಿ ನೀರು ಚೆಲ್ಲಿದರಿಂದ ನನ್ನ
ತಮ್ಮ ಹಾಗೂ ಸಂಜು ಮತ್ತು ಸಂಜುನ ಕುಟುಂಬದವರ ಮದ್ಯ ಬಾಯಿ ತಕರಾರು ಆಗಿರುತ್ತದೆ,
ಈ ವಿಷಯವಾಗಿ ನಮ್ಮ
ತಾಂಡಾದ ನಾಯಕರಾದ ಬಾಬು ತಂದೆ ಧೇನು ರಾಠೋಡ ಇವರು ಇಂದು ದಿನಾಂಕ: 10/01/2017 ರಂದು ಮುಂಜಾನೆ ನಮ್ಮ
ತಾಂಡಾದಲ್ಲಿರುವ ಸೇವಾಲಾಲ ದೇವಸ್ಥಾನದಲ್ಲಿ ನಮಗೆ ಹಾಗೂ ಸಂಜು ಮತ್ತು ಅವರ ಕುಟುಂಬದವರಿಗೆ
ಪಂಚಾಯತಿ ಕರೆದಿದ್ದು ಅದರಂತೆ ಮುಂಜಾನೆ 09:00 ಗಂಟೆ ಸುಮಾರಿಗೆ ನಾನು
ಮತ್ತು ನನ್ನ ತಮ್ಮಂದಿರಾದ ಸುಭಾಷ. ರವಿ ಹಾಗೂ ರವಿಯ ಹೆಂಡತಿಯಾದ ಅಶ್ವಿನಿ ಮತ್ತು ಪ್ರಕಾಶನ
ಹೆಂಡತಿಯಾದ ಇಂದುಬಾಯಿ ರವರೆಲ್ಲರು ಕೂಡಿಕೊಂಡು ಸೇವಾಲಾಲ ದೇವಸ್ಥಾನದ ಹತ್ತಿರ ಹೋದಾಗ ಅಲ್ಲಿ
ನಮ್ಮ ತಾಂಡಾದ ಸಂಜು ತಂದೆ ಕೃಷ್ಣಾ ಚವ್ಹಾಣ, ರಾಮು ತಂದೆ ಕೃಷ್ಣಾ
ಚವ್ಹಾಣ, ಕಾಂತು
ತಂದೆ ಕೃಷ್ಣಾ ಚವ್ಹಾಣ, ಮಾರುತಿ ತಂದೆ ಕೃಷ್ಣಾ ಚವ್ಹಾಣ ಮತ್ತು ಜೈನಾಬಾಯಿ ಗಂಡ
ರಾಮು ಚವ್ಹಾಣ ಇವರುಗಳೆಲ್ಲರು ಕೂಡಿಕೊಂಡು ಸೇವಲಾಲ ದೇವಸ್ಥಾನದ ಹತ್ತಿರ ಬಂದಿದ್ದು ಅಲ್ಲಿ
ನಾಯಕರಾದ ಬಾಬು ಇವರು ನಿನ್ನೆ ಮುಂಜಾನೆ ನಡೆದ ತಕರಾರಿನ ಬಗ್ಗೆ ನನಗೆ ಮತ್ತು ನನ್ನ ತಮ್ಮ
ಸುಭಾಷನಿಗೆ ವಿಚಾರಿಸುತ್ತಿರುವಾಗ ನಾನು ಮತ್ತು ನನ್ನ ತಮ್ಮ ಕೂಡಿ ಸದರಿ ಪಂಚಾಯತಿಯನ್ನು ಇನ್ನೂ 4 ದಿವಸಗಳ ನಂತರ ಕರೆಯಿರಿ
ಎಂದು ನಾಯಕರಿಗೆ ಹೇಳುತ್ತಿರುವಾಗ ಸಂಜು ಈತನು ಏ
ಸೂಳೇ ಮಕ್ಕಳೇ ಇನ್ನೂ 4 ದಿವಸ ಯಾಕೆ ಬೇಕೊ ನಿಮಗೆ ಏನೇ ಇದ್ರು ಇವತ್ತೆ ಪಂಚಾಯತಿ
ಆಗಬೇಕು ಎಂದು ನನಗೆ ಹಾಗೂ ನನ್ನ ತಮ್ಮ ಸುಭಾಷನಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು ಅದಕ್ಕೆ
ನಾಯಕರಾದ ಬಾಬು ಹಾಗೂ ಪಂಚಾಯತಿ ಹೇಳಲು ಬಂದಿದ್ದ ಗೋಪಾಲ ತಂದೆ ಮುನ್ನಾ ರಾಠೋಡ ಇವರುಗಳು ಪಂಚಾಯತಿ
ಮಾಡುವಾಗ ಈ ರೀತಿ ಬೈಯುವುದು ಸರಿ ಅಲ್ಲವೆಂದು ಹೇಳುತ್ತಿದ್ದರು ಅವರ ಮಾತಿಗೆ ಬೆಲೆಕೊಡದೆ ಸಂಜು,
ರಾಮು,
ಕಾಂತು,
ಮಾರುತಿ ಮತ್ತು
ಜೈನಾಬಾಯಿ ಈ 5 ಜನ ಕೂಡಿಕೊಂಡು ಬಂದು ನನಗೆ ಹಾಗೂ ನನ್ನ ತಮ್ಮನಿಗೆ
ಮಕ್ಕಳ್ಯಾ ನಿಮದು ಬಾಳ ನಡದದ ಎಂದು ಜೀರಾಡುತ್ತಾ ಸಂಜು ಈತನು ಅಲ್ಲೆ ಬಿದ್ದಿರುವ ಕಲ್ಲನ್ನು
ತೆಗೆದುಕೊಂಡು ನನ್ನ ಎಡಗೈ ಮುಂಗೈಗೆ ಹೊಡೆದಿದ್ದರಿಂದ ರಕ್ತಗಾಯ ವಾಗಿರುತ್ತದೆ,
ಆಗ ಈ ಜಗಳ ಬಿಡಿಸಲು ಬಂದ
ನನ್ನ ತಮ್ಮನಾದ ಸುಭಾಷ ಮತ್ತು ರವಿ ಈವರಿಗೆ ರಾಮು ಮತ್ತು ಕಾಂತು ಇವರು ರವಿಗೆ ಬಡಿಗೆಯಿಂದ ತಲೆಯ
ಹಿಂಬಾಗಕ್ಕೆ ಸುಭಾಷನಿಗೆ ಕಲ್ಲಿನಿಂದ ಮೊಳಕಾಲಿಗೆ ಹೊಡೆದು ಗಾಯ ಪಡಿಸಿರುತ್ತಾರೆ,
ಅಷ್ಟರಲ್ಲಿಯೇ ಅಲ್ಲೆ
ಇದ್ದ ನನ್ನ ತಮ್ಮಂದಿರ ಹೆಂಡತಿಯರಾದ ಇಂದುಬಾಯಿ ಮತ್ತು ಅಶ್ವಿನಿ ಇವರು ಜಗಳ ಬಿಡಿಸುತ್ತಿರುವಾಗ
ಮಾರುತಿ ಈತನು ಕಲ್ಲಿನಿಂದ ಇಂದುಬಾಯಿ ಎಡಗೈ ಹಸ್ತಕ್ಕೆ ಹೊಡೆದಿದ್ದರಿಂದ ಎಡಗೈ ಮದ್ಯಬೆರಳಿಗೆ
ಮತ್ತು ಅಂಗೈಗೆ ರಕ್ತಗಾಯವಾಗಿರುತ್ತದೆ, ಜೈನಾಬಾಯಿ ಇವಳು ಅಶ್ವಿನಿಗೆ ನೆಲಕ್ಕೆ ಕೆಡವಿ
ಕಾಲಿನಿಂದ ತೊಡೆಗೆ ಹಾಗೂ ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿರುತ್ತಾಳೆ,
ನಂತರ ಈ 5 ಜನ ಸೇರಿ ನನಗೆ ಮತ್ತು
ನನ್ನ ತಮ್ಮನಿಗೆ ಮಕ್ಕಳೆ ಇವತ್ತು ನೀವು ಉಳಿದಿದ್ದಿರಿ ಒಂದಲ್ಲಾ ಒಂದು ದಿವಸ ನಿಮಗೆ ಹೊಡೆದು
ಖಲಾಸ ಮಾಡುತ್ತೇವೆ ಎಂದು ಜೀವದ ಬೇದರಿಕೆ ಹಾಕುತ್ತಾ ಹೋಗಿರುತ್ತಾರೆ,
ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ರಾಮು ತಂದೆ ಕೃಷ್ಣಾ ಚವ್ಹಾಣ ಸಾ||ನರೋಣಾ ಕುಶಪ್ಪನ ತಾಂಡ
ಇವರ ತಮ್ಮನಾದ ಸಂಜುಕುಮಾರ ಈತನ ಮನೆಯ ಪಕ್ಕದಲ್ಲಿಯೇ ನಮ್ಮ ತಾಂಡಾದ ಸುಭಾಷ ತಂದೆ ವಾಚು ಚವ್ಹಾಣ
ಈತನ ಮನೆ ಇರುತ್ತದೆ. ನಮ್ಮ ತಮ್ಮನ ಹೆಂಡತಿಯಾದ
ಸುರೇಖಾಳು ದಿನಾಲು ನಮ್ಮ ಮನೆಯ ಮುಂದೆ ಇರುವ ಜಾಗದಲ್ಲಿ ಬಾಂಡೆಗಳನ್ನು ತೊಳೆಯುತ್ತಾ
ಬಂದಿದ್ದು ಅದಕ್ಕೆ ಪಕ್ಕದ ಮನೆಯವರಾದ ಸುಭಾಷ ಹಾಗೂ ಅವನ ಹೆಂಡತಿ ಬಾಂಡೆ ತೊಳೆದ ನೀರು
ಹರಿದುಕೊಂಡು ನಮ್ಮ ಮನೆಯ ಮುಂದೆ ಬರುತ್ತಿವೆ ಆದ್ದರಿಂದ ಬಾಂಡೆ ತೊಳೆಯಬೇಡರಿ ಎಂದು ಹೇಳಿದ್ದು.
ಅದಕ್ಕೆ ನಾನು ಸಹ ನನ್ನ ಹೆಂಡತಿಗೆ ಬಾಂಡೆಗಳನ್ನು ಅವರ ಮನೆಯ ಪಕ್ಕದಲ್ಲಿ ತೊಳೆಯಬೇಡವೆಂದು
ಹೇಳಿದ್ದು, ಅದಕ್ಕೆ ನನ್ನ ತಮ್ಮನ ಹೆಂಡತಿಯಾದ ಸುರೇಖಳು ಬಾಂಡೆಗಳನ್ನು
ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ತೊಳೆಯುತ್ತಿದ್ದಾಳೆ ಆದರೆ, ಸುಭಾಷ ಈತನು ಅದಕ್ಕು
ವಿರೋಧ ವ್ಯಕ್ತ ಪಡಿಸಿ ನನ್ನ ತಮ್ಮ ಹಾಗೂ ಅವನ ಹೆಂಡತಿಯೊಂದಿಗೆ ಬಾಯಿ ತಕಾರರು ಮಾಡುತ್ತಾ
ಬಂದಿರುತ್ತಾನೆ. ದಿನಾಂಕ: 09/01/2017 ರಂದು ಮುಂಜಾನೆ ನನ್ನ ತಮ್ಮನ ಹೆಂಡತಿಯು ಅವರ
ಮನೆಯ ಮುಂದಿನ ಅಂಗಳದ ಜಾಗದಲ್ಲಿ ಬಾಂಡೆ ತೊಳೆಯುವಾಗ ಸುಭಾಷ ಈತನು ಸುರೇಖಾಳೊಂದಿಗೆ ಬಾಯಿ ತಕರಾರು
ಮಾಡಿದ್ದರಿಂದ ಈ ವಿಷಯವಾಗಿ ನಮ್ಮ ತಾಂಡಾದ ಕಾರಭಾರಿಯಾದ ಗಂಗಾರಾಮ ತಂದೆ ಚಂದು ಚವ್ಹಾಣ ಇವರು
ಇಂದು ನಮ್ಮ ತಾಂಡಾದಲ್ಲಿರುವ ಸೇವಾಲಾಲ ದೇವಸ್ಥಾನದಲ್ಲಿ ಪಂಚಾಯಿತಿ ಇಟ್ಟಿದ್ದರಿಂದ ಇಂದು
ದಿನಾಂಕ: 10/01/2017 ರಂದು ಮುಂಜಾನೆ 09-00 ಗಂಟೆ ಸುಮಾರಿಗೆ ನಾನು
ಮತ್ತು ನನ್ನ ಹೆಂಡತಿಯಾದ ಜೈನಾಬಾಯಿ ಹಾಗೂ ನನ್ನ ಅಣ್ಣನಾದ ಮಾರುತಿ ತಮ್ಮಂದಿರಾದ ಸಂಜು,
ಕಾಂತು ಹಾಗೂ ತಮ್ಮಂದಿರರ
ಹೆಂಡತಿಯರಾದ ಶಿಲ್ಪ ಹಾಗೂ ಸುರೇಖಾ ಅವರೆಲ್ಲರೂ ಕೂಡಿಕೊಂಡು ಸೇವಾಲಾಲ ದೇವಸ್ಥಾನದ ಹತ್ತಿರ ಹೋದಾಗ
ಅಲ್ಲಿ ನಮ್ಮ ತಾಂಡಾದ ಕಾರಭಾರಿಯಾದ ಗಂಗಾರಾಮ ಇವರೊಂದಿಗೆ ಸುಭಾಷ ತಂದೆ ವಾಚು ಚವ್ಹಾಣ ಹಾಗೂ
ರೂಪಸಿಂಗ್ ತಂದೆ ವಾಚು ಚವ್ಹಾಣ ಇವರುಗಳು ಸದರಿ ಪಂಚಾಯಿತಿಯನ್ನು ಇನ್ನು ನಾಲ್ಕು ದಿವಸಗಳ ನಂತರ
ಇಟ್ಟಿಕೊಳ್ಳೊವ ಬಗ್ಗೆ ಚರ್ಚಿಸುತ್ತಿರುವಾಗ ನಾನು ಮತ್ತು ನನ್ನ ತಮ್ಮ ಸಂಜು ಸದರಿ
ಪಂಚಾಯಿತಿಯನ್ನು ಇದೆ ದಿವಸ ಮಾಡಿ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಕಾರಭಾರಿ ಇವರಿಗೆ
ಹೇಳುತ್ತಿರುವಾಗ ರೂಪಸಿಂಗ ಮತ್ತು ಸುಭಾಷ ಇವರುಗಳು ಏ ಬೋಸಡಿ ಮಕ್ಕಳೆ ನಾವು ಈಗ ಸದ್ಯ
ಪಂಚಾಯಿತಿಗೆ ಸೇರುವ ಸ್ಥಿತಿಯಲ್ಲಿರುವುದಿಲ್ಲ ಇನ್ನು ನಾಲ್ಕೈದು ದಿವಸ ಬಿಟ್ಟು ಪಂಚಾಯಿತಿ
ಮಾಡಿಕೊಳ್ಳೋಣ ಎಂದು ಏರು ಧ್ವನಿಯಲ್ಲಿ ಚಿರಾಡುತ್ತಾ ನನಗೆ ಮತ್ತು ನನ್ನ ತಮ್ಮ ಸಂಜುಗೆ ಅವಾಚ್ಯ ಶಬ್ದಗಳಿಂದ
ಬೈಯುತ್ತಿದ್ದನು ಅಸ್ಟರಲ್ಲಿಯೇ ರೂಪಸಿಂಗನ ತಮ್ಮಂದಿರಾದ ಪ್ರಕಾಶ ತಂದೆ ವಾಚು ಚವ್ಹಾಣ ಹಾಗೂ ರವಿ
ತಂದೆ ವಾಚು ಚವ್ಹಾಣ ಇವರುಗಳು ಅಲ್ಲೆ ಬಿದ್ದಿರುವ ಕಲ್ಲನ್ನು ತಗೆದುಕೊಂಡು ನನಗೆ ಮತ್ತು ನಮ್ಮ
ತಮ್ಮ ಸಂಜುಗೆ ಹೊಡೆಯಲು ಬಂದಾಗ ನನ್ನ ತಮ್ಮನಾದ ಕಾಂತು ಈತನು ಜಗಳ ಬಿಡಿಸಲು ಬಂದಿದ್ದು ಪ್ರಕಾಶನ
ಕಲ್ಲಿನ ಏಟು ಕಾಂತುನ ಹಣೆಯ ಬಲಗಡೆಗೆ ಬಿದ್ದದ್ದರಿಂದ ರಕ್ತಗಾಯವಾಗಿದ್ದು ರವಿ ಈತನು ಬಡಿಗೆಯಿಂದ
ಕಾಂತುನ ಬಲಗಡೆ ಭುಜಕ್ಕೆ ಹೊಡೆಯುತ್ತಿರುವಾಗ ಅಲ್ಲೆ ಇದ್ದ ಶಿಲ್ಪ ಮತ್ತು ಸುರೇಖಾ ಇವರುಗಳು ಜಗಳ
ಬಿಡಿಸಲು ಬಂದಾಗ ಸುಭಾಷ ಈತನು ಕೈ ಮುಷ್ಠಿಮಾಡಿ ಶಿಲ್ಪಾಳ ಹೊಟ್ಟೆಯ ಮೇಲೆ ಗುದ್ದಿದ್ದು ಅವಳು ಗರ್ಭಿಣಿಯಾಗಿದ್ದರಿಂದ
ನೆರಳಾಡುತ್ತಾ ಕೆಳಗೆ ಬಿದ್ದಿರುವಾಗ ಇಂದುಬಾಯಿ ಇವಳು ಕೈಯಿಂದ ಅವಳ ಕಪಾಳ ಮೇಲೆ ಹೊಡೆದಿರುತ್ತಾಳೆ
ಮತ್ತು ರೂಪಸಿಂಗ ಈತನು ಸುರೇಖಾಳಿಗೆ ಕೈಯಿಂದ ಬೆನ್ನುಮೇಲೆ ಹೊಡೆದು ನೆಲಕ್ಕೆ ನುಕಿಸಿದ್ದರಿಂದ
ಅವಳ ಮೂಗಿಗೆ ತರಚಿದಗಾಯ ವಾಗಿರುತ್ತದೆ. ನಂತರ ರೂಪಸಿಂಗ ಈತನು ಕಲ್ಲಿನಿಂದ ನನ್ನ ತಲೆಯ ಬಲಗಡೆಗೆ
ಹೊಡೆದಿದ್ದರಿಂದ ರಕ್ತಗಾಯ ವಾಗಿರುತ್ತದೆ. ನಂತರ 5 ಜನ ಸೇರಿ ನಮ್ಮ ತಮ್ಮ
ಸಂಜುಗೆ ಇನ್ನುಮುಂದೆ ನಿಮ್ಮ ಮನೆಯ ಬಾಂಡೆಗಳು ತೊಳೆದ ನೀರು ನಮ್ಮ ಮನೆಯ ಮುಂದೆ ಹರಿದು ಬಂದರೆ
ನಿಮಗೆ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕರಿತ್ತಾರೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಗುಂಡು ತಂದೆ ವಿಠಲ್ ಚವ್ಹಾಣ ಸಾ:ಮಡಕಿತಾಂಡ ರವರ ಮಗನಾದ ಪವಿತ್ ಇತನು
ಮಹಾಗಾಂವ ಕ್ರಾಸನ ಪಾಪುಲರ್ ಶಾಲೆಯಲ್ಲಿ ಎಲ್ ಕೆ ಜಿ ಓದುತ್ತಿದ್ದು ದಿನಾಲು ಶಾಲೆಯ ವಾಹನದಲ್ಲಿ
ಹೋಗಿ ಬರುತ್ತಾನೆ. ದಿನಾಂಕ: 09/01/2017 ರಂದು ಮದ್ಯಾಹ್ನ ನಾನು ನನ್ನ
ವೈಯುಕ್ತಿಕ ಕೆಲಸಕ್ಕಾಗಿ ಲಾಡಮುಗಳಿ ಗ್ರಾಮಕ್ಕೆ ಹೋದಾಗ ಸಾಯಂಕಾಲ 6-15 ಗಂಟೆ ಸುಮಾರಿಗೆ ನಮ್ಮ ತಾಂಡದಿಂದ ನನ್ನ ಹೆಂಡತಿಯಾದ ಸಕುನಾ ಇವಳು
ನನಗೆ ಫೋನಮಾಡಿ ತಿಳಿಸಿದ್ದು ಏನಂದರೆ, ನನ್ನ ಮಗನಾದ ಪವಿತ್ ಈತನು
ಸಾಯಂಕಾಲ 6-00 ಗಂಟೆ ಸುಮಾರಿಗೆ ನಮ್ಮ
ಮನೆಯಿಂದ ನನ್ನ ತಂದೆಯಾದ ವಿಠಲ್ ಚವ್ಹಾಣ ಇವರ ಮನೆಗೆ ಓದಲು ನಮ್ಮ ತಾಂಡದಲ್ಲಿ ಹಾದು ಹೋದ
ನಾಗಲಿಂಗೇಶ್ವರ ದೇವಸ್ಥಾನದ ಹತ್ತಿರ ಇರುವ ಲಾಡಮುಗಳಿ - ಮಹಾಗಾಂವ ಕ್ರಾಸ್ ರೋಡ್ ದಾಟುತ್ತಿರುವಾಗ
ಕಲಬುರಗಿ ಕಡೆಯಿಂದ ಮೋಟಾರ್ ಸೈಕಲ್ ನಂ ಕೆಎ 32 ಎಕ್ಸ 3104 ನೇದ್ದರ ಸವಾರನು ಅತೀವೇಗ ಮತ್ತು
ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿಹೊಡೆದಿದ್ದು ಇದರಿಂದ ಪವಿತನ
ಎಡಗಾಲಿನ ತೊಡೆಗೆ ಭಾರಿ ರಕ್ತಗಾಯವಾಗಿದ್ದು ಮೂಳೆ ಮುರಿದಂತೆ ಕಾಣುತ್ತಿದೆ, ಮೋಟಾರ್ ಸೈಕಲ್ ಚಾಲಕನು ಡಿಕ್ಕಿ ಪಡಿಸಿ ಮೋಟಾರ್ ಸೈಕಲ್ ಅಲ್ಲೆ
ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದು ನಾನು ಗಾಭರಿಗೊಂಡು ತಕ್ಷಣವೆ ಲಾಡಮುಗಳಿಯಿಂದ
ನಮ್ಮ ತಾಂಡಾಕ್ಕೆ ಬಂದು ನೋಡಲಾಗಿ ನಮ್ಮ ತಾಂಡಾದ ನಾಗದೇವರ ದೇವಸ್ಥಾನದ ಹತ್ತಿರ ರಸ್ತೆಯ
ಬದಿಯಲ್ಲಿ ನನ್ನ ಹೆಂಡತಿಯು ನನ್ನ ಮಗನನ್ನು ಎತ್ತಿಕೊಂಡು ಕುಳಿತ್ತಿದ್ದು ನನ್ನ ನಮಗನ ಎಡಕಾಲಿನ
ತೋಡೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ತೋಡೆಯ ಮೂಳೆ ಮುರಿದಂತೆ ಆಗಿದ್ದು, ನಂತರ ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಕಲಬುರಗಿಯ ಕಾಮರೆಡ್ಡಿ
ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ರಾಜಕುಮಾರಯ್ಯ ತಂದೆ ಸಂಗಯ್ಯ
ಮಠಪತಿ ಸಾ||ಶಕ್ತಿನಗರ, ರಾಯಚೂರ ರವರ ಮಗನಾದ ಆದಿತ್ಯ ಆರ್.ಎಂ ಇತನು 8ನೇ ತರಗತಿ ಸಿ.ಬಿ.ಎಸ್.ಸಿ ವಸತಿ ನಿಲಯ ಅಪ್ಪಾ
ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಈತನು ಅಪ್ಪಾ ವಸತಿ ನಿಲಯ ಶರಣಬಸಪ್ಪ ಕೆರೆ
ಎದುರುಗಡೆಯಿಂದ ದಿನಾಂಕ : 08/01/2017 ರಂದು ಬೆಳಗ್ಗೆ 10:30 ಗಂಟೆಗೆ ರವಿವಾರದ ಸಮವಸ್ತ್ರಗಳನ್ನು
ಧರಿಸಿಕೊಂಡು ಶಾಲೆಗೆ ಹೋಗುತ್ತೆನೆ ಎಂದು ಹೋದವನು ಮರಳಿ ವಸತಿ ನಿಲಯಕ್ಕೆ ಬಂದಿರುವುದಿಲ್ಲ, ಹಾಸ್ಟೆಲ್ ವಾರ್ಡನರಾದ
ಉದಯಕುಮಾರರವರು ನಮಗೆ ರಾತ್ರಿ 8:00 ಗಂಟೆಗೆ ದೂರವಾಣಿ ಮುಖಾಂತರ ತಿಳಿಸಿದಾಗ ಈ ವಿಷಯ ನಮಗೆ
ತಿಳಿದು ಬಂದಿರುತ್ತದೆ. ನಂತರ ನಾವುಗಳು ನಮ್ಮ ಬಿಗರಲ್ಲಿ ಹಾಗು ನಮ್ಮ ಗೆಳೆಯರಲ್ಲಿ ಹಾಗು ನಮ್ಮ
ಮಗನ ಗೆಳೆಯರಲ್ಲಿ ವಿಚಾರಿಸಲಾಗಿ ನನ್ನ ಮಗನ ಪತ್ತೆ ಹತ್ತಲಿಲ್ಲ ಅವನು ಕಾಣೆಯಾಗಿರುತ್ತಾನೆ ಕಾಣೆಯಾಗಿರುವ
ನನ್ನ ಮಗ ಆದಿತ್ಯ ಆರ್.ಎಂ ವಯ||14 ವರ್ಷ ಅವನು ವಸತಿ ನಿಲಯದಿಂದ ಹೋಗುವಾಗ ಬಿಳಿ ಪ್ಯಾಂಟ ಹಾಗು ಅಂಗಿ ಹಾಕಿಕೊಂಡಿದ್ದು, ಅವನು ಕನ್ನಡ ಮತ್ತು
ಇಂಗ್ಲಿಷ್ ಭಾಷೆ ಬಲ್ಲವನಾಗಿದ್ದು ಅವನ ಬಣ್ಣ ಬಿಳಿ ಬಣ್ಣ, ಎತ್ತರ ಅಂದಾಜು-4'5 ಫೀಟ್ ಇರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment