ಜೇವರಗಿ ಠಾಣೆ. : ದಿ 12.02.2017 ರಂದು 22:00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು
ಸಾರಾಂಶವೆನೆಂದರೆ “ಮಾನ್ಯರವರಲ್ಲಿ ನಾನು ಭೀಮರಾಯ ತಂದೆ ಶಂಕರ ಗಾಣಿಗೇರ ವಯಾಃ 40 ವರ್ಷ, ಉಃ ಒಕ್ಕಲುತನ ಜಾತಿಃ ಗಾಣಿಗೇರ ಸಾಃ
ನೇಲೊಗಿ ತಾಃ ಜೇವರಗಿ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ, ನನ್ನ ತಮ್ಮನಾದ ಚಂದ್ರಕಾಂತ ಗಾಣೀಗೇರ
ವಯಾಃ 28 ವರ್ಷ, ಇವನ ಹೆಂಡತಿಯಾದ ಅಕ್ಕಮ್ಮ ಇವಳಿಗೆ
ಮೂರನೇ ಹೇರಿಗೆ ಸಲುವಾಗಿ ನಿನ್ನೆ ದಿನಾಂಕ 12.02.2017 ರಂದು ಮುಂಜಾನೆ
ಕಲಬುರಗಿಗೆ ಕರೆದುಕೊಂಡು ಹೋಗಿ ಹರವಾಳಕರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ಅದಕ್ಕಾಗಿ ನಿನ್ನೆ ರಾತ್ರಿ 10.00 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿದ್ದಾಗ ನನ್ನ ತಮ್ಮನಾದ
ಚಂದ್ರಕಾಂತ ಇತನು ನಮ್ಮ ಮೊಟಾರ್ ಸೈಕಲ ನಂ ಕೆಎ-36-ಯು-5200 ನೇದ್ದನ್ನು ತೆಗೆದುಕೊಂಡು
ನಮ್ಮೂರಿನಿಂದ ಕಲಬುರಗಿಗೆ ಹೋಗುವದಾಗಿ ಬಂದಿದ್ದನು. ರಾತ್ರಿ
ಅಂದಾಜ 10.45 ಗಂಟೆ ಸುಮಾರಿಗೆ ನನಗೆ ಪರಿಚಯದ
ಜೇವರಗಿ ಪಟ್ಟಣದ ನಿಂಗಣ್ಣಾ ಪೂಜಾರಿ, ಇವರು ಪೊನ ಮಾಡಿ ರೇವನೂರ ಕ್ರಾಸ್ ಹತ್ತಿರ ನೀಮ್ಮ ತಮ್ಮ ಚಂಧ್ರಕಾಂತನ ಮೊಟಾರ್ ಸೈಕಲಿಗೆ ಕಾರ
ಡಿಕ್ಕಿಯಾಗಿ ಅವನು ಸ್ಥಳದಲ್ಲಿಯೇ ಸತ್ತಿರುತ್ತಾನೆ ಅಂತಾ ಹೇಳಿದನು. ಆ ಮೇಲೆ
ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಮಲ್ಕಣ್ಣ ಗಾಣೀಗೇರ ನಮ್ಮೂರ ಸೋಮರಾಯ ಗುಜಗೊಂಡ ಕೂಡಿಕೊಂಡು
ರೇವನೂರ ಕ್ರಾಸ್ ಹತ್ತಿರ ಸ್ಥಳಕ್ಕೆ ಬಂದು ನೋಡಲಾಗಿ ರೋಡಿನ ಮೇಲೆ ನನ್ನ ತಮ್ಮನ ಹೆಣ ಬಿದ್ದಿತ್ತು ಅವನ ಮೊಟಾರ್ ಸೈಕಲ್ ಕೂಡಾ ಸ್ಥಳದಲ್ಲಿಯೇ ಜಖಂಗೊಂಡು
ಬಿದ್ದಿತ್ತು. ನನ್ನ ತಮ್ಮನಿಗೆ
ನೋಡಲು ಅವನ ಹಣೆಗೆ,
ಮುಖಕ್ಕೆ ಬಾರಿ ರಕ್ತಗಾಯ, ಬಲಗಾಲ ತೊಡೆಯ ಹತ್ತಿರ ಮುರಿದಂತೆ ಗಾಯವಾಗಿದಕ್ಕೆ ಮೃತ ಪಟ್ಟಿದ್ದನು
ಘಟನೆ ಸ್ಥಳದಲ್ಲಿ ನಿಂಗಣ್ಣ ಪೂಜಾರಿ ಹಾಗೂ ವಜಿಯೋದ್ದಿನ ಜಮಾದಾರ ಇದ್ದರು. ಘಟನೆಯ ಬಗ್ಗೆ ನಾವು ನಿಂಗಣ್ಣ ಪೂಜಾರಿ ಇತನಿಗೆ ಕೇಳಲು
ಹೇಳಿದ್ದೇನಂದರೆ,
ದಿ. 12.02.2017 ರಂದು
ನಾನು ಮತ್ತು ನನ್ನ ಗೆಳೆಯನಾದ ವಜೀಯೊದ್ದೀನ್ ಜಮಾದಾರ
ಕೂಡಿ ಮೊಟಾರ್ ಸೈಕಲ ಮೇಲೆ ಸೊನ್ನ ಕ್ರಾಸ್ ದಿಂದ
ಜೇವರಗಿಗೆ ಕಡೆಗೆ ಹೊರಟಿದ್ದೇವು. ರಾತ್ರಿ 10.30 ಗಂಟೆಗೆ ಸುಮಾರಿಗೆ ನಾವು ಜೇವರಗಿ -ಸಿಂದಗಿ ಮೇನ್ ರೊಡ ರೇವನೂರ
ಕ್ರಾಸ್ ಹತ್ತಿರ ಬರುತ್ತಿದ್ದಾಗ
ಅದೇ ವೇಳೆಗೆ ಜೇವರಗಿ ರೊಡಿನ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದುಗಡೆಯಿಂದಲೇ ಜೇವರಗಿ ಕಡೆಗೆ ಹೋಗುತ್ತಿದ ಒಬ್ಬ
ಮೊಟಾರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ಕಾರ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ
ನಿಲ್ಲಿಸಿದನು. ಇದರಿಂದ ಮೊಟಾರ್
ಸೈಕಲ್ ಸವಾರ ಮೊಟಾರ್ ಸೈಕಲ್ ಸಮೇತ ರೋಡಿನಲ್ಲಿ ಬಿದ್ದನು. ನಾವು ಅವನ ಹತ್ತಿರ ಹೋಗಿ ನೋಡಲು ಆತನು ನಿಮ್ಮ ತಮ್ಮ
ಚಂದ್ರಕಾಂತ ಇದ್ದನು. ಅವನಿಗೆ ಬಾರಿ ಗಾಯಗಳಾಗಿದ್ದರಿಂದ ಸ್ಥಳದಲ್ಲಿಯೇ ಸತ್ತಿದ್ದನು. ಕಾರಿನ ಚಾಲಕ ಆತನು ಸತ್ತಿದ್ದನ್ನು ನೋಡಿ ತನ್ನ ಕಾರ
ತೆಗೆದುಕೊಂಡು ಸಿಂದಗಿ ರೊಡಿನ ಕಡೆಗೆ ಓಡಿಸಿಕೊಂಡು ಹೋದನು. ಕಾರ ನಂ ಕೆ.ಎ-32-ಎನ್-6916 ಇತ್ತು ಅದರ ಚಾಲಕನ ಹೆಸರು ಗೊತ್ತಿರುವುದಿಲ್ಲಾ ಅಂತಾ ಹೇಳಿದನು. ನಂತರ
ನಾವು ನಮ್ಮ ತಮ್ಮನ ಹೆಣವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ
ದವಾಖಾನೆಯಲ್ಲಿ ತಂದು ಹಾಕಿರುತ್ತೆವೆ. ಕಾರ ನಂ ಕೆಎ-32-ಎನ್-6916 ನೇದ್ದರ ಚಾಲಕನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ತಮ್ಮ
ನಡೆಸಿಕೊಂಡು ಹೋಗುತ್ತಿದ್ದ ಮೊಟಾರ್ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಕ್ಕೆ ಈ ಘಟನೆ
ಸಂಭಂವಿಸಿದ್ದು, ಘಟನೆ ನಂತರ ಕಾರ
ಚಾಲಕ ಕಾರ ಸಮೇತ ಓಡಿ ಹೋಗಿದ್ದು ಅವನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ಕ್ರಮ ಕೈಕೊಳಲು
ವಿನಂತಿ” ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 24/2017 ಕಲಂ 279. 304(ಎ) ಐಪಿಸಿ ಮತ್ತು ಕಲಂ
187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿ.
ಜೇವರಗಿ ಪೊಲೀಸ್ ಠಾಣೆ : ದಿನಾಂಕ:13/02/2017
ರಂದು ಬೆಳಗ್ಗೆ 10.30 ಗಂಟೆಗೆ ಕಲಬುರಗಿ ನಗರದ ಜಿಲ್ಲಾ ಸರ್ಕಾರಿ
ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಹೊಂದುತ್ತಿದ್ದ ಶ್ರೀ
ನಿಂಗಣ್ಣ ತಂದೆ ಬಸವಣಪ್ಪಾ ಹೊನಗೊಂಡ ವ:55 ಜಾ:ಲಿಂಗಾಯತ ಉ:ಹಾಲಿನ ವ್ಯಾಪಾರ
ಸಾ:ಜೆ.ಆರ್.ನಗರ ಕಲಬುರಗಿ ಇವರಿಗೆ ಭೇಟಿಯಾಗಿ ಘಟನೆ
ಬಗ್ಗೆ ವಿಚಾರಿಸಿದ್ದು ಸದರಿಯವರು ಒಂದು ಲಿಖಿತ ದೂರು ಹಾಜರ ಪಡಿಸಿದ್ದು ದೂರಿನ ಸಾರಾಂಶವೆನೆಂದರೆ,
ನಾನು ಕಲಬುರಗಿ ನಗರದ ದೇವಿನಗರ ಕಮಾನ ಹತ್ತಿರ ಹಾಲಿನ ಡೀಲರಾದ
ನಿಂಗರಾಜ ಇತನ ಹತ್ತಿರ ಹಾಲು ತೆಗೆದುಕೊಂಡು ಮನೆ ಮನೆಗೆ ಹೋಗಿ ಮಾರಾಟ
ಮಾಡುತ್ತೇನೆ. ನನ್ನಂತೆ ಆಳಂದ ಕಾಲೋನಿಯ ವಿಜಯಕುಮಾರ
ಎಂಬುವರು ಅದೆ ಮಾಲಿಕನ ಹತ್ತಿರ ಹಾಲು ತೆಗೆದುಕೊಂಡು ವ್ಯಾಪಾರ ಮಾಡುತ್ತಾ ಬರುತ್ತಾನೆ. ಇಂದು ದಿನಾಂಕ:13/02/2017
ರಂದು ಬೆಳಗ್ಗೆ 5.30 ಗಂಟೆಯ ಸುಮಾರಿಗೆ ದೇವಿ ನಗರ ಕಮಾನ ಹತ್ತಿರ ನಾನು ಹಾಲಿನ
ಪಾಕಿಟಗಳನ್ನು ತೆಗೆದುಕೊಂಡು ಇಡುತ್ತಿರುವಾಗ
ಸದರಿ ವಿಜಯಕುಮಾರ ಈತನು ನೀನು ಬೇರೆಕಡೆ ಹಾಲಿನ ಟ್ರೇಯಗಳು ಇಡಬೇಕು ಅಂತಾ ಕಾಲಿನಿಂದ ಒದ್ದು
ಸರಿಸುತ್ತಿದ್ದನು ಆಗ ನನ್ನ ಹಾಲಿನ ಟ್ರೇಯಗಳಿಗೆ ಏಕೆ ಸರಿಸುತ್ತಿರಿ ಎಂದು ಕೇಳಿದಾಗ ಅವನು ನೀನು ಇಲ್ಲಿ
ಏಕೆ ಹಾಲಿ ಇಡುತ್ತಿ ಸೂಳೆ ಮಗನೆ ರಂಡಿ ಮಗನೆ ಅಂತಾ ಬೈದು ಅಲ್ಲೆ
ಇದ್ದ ನನ್ನ ಒಂದು ಹಾಲು ಹಾಕುವ ಪ್ಲಾಸ್ಟೀಕ ಟ್ರೇಯ ಇಂದ
ನನ್ನ ತಲೆಯ ಮೇಲೆ ಬಲಗಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಅದೆ ಟ್ರೇಯದಿಂದ
ಬೆನ್ನಿನ ಮೇಲೆ ಟೊಂಕದ ಮೇಲೆ ಹೊಡೆಯುತ್ತಿರುವಾಗ
ಸದರಿ ಲಿಂಗರಾಜ ಮತ್ತು ರೇವಣಸಿದ್ದಪ್ಪಾ ಇವರು ಜಗಳ ಬಿಡಿಸಿರುತ್ತಾರೆ. ಅವರು ಬಿಡಿಸದೆ ಇದ್ದಲ್ಲಿ ಇನ್ನೂ
ನನಗೆ ಬಹಳ ಹೊಡೆಬಡೆ ಮಾಡುತ್ತಿದ್ದರು ನನಗೆ ರಕ್ತಗಾಯ ಮತ್ತು
ಗುಪ್ತಗಾಯ ಆಗಿರುವದರಿಂದ ಉಪಚಾರ ಕುರಿತು ಜಿಲ್ಲಾ
ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ.
ಕಾರಣ ಆತನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ದೂರು
ನೀಡಿದ್ದು ಸದರಿ ದೂರಿನೊಂದಿಗೆ ಮರಳಿ ಬೆಳಗ್ಗೆ 11.30
ಗಂಟೆಗೆ ಠಾಣೆಗೆ ಬಂದು ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ
ಠಾಣೆ ಗುನ್ನೆ.ನಂ.26/17 ಕಲಂ:323,324,504
ಐಪಿಸಿ ಪ್ರಕಾರ
ಗುನ್ನೆ ದಾಖಲಾದ ಬಗ್ಗೆ ವರದಿ.
C¥sÀd®¥ÀÆgÀ oÁuÉ :
ದಿನಾಂಕ 13-02-2017 ರಂದು 5:00 ಪಿ ಎಮ್ ಕ್ಕೆ ಶ್ರೀ ಶರಣಪ್ಪ ತಂದೆ ಪೀರಪ್ಪ ಗೌಂಡಿ ಸಾ|| ಮಾಶಾಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನೀಡಿದ್ದು, ಸದರ ಪಿರ್ಯಾದಿಯ ಸಾರಾಂಶವೇನೆಂದರೆ ನಾನು ಮೇಲ್ಕಾಣಿಸಿದ ವಿಳಾಸದವನಿದ್ದು ಗೌಂಡಿ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತೇನೆ. ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ನನ್ನ ಸೋದರ ಅತ್ತೆ ಕಸ್ತೂರಬಾಯಿ ಗಂಡ ಮಲ್ಲಪ್ಪ ವಿಜಾಪೂರೆ ವಯಾ||
65 ವರ್ಷ ಎಂಬಾಕೆ ಇರುತ್ತಾಳೆ. ಸದರಿಯವಳು ಹೈದ್ರಾ ಗ್ರಾಮದಲ್ಲಿರುವ ಖಾಜಾಸಾಬ ದರ್ಗಾಕ್ಕೆ ಹೋಗುವ ಸಂಬಂದ ದಿನಾಂಕ 27-01-2017 ರಂದು ಬೆಳಿಗ್ಗೆ ನಮ್ಮ ಮನೆಗೆ ಬಂದಿರುತ್ತಾಳೆ. ನಾನು ನಮ್ಮ ಅತ್ತೆಯನ್ನು ನನ್ನ ಮೋಟರ ಸೈಕಲ ನಂ ಎಮ್.ಹೆಚ್-13 ಬಿ.ಜೆ-0609
ನೇದ್ದರ ಮೇಲೆ ಕೂಡಿಸಿಕೊಂಡು ಹೈದ್ರಾ ಗ್ರಾಮಕ್ಕೆ ಹೊರಟಿದ್ದೆನು. ಮಾರ್ಗ ಮದ್ಯದಲ್ಲಿ ಬೆಳಿಗ್ಗೆ 11:20 ಗಂಟೆ ಸುಮಾರಿಗೆ ಮಾಶಾಳ ಗ್ರಾಮದಿಂದ ಹೈದ್ರಾ ಗ್ರಾಮಕ್ಕೆ ಹೊಗುವ ರೋಡಿನ ಪಕ್ಕದಲ್ಲಿರುವ ಹಿಪ್ಪರಗಿ ರವರ ಹೊಲದ ಹತ್ತಿರ ಮೂತ್ರ ವಿಸರ್ಜನೆಗೆಂದು ರೋಡಿನ ಪಕ್ಕದಲ್ಲಿ ನನ್ನ ಮೋಟಾರ ಸೈಕಲ ನಿಲ್ಲಿಸಿರುತ್ತೇನೆ. ಅದೆ ಸಮಯಕ್ಕೆ ಮಾಶಾಳ ಗ್ರಾಮದಿಂದ ಹೈದ್ರಾ ಗ್ರಾಮದ ಕಡೆಗೆ ನನ್ನ ಹಿಂದಿನಿಂದ ಲಾರಿ ನಂ ಕೆಎ-32 7392 ನೇದ್ದು ಬರುತ್ತಿದ್ದು, ಅದರ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ ಪಕ್ಕದಲ್ಲಿ ನಿಂತಿದ್ದ ನನ್ನ ಮೋಟಾರ ಸೈಕಲಿಗೂ ಮತ್ತು ನನ್ನ ಸೋದರ ಅತ್ತೆಗೂ ಜೋರಾಗಿ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ ತನ್ನ ಲಾರಿ ಸಮೇತ ಓಡಿ ಹೋಗಿರುತ್ತಾನೆ. ಆ ಸಮಯದಲ್ಲಿ ಸದರಿ ಲಾರಿಯ ಹಿಂದೆ ಮೋಟರ ಸೈಕಲ ಮೇಲೆ ಬರುತ್ತಿದ್ದ ಹೈದ್ರಾ ಗ್ರಾಮದ ಶ್ರೀಮಂತ ತಂದೆ ಈರಣ್ಣ ರೂಗಿ ರವರು ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿರುತ್ತಾರೆ. ಸದರಿ ಘಟನೆಯಲ್ಲಿ ನನ್ನ ಸೋದರ ಅತ್ತೆಗೆ ಎರಡು ಕಾಲುಗಳಿಗೂ ಮತ್ತು ಹೊಟ್ಟೆಗೆ ಬಾರಿ ರಕ್ತಗಾಯವಾಗಿ ತಲೆಗೆ ಬಾರಿ ಒಳಪೆಟ್ಟಾಗಿರುತ್ತದೆ. ಮತ್ತು ನನ್ನ ಮೋಟರ ಸೈಕಲ ಸಹ ಜಕಂ ಗೊಂಡಿರುತ್ತದೆ. ಆಗ ನಾನು ಸದರಿ ಘಟನೆಯ ಬಗ್ಗೆ ನನ್ನ ಸೋದರತ್ತೆಯ ಮಗನಾದ ಕಾಶಿನಾಥ ತಂದೆ ಮಲ್ಲಪ್ಪ ವಿಜಾಪೂರೆ ಪೋನ ಮೂಲಕ ವಿಷಯ ತಿಳಿಸಿರುತ್ತೇನೆ. ನಂತರ ಕಾಶಿನಾಥ ವಿಜಾಪೂರೆ, ಪ್ರಕಾಶ ಗೌಂಡಿ, ವಿಜಯಕುಮಾರ ಗೌಂಡಿ ಮತ್ತಿತರರು ಒಂದು ಖಾಸಗಿ ಬೋಲೆರೊ ವಾಹನದಲ್ಲಿ ಘಟನೆ ಸ್ಥಳಕ್ಕೆ ಬಂದಿರುತ್ತಾರೆ. ನಾವೆಲ್ಲರೂ ಗಾಯಹೊಂದಿದ ನಮ್ಮ ಸೋದರತ್ತೆಯನ್ನು ಬೋಲೆರೊ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಅಕ್ಕಲಕೋಟಕ್ಕೆ ಕರೆದುಕೊಂಡು ಹೋಗಿರುತ್ತೇವೆ. 1:00 ಪಿ ಎಮ್ ಸುಮಾರಿಗೆ ನಮ್ಮ ಅತ್ತೆಯನ್ನು ಪರಿಕ್ಷೀಸಿದ ಅಕ್ಕಲಕೋಟ ಸರ್ಕಾರಿ ಆಸ್ಪತ್ರೆಯ ವೈದ್ಯಾದಿಕಾರಿಯವರು ಸದರಿಯವಳು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ಅಕ್ಕಲಕೋಟ ಪೊಲೀಸನವರು ಆಸ್ಪತ್ರೆಗೆ ಬಂದು ಶವ ಪಂಚನಾಮೆ ಕೈಕೊಂಡು ಪಿ.ಎಮ್.ಇ ಮಾಡಿಸಿಕೊಟ್ಟ ನಂತರ ಮೃತಳ ಶವವನ್ನು ಸರಸಂಬಾ ಗ್ರಾಮಕ್ಕೆ ತಗೆದುಕೊಂಡು ಶವ ಸಂಸ್ಕಾರ ಮಾಡಿರುತ್ತೇವೆ. ನನ್ನ ಅತ್ತೆ ರಸ್ತೆ ಅಫಘಾತದಲ್ಲಿ ಮೃತಪಟ್ಟ ಬಗ್ಗೆ ಅಕ್ಕಲಕೋಟ ಪೊಲೀಸನವರಿಂದ ದಾಖಲೆ ಪತ್ರಗಳು ಅಫಜಲಪೂರ ಪೊಲೀಸ್ ಠಾಣೆಗೆ ಬರಲು ತಡವಾಗಿದ್ದರಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯ ರವರು ಲಾರಿ ನಂ ಕೆಎ-32
7392 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರೂಗಿಸಬೆಕೆಂದು ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ.
ಅಂತಾ ಕೊಟ್ಟ ಹೇಳಿಕೆಯ ಫೀರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2017 ಕಲಂ
279. 304 (ಎ) ಐಪಿಸಿ ಮತ್ತು ಕಲಂ 187 ಐ ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲಾದ ಬಗ್ಗೆ ವರದಿ.
No comments:
Post a Comment