ಅಪಘಾತ ಪ್ರಕರಣಗಳು :
ಸೇಡಂ ಠಾಣೆ
: ದಿನಾಂಕ:07-01-2017 ರಂದು ನನ್ನ ಮಗ ಕರಿಘುಳಿ ಮತ್ತು ನಮ್ಮೂರ ಅಯ್ಯಪ್ಪ ತಂದೆ ಬಸಪ್ಪ ಬಂಗಾಳೇರ ಕೂಡಿಕೊಂಡು
ನಸುಕಿನಲ್ಲಿ ಕೂಲಿ ಕೆಲಸಕ್ಕಾಗಿ
ನಮ್ಮೂರ ಅಮೃತ ಹೂಗಾರ ಇವರ ಟ್ರಾಕ್ಟರ್ ಮೇಲೆ ಪೇಚಿಂಗ್ ಕಲ್ಲು ಹೊಡೆಯುವ ಕುರಿತು ಹೋಗಿದ್ದರು, ಮುಂಜಾನೆ 07-00 ಗಂಟೆಗೆ ನಾನು
ಮನೆಯಲ್ಲಿದ್ದಾಗ ನನ್ನ ಮಗನೊಂದಿಗೆ ಕೆಲಸಕ್ಕೆ ಹೋದ ಅಯ್ಯಪ್ಪ ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಕರಿಘುಳಿ ಕೆಲಸಕ್ಕೆ ಹೋದ ಟ್ರಾಕ್ಟರನಲ್ಲಿ ನಾವು ಪೇಚಿಂಗ್ ಕಲ್ಲು
ತುಂಬಿಕೊಂಡು ಹುಳಗೋಳದಿಂದ ಯಾದಗೀರ ಕಡೆಗೆ ಹೊರಟಾಗ ಅಮೃತ ಹೂಗಾರ ಇವರ ಟ್ರಾಕ್ಟರ್ ನಂಬರ್ ಕೆಎ 32 ಟಿಬಿ 0941 /ಕೆ
32 0942ನೇದ್ದರ ಚಾಲಕನು ಟ್ರಾಕ್ಟರನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಸೇಡಂ
ಯಾದಗೀರ ರೋಡನಲ್ಲಿ
ಹಂದರಕಿ ಗ್ರಾಮದ ಕ್ರಾಸ್ ದಾಟಿ ಯಲ್ಲಮ್ಮ ಗಡ್ಡಿಯ ಬ್ರಿಜ್ ಹತ್ತಿರ ಮುಂಜಾನೆ 06-00 ಗಂಟೆಗೆ ಒಮ್ಮೆಲೆ
ಟ್ರಾಕ್ಟರ್ ಕಟ್ ಹೊಡೆದಾಗ ಟ್ರಾಕ್ಟರ್ ಇಂಜೆನ್ ಮೇಲೆ ಕುಳಿತಿದ್ದ ಕರಿಘುಳಿ ಈತನು ಒಮ್ಮೆಲೆ ಕೆಳಗೆ ಬಿದ್ದನು ಆಗ ಅವನಿಗೆ ತಲೆಗೆ ಭಾರಿ
ರಕ್ತಗಾಯವಾಗಿ ಮೂಗಿನಿಂದ, ಬಾಯಿಯಿಂದ, ಕಿವಿಯಿಂದ ರಕ್ತಸ್ರಾವ ಆಗಿ
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತ ತಿಳಿಸಿದನು ಆಗ ನಾನು ನನ್ನ
ಗಂಡ ಎಲ್ಲರೂ ಕೂಡಿಕೊಂಡು ಹೋಗಿ ಸ್ಥಳದಲ್ಲಿ ನೋಡಲಾಗಿ ಅಲ್ಲಿ ರೋಡಿನ ಮೇಲೆ ಬಿದ್ದು ನನ್ನ ಮಗ ಕರಿಘುಳಿ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸತ್ತಿದ್ದು ನಿಜವಿತ್ತು, ಟ್ರಾಕ್ಟರ್ ಚಾಲಕ
ಟ್ರಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಸಚೀನ ತಂದೆ
ಹಣಮಂತರಾವ ಪಾಟೀಲ ಸಾ: ತಾಳೆಗಾಂವ ದಬಡೆ ಪುಣೆ ಮತ್ತು ಸಂಕೇತ ತಂದೆ ಬಾಲಕೃಷ್ಣ ಮೊರೆ ಕಾರ ನಂ. ಎಮ್.ಎಚ್. 10 ಸಿಎ
6801 ನೇದ್ದರ ಚಾಲಕ ಸಾ: ಅಂಬೆಗಾಂವ ಪುಣೆ ರವರು ಹೋಗುತ್ತಿರುವಾಗ ತನ್ನ ಕಾರನ್ನು ಅತೀ ವೇಗ
ಮತ್ತು ನಿಸ್ಕಾಳಜಿತನದಿಂದ ನಡೆಸಿ ಮುಂದೆ ಹೊಗುತ್ತಿದ್ದ ಲಾರಿ ಡಿಕ್ಕಿಪಡಿಸಿದ್ದು
ಕಾರಿನಲ್ಲಿದ್ದವರಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲ;ಇಸಿದ ದೂರು ಸಾರಾಂಶದ
ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ
ಠಾಣೆ : ದಿನಾಂಕ 07/01/16 ರಂದು 8 ಎಎಮ
ಸುಮಾರಿಗೆ ಶ್ರೀ ಕಿಶನ ತಂದೆ ಗುಂಡುರಾವ ರಾಠೋಡ ಸಾ: ಪಾಣೇಗಾಂವ ಶಿವಾಜಿ ತಾಂಡಾ ತಾ: ಜಿ: ಕಲಬುರಗಿ ರವರು ತನ್ನ ಹೊಲ ಸರ್ವೆ ನಂ 19/3 ರಕ್ಕೆ ಹೋಗುವಾಗ ಹೊಲದ
ಸಮೀಪದಲ್ಲಿ ಶ್ರೀಗಂಧದ ಮರದ ತುಂಡನ್ನು ಕತ್ತರಿ ಸುತ್ತಾ ಕುಳಿತು ಕೊಂಡಿದ್ದು ಅವನಿಗೆ ಹತ್ತಿರ
ಹೋಗಿ ವಿಚಾರಿಸಲು ಆತನು ಅಲ್ಲಿಂದ ಓಡಿ ಹೋಗಿದ್ದು ನಂತರ ಹೊಲಕ್ಕೆ ಹೋಗಿ ನೋಡಲು ಅಲ್ಲಿದ
1000/-ರೂಗಳ ಕಿಮ್ಮತ್ತಿನ ಶ್ರೀಗಂಧದ ತುಂಡನ್ನು ಮುಂಜಾನೆ 7 ಗಂಟೆಯ ಸಮಯದಲ್ಲಿ ಕಳ್ಳತನದಿಂದ
ಕತ್ತಿರಿಸಿಕೊಂಡು ಹೋಗಿದ್ದು ಸದರಿ ನನ್ನ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ 1000/- ರೂಗಳು
ಕಿಮ್ಮತ್ತಿನ ಶ್ರೀಗಂಧದಮರವನ್ನು ಕಡಿದುಕೊಂಡು ಕಳ್ಳತನ ಮಾಡಿಕೊಂಡುಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮುಧೋಳ
ಠಾಣೆ :ಸಂತೋಷಕುಮಾರ ತಂದೆ ವೆಂಕಟೇಶ
ನಂದಿವಾಡ ಇತನು ದಿನಾಂಕ 28-12-2016 ರಂದು ಸಂತೆ ಮಾಡಿಕೊಂಡು ಬರುತ್ತೇನೆ ಅಂತಾ ಮನೆಯಿಂದ
ಹೊದವನು ಮರಳಿ ಬಂದಿರುವುದಿಲ್ಲ ಕಾಣೆಯಾಗಿದ್ದಾನೆ ಅಂತಾ ಶ್ರೀ ವೆಂಕಟೇಶ ತಂದೆ ಭೀಮಯ್ಯ ನಂದಿಪಾಡ ಸಾ
: ಮುಧೋಳ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment