ಕೊಲೆ ಯತ್ನ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ
ಮೊಹ್ಮದ ಜಿಲಾನಿ ಸಾ: ನಾಲವಾರ ಮತ್ತು ಆತನ ತಮ್ಮಂದಿರರು ನಾಲವಾರದ ಶ್ರೀ
ಶಾಫಿರಲಿ ದರ್ಗಾದ ಜಾತ್ರೆಯಲ್ಲಿ ಮೌಂಸದ ಅಂಗಡಿ ಹಾಕಿದ್ದು. ಅವರ ಅಂಗಡಿಯ ಪಕ್ಕದಲ್ಲಿ ಅವರ ಸಹೋದರ ಸಂಬಂಧಿಯಾದ ಫಾರೂಕ ತಂದೆ
ಖಾಜಾ ಹುಸೇನ ಖುರೇಷಿ ಸಹ ಮೌಂಸದ
ಅಂಗಡಿ ಇಟ್ಟಿದ್ದು . ದಿ: 18-01-2017 ರಂದು
ಶ್ರೀ ಮೊಹ್ಮದ ಜಿಲಾನಿ ರವರು ದರ್ಗಾದ
ಹಿಂದುಗಡೆ ಇರುವ ಹೊಟೇಲದಲ್ಲಿ
ಚಹಾ ಕುಡಿಯುತ್ತಿರುವಾಗ ಅಲ್ಲಿಗೆ
ಬಂದ ಫಾರೂಕನು ಜಿಲಾನಿಗೆ ಅವಾಚ್ಯವಾಗಿ ಬೈಯುತ್ತಿರುವಾಗ ಯಾಕೆ ಸುಮ್ಮನೇ ಬೈಯುತ್ತಿ ಎಂದು ಕೇಳಿದ್ದಕ್ಕೆ ಅತನು
ತನ್ನ ಅಂಗಡಿಗೆ ಹೋಗಿ
ಮರಳಿ ಬಂದ 1) ಫಾರೂಕ ತಂದೆ ಖಾಜಾ ಹುಸೇನ,
2) ಮಕ್ಬೂಲ, 3) ಆಸೀಪ ತಂದೆ ಖಾಜಾ ಹುಸೇನ ಸಾ:
ಎಲ್ಲರೂ ನಾವಾಲಾರ ರವರು ಕೂಡಿ ಬಂದವರೇ ಮತ್ತೆ
ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಕೈಯಿಂದ ಹೊಡೆಯತ್ತಿರುವಾಗ ಜಿಲಾನಿ ತಮ್ಮನಾದ ದಸ್ತಗಿರನು ಜಗಳ ಬಿಡಿಸಲು ಬಂದಾಗ ಆಸೀಪ ಎಂಬುವವನು ದಸ್ತಗೀರನಿಗೆ ಗಟ್ಟಿಯಾಗಿ
ಹಿಡಿದು . ಮಕ್ಬೂಲನು ಇವರನ್ನು ಖತಮ್
ಕರೇಂಗೆ ಎನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ ಎಡ ಹೊಟ್ಟೆಯ ಮೇಲೆ ಮತ್ತು ಎಡ ಹಣೆಯ ಮೇಲೆ ಚಾಕುವಿನಿಂದ
ಚುಚ್ಚಿ ಬಾರಿ ರಕ್ತಗಾಯ ಮಾಡಿದ್ದು. ಆಗ
ಅಲ್ಲಿಯೇ ಇದ್ದ ಮಲ್ಲು ತಂದೆ ದೇವಿಂದ್ರ , ಶಾಂತಮಲ್ಲಪ್ಪಾ
ತಂದೆ ಸಾಬಣ್ಣಾ ಮಾಳಗಿ , ಚಂದ್ರಶೇಖರ
ಗೌಡ ನೀಲಗಲ್ಲಾ ರವರು ಬಂದು ಬಿಡಿಸಿದ್ದು. ಕೊಲೆ
ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆ ಗಾಯ ಮಾಡಿದ
ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕ 17/01/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಲಾರಿ ನಂ ಕೆಎ-32 ಎ-4123 ನೇದ್ದರ ಲಾರಿ
ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದು ಶಹಬಾದ ರೋಡಿನ
ನಡುವಿನಹಳ್ಳಿ ಕ್ರಾಸ್ ಹತ್ತೀರ ಶ್ರೀ ದೇವಪ್ಪಾ ತಂದೆ ಭಿಮರಾಯ ಪೂಜಾರಿ ಸಾ: ಹೊನಗುಂಟಾ ಇವರ ಮೋಟಾರ
ಸೈಕಲ್ಗೆ ಹಿಂದಿನಿಂದ ಅಪಘಾತಪಡಿಸಿದ್ದರಿಂದ ತನಗೆ
ಗಾಯಗಳಾಗಿದ್ದು ಇನ್ನೊಬ್ಬ ಮೃತ ಪಟ್ಟಿದ್ದು ಸದರಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ
ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.
ಮಹಿಳೆಗೆ ಕಿರುಕುಳ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ಶ್ರೀಮತಿ ಲಕ್ಷ್ಮೀ ಗಂಡ ಶರಣಪ್ಪ
ಕೋಬಾಳ ಸಾ: ಹೋನ್ನಕಿರಣಗಿ ಇವಳಿಗೆ ಅವಳ ಗಂಡ ಮತ್ತು ಅತ್ತೆ ಕಿರುಕುಳ ನೀಡಿ ಹೊಡೆ ಬಡೆ ಮಾಡಿದ ಬ್ಗಗೆ ಶೀಲದ
ಮೇಲೆ ಸಂಶಯ ಮಾಡುತ್ತಿದ್ದ ಬಗ್ಗೆ ಸಲ್ಲಿಸಿದ ಫೀರ್ಯಾದಿ ಸಾರಾಂಶದ ಮೇಲಿಂಧ ಆ್ರೀಮತಿ ಲಕ್ಷ್ಮಿಯ
ಗಂಡ 1) ಶರಣಪ್ಪಾ ತಂದೆ ಧೂಳಪ್ಪಾ ಕೋಬಾಳ ಲಕ್ಷ್ಮಿಯ ಅತ್ತೆ 2) ಮಹಾದೇವಿ ಗಂಡ ಧೂಳಪ್ಪಾ ಕೋಬಾಳ ಇವರ ವಿರುದ್ದ ಫರಹತಾಬಾದ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment