£ÀgÉÆÃuÁ oÁuÉ : ದಿನಾಂಕ: 06/02/2017
ರಂದು 9-00 ಪಿ.ಎಂ ಕ್ಕೆ ಫಿರ್ಯಾದಿದಾರರಾದ ಮಹಾನಂದಾ ಗಂಡ
ಅಂಬರಾಯ ಸಿಂಗೆ ಸಾ||ಜವಳಗಾ (ಬಿ) ಗ್ರಾಮ ಇವರು ಠಾಣೆಗೆ ಹಾಜರಾಗಿ ಈ ಲಿಖಿತ
ದೂರು ಹಾಜರು ಪಡಿಸಿದ್ದು ಈ ದೂರಿನ ಸಾರಾಂಶವೇನಂದರೆ, ನಾನು
ನನ್ನ ಗಂಡ ಈಗ ಸುಮಾರು 14 ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರ
ರಾಜ್ಯದ ಪಾಲಘರ ಪಟ್ಟಣಕ್ಕೆ ಹೋಗಿ ಅಲ್ಲಿಯೇ ಗಂಡಹೆಂಡತಿ ಇಬ್ಬರು ಕೂಲಿಕೆಲಸ ಮಾಡಿಕೊಂಡು
ವಾಸವಾಗಿರುತ್ತೇವೆ. ನಮಗೆ ಒಬ್ಬಳೆ ಹೆಣ್ಣುಮಗಳು ಇದ್ದು ಅವಳ ಹೆಸರು ಅಂಜಲಿ ಅಂತಾ ಇದ್ದು ಅವಳು
ಸದ್ಯ ಪಾಲಘರ ನಗರದ ಎಂ ಎನ್ ದಾಂಡೇಕರ ಹೈಸ್ಕೂಲನಲ್ಲಿ 9ನೇ
ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ನಮ್ಮೊಂದಿಗೆ ವಾಸವಾಗಿದ್ದು, ಅವಳು ಈಗ 16
ವರ್ಷ 4 ತಿಂಗಳು ವಯಸ್ಸಿನವಳಾಗಿರುತ್ತಾಳೆ. ನನ್ನ ಮಗಳಿಗೆ
ಉಟ್ಟಿದ 2 ವರ್ಷದಿಂದಲೆ ಆಗಾಗ ತಲೆಸುತ್ತಿ ಚಕ್ಕರ ಬಂದು
ಬಿಳುವುದು ಮಾಡುತ್ತಿದ್ದು ಅವಳಿಗೆ ಸದ್ಯ ನರತಜ್ಞರ ಹತ್ತಿರ ಚಿಕಿತ್ಸೆ ಮಾಡಿಸುತ್ತಿದ್ದು ಆದರು
ಸಹ ಅವಳು ಗುಣಮುಖಳಾಗಿರುವುದಿಲ್ಲ. ಹೀಗಾಗಿ ಅವಳಿಗೆ ಆಳಂದ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ
ಪಂಡಾರಿಪೂರ ದೇವರ ಹೇಳಿಕೆ ಮಾಡುವ ವಿಠೋಭ ಅವರ ಹತ್ತಿರ ದೇವರ ಕೇಳಬೇಕೆಂದು ದಿನಾಂಕ:27/01/2017 ರಂದು ನಮ್ಮೂರಾದ ಜವಳಗಾ ಗ್ರಾಮಕ್ಕೆ ನಾನು ಮತ್ತು
ನನ್ನ ಮಗಳು ಅಂಜಲಿ ಇಬ್ಬರು ಕೂಡಿ ಬಂದಿರುತ್ತೇವೆ. ಹೊದ ಶನಿವಾರ ಕಲ್ಲಹಂಗರಗಾ ಗ್ರಾಮಕ್ಕೆ ಹೋಗಿ
ನನ್ನ ಮಗಳನ್ನು ವಿಠೋಭ ಮುತ್ಯಾ ರವರ ಹತ್ತಿರ ತೋರಿಸಿಕೊಂಡು ಬಂದಿದ್ದು ಅವರು ಮತ್ತೆ ದಿನಾಂಕ:06/02/2017 ರಂದು ಸೋಮವಾರ ದಿವಸ ಬರಲು ತಿಳಿಸಿದ್ದರು. ದಿನಾಂಕ:04/02/2017 ರಂದು
ಮುಂಜಾನೆ ನಾನು ನಾನು ಬೇರೆಯವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗಿ ವಾಪಸ್ಸು ಸಂಜೆ 5-00 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಲಾಗಿ
ಮನೆಯಲ್ಲಿ ನನ್ನ ಮಗಳು ಅಂಜಲಿ ಕಾಣಿಸಲಿಲ್ಲ, ನಾನು
ಗಾಭರಿಗೊಂಡು ಅಕ್ಕಪಕ್ಕದ ಮನೆಯವರನ್ನು ವಿಚಾರಿಸುತ್ತಿರುವಾಗ ನಮ್ಮ ಮನೆಯ ಹತ್ತಿರದಲ್ಲಿರುವ
ರೀತಿಕಾ ತಂದೆ ಬಾಳಪ್ಪ ಸಿಂಗೆ ಇವಳು ನನಗೆ ತಿಳಿಸಿದ್ದು ಏನಂದರೆ, ಮಧ್ಯಾಹ್ನ
2-00 ಗಂಟೆ ಸುಮಾರಿಗೆ ಅಂಜಲಿ @ ಚನ್ನಮ್ಮ ಇವಳು ಬಹಿರ್ದೆಸೆಗೆ (ಸಂಡಾಸಕ್ಕೆ) ಹೋದಾಗ
ಅದೇ ಸಮಯದಲ್ಲಿ ಜವಳಗಾ ಬಿ ಗ್ರಾಮದವರಾದ ಅನೀಲ ತಂದೆ ಅಪ್ಪಾರಾಯ ಸಿರಗಾಪೂರ ಹಾಗೂ ಆತನ ತಾಯಿಯಾದ
ಸರುಬಾಯಿ ಗಂಡ ಅಪ್ಪಾರಾಯ ಸಿರಗಾಪೂರ ಇವರು ಇಬ್ಬರು ಕೂಡಿ ಅವರ ಮೊಟಾರ್ ಸೈಕಲ್ ನಂ MH-04 CK-5611
ನೇದ್ದರ ಮೇಲೆ ಬಂದು ಅಂಜಲಿಯ ಬಾಯಿ
ಒತ್ತಿಹಿಡಿದು ಅವಳನ್ನು ಒತ್ತಾಯಪೂರ್ವಕವಾಗಿ ಅವರ ಮೊಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ಚಿಂಚನಸೂರ
ಕಡೆಗೆ ಹೋಗಿರುತ್ತಾರೆಂದು ತಿಳಿಸಿದಳು. ನಂತರ ನಾನು ಅನೀಲ ಸಿರಗಾಪುರ ಇವರ ಪರಿವಾರದ ಬಗ್ಗೆ
ವಿಚಾರಿಸಲು ಸದರಿ ಯವರು ಕುಟುಂಬ ಸಮೇತವಾಗಿ ಕೆಲವು ವರ್ಷಗಳಿಂದ ಕಲಬುರಗಿ ನಗರದಲ್ಲಿಯ
ವಾಸವಾಗಿರುವ ಬಗ್ಗೆ ತಿಳಿದು ಬಂದಿರುತ್ತದೆ. ಮತ್ತು ಸದರಿಯವರು ಲಿಂಗಾಯತ ಜಾತಿಗೆ ಸೇರಿದವರು
ಅಂತಾ ಗೊತ್ತಾಗಿರುತ್ತದೆ. ನಂತರ ನಾವು ಮತ್ತು ನಮ್ಮ ಸಂಬಂಧಿಕರು ಕೂಡಿ ನನ್ನ ಮಗಳನ್ನು ಹಾಗೂ
ಅನೀಲ ಇವರನ್ನು ಹುಡುಕಾಡಿದ್ದು ಯಾವುದೇ ಸುಳಿವು ಸಿಕ್ಕರುವುದಿಲ್ಲ. ಅವರನ್ನು ಹುಡುಕಾಡಿ ಇಂದು
ದಿನಾಂಕ:06/02/2017 ರಂದು ವಿಳಂಬವಾಗಿ ಪೊಲೀಸ್ ಠಾಣೆಗೆ ಬಂದಿರುತ್ತೇವೆ.
ಜವಳಗಾ (ಬಿ) ಗ್ರಾಮದ ಲಿಂಗಾಯತ ಜಾತಿಯ ಅನೀಲ ಹಾಗೂ ಸರುಬಾಯಿ ಇವರುಗಳು ಯಾವುದೋ ದುರುದ್ದೇಶಹೊಂದಿ
ನನ್ನ ಅಪ್ರಾಪ್ತ ಮಗಳಾದ ಕು:ಅಂಜಲಿ ಇವಳನ್ನು ಒತ್ತಾಯಾಪೂರ್ವಕವಾಗಿ ಅಪಹರಿಸಿಕೊಂಡು ಹೋಗಿ ನಮ್ಮ
ಮೇಲೆ ಜಾತಿ ದೌರ್ಜನ್ಯ ತೋರಿದ್ದು ಸದರಿ ಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಂಡು
ನಮ್ಮ ಮಗಳನ್ನು ಹುಡುಕಾಡಿ ಕೊಡಬೇಕೆಂದು ವಿನಂತಿಸಿಕೊಂಡ ಮೇರೆಗೆ ಈ ದೂರಿನ ಸಾರಾಂಶದ ಮೇಲಿಂದಾ
ನಾನು ಶಿವಶಂಕರ ಎಸ್ ಸಾಹು ಪಿ ಎಸ್ ಐ ನರೋಣಾ ಪೊಲೀಸ್ ಠಾಣೆ, ಠಾಣೆಯ
ಅಪರಾಧ ಸಂಖ್ಯೆ: 16/2017 ಕಲಂ 366 (ಎ)
ಸಂ 34 ಐಪಿಸಿ ಮತ್ತು ಕಲಂ 3 (2) (v) SC/ST PA ACT 1989 ನೇದ್ದರ
ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
ಮುಧೋಳ ಠಾಣೆ : ದಿನಾಂಕ:
06.02.2017 ರಂದು ಬೆಳಗ್ಗೆ 0745 ಗಂಟೆಗೆ ಮುಧೋಳ ಠಾಣೆಯ ಹೆಚ.ಸಿ 324 ಹುಸೇನಪ್ಪ ಇವರು
ಯುನೈಟೇಡ್ ಆಸ್ಪತ್ರೆ ಕಲಬುರಗಿಯಿಂದ ಎಂ.ಎಲ್.ಸಿ ಪಡೆದುಕೊಂಡು ಬಂದಿದ್ದರ ಸಾರಂಶವೆನೆಂದರೆ, ನರಸಪ್ಪಾ ತಂದೆ ಸಾಬಣ್ಣ ದಂಡೂ ವ|| 35 ವರ್ಷ ಸಾ||
ಗುಂಡಳ್ಳಿ(ಬಿ) ತಾ|| ಸೇಡಂ ಇದ್ದು, ಇಂದು
ದಿನಾಂಕ 05-02-2017 ರಂದು ರವಿವಾರ ಸೇಡಂ ಸಂತೆ ಇದ್ದ ಕಾರಣ ನಮ್ಮ ತಂದೆಯಾದ ಸಾಬಣ್ಣ ತಂದೆ ಯಲ್ಲಪ್ಪಾ ಇವರು ಇಂದು ಬೆಳಗ್ಗೆ
ನಮ್ಮೂರಿನಿಂದ ಭೂತಪೂರ ಗ್ರಾಮಕ್ಕೆ ನಮ್ಮ ತಂಗಿಯಾದ ರೇಣುಕಾ ಗಂಡ ಮೋಹನ ಇವಳ ಮನೆಗೆ ಹೋಗಿದ್ದು
ನಂತರ ನಾನು ಮತ್ತು ನಮ್ಮ ತಾಯಿಯಾದ ಸರಸ್ವತಿ ಗಂಡ ಸಾಬಣ್ಣ ಹೆಂಡತಿಯಾದ ನಾಗಮ್ಮಾ ಗಂಡ ನರಸಪ್ಪಾ
ನಾವೆಲ್ಲರೂ ಸೇರಿ ಸೇಡಂ ಸಂತೆಗೆ ಹೋಗಲು ನಮ್ಮೂರಿನ ನಾಗರಾಜ ತಂದೆ ಈಶ್ವರಪ್ಪಾ ಇವರ ಕಮಾಂಡರ ಜೀಪ
ನಂ ಎಪಿ 21,ಯು 9439 ನೆದ್ದರಲ್ಲಿ ಕುಳೀತುಕೊಂಡು ಇಂದು ಬೇಳಗ್ಗೆ 11-00 ಗಂಟೆಯ ಸುಮಾರಿಗೆ
ಸೇಡಂಕ್ಕೆ ಹೋಗುತ್ತಿದ್ದೇವು ಸದರಿ ಜೀಪಿನಲ್ಲಿ ನಮ್ಮಂತೆ ನಮ್ಮೂರ ಶಿವಮ್ಮಾ ಗಂಡ ಶರಣಪ್ಪಾ
ಹರಿಜನ, ದ್ಯಾವಮ್ಮಾ ಗಂಡ ಕಾಶಪ್ಪಾ ಬೇಡರ ಹಾಗು ಇನ್ನಿತರರು ಕುಳಿತಿದ್ದು ನಮ್ಮ ತಂದೆ ಮುಂಜಾನೆ
ಭೂತಪೂರಕ್ಕೆ ಹೋಗಿದ್ದು ಅವರು ಕೂಡ ನಮ್ಮೊಂದಿಗೆ ಸೇಡಂ ಸಂತೆಗೆ ಬರುವವರಿದ್ದು ಅವರಿಗೆ ನಾನು
ಪೋನಮಾಡಿ ನಾವೆಲ್ಲರೂ ನಮ್ಮೂರ ಕಮಾಂಡರ ಜೀಪಿನಲ್ಲಿ ಕುಳಿತು ಬರುತ್ತಿದ್ದೇವೆ ನೀನು ಭೂತಪೂರ
ಗ್ರಾಮದ ಬಸ್ಟಾಂಡ ಹತ್ತೀರ ಬಂದು ನಿಂತಿರು ನಾವು ಅಲ್ಲಿಗೆ ಬರುತ್ತೇವೆ ಅಂತಾ ಅವರಿಗೆ ಪೋನ್ಮಾಡಿ
ಹೇಳಿದ್ದೆನು. ನಾವು ಕುಳಿತು ಹೊರಟ ಕಮಾಂಡರ ಜೀಪಿನ ಚಾಲಕನು ತನ್ನ ಜೀಪನ್ನು ಅತೀವೇಗವಾಗಿ ಮತ್ತು
ನಿರ್ಲಕ್ಷತನದಿಂದ ನಡೆಸುತ್ತಾ ಹೋಗುತ್ತಿದ್ದಾಗ ಒಳಗಡೆ ಕುಳಿತ ನಾವೆಲ್ಲರೂ ಅವನಿಗೆ ಜೀಪನ್ನು
ನೀಧಾನವಾಗಿ ನಡೆಯಿಸು ಅಂತಾ ಹೇಳದರೂ ಕೇಳದೇ ಆಗೇ ನಡೆಸುತ್ತಿದ್ದನು. ಗುಂಡಳ್ಳಿ(ಬಿ) ಯಿಂದ
ಭೂತಪೂರಕ್ಕೆ ನಾವು ಕುಳಿತು ಹೊರಟ ಜೀಪು ಬಂದಿದ್ದು ಭೂತಫೂರ ದಾಟಿ ಸ್ವಲ್ಪ ದೂರದಲ್ಲಿ ನೀರಿನ
ಟ್ಯಾಂಕ ಹತ್ತೀರ ನಮ್ಮ ತಂದೆಯು ನಮ್ಮ ಜೀಪಿಗಾಗಿ ಕಾಯುತ್ತಿದ್ದು ಸದರಿ ಜೀಪಿನ ಚಾಲಕನಿಗೆ ನಾನು
ಭೂತಫೂರದ ನೀರಿನ ಟ್ಯಾಂಕ ಹತ್ತೀರ ನಮ್ಮ ತಂದೆಯು ಜೀಪಿಗಾಗಿ ಕಾಯುತ್ತಾ ನಿಂತಿದ್ದಾರೆ ಅವರು
ನಮ್ಮೊಂದಿಗೆ ಸೇಡಂಕ್ಕೆ ಬರುವವರಿದ್ದು ಅವರ ಹತ್ತೀರ ಜೀಪನ್ನು ನಿಲ್ಲಿಸಿ ಅಂತಾ ಹೇಳಿದ್ದು ಸದರಿ
ಜೀಪಿನ ಚಾಲಕನು ತನ್ನ ಕಮಾಂಡರ ಜೀಪನ್ನು ನಮ್ಮ ತಂದೆಯ ಹತ್ತೀರ ಹೋಗಿ ನಿಲ್ಲಿಸಿದ್ದು ನಮ್ಮ ತಂದೆ
ನಾವು ಕುಳಿತು ಹೊರಟ ಕಮಾಂಡರ ಜೀಪಿನಲ್ಲಿ ಏರುತ್ತಿದ್ದಾಗ ಸದರಿ ಜೀಪಿನ ಚಾಲಕನು ಒಮ್ಮಿಲೇ
ಜೀಪನ್ನು ಮುಂದಕ್ಕೆ ಬಿಟ್ಟಾಗ ಜೀಪನ್ನು ಏರುತ್ತಿದ್ದ ನಮ್ಮ ತಂದೆಯು ಕೆಳಗಡೆ ರಸ್ತೇಯ ಮೇಲೆ
ಬಿದ್ದಿದ್ದು ನಂತರ ನಾವೆಲ್ಲರೂ ಸೇರಿ ಜೀಪಿನಿಂದ ಇಳಿದು ನಮ್ಮ ತಂದೆಗೆ ಮೇಲೆ ಏಬ್ಬಿಸಿ ನೋಡಲಾಗಿ
ಅವರ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಹಾಗು ಎದೆಗೆ ಭಾರಿ ಗುಪ್ತಗಾಯವಾಗಿ ಬೇವಾಸಾಗಿ
ಬಿದ್ದಿದ್ದು ನಂತರ ಅವರಿಗೆ ಉಪಚಾರ ಕುರಿತು ನಾನು ಮತ್ತು ಸದರಿ ಜೀಪಿನ ಚಾಲಕ ನಾಗರಾಜ ತಂದೆ
ಈಶ್ವರಪ್ಪಾ ಹಾಗು ನಮ್ಮ ತಾಯಿ ಸರಸ್ವತಿ ಗಂಡ ಸಾಬಣ್ಣ ನನ್ನ ಹೆಂಡತಿಯಾದ ನಾಗಮ್ಮಾ ಹಾಗು ಇತರರು
ಸೇರಿ ಸದರಿ ಜೀಪಿನಲ್ಲಿ ನಮ್ಮ ತಂದೆಗೆ ಹಾಕಿಕೊಂಡು ಸೇಡಂದ ಶ್ರೀನಿವಾಸ ಡಾಕ್ಟರ ಹತ್ತೀರ ತೋರಿಸಿ
ನಂತರ ಹೆಚ್ಚಿನ ಉಪಚಾರ ಕುರಿತು ಅಂಬ್ಯೂಲೇನ್ಸನಲ್ಲಿ ಇಂದು ಮದ್ಯಾಹ್ನ ಇಲ್ಲಿಗೆ ತಂದು ಸೇರಿಕೆ
ಮಾಡಿದ್ದು ಸದ್ಯ ನಮ್ಮ ತಂದೆಯು ಇಲ್ಲಿ ಉಪಚಾರಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ
ಇರುವದಿಲ್ಲಾ. ಸದರಿ ಘಟನೆ ನಡೆದಾಗ ಇಂದು ಬೇಳಗ್ಗೆ 11-30 ಗಂಟೆ ಆಗಿದ್ದು ಇರುತ್ತದೆ.
ಕಾರಣ
ಸದರಿ ಕಮಾಂಡರ ಜೀಪ ನಂ ಎಪಿ 21,ಯು 9439 ನೇದ್ದರ ಚಾಲಕ ನಾಗರಾಜ ತಂದೆ ಈಶ್ವರಪ್ಪಾ ಸಾ: ಭೂತಪೂರ
ತಾ: ಸೇಡಂ ಇವನ ಮೇಲೆ ಕಾನುನು ರಿತೀಯ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಂಶದ ಮೇಲಿಂದ ನಾನು
ಚಂದ್ರಶೇಖರ ಹೆಚ.ಸಿ 319 ಮುಧೋಳ ಪೊಲೀಸ ಠಾಣೆ ಗುನ್ನೆ ನಂ 15/2017 ಕಲಂ 279, 338 ಐಪಿಸಿ
ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು, ಸದರಿ ಪ್ರಕರಣದ
ಮೂಲ ಪ್ರಥಮ ವರ್ತಮಾನ ವರದಿಯನ್ನು ಮಾನ್ಯ 3ನೇ ಜೆ.ಎಂ.ಎಫ.ಸಿ ಕೊರ್ಟ ಕಲಬುರಗಿ ರವರಲ್ಲಿ ಹೆಚ.ಸಿ
324 ಹುಸನಪ್ಪಾ ಇವರ ಮುಖಾಂತರ ಮಾನ್ಯ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ
ಇಂದು ದಿನಾಂಕ: 06-02-3017 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ಸದರಿ ಪ್ರಕರಣದಲ್ಲಿಯ
ಫೀರ್ಯಾದಿ ನರಸಪ್ಪಾ ತಂದೆ ಸಾಬನ್ಣಾ ದಂಡೂ ಸಾ: ಗುಂಡಳ್ಳಿ(ಬಿ) ಇತನು ಠಾಣೆಗೆ ಹಾಜರಾಗಿ ಪುರವಣಿ
ಹೇಳಿಕೆ ನೀಡಿದೆನೆಂದರೆ, ಇಂದು ಮುಂಜಾನೆ ನಾನು ನಮ್ಮ ತಂದೆಗೆ ಯುನೈಟೆಡ್
ಆಸ್ಪತ್ರೆಯಲ್ಲಿ ಉಪಚಾರ ಪಡೆಸುತ್ತಾ ಖರ್ಚಿಗೆ ಹಣ ಖಾಲಿಯಾಗಿದ್ದರಿಂದ ಹಣ ತೆಗೆದುಕೊಂಡು ಹೋಗಲು ನಮ್ಮೂರಿಗೆ
ಬಂದು ಹಣ ತೆಗೆದುಕೊಂಡು ವಾಪಸ್ಸ ಯುನೈಟೆಡ್ ಆಸ್ಪತ್ರೆಗೆ ಹೋಗಬೇಕು ಅಂತಾ ಮುಧೋಳ ಬಸ್ಸ ನಿಲ್ಧಣದ
ಹತ್ತಿರ ನಿಂತಿದ್ದಾಗ ನಮ್ಮ ತಮ್ಮ ಶಾಣಪ್ಪಾ ತಂದೆ ಸಾಬಣ್ಣಾ ದಂಡೂ ಇತನು ನನಗೆ ಫೋನ ಮಾಡಿ
ಹೇಳಿದೆನೆಂದೆನೆಂದರೆ ನಮ್ಮ ತಂದೆ ಸಾಬಣ್ಣಾ ಇತನಿಗೆ ಹೆಚ್ಚಿನಉಪಚಾರ ಕುರಿತು ಯುನೈಟೆಡ್
ಆಸ್ಪತ್ರೆ ಕಲಬುರಗಿಯಿಂದ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು
ವೈಧ್ಯಧಿಕಾರಿಗಳು ನಮ್ಮ ತಂದೆಯನ್ನು ಪರೀಕ್ಷೆ ಮಾಡಿ ನೀವು ನಿಮ್ಮ ತಂದೆಯನ್ನು ಇಲ್ಲಿಗೆ ತಂದು
ಸೇರಿಕೆ ಮಾಡುವಷ್ಟರಲ್ಲಿ ಸಾಯಂಕಾಲ 1730ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾರೆ ಅಂತಾ
ತಿಳಿಸಿದರು.ಅಂತಾ ತಿಳಿಸಿರುತ್ತಾನೆ. ಕಾರಣ ಸದರಿ ಗುನ್ನೆ ನಂ 15/2017 ಕಲಂ 279, 338
ಐಪಿಸಿ ನೇದರಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಮಾನ್ಯರಲ್ಲಿ
ವಿನಂತಿಸಿಕೊಂಡಿದ್ದು ಇರುತ್ತದೆ, ಅಂತಾ ಮಾನ್ಯರವರಲ್ಲಿ ವರದಿ ಸಲ್ಲಿಸುತ್ತಿರುವದಾಗಿ ವಿನಂತಿ.
¥sÀgÀºÀvÁ¨ÁzÀ oÁuÉ : ¢;4/2/17 gÀAzÀÄ 7
¦JªÀÄUÉ ¦AiÀiÁ𢠪ÀÄUÀ£ÀÄ vÀªÀÄä ¸ÀéAvÀ C¯ÉÆÖà PÁgÀ £ÀA PÉJ 28 J£ï 4657
£ÉÃzÀÝ£ÀÄß eÉêÀVð¬ÄAzÀ vÉUÉzÀÄPÉÆAqÀÄ ºÉÆÃVzÀÄÝ PÀ®§ÄgÀVUÉ PÀqÉUÉ
ºÉÆÃUÀÄvÉÛÃ£É CAvÁ ºÉÆÃVzÀÄÝ £ÀAvÀgÀ ¢: 05/02/17 gÀAzÀÄ ªÀÄÄAeÁ£É ¸ÀzÀj PÁgÀÄ
J£ïºÉZï 218 PÉÃAzÀæ PÁgÁ UÀȺÀzÀ ºÀwÛgÀ ¥À°ÖAiÀiÁzÀ §UÉÎ ¦AiÀiÁð¢ AiÀÄ ¸ÉƸÉUÉ
CªÀgÀ vÀªÀÄä w½¹zÀÄÝ D «µÀAiÀÄ ¦AiÀiÁð¢UÉ ¸ÉÆ¸É w½¹zÀÄÝ ¦AiÀiÁ𢠸ÀܼÀPÉÌ §AzÀÄ
£ÉÆÃr vÀªÀÄä ªÀÄUÀ£À ªÉƨÉÊ°UÉ PÀgÉ ªÀiÁrzÀÄÝ ¸ÀzÀj ªÉƨÉÊ® ¹éÃZïD¥ï DVzÀÄÝ
¸ÀzÀj PÁgÀÄ ¥À°ÖAiÀiÁUÀ®Ä vÀªÀÄä ªÀÄUÀ PÁgÀ£ÀÄß Cwà ªÉÃUÀªÁV C®PÀëvÀ£À¢AzÀ
ZÀ¯Á¬Ä¹ zÀÝjAzÀ ¢:05/02/17 gÀAzÀÄ 1 JJªÀÄ ¢AzÀ 2 JJªÀÄ ªÀÄzÀåzÀ CªÀ¢üAiÀÄ°è
PÁgÀÄ ¥À°ÖAiÀiÁVgÀÄvÀÛzÉ CAvÁ F «µÀAiÀÄzÀ°è PÀæªÀÄ PÉÊPÉƼÀî®Ä w½¹zÀÄÝ
No comments:
Post a Comment