ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರೋಜಾ ಠಾಣೆ : ದಿನಾಂಕ:
27-01-2017 ಸಂಜೆ
ಪೀರಬಂಗಾಲಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ
80 ರೂಪಾಯಿ
ಕೊಡುವದಾಗಿ ಹೇಳಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ.
ಅಂತಾ ಮಾಹಿತಿ ಮೇರೆಗೆ ಶ್ರೀ ಘಾಳೆಪ್ಪಾ ಪೆನಾಗ. ಪಿ.ಐ ರೋಜಾ ಠಾಣೆ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಪೀರಬಂಗಾಲಿ ದರ್ಗಾ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ
ವ್ಯಕ್ತಿ ಹೋಗಿ ಬರುವ ಸಾರ್ವಜನಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಸಾರ್ವಜನಿಕರಿಂದ ಹಣ
ಪಡೆದುಕೊಂಡು ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದು ಖಚಿತ
ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ
ಕುತ್ಬೋದ್ದೀನ ತಂದೆ ಮರಗುಬ ಅಹ್ಮದ ಸಾ: ನೂರಾನಿಮೊಹಲ್ಲಾ ಕಲಬುರಗಿ ಅಂತಾ
ಹೇಳಿದ್ದು ಸದರಿ ವ್ಯಕ್ತಿಯ ಅಂಗ ಶೋಧಿಸಲಾಗಿ ಅವನ ಹತ್ತಿರ ನಗದು ಹಣ 1280/-ರೂಪಾಯಿ, ಒಂದು ಮಟಕಾ ಚೀಟಿ, ಒಂದು
ಬಾಲ್ ಪೆನನ್ನಗಳನ್ನು ವಶಪಡಿಸಿಕೊಂಡ ಸದರಿಯವನೊಂದಿಗೆ ರೋಜಾ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಮಿಶಾದ್ ಬೇಗಂ ಗಂಡ ಶಾಬುದ್ದೀನ ಜಮಾದಾರ ಸಾ:ಅಲ್ಲಾಪೂರ ತಾ||ಆಳಂದ ಹಾ|| ವ|| ತೆಲ್ಲೂಣಗಿ ತಾ|| ಅಫಜಲಪೂರ ರವರಿಗೆ 10 ವರ್ಷದ ಹಿಂದೆ ಆಳಂದ ತಾಲೂಕಿನ ಅಲ್ಲಾಪೂರ ಗ್ರಾಮದ ಶಾಬುದ್ದೀನ್ ತಂದೆ ಖಾದರಸಾಬ ಜಮಾದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಇನ್ನೂ ಮಕ್ಕಳಾಗಿರುವುದಿಲ್ಲ. ಮದುವೆಯಾದ ಎರಡು ವರ್ಷದ ವರೆಗೆ ನನಗೆ ನನ್ನ ಗಂಡ ಮತ್ತು ನಮ್ಮ ಅತ್ತೆಯಾದ ರಸೂಲಬೀ ಗಂಡ ಖಾದರಸಾಬ ಜಮಾದಾರ, ಮಾವನಾದ ಖಾದರಸಾಬ ತಂದೆ ನಬಿಲಾಲ ಜಮಾದಾರ, ಮೈದುನರಾದ ಸೈಫನ, ಲಾಲಸಾಬ ಹಾಗು ನಾದುನಿಯಾದ ಶಕೀನಾ ಗಂಡ ಮಹ್ಮದ ಜಮಾದಾರ ಇವರೆಲ್ಲರು ಚೆನ್ನಾಗಿ ಪ್ರೀತಿ ಪ್ರೇಮದಿಂದ ನೋಡಿಕೊಂಡಿರುತ್ತಾರೆ, ಈಗ 8 ವರ್ಷದಿಂದ ನನ್ನ ಗಂಡ ಮತ್ತು ನಮ್ಮ ಅತ್ತೆ, ಮಾವ, ಮೈದುನರು ಹಾಗು ನಾದುನಿ ಎಲ್ಲರು ನನಗೆ ನೀನು ಸರಿಯಾಗಿಲ್ಲ, ನಮಗ್ಯಾಕ ಮೂಲಾಗಿದಿ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ಅಂತಾ ನನ್ನ ಗಂಡ ಹಾಗೂ ನಮ್ಮ ಅತ್ತೆ ನಿನು ನೋಡಲು ಚೆನ್ನಾಗಿಲ್ಲ,ನಿನಗೆ ಇನ್ನೂ ಮಕ್ಕಳಾಗಿಲ್ಲಾ ನಿನು ನಮ್ಮ ಮನೆಗೆ ಹೊಂದುವುದಿಲ್ಲ ಎಂದು ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ನಾನು ಸದರಿ ವಿಷಯ ನಮ್ಮ ತಾಯಿಗೆ ತಿಳಿಸಿರುತ್ತೆನೆ.ನನ್ನ ಗಂಡ ಹಾಗೂ ಅತ್ತೆ, ಮಾವ, ಮೈದುನರು ಹಾಗು ನಾದುನಿ ಕೊಡುವ ಕಿರುಕುಳ ತಾಳಲಾರದೆ ನಾನು ಈಗ 4 ವರ್ಷದಿಂದ ನನ್ನ ತವರು ಮನೆಯಾದ ತೆಲ್ಲೂಣಗಿ ಗ್ರಾಮಕ್ಕೆ ಬಂದು ನನ್ನ ತವರು ಮನೆಯಲ್ಲಿ ನಮ್ಮ ತಾಯಿಯೊಂದಿಗೆ ಇದ್ದಿರುತ್ತೇನೆ.ನಮ್ಮ ನಾದುನಿಯಾದ ಶಕೀನಾ ಇವಳಿಗೆ ನನ್ನ ತವರುಮನೆಯಾದ ತೆಲ್ಲೂಣಗಿ ಗ್ರಾಮ ಮಹ್ಮದ ಜಮಾದಾರ ರವರಿಗೆ ಕೊಟ್ಟು ಮದುವೆ ಮಾಡಿರುತ್ತಾರೆ ದಿನಾಂಕ 29/11/2016 ರಂದು ಸಂಜೆ 6.00 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ತಾಯಿಯಾದ ಮದಿನಾ ಮನೆಯಲಿದ್ದಾಗ ನನ್ನ ಗಂಡ ಶಾಬುದ್ದೀನ ನಮ್ಮ ಅತ್ತೆ ರಸೂಲಬೀ ಹಾಗು ಮೈದುನರಾದ ಸೈಫನ, ಲಾಲಸಾಬ ಹಾಗೂ ನಮ್ಮ ಮಾವನಾದ ಖಾದರಸಾಬ ಇವರು ಅಲ್ಲಾಪೂರ ಗ್ರಾಮದಿಂದ ನನ್ನ ತವರು ಮನೆಗೆ ಬಂದಿದ್ದು ಇವರೊಂದಿಗೆ ನಮ್ಮ ನಾದುನಿಯಾದ ಶಕೀರಾ ಬಂದಿದ್ದು ನಾನು ಸದರಿಯವರಿಗೆ ನೋಡಿ ಕುಡಿಯಲು ನೀರು ತಗೆದುಕೊಂಡು ಹೊರಗೆ ಬಂದಾಗ ನನ್ನ ಗಂಡ ನನಗೆ ಏನೇ ರಂಡಿ ನೀನು ಯಾರಿಗಿ ಕೇಳಿ ನಿನ್ನ ತವರಮನಿಗಿ ಬಂದಿದಿ ಬೊಸಡಿ ಅಂತ ಬೈಯುತಿದ್ದಾಗ ನನ್ನ ಗಂಡ ಬಾಯಿ ಮಾಡುವ ಸಪ್ಪಳ ಕೇಳಿ ಅದೆ ಸಮಯಕ್ಕೆ ನಮ್ಮ ಗ್ರಾಮದ ಬಾಬುಸಾಬ ತಂದೆ ಲಾಡ್ಲೇಮಶಾಕ, ದಾವೂದ್ ತಂದೆ ಲಾಡ್ಲೆಸಾಬ, ಶಿವರಾಯಗೌಡ ತಂದೆ ಹಣಮಂತ್ರಾವ ಪಾಟೀಲ, ಶರಣಗೌಡ ತಂದೆ ಶಾಮರಾವಗೌಡ ಪಾಟೀಲ, ಭಗುಗೌಡ ತಂದೆ ರೇವಣಸಿದ್ದಪ್ಪ ಪಾಟೀಲ, ಶ್ರೀಶೈಲ ತಂದೆ ಸೊಮಣ್ಣ ಕೋಳಿ ಇವರು ಬಂದು ನನ್ನ ಗಂಡನಿಗೆ ಯಾಕ್ರಿ ಬಾಯಿ ಮಾಡುಕತ್ತಿರಿ ಅಂತ ಕೇಳುತಿದ್ದಾಗ ನಮ್ಮ ಅತ್ತೆ ರಸೂಲ್ ಬೀ ಇವಳು ನನಗೆ ಈ ರಂಡಿ ಯಾರಿಗೂ ಹೇಳದೆ ಕೇಳದೆ ನಮ್ಮ ಮನಿ ಬಿಟ್ಟು ತವರ ಮನಿಗಿ ಬಂದಾಳ ಅಂತ ಅಂದು ತನ್ನ ಕೈಯಿಂದ ನನ್ನ ಕಪಾಳ ಮ್ಯಾಲ ಹೊಡೆಯುತಿದ್ದಾಗ ನಮ್ಮ ಮೈದುನರು, ನಾದುನಿ ಹಾಗು ಮಾವ ಇವರು ಇವತ್ತ ಈ ರಂಡಿಗಿ ಖಲಾಸ ಮಾಡೆ ಹೋಗೋಣ ಅಂತ ಅಂದಾಗ ನಮ್ಮ ಅತ್ತೆ ಈ ರಂಡಿ ಇಲ್ಲೇ ಇರ್ಲಿ ನಮ್ಮ ಮನಿಗೆ ಬಂದರೆ ಜಿವಾನೆ ಹೊಡಿತಿವಿ ಬೋಸಡಿಗೆ ಅಂತ ಅನ್ನುತಿದ್ದಾಗ ನನ್ನ ಗಂಡನು ಈ ರಂಡಿಗಿ ನಾವು ಇನ್ನ ಮುಂದೆ ನಮ್ಮ ಮನ್ಯಾಗ ಇಟ್ಕೊಳಲ್ಲಾ ಅಂತ ಅಂದು ತನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಟ್ಟೆಗೆ ಹೊಡೆಯುತಿದ್ದಾಗ ನಮ್ಮ ಅತ್ತೆ ಕಾಲಿನಿಂದ ನನಗೆ ಒದ್ದು ಗಾಯ ಪಡಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment