ಕೊಲೆ ಪ್ರಕರಣ
:
ಆಳಂದ ಠಾಣೆ : ಶ್ರೀ ರತೀಶಕುಮಾರ ತಂದೆ ಶರಣಬಸಪ್ಪಾ ಪಾಟೀಲ ಸಾ: ಚಿತಲಿ ತಾ:ಆಳಂದ ಇವರು
ತಂದೆ ತಾಯಿಯೊಂದಿಗೆ ಕಲಬುರಗಿಯಲ್ಲಿ ಜನತಾ ಲೇ ಔಟ್ ಮಾರ್ಕೆಟ ರೋಡ ಲಾಲಗಿರಿ ಕ್ರಾಸ್ ಹತ್ತಿರ
ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ಚಿತಲಿ ಗ್ರಾಮದಲ್ಲಿ ನಮ್ಮ ತಂದೆ ಹೆಸದಿನಲ್ಲಿ
ಜಮೀನು ಇದ್ದು ಸದರ ಜಮಿನು ನಮ್ಮ ತಂದೆ ಹಾಗು ರಾಮಚಂದ್ರಪ್ಪ ಚಿಕ್ಕಪ್ಪ ಇವರ ಮದ್ಯ ಜಮೀನ
ವಿಷಯವಾಗಿ ತಕರಾರು ಇದ್ದು ಈ ಕುರಿತು ಕೊರ್ಟದಲ್ಲಿ ಕೇಸ ನಡೆದಿರುತ್ತದೆ. ಚಿತಲಿ ಸಿಮಾಂತರ ಹೊಲ
ಸರ್ವೇ ನಂ 60/3 ರಲ್ಲಿ 4 ಎಕರೆ, 3 ಗುಂಟೆ ಜಮೀನು ನಮ್ಮ ತಂದೆ ಹೆಸರಿನಲ್ಲಿ ಇರುತ್ತದೆ. ನಮ್ಮ ಚಿಕ್ಕಪ್ಪ ರಾಮಚಂದ್ರಪ್ಪ ಇತನು
ಈ ಜಮೀನು ನಮಗೆ ಬರುತ್ತದೆ ಎಂದು ತಕರಾರು ಮಾಡುತ್ತಾ ಬಂದು ದ್ವೇಷಸಾದಿಸುತ್ತಾ ಬಂದಿರುತ್ತಾನೆ.
ಮತ್ತು ಕೊರ್ಟ ದಲ್ಲಿ ಕೇಸು ನಡೆದು ನಮ್ಮಂತೆ ಆಗಿದ್ದರಿಂದ ನಮಗೆ ಖಲಾಷ ಮಾಡಿ ಜಮೀನು
ಕಿತ್ತಿಕೊಳ್ಳಬೇಕೆಂದಿರುತ್ತಾರೆ. ನಮ್ಮ ತಂದೆ ಹಾಗು ಚಿಕ್ಕಪ್ಪ ಹಾಗು ಇತರರ ಮದ್ಯ 8 ಎಕರೆ ಜಮೀನು
ಇದ್ದು ಸದರ ಜಮೀನನಲ್ಲಿ ಎಲ್ಲರೂ ಬೆಳೆ ಬೆಳೆದು ಸಮನಾಗಿ ಹಂಚಿಕೊಳ್ಳಬೆಕೆಂದು ಕೊರ್ಟ
ಆಧೇಶವಾಗಿರುತ್ತದೆ.ದಿನಾಂಕ 31/12/2016 ರಂದು ಸರ್ವೇ ನಂ 60/3 ರಲ್ಲಿ 4 ಎಕರೆ 3 ಗುಂಟೆ
ಜಮೀನನಲ್ಲಿ ತೊಗರೆ ಬೆಳೆ ಬೆಳೆದು ರಾಶಿ ಮಾಡಿಕೊಂಡಿರುತ್ತೇವೆ. ಈ ಜಮೀನು ತಮಗೆ ಬರುತ್ತದೆ
ಎಂದುಕೊಂಡು ನಮ್ಮ ಮೇಲೆ ದ್ವೇಷಹೊಂದಿ ಇಂದು ದಿನಾಂಕ 04/01/2017 ರಂದು ಸಾಯಾಂಕಾಲ 6:30 ಗಂಟೆಗೆ
ವೇಳೆಗೆ ನಾನು ಮತ್ತು ನಮ್ಮ ತಂದೆ ಶರಣಬಸಪ್ಪ ಪಾಟೀಲ ಇಬ್ಬರು ಕೂಡಿ ಚಿತಲಿ ಗ್ರಾಮದ ಬ್ರಹ್ಮದೇವರ
ಗುಡಿ ಹತ್ತಿರ ಕುಳಿತ್ತಿದ್ದಾಗ 1) ರಾಮಚಂದ್ರಪ್ಪ ತಂದೆ ಕಲ್ಯಾಣರಾವ ಪಾಟೀಲ 2) ಆಶಾಲತಾ ಗಂಡ
ಉಮೇಶ ಪಾಟೀಲ 3) ಸುಜಾತಾ ಗಂಡ ಬಾಬು ಮೇಳಕುಂದಿ 4) ಶೋಬಾ ಗಂಡ ಜಗನಾಥ ಪೊ. ಪಾಟೀಲ, 5) ನೀಲಮ್ಮಾ ಗಂಡ ಕಲ್ಯಾಣರಾವ
ಪಾಟೀಲ ಹಾಗು ರಾಮಚಂದ್ರಪ್ಪ ಇತನ ಹೆಂಡತಿಯ ಅಣ್ಣತಮ್ಮಂದಿರು 3 ಜನರು ಕೂಡಿ ಬಂದವರೇ ಇದೆ ಸುಳೆ
ಮಕ್ಕಳು ನಮ್ಮ ಹೊಲದ ರಾಶಿ ಮಾಡಿಕೊಂಡು ಹೊದವರು ಬಿಡಬ್ಯಾಡ್ರಿ ಹೊಡ್ರಿ ಇವರಿಗೆ ಖಲಾಷ ಮಾಡ್ರಿ
ಅಂತಾ ಬೈಯುತ್ತಾ ಬಂದವರೇ ರಾಮಚಂದ್ರಪ್ಪ ಇತನು ಕೈಯಿಂದ ನಮ್ಮ ಅಪ್ಪನ ಖಪಾಳ ಮೇಲೆ ಹೊಡೆದನು.
ಆಶಾಲತಾ , ಸೂಜಾತಾ ಇವರು ನಮ್ಮ ಅಪ್ಪನ
ಎರಡು ಕೈಹಿಡಿದು ನೇಲಕ್ಕೆ ಕೆಡವಿದಾಗ ರಾಮಚಂದ್ರಪ್ಪ ಇತನು ಕೋಲೆ ಮಾಡುವ ಉದ್ಧೇಶದಿಂದ ಚಾಕುದಿಂಧ
ಕುತ್ತಿಗೆಗೆ ಹೊಡೆದನು . ಆಗ ನಾನು ನಮ್ಮ ತಂದೆಗೆ ಹೊಡೆಯುದನ್ನು ನೋಡಿ ಬಿಡಿಸಲು ಹೋದಾಗ ಶೋಬಾ
ಮತ್ತು ನಿಲಮ್ಮಾ ಇವರು ಕಟ್ಟಿಗೆಯಿಂದ ನನಗೆ ಬೆನ್ನಿಗೆ ಹೊಡೆದರು. ರಾಮಚಂದ್ರಪ್ಪ ಇತನು ನನಗೆ
ಕೊಲೆ ಮಾಡಬೇಕೆಂದು ಚಾಕುದಿಂದ ಹೊಟ್ಟೆಗೆ ಹೊಡೆಯಲು ಬಂದಾಗ ಕೈ ಅಡ್ಡ ತಂದಿದಕ್ಕೆ ಎಡಗೈಗೆ ಚಾಕು
ಹತ್ತಿದ್ದು ನಂತರ ಮತ್ತೆ ಬೆನ್ನಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಶಾಲತಾ ಮತ್ತು ಶೋಬಾ
ನನಗೆ ನೇಲಕ್ಕೆ ಹಾಕಿ ಹೊಡೆಯುವಾಗ ರಾಮಚಂದ್ರಪ್ಪ ಇತನ ಹೆಂಡತಿಯ ಅಣ್ಣತಮ್ಮಂದಿರು ಮತ್ತು ರಾಮಚಂದ್ರಪ್ಪ ಇವರು ಚಾಕುದಿಂದ
ನಮ್ಮ ಅಪ್ಪನ ಹೊಟ್ಟೆಗೆ , ಮೈಗೆ , ಅಲ್ಲಲ್ಲಿ ಚುಚ್ಚಿ
ತಿವೃಗಾಯಗೊಳಿಸಿ ಹೊಡೆದು ಕೋಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮೊನಮ್ಮ
ಗಂಡ ಅವಿನಾಶ ಮಡಿವಾಳ ಸಾಃ ರಾಜವಾಳ ತಾಃ ಜೇವರಗಿ ಹಾಃವಃ ಹಂದರಕಿ ತಾಃ ಸೇಡಂ ಇವರನ್ನು ಜೇವರಗಿ ತಾಲೂಕಿನ ರಾಜವಾಳ ಗ್ರಾಮದ ಅವಿನಾಶ
ಮಡಿವಾಳ ಇತನ್ನೊಂದಿಗೆ ದಿನಾಂಕ 31.03.2016 ರಂದು ನಮ್ಮೂರ ಲೊಕೇಶ್ವರ ಗುಡಿಯಲ್ಲಿ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ
ನಂತರ ನಾನು ನನ್ನ ಗಂಡನ್ನೊಂದಿಗೆ ರಾಜವಾಳ ಗ್ರಾಮದಲ್ಲಿಯೇ ವಾಸವಾಗಿರುತ್ತೆನೆ. ನನ್ನ ಗಂಡನು
ಮದುವೆಯಾದ ಎರಡು ತಿಂಗಳವರೆಗೆ ನನ್ನ ಸಂಗಡ ಸರಿಯಾಗಿಯೇ ಇದ್ದು ಅನೋನ್ಯವಾಗಿ ಸಂಸಾರ ಮಾಡುತ್ತಾ
ಬಂದಿರುತ್ತಾನೆ. ಮತ್ತು ಅತ್ತೆ ಮಾವ ಮೈದುನರು ಸರಿಯಾಗಿಯೇ ಇದ್ದರು. ನಂತರ ನನ್ನ ಗಂಡನು ಮತ್ತು ಅತ್ತೆ ಮಾವ ಹಾಗೂ ಮೈದುನರು ನೀನಗೆ ಅಡುಗೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ, ನೀನು ಸರಿಯಾಗಿ
ಇಲ್ಲಾ ನಮ್ಮ ಮನೆಯತನಕ್ಕೆ ತಕ್ಕ ಹೆಣ್ಣು ಇಲ್ಲಾ ಅಂತಾ ಅವಾಚ್ಯವಾಗಿ ಬೈಯುವುದು, ಹೊಡೆಯುವುದು
ಮಾಡುತ್ತಾ ಬಂದಿರುತ್ತಾರೆ ನಾನು ಹಬ್ಬ ಹರಿದಿನಕ್ಕೆ ನನ್ನ ತವರು ಮನೆಗೆ ಹೋದಾಗ ಮನೆಯಲ್ಲಿ ನನ್ನ
ತಂದೆ ತಾಯಿಯವರ ಮುಂದೆ ನನ್ನ ಗಂಡ ಮತ್ತು
ಗಂಡನ ಮನೆಯವರು ನನಗೆ ಕಿರುಕುಳ ಕೊಡುತ್ತಿದ್ದ ವಿಷಯ ಹೇಳಿರುತ್ತೆನೆ ಆಗ ನನ್ನ ತಂದೆ ತಾಯಿಯವರು
ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ
ಹೋಗಿರುತ್ತಾರೆ, ಆದರೂ
ಸಹ ನನ್ನ ಗಂಡ ಮತ್ತು ಅತ್ತೆ ಮಾವ ಮೈದುನರು ಅದೇ ರೀತಿ
ನನಗೆ ತೊಂದರೆ ಕೊಡುತ್ತಿದ್ದಾಗ ಅವರು ಕೊಡುತ್ತಿದ್ದ
ತೊಂದರೆ ತಾಳಲಾರದೆ ನಾನು ಈಗ ಆರು ತಿಂಗಳ ಹಿಂದೆ ರಾಜವಾಳದಿಂದ ನನ್ನ ತವರು ಮನೆಗೆ ಬಂದು
ನನ್ನ ತಂದೆಯವರ ಹತ್ತಿರ ವಾಸವಾಗಿದ್ದೆನು. ನಾನು ನಮ್ಮ ಮನೆಯ ಮರ್ಯಾದೆಗಾಗಿ ಅಂಜಿ ಸುಮ್ಮನಿದ್ದೆನು, ಇಷ್ಟು ದಿನವಾದರೂ ನನ್ನ ಗಂಡನ ಮನೆಯವರು
ನನಗೆ ಕರೆಯಲು ಬರಲಾರದಕ್ಕೆ ನನ್ನ ತಂದೆ ಸುಬ್ಬಣ್ಣಾ ತಂದೆ ಬುಗ್ಗಪ್ಪ ಮಡಿವಾಳ, ತಾಯಿ ಮಹಾದೇವಿ
ಗಂಡ ಸುಬ್ಬಣ್ಣ ಮಡಿವಳ,
ಅಣ್ಣನಾದ ಶರಣಪ್ಪ ತಂದೆ ಸುಬ್ಬಣ್ಣ ಮಡಿವಾಳ
ಹಾಗು ಸಂಭಂಧಿಕರಾದ ದೇವಪ್ಪ ತಂದೆ ಬುಗ್ಗಪ್ಪ ಮಡಿವಾಳ
ಈಶ್ವರ ತಂದೆ ಶಿವರಾಯ ಮಡಿವಾಳ ಎಲ್ಲರೂ ಕೂಡಿ ನನಗೆ ಗಂಡನ ಮನೆಗೆ ಬಿಡಲು ದಿನಾಂಕ
02.01.2017 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ರಾಜವಾಳಕ್ಕೆ ಕರೆದುಕೊಂಡು ನನ್ನ ಗಂಡನ
ಮನೆಗೆ ಬಂದಾಗ ಅಲ್ಲಿ ನನ್ನ ಗಂಡನಾದ 1) ಅವಿನಾಶ
ತಂದೆ ದೇವಿಂದ್ರ ಮಡಿವಾಳ,
ಮಾವನಾದ 2) ದೇವಿಂದ್ರ ತಂದೆ
ಯಮನಪ್ಪ ಮಡಿವಾಳ ಅತ್ತೆಯಾದ 3) ನಿರ್ಮಲಾ ಗಂದೆ ದೇವಿಂದ್ರ ಮಡಿವಾಳ, ಮೈದುನರಾದ 4) ರಾಕೇಶ ತಂದೆ ದೇವಿಂದ್ರ
ಮಡಿವಾಳ, 5)
ಯಮನಪ್ಪ ತಂದೆ ದೇವಿಂದ್ರ ಮಡಿವಾಳ ಎಲ್ಲರೂ ಕೂಡಿಕೊಂಡು ಬಂದು ನಮಗೆ ನೋಡಿ ಅವಾಚ್ಯವಾಗಿ ಬೈಯ
ಹತ್ತಿದ್ದರು ನಾನು ಅವರಿಗೆ ನನಗೆ ಗಂಡನ ಮನೆಗೆ ಬಿಡಲು ಬಂದಿರುತ್ತಾರೆ ಯಾಕೆ? ಬೈಯುತ್ತಿದ್ದಿರಿ
ಅಂತಾ ಅಂದಾಗ ನನ್ನ ಗಂಡನು ಏ ಬೊಸಡಿ ನೀನಗೆ ಮೊದಲೇ ಮನೆಯಲ್ಲಿ ಅಡುಗೆ ಕೆಲಸ ಮಾಡಲು ಬರುವುದಿಲ್ಲಾ
ಹೊಲ ಮನೆ ಕೆಲಸ ಸರಿಯಾಗಿ ಮಾಡುವುದಿಲ್ಲಾ ಮತ್ತು ಇಷ್ಠು ದಿನ ತವರು ಮನೆಯಲ್ಲಿ ಇದ್ದು ಇವತ್ತು
ಬಂದ್ದಿದಿ ಬೊಸಡಿ ಅಂತಾ ಬೈದು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು, ಮತ್ತು ಅತ್ತೆ ಮಾವ ಇವರು ಈ ರಂಡಿಗೆ ಇವತ್ತು
ಗಂಡನ ನೇನಪು ಆಗಿದೆ ಅಂತಾ ಬೈಯದಿರುತಾರೆ ಅಲ್ಲದೆ ನನ್ನ ಅತ್ತೆ ನನ್ನ ತಲೆಯ ಕೂದಲು ಹಿಡಿದು
ಜಗ್ಗಿರುತ್ತಾಳೆ, ಮತ್ತು
ಮೈದುನರು ಈ ಬೋಸಡಿಗೆ ಬಹಳ ಸೊಕ್ಕ ಇದೆ ಇವತ್ತು ಎಲ್ಲರಿಗೂ ಕರೆದುಕೊಂಡು ಗಂಡನ ಮನೆಗೆ ಬಂದಾಳ ಹೊಡೆಯಿರಿ ಅಂತಾ
ಬೈದಿರುತ್ತಾರೆ ಅಷ್ಟರಲ್ಲಿಯೇ ನನ್ನ ತಂದೆ ತಾಯಿ ಮತ್ತು ನನ್ನ ಅಣ್ಣ ಹಾಗೂ ಸಂಭಂದಿಕರು ಬಂದು
ನನಗೆ ಹೊಡೆಯುವುದು ನೋಡಿ ಬಿಡಿಸಿಕೊಂಡಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ
ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ: 04-01-2017
ರಂದು ಮುಂಜಾನೆ ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಟಿಪ್ಪರ್ಗಳಲ್ಲಿ ಕಳ್ಳತನದಿಂದ ಮರಳು
ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ
ಎಸ್.ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಜ್ಯೋತಿ ಹೋಟೆಲ ಹತ್ತಿರ
ಮುಂಜಾನೆ ಹೋಗಿರೋಡಿನ ಪಕ್ಕದಲ್ಲಿ ನಿಂತು ಮರಳು ತುಂಬಿದ ಟಿಪ್ಪರ್ಗಳು ಬರುವದನ್ನು
ಕಾಯುತ್ತ ಇದ್ದೆವು. ಸಿಂದಗಿ ಕಡೆಯಿಂದ ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಮೂರು
ಟಿಪ್ಪರ್ಗಳಿಗೆ ನೋಡಿ ಬ್ರೀಜ್ ಹತ್ತಿರ ರೋಡಿನಲ್ಲಿ ಕೈ ಮಾಡಿ ನಿಲ್ಲಿಸಿ ಟಿಪ್ಪರ್ ಚಾಲಕರಿಗೆ
ಹೆಸರು ಕೇಳಲಾಗಿ ಅವರು 1) ದೇವರಾಜ ತಂದೆ
ಬಸವರಾಜ ಭೊವಿ ಸಾ|| ಚನ್ನೂರ (ಕೆ)
ತಾಃ ಶಹಪೂರ ಜಿಲ್ಲಾಃ ಯಾದಗಿರಿ ಟಿಪ್ಪರ್ ನಂ ಕೆ.ಎ32ಸಿ3705
ನೇದ್ದರ ಚಾಲಕ ಅಂತ ತಿಳಿಸಿದನು 2) ಮಲ್ಲಿಕಾರ್ಜುನ
ತಂದೆ ನರಸಪ್ಪ ಕುದರಮಳ್ಳಿ, ಸಾಃ
ಚನ್ನೂರ (ಕೆ) ತಾಃ ಶಹಾಪೂರ ಟಿಪ್ಪರ್ ನಂ ಕೆಎ32ಸಿ3704 ನೇದ್ದರ ಚಾಲಕ ಅಂತ ತಿಳಿಸಿದನು 3) ಶಂಕರ ತಂದೆ ಮೈಲಾರ ಮಾದರ @ ಹೊಸಮನಿ ಸಾಃ ಚಟ್ನಳ್ಳಿ ತಾಃ ಸಿಂದಗಿ
ಟಿಪ್ಪರ್ ಎಪಿ-28-ಟಿಸಿ-9798 ನೇದ್ದರ ಚಾಲಕ ಅಂತ ತಿಳಿಸಿದನು, ನಂತರ ಅವರಿಗೆ ಟಿಪ್ಪರ್ಗಳಲ್ಲಿ ಮರಳು
ತುಂಬಿಕೊಂಡು ಬರಲು ನಿಮ್ಮ ಹತ್ತಿರ ಸಂಭಂದ ಪಟ್ಟ ಇಲಾಖೆಯಿಂದ ರಾಯಲ್ಟಿ/ಪರವಾನಿಗೆ ಪತ್ರ ಇದೇಯೆ
ಅಂತ ವಿಚಾರಿಸಲು ಅವರು ನಾವು ಭೀಮಾ ನದಿಯಿಂದ ಮರಳು ತುಂಬಿಕೊಂಡು ಬರುತ್ತಿದ್ದು ನಮ್ಮ ಹತ್ತಿರ
ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಅಂತ ಹೇಳಿದರು. ನಂತರ ಸ್ಥಳದಲ್ಲಿದ್ದ ಟಿಪ್ಪರ್ಗಳನ್ನು
ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಭಾರತ್
ಬೆಂಜ್ ಕಂಪನಿಯ ಟಿಪ್ಪರ್ ನಂ ಕೆ.ಎ32ಸಿ3705 ನೇದ್ದು ಇದ್ದು ಅದರಲ್ಲಿ 6 ಬ್ರಾಸ್ ಮರಳು ಅ.ಕಿ 6000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ, ಮತ್ತು 2) ಭಾರತ್ ಬೆಂಜ್ ಕಂಪನಿಯ ಟಿಪ್ಪರ್ ನಂ ಕೆಎ32-ಸಿ-3704 ನೇದ್ದು ಇದ್ದು ಅದರಲ್ಲಿ 4 ಬ್ರಾಸ್ ಮರಳು ಅ.ಕಿ 4000/-ರೂ ಆಗಬಹುದು ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ 3) ಟಾಟಾ ಕಂಪನಿಯ ಟಿಪ್ಪರ ನಂ ಎಪಿ ನಂ 28-ಟಿಸಿ-9798
ನೇದ್ದು ಇದ್ದು ಅದರಲ್ಲಿ 5
ಬ್ರಾಸ್ ಮರಳು ಅ.ಕಿ 5000/-ರೂ ಆಗಬಹುದು
ಟಿಪ್ಪರ್ ಅ.ಕಿ 5.00.000/- ರೂ ಆಗುತ್ತದೆ
ಸದರಿ ಟಿಪ್ಪರ್ಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಮತ್ತು ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ
ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ
ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ ಮೂರು
ಟಿಪ್ಪರ್ಗಳನ್ನು ಮರಳು ಸಮೇತ ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment