Police Bhavan Kalaburagi

Police Bhavan Kalaburagi

Friday, April 28, 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 28/04/2017 ರಂದು ಶ್ರೀ ಬಾಬುರಾವ ತಂದೆ ಚೌಡಪ್ಪ ಸಾ: ಸುಂಟನೂರ ಹಾ:ವ: ರಿಂಗ ರೋಡ ಕಲಬುರಗಿ ರವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ದಿನಾಂಕ 27/04/17 ರಂದು ತಮ್ಮ ಗ್ರಾಮ ಸುಂಟನೂರನಲ್ಲಿ ಜಾತ್ರೆ ಇದುದ್ದರಿಂದ ಜಾತ್ರೆಗೆ ಹೋಗುವ ಕುರಿತು ತಾನು ಮತ್ತು ವಿಠಲ ತಂದೆ ಹಣಮಂತರಾಯ ಸಾ: ರಿಂಗ ರೋಡ ಇವರೊಂದಿಗೆ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ಮೇಲೆ ಇಬ್ಬರು ಸುಂಟನೂರಕ್ಕೆ ಹೋಗುವಾಗ ಮೋಟಾರ ಸೈಕಲ ವಿಠಲನು ನಡೆಸುತ್ತಿದ್ದು, ರಾತ್ರಿ 09-00 ಗಂಟೆ ಸುಮಾರಿಗೆ ಸುಂಟನೂರಕ್ಕೆ ಹೋಗಿ ಜಾತ್ರೆ ಮುಗಿಸಿಕೊಂಡು ವಾಪಸ್ಸು ಕಲಬುರಗಿಗೆ ಬರುವಾಗ  ವಿಠಲನು ತನ್ನ ವಶದಲ್ಲಿದ್ದ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಪಟ್ಟಣ ಸೀಮಾಂತರದ ಜವಳಿ ದಾಬಾದ ಎದುರುಗಡೆ ಮೋಟಾರ ಸೈಕಲ ಅತಿವೇಗದಿಂದ ಮತ್ತು ಅಡ್ಡಾತಿಡ್ಡಿಯಾಗಿ ನಡೆಸುತ್ತಾ ನಿಯಂತ್ರಣ ತಪ್ಪಿ ಬಲ ರೋಡ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವಯಸ್ಸಾದ ಮನುಷ್ಯನಿಗೆ ಅಪಘಾತಪಡಿಸಿದ್ದು ಆಗ ನಾವಿಬ್ಬರು ಸಹ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದಿದ್ದು ಎಲ್ಲರಿಗೊ ರಕ್ತಗಾಯಗಳಾಗಿದ್ದು. ಮೋಟಾರ ಸೈಕಲ ಕೆಎ 32 ಇಡಿ 6025 ಚಾಲಕ ವಿಠಲ ತಂದೆ ವಿಠಲ ತಂದೆ ಹಣಮಂತರಾಯ ಗುಂಡಪ್ಪ  ಸಾ: ಕಾಲನಿ ರಿಂಗ ರೋಡ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜಾಟ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 27-04-2017 ರಂದು ಹೊನ್ನ ಕಿರಣಗಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಫರಹತಾಬಾದ ಠಾಣೆರವರು ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬನಶಂಕರ ತಂ. ಸಿದ್ದರಾಮಪ್ಪ ಸಿಂಪಿ ಈತನಿಗೆ ದಸ್ತಗೀರ ಮಾಟಿ ಆತನಿಂದ ಮಟಕಾ ಚೀಟಿ ಮತ್ತು ನಗದು ರೂ 1890/- ವಶಪಡಿಸಿಕೊಂಡು ಆಪಾದಿತನ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ.

No comments: