ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಶರಣ ತಂದೆ ಕೆಂಚಪ್ಪಾ
ಹದಗಲ್ ಸಾ:ಕನಕ ನಗರ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ : 12-01-2017 ರಂದು ರಾತ್ರಿ ತನ್ನ ಗೆಳೆಯ ಪ್ರಭು ಇಬ್ಬರೂ ಮಾತನಾಡತ್ತು ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆ ಸಂಗಮೇಶ್ವರ
ಕಾಲೋನಿಯ ದತ್ತ ಮಂದಿರ ಮುಂದೆ ಮಾತನಾಡುತ್ತಾ ನಿಂತಾಗ
ಅಲ್ಲಿ ಮುತ್ತುಜಅಲಿ, ಶಾಂಡಿ ಸಂತು, ಸಾಗರ ಎಂ.ಬಿ, ವಿಜಯ, ಇರ್ಫಾನ @ ಪೌಡರ ಇರ್ಫಾನ ಮತ್ತು ಸೋಫಿಯಾನಾ
ಇವರೆಲ್ಲರೂ ಬಂದು ಅವರಲ್ಲಿ ಮುತ್ತುಜಅಲಿ ಈತನು ಏ ಶಾಣ್ಯಾ ಸುಳ್ಯಾ ಮಗನೆ ಇಲ್ಲಿಗೆ ಏಕೆ ಬಂದಿದಿ ಭೋಸಡಿ ಮಗನೆ ಅಂತಾ
ಬೈಯುತ್ತಿರುವಾಗ ನನಗೆ ಏಕೆ ವಿನಾಕಾರಣ ಬಯ್ಯುತ್ತಿದ್ದಿರಿ ಅಂತಾ
ಕೇಳಿದ್ದಕ್ಕೆ ಮುತ್ತುಜಅಲಿ ಈತನು ಈಗ ನಿನ್ನ ಸುದ್ದಿ ಏನಿದೆ ಭೋಸಡಿ ಮಗನೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿ ಒಂದು
ಮಚ್ಚಿನಿಂದ ನನ್ನ ತಲೆಯ ಬಲಭಾಗದ ಮೇಲೆ ಹೊಡೆದು ರಕ್ತಗಾಯ
ಮಾಡಿರುತ್ತಾನೆ ಶಾಂಡಿ ಸಂತು ಈತನು ಏ ಶಾಣ್ಯಾ ಈ
ಏರಿಯಾದಲ್ಲಿ ನಿನ್ನ ಬಹಳ ಆಗಿದೆ ಅಂತಾ ಒಂದು ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಸಾಗರ ಈತನು ಒಂದು
ಕಲ್ಲಿನಿಂದ ನನ್ನ ಬಲಗೈ ಮೋಳ ಕೈ ಮೇಲೆ ಹೊಡೆದು ರಕ್ತಗಾಯ
ಮಾಡಿರುತ್ತಾನೆ ವಿಜಯ ಈತನು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ರಂಡಿ ಮಗನೆ, ಭೋಸಡಿ ಮಗನೆ ಅಂತಾ ಬೈದಿರುತ್ತಾನೆ. ಪೌಡರ ಇರ್ಫಾನ ಈತನು ಏ ರಾಂಡ ಕೆ
ಭೇಟೆಕೊ ಛೋಡನಾ ನಹಿ ಮಾರೋ ಅಂತಾ ಕಾಲಿನಿಂದ ಹೊಟ್ಟೆಯ ಮೇಲೆ
ಒದೆ ಹತ್ತಿದ್ದನು ಸೋಫಿಮೀಯ್ಯಾ ಈತನು ರಂಡಿ ಮಗನೆ ಭೋಸಡಿ ಮಗನೆ ಅಂತಾ ಕೈ ಮುಷ್ಠಿಮಾಡಿ ಎದೆಯ ಮೇಲೆ ಹೊಟ್ಟೆಯ ಮೇಲೆ ಹೊಡೆದಿರುತ್ತಾನೆ.
ಆಗ ಪ್ರಭು ಮತ್ತು ಅಮೋಘಿ ಮತ್ತು ಬೀರಲಿಂಗ ಇವರು ಜಗಳ
ಬಿಡಿಸಿರುತ್ತಾರೆ ಅವರು ಜಗಳ ಬಿಡಿಸದೆ ಇದ್ದಲ್ಲಿ ನನಗೆ ಬಹಳ ಹೊಡೆಬಡೆ ಮಾಡುತ್ತಿದ್ದರು ನನಗೆ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಕಸ್ತೂರಿಬಾಯಿ
ಗಂಡ ಧರ್ಮಣ್ಣಾ ಇವರ ಗಂಡನಾದ ಧರ್ಮಣ್ಣಾ ತಂದೆ ಫೀರಪ್ಪ @ ಈರಪ್ಪ
ಹೊಸಕುರುಬ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ನನಗೆ ಒಂದು ಗಂಡು ಮತ್ತು ಹೆಣ್ಣು ಮಗಳು
ಇರುತ್ತಾರೆ. ನನ್ನ ಗಂಡ ಧರ್ಮಣ್ಣಾ ಇವರ ಹೆಸರಿನಲ್ಲಿ ಪಟ್ಟಣ ಸಿಮಾಂತರದಲ್ಲಿ ಹೋಲ ಸರ್ವೆ ನಂ 235
ರಲ್ಲಿ 4 ಎಕರೆ ಜಮೀನು ಇದ್ದು ಈ ಜಮೀನಿನನ ಮೇಲೆ ಈಗ 4-5 ವರ್ಷಗಳ ಹಿಂದೆ ಕಡಗಂಚಿ ಗ್ರಾಮದ
ಎಸ್.ಬಿಐ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮತ್ತು ಪಟ್ಟಣ ಗ್ರಾಮದ ಸಹಕಾರಿ ಬ್ಯಾಂಕ ಸೋಸೈಟಿಯಲ್ಲಿ 60
ಸಾವಿ ರೂ ಸಾಲ ಪಡೆದುಕೊಂಡಿದ್ದು ಸದರಿ ಸಾಲವನ್ನು ತೀರಿಸಲು ಆಗದೇ ಇರುವುದರಿಂದ ಆಗಾಗ
ನನ್ನ ಗಂಡನು ಬ್ಯಾಂಕ ಸಾಲ ಮತ್ತು ಸೋಸೈಟಿ ಬ್ಯಾಂಕ ಸಾಲ ತೀರಿಸಲು ಆಗುತ್ತಿಲ್ಲಾ ಅಂತಾ ಮನಸಿನ
ಮೇಲೆ ಪರಿಣಾಮ ಮಾಡಿಕೊಂಡು ಆಗಾಗ ನಾನು ಸಾಯಿಸುತ್ತೇನೆ. ನನಗೆ ಸಾಲ ತೀರಿಸಲು ಆಗುತ್ತಿಲ್ಲಾ ಅಂತಾ
ನನ್ನ ಮುಂದೆ ಅನ್ನುತ್ತಿದ್ದನು ಈಗ 3-4 ಸಾಲ ತಿಂಗಳಿಂದ ಸರಾಯಿ ಕುಡಿಯುವ ಚಟಕ್ಕೆ
ಬಲಿಯಾಗಿದ್ದನು. ದಿನಾಂಕ:-07/01/2017 ರಂದು ಬೆಳಿಗ್ಗೆ ನಾನು
ನನ್ನ ಗಂಡ ಧರ್ಮಣ್ಣಾ ಇಬ್ಬರು ಹೋಲಕ್ಕೆ ಹೋಗಿ ಹೋಲದಲ್ಲಿ ಕೆಲಸ ಮಾಡುತ್ತಿದ್ದೇವು. ಹೋಲದಲ್ಲಿ
ಇರುವ ಬದನಿ ಗಿಡಕ್ಕೆ ಕ್ರಿಮಿನಾಶಕ ಎಣ್ಣೆ ಹೊಡೆಯುತ್ತಿದ್ದರು. ಬೆಳಿಗ್ಗೆ 11:00 ಗಂಟೆ
ಸುಮಾರಿಗೆ ನಮ್ಮ ಹೋಲದಲ್ಲಿ ನನ್ನ ಗಂಡ ಒಂದೆ ಸವನೇ ಹೊಟ್ಟೆಯಲ್ಲಿ ಕಸಿ ವಿಸಿ ಆಗುತ್ತಿದೆ ಅಂತಾ
ಅನ್ನುತ್ತಿದ್ದಾಗ ಆಗ ನನ್ನ ಗಂಡನಿಗೆ ವಿಚಾರಿಸಲು ಅವನು ಕ್ರಿಮಿನಾಶಕ ಎಣ್ಣೆ ಸೇವನೆ
ಮಾಡಿರುವುದಾಗಿ ತಿಳಿಸಿದನು ಆಗ ಗಾಬರಿಗೊಂಡು ನಾನು ಮತ್ತು ನನ್ನ ಭಾವನ ಮಗ ಸೂರ್ಯಕಾಂತ ಇಬ್ಬರು
ಒಂದು ಜೀಪಿದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು
ಸೇರಿಕೆ ಮಾಡಿರುತ್ತೇವೆ. ನನ್ನ ಗಂಡನು ದಿನಾಂಕ:-07/01/2017 ರಿಂದ ದಿನಾಂಕ:-11/01/2017
ರವರೆಗೆ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ಇಂದು ದಿನಾಂಕ:-11/01/2017
ರಂದು ರಾತ್ರಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶ್ರೀಮಂತ ತಂದೆ ಸಂಗಣ್ಣ
ಇಂಗಿನ ಸಾ: ತೊನಸನಳ್ಳಿ ಇವರ ಅಣ್ಣನಾದ ಈರಣ್ಣ ಇಂಗಿನ ಮತ್ತು ಇತರರು ಕೂಡಿ ಶಹಾಬಾದ ರಸ್ತೆಯಲ್ಲಿರುವ ಹೊಲಕ್ಕೆ ತೊಗರಿ
ರಾಶಿ ಮಾಡಲು ಹೋಗಿ ರಾಶಿ ಮಾಡಿಕೊಂಡು ಮರಳಿ ತೊನಸನಳ್ಳಿ ಕಡೆಗೆ ನಮ್ಮ ಎತ್ತಿನ ಬಂಡಿ
ತೆಗೆದುಕೊಂಡು ಬರುತ್ತಿರುವಾಗ ಶಹಾಬಾದ - ತೊನಸನಳ್ಳಿ ರಸ್ತೆಯಲ್ಲಿರುವ ನಮ್ಮೂದ ಶಿವಶರಣಪ್ಪ
ಪೊಲೀಸ ಪಾಟೀಲ ಇವರ ಹೊಲದ ಹತ್ತಿರ ರೋಡಿನಲ್ಲಿ ತೊನಸನಳ್ಳಿ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂಬರ ಕೆ.ಎ.
28 ಇ ಹೆಚ್ 6753 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಅತಿ ವೇಗ ಮತ್ತು ಅಲಕ್ಷತನದಿಂದ
ನಡೆಯಿಸಿಕೊಂಡು ಬಂದು ನಮ್ಮ ಅಣ್ಣನ ಎತ್ತಿನ ಬಂಡಿಗೆ ಡಿಕ್ಕಿ ಪಡಿಸಿದರಿಂದ ನಮ್ಮ ಎತ್ತಿನ ಬಂಡಿಗೆ
ಇದ್ದ ಒಂದು ಎತ್ತು ಗಾಯಾ ಹೊಂದಿ ಮೃತ ಪಟ್ಟಿದ್ದು ಮತ್ತು ಮೋಟಾರ ಸೈಕಲ ಚಾಲಕ ರಾಕೇಶ ಪವಾರ ಸಾ:
ಬಾಲು ನಾಯಕ ತಾಂಡ ಮುಗಳನಾಗವಿ ಇತನು ಕೂಡ ತಲೆಗೆ ಭಾರಿ ರಕ್ತಗಾಯಾವಾಗಿ ಸ್ಥಳದಲ್ಲಿಯೇ ಮೃತ
ಪಟ್ಟಿದ್ದು ಮತ್ತು ನಮ್ಮ ಅಣ್ಣನಿಗೆ ತಲೆಗೆ ಮತ್ತು ಕೈ ಕಾಲುಗಳಿಗೆ ರಕ್ತಗಾಯಾ ಮತ್ತು
ಗಾಯಾವಾಗಿರುತ್ತದೆ ಕಾರಣ ಸದರಿ ಮೋಟಾರ ಸೈಕಲ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment