ಕಳವು ಪ್ರಕರಣ :
ಜೇವರಗಿ ಠಾಣೆ : ಡಾ : ರಾಜಶೇಖರ ತಂದೆ ಚಂದ್ರಶೇಖರ ಸುಲೇಪೆಟಕರ್ ಸಾಃ (ರವಿ ಕುಂಜ) ಮೊಹನ ನಗರ ಹಳೆ ಜೇವರಗಿ ರಸ್ತೆ ಕಲಬುರಗಿ ಹಾಃವಃ ಬಸವೇಶ್ವರ ನಗರ ಜೇವರಗಿ ] ಮತ್ತು ನನ್ನ ಹೆಂಡತಿ ಸ್ವಪ್ನಾ ಸುಲೇಪೇಟಕರ್ ಇಬ್ಬರೂ ಡಾಕ್ಟರ್ ಕೆಲಸ ಮಾಡಿಕೊಂಡಿರುತ್ತೇವೆ. ನಮ್ಮದೊಂದು ಜೇವರಗಿ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ನಿರ್ಮಲಾ ದೇವಿ ಚೈಲ್ಡ್ & ಮೇಟರನೇಟಿ ಆಸ್ಪತ್ರೆ ಇರುತ್ತದೆ. ಆ ಅಸ್ಪತ್ರೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೆಲಸ ಮಾಡುತ್ತೇವೆ ಅಲ್ಲದೇ ನಮ್ಮ ಮನೆ ಜೇವರಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮಲ್ಲಣಗೌಡ ತಂದೆ ಭೀಮರಾಯಗೌಡ ಪಾಟೀಲ ಸಾಃ ನೇದಲಗಿ ಇವರ ಮನೆಯಲ್ಲಿ ಬಾಡಿಗೆಯಿಂದ ಇರುತ್ತೇವೆ. ದಿನಾಂಕ 30.03.2017 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನಾನು ಮನೆಯಿಂದ ಆಸ್ಪತ್ರೆಗೆ ಹೋದೆನು. ನಂತರ ಮುಂಜಾನೆ 11.00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಡಾಃ ಸ್ವಪ್ನಾ ಇವಳು ನಮ್ಮ ಮನೆಯ ಬಾಗಿಲ ಕೀಲಿ ಹಾಕಿ ಆಸ್ಪತ್ರೆಗೆ ಬಂದಿರುತ್ತಾಳೆ. ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಆಸ್ಪತ್ರೆಯಿಂದ ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಬಾಗಿಲು ಕೊಂಡಿ ಹಾಕಿದ್ದು ಇತ್ತು. ನಂತರ ನಾವಿಬ್ಬರೂ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಲದೇ ಅಲಮಾರಿ ಬಾಗಿಲ ತೆರೆದಿತ್ತು. ನೋಡಲಾಗಿ ಅದರಲ್ಲಿ ಇಟ್ಟ ಒಟ್ಟು ಇಪ್ಪತ್ತೈದುವರೆ ತೊಲೆ ಬಂಗಾರ & ಡೈಮಂಡ್ ಆಭರಣಗಳು ಒಟ್ಟು ಅ.ಕಿ. 7,42,500/-ರೂ ನೇದ್ದವುಗಳು ಯಾರೊ ಕಳ್ಳರು ದಿನಾಂಕ 30.03.2017 ರ ಮುಂಜಾನೆ 11.30 ಗಂಟೆಯಿಂದ ಮದ್ಯಾಹ್ನ 3.00 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಬಾಗಿಲ ತೆರೆದು ಮನೆಯಲ್ಲಿನ ಕಬ್ಬಿಣದ ಅಲಮಾರದಲ್ಲಿ ಇಟ್ಟ ಬಂಗಾರ & ಡೈಮಂಡ್ ಆಭರಣಗಳುನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 30/03/2017 ರಂದು ಸಾಯಂಕಾಲ ಸರಡಗಿ ಗ್ರಾಮದ ಹತ್ತೀರ ಭೀಮಾ ನದಿಯಲ್ಲಿ ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಕ ಸುಮಾರು 35 ರಿಂದ 40 ವರ್ಷ ಇತನ ಶವ ಇದ್ದು ಇತನ ಸಾವಿನಲ್ಲಿ ಸಂಶಯ ಇರುತ್ತದೆ ಮುಂದಿನ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಬಸವರಾಜ ಡೆಂಗಿ ಸಾ :
ಫರಹತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment