Police Bhavan Kalaburagi

Police Bhavan Kalaburagi

Thursday, April 20, 2017

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 19-04-2017 ರಂದು ಬೆಳಗ್ಗೆ ನಾನು ಅಂಬೇಡ್ಕರ ಭವನ ಎದುರುಗಡೆ ಇರುವ ಮಲ್ಲಣ್ಣಾ ತಂದೆ ಭೀಮಶ್ಯಾ ಟೆಂಗಳಿ ಇವರ ಕಿರಾಣಿ ಅಂಗಡಿ ಎದುರುಗಡೆ ನಿಂತುಕೊಂಡು ಮಲ್ಲಣ್ಣಾ ಇತನೊಂದಿಗೆ ನಕರಿ ಮಾತಾಡುತ್ತಾ ನಿಂತಿರುವಾಗ ಅದೇ ಸಮಯಕ್ಕೆ ಊರ ಕಡೆಯಿಂದ ನಮ್ಮೂರಿನ  ಕುರುಬ ಜನಾಂಗದ ದೇವಿಂದ್ರಪ್ಪ @ ದೇವಪ್ಪ ತಂದೆ ಬೀರಪ್ಪ ಆಲಗೂಡ ಇತನು ನನ್ನ ಹತ್ತಿರ ಬಂದವನೇ ನನಗೆ ಏ ಹೊಲ್ಯಾ ಸೂಳೇ ಮಗನೇ ಬೇರೆಯುವರ ಮೇಲೆ ಹಾಕಿ ಬೈದು ನನಗೆ ನಕರಿ ಮಾಡುತ್ತೀ ಅಂತಾ ಬೈದಾಗ ಇಬ್ಬರಲ್ಲಿ ಬಾಯಿ ತಕರಾರು ಆಗಲು ದೇವಿಂದ್ರಪ್ಪ @ ದೇವಪ್ಪ  ಇತನು ಅಲ್ಲೇ ಬಿದ್ದ ಒಂದು ಬಡಿಗೆ ತೆಗೆದುಕೊಂಡು ನನ್ನ ಎಡ ತಲೆಯ ಮೇಲೆ ಮತ್ತು  ಎಡ ಭುಜದ ಹಿಂದುಗಡೆ ಹೊಡೆದಾಗ ಜಗಳಾ ಬಿಡಿಸಲು ಬಂದ ಫಿರ್ಯಾದಿ ತಮ್ಮ ಶಂಭುಲಿಂಗ, ಮತ್ತು ಮಗ ವಿನೋದ, ತಂಗಿ ಮಲ್ಲಮ್ಮಾ ಇವರಿಗೂ ಅಂಬಾರಾಯ, ರಮೇಶ, ಹಣಮಂತ ಮತ್ತು ಹೆಣ್ಣುಮಕ್ಕಳಾದ ಜಗದೇವಿ, ಶರಣಮ್ಮಾ,ರೇಣುಕಾ, ಸುಮಿತ್ರಾಬಾಯಿ ಇವರೆಲ್ಲರೂ ಗುಂಪುಕಟ್ಟಿಕೊಂಡು ಬಂದು ಅವರಿಗೆ ಕೈಯಿಂದ ಬಡಿಗೆಯಿಂದ ಕಲ್ಲಿನಿಂದ ತಲೆಗೆ ಬೆನ್ನಿಗೆ, ಹೊಡೆದು ರಕ್ತಗಾಯಗೊಳಿಸಿದ್ದು. ಅಲ್ಲದೇ ಹಣಮಂತ ಇತನು ಮಲ್ಲಮ್ಮಾಳ  ಕೈ ಹಿಡಿದು ಜಗ್ಗಿ ಕೈಯಿಂದ ಅವಳ ಬೆನ್ನ ಮೇಲೆ ಹೊಡೆಯುತ್ತಿದ್ದಾಗ ಅಲ್ಲೇ ಇದ್ದ ಕಿರಾಣಿ ಅಂಗಡಿ ಮಾಲೀಕ ಮಲ್ಲಣ್ಣಾ ತಂದೆ ಭೀಮಶ್ಯಾ ಟೆಂಗಳಿ ಮತ್ತು  ನಿಂಗಪ್ಪ ತಂದೆ ಬಸಣ್ಣಾ ಆಲೂಗಡ, ಶಿವಪ್ಪ ತಂದೆ ಶರಣಪ್ಪ ಗೊಲ್ಲರ ಇವರು ಬಂದು ಜಗಳಾ ಬಿಡಿಸಿಕೊಂಡರು. ಇಲ್ಲದಿದ್ದರೆ ನಮಗೆ ಇನ್ನೂ ಹೊಡೆ ಬಡೆ ಮಾಡುತ್ತಿದ್ದರು. ಈ ಮೇಲಿನ ಎಲ್ಲಾ ಜನರು  ಫಿರ್ಯಾದಿ  ಮತ್ತು ತಮ್ಮ ಶಂಭುಲಿಂಗ, ಮಗ ವಿನೋದ, ತಂಗಿ ಮಲ್ಲಮ್ಮಾ ನಾಲ್ಕು ಜನರಿಗೆ ಏ ಹೊಲ್ಯಾ ಸೂಳೇ ಮಕ್ಕಳೇ ನಮ್ಮದೊಂದಿಗೆ  ಇನ್ನೊಮ್ಮೆ  ಜಗಳಾಕ್ಕೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವ ಭಯ ಹಾಕಿರುತ್ತಾರೆ ಅಂತಾ ಶ್ರೀ ನಾಗಪ್ಪಾ ತಂದೆ ಶಿವಶರಣಪ್ಪಾ ಹೊಸಮನಿ ಸಾ : ಬೇಲೂರ (ಜೆ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 18/04/2017 ರಂದು ಸಾಯಂಕಾಲದ ಸುಮಾರಿಗೆ ರಾಣೀಫೀರ ದರ್ಗಾದ ಹತ್ತಿರ ಇರುವ ತನ್ನ ಅಣ್ಣನ ಮನೆಗೆ ತನ್ನ ಮೋಟಾರ ಸೈಕಲ್ ನಂ ಕೆಎ-32 ಕ್ಯೂ-7975 ನೇದ್ದರ ಮೇಲೆ ಹೋಗಿ ಮರಳಿ ಆಳಂದ ಚೆಕ್ಕ ಪೊಸ್ಟ ಕಡೆಗೆ ಬರುವ ಕುರಿತು ಕೃಷಿ ವಿಶ್ವವಿದ್ಯಾಲದ ಹತ್ತಿರ ಬರುತ್ತಿದ್ದಾಗ  ಅದೇ ವೇಳೆಗೆ ಹಿಂದಿನಿಂದ ಅಂದರೇ ರಾಣೀಪೀರ ದರ್ಗಾ ಕಡೆಯಿಂದ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಮೃತ ಶಿವಾಜಿರಾವ ಇತನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೃತ ಶಿವಾಜಿರಾವ ಇತನಿಗೆ ತಲೆಗೆ ಭಾರಿ ಗುಪ್ತಗಾಯ ಹಾಗು ಇತರೇ ಭಾಗಕ್ಕೆ ಗುಪ್ತಗಾಯವಾಗಿ ಮೂಗಿನಿಂದ ಮತ್ತು ಎರಡು ಕಿವಿಗಳಿಂದ ರಕ್ತಸ್ರಾವವಾಗುತ್ತಿದ್ದು ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗ ಒಯ್ದು ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಆತನಿಗೆ ನೋಡಿ ಸದರಿಯವನು ಈಗಾಗಲೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಉಮಾಶ್ರೀ ಗಂಡ ಶಿವಾಜಿರಾವ ಸೂರ್ಯವಂಶಿ ಸಾ: ನ್ಯೂ ಮಾಣಿಕೇಶ್ವರಿ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 14/04/17 ರಂದು ನಮ್ಮ ತಂದೆಯಾದ ನಾಗನಾಥರಾವ ಇವರು ನಮ್ಮ ಮನೆಗೆ ಕಾಯಪಲ್ಯ ತರಲು ಬೆಳಗ್ಗೆ ಸುಮಾರು 07-00 ಗಂಟೆಗೆ ಕಣ್ಣಿ ಮಾರ್ಕೆಟ ರಸ್ತೆಯ ಪಕ್ಕದಲ್ಲಿ ನಮ್ಮ ದ್ವೀಚಕ್ರ ವಾಹನವನ್ನು ನಿಲ್ಲಿಸಿ ಕಾಯಪಲ್ಯ ಖರಿದಿ ಮಾಡಿಕೊಂಡು ಮರಳಿ ಸುಮಾರು 07-30 ಗಂಟೆಗೆ ಮರಳಿ ಬಂದು ನೊಡವಷ್ಟರಲ್ಲಿ ನಮ್ಮ ಮೋಟರ ಸೈಕಲ್ ದ್ವೀಚಕ್ತ ವಾಹನ ನಂ  ಕೆಎ-33 ಜೆ-6292 ಇದ್ದಿರುವದಿಲ್ಲಾ ನಮ್ಮ ತಂದೆ ಗಾಬರಿಗೊಂಡು ಅಲ್ಲೇಲ್ಲಾ ಕಡೆ ಹೊಡಕಾಡಿದ್ದು ನಮ್ಮ ವಾಹನದ ಬಗ್ಗೆ ಎಲ್ಲಿಯು ಸಿಕ್ಕಿರುವದಿಲ್ಲಾ ಸದರಿ ನನ್ನ ವಾಹನವನ್ನು ಕಳ್ಳತನವಾದ ಬಗ್ಗೆ ನಮ್ಮ ತಂದೆ ನನಗೆ ತಿಳಿಸಿದಾಗ ನಾನು ಕೂಡ ಸ್ಥಳಕ್ಕೆ ಬಂದು ಹುಡುಕಾಡಿದೆ ಆದರೆ ನಮ್ಮ ವಾಹನ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ. ಕಳವುವಾದ ನನ್ನ ವಾಹನ ಹಿರೋ ಹೊಂಡಾ ಸ್ಲೇಂಡರ ದ್ವೀ-ಚಕ್ತ ವಾಹನ ನಂ ಕೆಎ-33 ಜೆ-6292 ಇಂಜಿನ ನಂ-HA10EA9HM00462 ಚೆಸ್ಸಿ MBLHA10EE9HM10529 ಇದ್ದು ಅದರ ಅಂದಾಜು ಕಿಮ್ಮತ್ತು ರೂ 20,000/- ಇರುತ್ತದೆ.  ಅಂತಾ ಶ್ರೀ ಶಶಿಕಾಂತ ತಂದೆ ನಾಗನಾಥರಾವ ಮೊಹರಿರ ಸಾ:ಮನೆ ನಂ 02 ಎನ.ಜಿ.ಓ ಕಾಲೋನಿ ಸಾಯಿಮಂದಿರ ರಸ್ತೆ ಕಲಬುರಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: