ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ
ಠಾಣೆ : ದಿನಾಂಕ 27/03/2017 ರಂದು
ಸಾಯಂಕಾಲ ಫರಥಾಬಾದ ಠಾಣಾ ವ್ಯಾಪ್ತಿಯ ಸೀತನೂರ ಗ್ರಾಮದ ಅಮೃತ ಬಂಕೂರ ಇವರ ಮನೆಚಿು ಮುಂದಿನ
ಸಾರ್ವಜನಿಕ ಕಟ್ಟೆ ಮೇಲೆ ಅಂದರ -ಬಹಾರ ಎಂಬ ಇಸ್ಪೀಟ ಜೂಜಾಟವಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ
ಶ್ರೀ ಪಿ.ಎಸ್. ವನಚಿಜಕರ ಪಿ.ಎಸ್.ಐ ಫರಹತಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ
ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂಬಾರಾಯ ತಂದೆ
ಮಹಾದೇವಪ್ಪ ಕಣ್ಣಿ ಸಂಗಡ ಇನ್ಮ್ನ 3 ಜನರು ಸಾ// ಸೀತನ್ರರ ,ಕಲ್ಲೂರ(ಕೆ) ಹಾಗೂ ಆಂದೋಲ ರವರನ್ನು ವಶಕ್ಕೆ
ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ 4040/- ರೂಪಾಯಿ
ನಗದು ಹಣ ಮತ್ತು 52 ಇಸ್ಪೀಟದ ಎಲೆಗಳು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ
ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀ ವೈಜನಾಥ ತಂದೆ ಮಹಾರುದ್ರಪ್ಪಾ ಕುಲಕರ್ಣೀ ಸಾ:ಸ್ವಾಮಿ ವಿವೇಕಾನಂದ ನಗರ ಮಾಳೆವಾಡಿ ಕಲಬುರಗಿ ಇವರು ದಿನಾಂಕ:23/03/2017 ರಂದು ನನ್ನ ಹೆಂಡತಿ ಕಾಂಚನಾ ಇವಳು ತನ್ನ ತವರು ಮನೆಗೆ ಹೋಗಿದ್ದು ನಾನು ದಿನಾಂಕ:25/03/2017 ರಂದು ಬೆಳಗ್ಗೆ 8.30 ಗಂಟೆಗೆ ನಮ್ಮ ಮನೆಯ ಕೀಲಿ ಹಾಕಿಕೊಂಡು ನನ್ನ ಕೆಲಸದ ನಿಮೀತ್ಯವಾಗಿ ಹೋಗಿರುತ್ತೇನೆ ನಂತರ ಇಂದು ದಿನಾಂಕ:27/03/2017 ರಂದು ಸಾಯಂಕಾಲ 5.00 ಗಂಟೆಗೆ ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗಿಲಿನ ಕೀಲಿ ಮುರಿದು ಒಳಗೆ ಹೋಗಿ ಮನೆಯಲ್ಲಿ ಅಲಮಾರಿಯಲ್ಲಿಟ್ಟಿದ್ದ 3 ಗ್ರಾಂ ಬಂಗಾರದ ಒಂದು ಉಂಗುರ ಅ.ಕಿ.10000/-ರೂ ಮತ್ತು 02 ಗ್ರಾಂ ಬಂಗಾರದ ಕಿವಿಯ ಬೆಂಡೋಲಿ ಅ.ಕಿ.6800/-ರೂ ಹಾಗೂ ಹಾಲ್‌ನಲ್ಲಿ ಹಾಕಿದ 01 ಎಲ್.ಜಿ ಕಂಪನಿಯ ಎಲ್.ಸಿ.ಡಿ ಟಿ.ವಿ ಅ.ಕಿ.8000/-ರೂ ಹಿಂಗೆ ಒಟ್ಟು 24800/-ರೂ ಬೆಲೆವುಳ್ಳ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ:25/03/2017 ರಂದು ಬೆಳಗ್ಗೆ 8.30 ಗಂಟೆಯಿಂದ ಇಂದು ದಿನಾಂಕ:27/03/2017 ರ ಸಾಯಂಕಾಲ 5.00 ಗಂಟೆಯ ಅವದಿಯೊಳಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment