ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವೆಂಕಣ್ಣಾಚಾರ್ಯ ತಂದೆ ರಾಮಚಾರ್ಯ ಜೋಶಿ ಸಾ: ಪ್ಲಾಟ ನಂ. 29 ಬಿದ್ದಾಪೂರ ಕಾಲೋನಿ ಕಲಬುರಗಿ
ಇವರ ಮಗಳಾದ ಪರಿಮಳಾ ವ:25 ವರ್ಷ ಇವಳು ದಿನಾಂಕ 27/12/16 ರಂದು ಬೆಳಿಗ್ಗೆ 10-00 ಗಂಟೆ
ಸುಮಾರಿಗೆ ತಾನು ಕೆಲಸ ಮಾಡುತ್ತಿರುವ ಡಾ: ರವೀಂದ್ರ ಪಾಟೀಲ ಆಸ್ಪತ್ರೆಯಿಂದ ಸಂಬಳ ತೆಗೆದುಕೊಂಡು
ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವಳು ವಾಪಸ್ಸು ಮನೆಗೆ ಬಂದಿರುವುದಿಲ್ಲಾ. ಕಲಬುರಗಿ
ನಗರದಲ್ಲಿ ಮತ್ತು ನಮ್ಮ ಸಂಬಂಧಿಕರ
ಮನೆಯಲ್ಲಿ ಮತ್ತು ಸ್ನೇಹಿತರಿಗೆ ಹಾಗೂ ನಮಗೆ ಗೊತ್ತಿರುವ ಎಲ್ಲಾ
ಕಡೆಗಳಲ್ಲಿ ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪರಮೇಶ್ವರ ತಂದೆ ಶ್ರೀಮಂತ ಭಾವೆ ಸಾ|| ಬೋರಬಾಯಿ ನಗರ ಕಲಬುರಗಿ ಇವರು ದಿನಾಂಕ 14-01-2017 ರಂದು ಮದ್ಯಾನ ತಮ್ಮ ಮನೆಯ ಮುಂದೆ ನಿಂತ್ತಾಗ ಹತ್ತಿ ಅಂಬ್ರಾ ಇತನು ಬಂದು ಏ ಪ್ರಮೇಶ್ವರ ನೀನು 10000 ಸಾವೀರ ರೂಪಾಯಿ ಕೊಡಬೇಕು ಅಂತಾ ಡಬ್ರಾ ಶಾಣಾ
ಹೇಳಿರುತ್ತಾನೆ ನೀನು 10000 ಸಾವೀರ ಕೊಡದೆ ಇದ್ದಲ್ಲಿ ನಿನಗೆ ಹೊಡೆ ಬಡೆ ಮಾಡಿ ಹಣ
ಪಡೆದುಕೊಳ್ಳುತ್ತೇನೆ ಅಂತಾ
ಹೇಳಿದ್ದಾಗ ನನ್ನ
ಹತ್ತಿರ ಹಣ ಇಲ್ಲಾ ನಿನಗೆ ಏಕೆ ಕೊಡಬೇಕು ನಾನು ಯಾರಿಂದ ಬಾಕಿ ತೆಗೆದುಕೊಂಡಿಲ್ಲಾ ಅಂತಾ ಹೇಳಿದ್ದಾಗ ಅವನು ನನಗೆ ಖರ್ಚಿನ ಸಲುವಾಗಿ
ಹಣ ಕೋಡಬೇಕು ಅಂತಾ ಹೇಳಿ
ಸೂಳ್ಯಾ ಮಗನೆ ಅಂತಾ
ಬೈದು ನನ್ನ ಎಡ ರೆಟ್ಟೆಯ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ ಮತ್ತು ಬೆನ್ನಿನ ಮೇಲೆ , ಎರಡು ಕಾಲುಗಳ ಮೇಲೆ ಹೋಡದು ಗುಪ್ತಗಾಯ ಮಾಡಿರುತ್ತಾನೆ ಮತ್ತು ಕೈ
ಮುಷ್ಠಿಮಾಡಿ ಬಾಯಿಯ ಮೇಲೆ ಹೊಡೆದಾಗ ಕೆಳಗಿನ ತುಟಿ ಒಡೆದು
ರಕ್ತಗಾಯವಾಗಿರುತ್ತದೆ ನನಗೆ ಹೊಡೆಯುತ್ತಿರುವಾಗ ಶರಣಬಸವ ಮತ್ತು ಡಿಶೋಜ ಇವರು ಬಿಡಿಸಿರುತ್ತಾರೆ ನನಗೆ ರಕ್ತಗಾಯ ಮತ್ತು
ಗುಪ್ತಗಾಯವಾಗಿದ್ದರಿಂದ
ಉಪಚಾರ ಕುರಿತು
ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:14/01/2017 ರಂದು ಮಧ್ಯಾನ ನಾನು ನಮ್ಮ ಮಾಲಿಕನ ಮನೆಯ ಹಿಂದೆ ಖುಲ್ಲಾ ಜಾಗೆಯಲ್ಲಿ ಜನರು ನೇರೆದಿದ್ದು ಏನಾಗಿದೆ ಅಂತಾ ನಾನು
ಅಲ್ಲಿಗೆ ಹೋಗಿ ನೋಡಲು
ಎಂ.ಎಸ್.ಕೆ ಮೀಲ್
ಕಂಪೌಂಡ ಪಕ್ಕದಲ್ಲಿರುವ ಮಹಾನಗರ ಪಾಲಿಕೆ ಚರಂಡಿಯಲ್ಲಿ ಒಂದು ಹೆಣ್ಣುಮಗಳ ಶವ ಇದ್ದು ಆಗ ನಾನು
ಈ ವಿಷಯ ರಾಘವೇಂದ್ರ ನಗರ ಪೊಲೀಸ ಠಾಣೆಗೆ ತಿಳಿಸಿದ್ದರಿಂದ ಘಟನಾ ಸ್ಥಳಕ್ಕೆ
ರಾಘವೇಂದ್ರ ನಗರ ಪೊಲೀಸ ಠಾಣೆಯ ಪೊಲೀಸರು ಬಂದು ಸ್ಥಳೀಯರ ಸಹಾಯದಿಂದ ಶವವನ್ನು ಚರಂಡಿಯಿಂದ ಹೊರಗೆ ತೆಗೆದು ನೋಡಿದ್ದು ಸದರಿ
ಹೆಣ್ಣುಮಗಳು ಅಂದಾಜು 55-65 ವರ್ಷ ವಯಸ್ಸಿನವಳು ಇದ್ದು ಸಾಧಾರಣ ಮೈಕಟ್ಟು, ಕೆಂಪುಗೋಧಿ ಬಣ್ಣ, ಎರಡು ಕೈಗಳ ಮೇಲೆ ಹಣಚಿಬಟ್ಟು ಇರುತ್ತದೆ. ಮತ್ತು ಗುಲಾಬಿ ಬಣ್ಣದ ನೀಲಿ ಧಡಿವುಳ್ಳ
ಸೀರೆ, ಚಾಕಲೇಟ್ ಬಣ್ಣದ ಬ್ಲೋಸ್,
ಹಳದಿ ಬಣ್ಣದ ಲಂಗಾ
ಮೈಮೇಲೆ ಇರುತ್ತದೆ ಅವಳು ಯಾವದೋ ಉದ್ದೇಶದಿಂದ ಅಲ್ಲಿಗೆ ಹೋಗಿ ಚರಂಡಿಯನ್ನು ದಾಟುವಾಗ ಆಕಸ್ಮಿಕವಾಗಿ ಜೋಲಿ ಹೋಗಿ ಒಳಗೆ ಬಿದ್ದು
ನೀರಿನಲ್ಲಿ ಉಸಿರುಗಟ್ಟಿ
ಸತ್ತಿದಂತೆ ಕಂಡು
ಬರುತ್ತಿದೆ. ಆದರೆ ಅವಳ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ಅಂತಾ ಶ್ರೀ ಮಹ್ಮದ ಖಾಲೀದ ಅಹ್ಮದ ತಂದೆ ಅಸರಾರ ಅಹ್ಮದ ಸಾ:ಇಕ್ಬಾಲ್ ಕಾಲೋನಿ ಎಂ.ಎಸ್.ಕೆ ಮೀಲ್ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ಕೈಕೊಳ್ಳಲು ವಿನಂತಿ ಅಂತಾ ಪಿರ್ಯಾದಿ ಹೇಳಿಕೆ ಸಾರಾಂಶದ
ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಯು.ಡಿ.ಆರ್ ನಂ.01/2017 ಕಲಂ:174 (ಸಿ) ಸಿ.ಆರ್.ಪಿ.ಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment