ಕೊಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 21/1/2017 ರಂದು ಶ್ರೀ ಜಟ್ಟೇಪ್ಪ ತಂದೆ ಸಿದ್ದಪ್ಪ ಸೀತನೂರ ಸಾ: ಹೊನ್ನಕಿರಣಗಿ ಫಿರ್ಯಾದಿ
ಸಲ್ಲಿಸಿದ್ದೇನೆಂದರೆ ನನ್ನ ತಾಯಿ ಕಲ್ಲಮ್ಮ ದಿನಾಂಕ 20/1/2017 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಮ್ಮ
ಹೋಲಕ್ಕೆ ಹೋಗಿದ್ದು ರಾತ್ರಿ 8-00 ಗಂಟೆ ಆದರೆ ಮರಳಿ ಮನೆಗೆ ಬಾರದ
ಕಾರಣ ನಾನು ಗಾಬರಿಯಾಗಿ ನನ್ನ ಗೆಳೆಯ ಮರೇಪ್ಪ ಇವರ ಮೊಟಾರ ಸೈಕಲ ಮೇಲೆ ಹೊಲಕ್ಕೆ ಹೋಗಿ ಬ್ಯಾಟರಿ
ಬೆಳಕಿನಲ್ಲಿ ಹುಡುಕಾಡುತ್ತಾ ನನ್ನ ಮೊಬೈಲದಿಂದ ನನ್ನ ತಾಯಿಯ ಮೊಬೈಲಗೆ ಪೊನ್ ಮಾಡಿದಾಗ ಸ್ವಲ್ಪ
ದೂರದಲ್ಲಿ ನನ್ನ ತಾಯಿಯ ಮೊಬೈಲ ರಿಂಗ್ ಟೋನ ಕೇಳಿಸತೊಡಗಿದಾಗ ನಾವು ಹೋಗಿ ನೋಡಲಾಗಿ ನನ್ನ ತಾಯಿ
ಕಲ್ಲಮ್ಮಳು ಮಗ್ಗಲಾಗಿ ಮಲಗಿದಂತೆ ಕಂಡು ಬಂದಿದ್ದು ಬ್ಯಾಟರಿ ಬೆಳಕಿನಲ್ಲಿ ನೋಡಲಾಗಿ ಕುತ್ತಿಗೆ
ಗಂಟಲಿನ ಹತ್ತಿರ ಮತ್ತು ಎಡಗೈ ಬಲಗೈಗೆ ಗಾಯಗಳಾಗಿ ಮೃತ ಪಟ್ಟಿದ್ದು. ನನ್ನ ತಾಯಿಗೆ ಯಾರೊ ಕೊಲೆ
ಮಾಡಿದ್ದು. ಕಾರಣ ನನ್ನ ತಾಯಿಯ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು
ರೀತಿಯ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ.
21-1-2017 ರಂದು ಶ್ರೀಮತಿ ರೇಣುಕಾ ಗಂಡ ರಂಗನಾಥ ಸುಬೇದಾರ ಸಾ; ಶರಣಸಿರಸಗಿ ತಾಂಡಾ ಇವರು
ಠಾಣೆಗೆ ಹಾಜರಾಗಿ ದಿನಾಂಕ. 10-12-2016 ರಂದು ನಮ್ಮ ಮನೆಯ ಪಕ್ಕದಲ್ಲಿ ಶೌಚಾಲಯನ್ನು ಕಟ್ಟಿಸುವ
ಕುರಿತು ಸಾಮಾನುಗಳನ್ನು ತಂದು ಅವುಗಳನ್ನು ಇಳಿಸುತ್ತಿರುವಾಗ ಪಕ್ಕದ ಮನೆಯ ಶರಣಪ್ಪಾ ಇವರ ತಂಗಿ
ಗಂಗಮ್ಮಾ , ಅವಳ ತಾಯಿ ಈರಮ್ಮಾ ಪಕ್ಕದ ಮನೆಯ ಸಿದ್ದಮ್ಮಾ ಗಂಡ ನಿಂಗಪ್ಪಾ ಇವರು ಮನೆಯಿಂದ ಹೊರಗಡೆ
ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ
ಜಾತಿ ನಿಂದನೆ ಮಾಡಿ ಬಯ್ಯುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಕೈಯಿಂದ
ಹೊಡೆಯುತ್ತಿರುವಾಗ ನನ್ನ ಮಗಳು ಪ್ರಿಯಾ ಹಾಗೂ ಪಕ್ಕದ ಮನೆಯ ಬಸವರಾಜ ಮಾವೂನೂರ ಮತ್ತು ಕೃಷ್ಣಯ್ಯಾ
ಗುತ್ತೇದಾರ ಇವರು ಬಂದು ಬಿಡಿಸಿಕೊಂಡರು. ಆನಂತರ ಸ್ವಲ್ಪ ಸಮಯದ ಬಳಿಕ ಘಟನೆಯ ವಿಷಯ ತಿಳಿದು ನಿಂಗಪ್ಪಾ
ತಂದೆ ಸೋಮಲಿಂಗ ಕೋರಬಾ ಹಾಗೂ ಶರಣಬಸ್ಸಪ್ಪಾ ತಂದೆ ನಿಂಗಪ್ಪಾ ಪ್ಯಾಟಿ ಇವರಿಬ್ಬರು ನಮ್ಮ ಮನೆಗೆ
ಬಂದು ಅವಾಚ್ಚಯ ಶಬ್ದಗಳಿಂದ ಬಯ್ಯುತ್ತಾ ನಿಂಗಪ್ಪನು ಪ್ಲ್ಯಾಸ್ಟಿಕ್ ಪೈಪದಿಂದ ಹೋಡೆದನು ಮತ್ತು
ಶರಣಬಸ್ಸಪ್ಪಾ ಪ್ಯಾಟಿ ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದು
ದು:ಖಾಪತಗೊಳಿಸಿ ಅವಮಾನ ಮಾಡಿರುತ್ತಾರೆ. ಸದರಿ
1) ನಿಂಗಪ್ಪಾ ತಂದೆ ಸೋಮಲಿಂಗ ಕೋರಬಾ ವಯ;35 ವರ್ಷ, 2) ಶರಣಬಸ್ಸಪ್ಪಾ ತಂದೆ ನಿಂಗಪ್ಪಾ ಪ್ಯಾಟಿ
ವಯ;35 ವರ್ಷ 3) ಈರಮ್ಮಾ ಗಂಡ ನಿಂಗಪ್ಪಾ ಪ್ಯಾಟಿ ವಯ;60, 4) ಜಗದೇವಿ ಗಂಡ ಸಿದ್ದಪ್ಪಾ ಕೋರಬಾ
ವ;30 ವರ್ಷ, 5) ಸಿದ್ದಮ್ಮಾ ಗಂಡ ನಿಂಗಪ್ಪಾ
ಕೋರಬಾ ಮತ್ತು 6) ಗಂಗಮ್ಮಾ ವಯ;26 ವರ್ಷ ಸಾ;ಎಲ್ಲರೂ ಶರಣಸಿರಸಗಿ ತಾ;ಜಿ; ಕಲಬುರಗಿ ಇವರುಗಳು ಮತ್ತೆ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ
ಜಾತಿ ನಿಂದನೆ ಮಾಡುತ್ತಾ ತೊಂದರೆಕೊಡುತಿದ್ದು. ಸದರಿ ಈ ಮೇಲೆ ನಮೂದ ಮಾಡಿದ 6 ಜನರ ಮೇಲೆ ಕಾನೂನು
ಪ್ರಕಾರ ಕ್ರಮ ಕೈಕೊಳದಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment