Yadgir District Reported Crimes
ಮಹಿಳಾ
ಪೊಲೀಸ್ ಠಾಣೆ ಗುನ್ನೆ ನಂ. 09/2017 ಕಲಂ 498(ಎ)
323
324 342 504, 506 ಸಂ 149
ಐ.ಪಿ.ಸಿ ಮತ್ತು 3&4 ಡಿ.ಪಿ. ಕಾಯಿದೆ ;- ದಿನಾಂಕ 14/04/2017 ರಂದು 1.30 ಪಿ.ಎಮ್. ಕ್ಕೆ ಅನೀತಾ ಗಂಡ ರಾಜು ಉಜ್ಜೇಲಿ ವ|| 24 ಜಾತಿ ಕ್ರಿಶ್ಚನ ಉ|| ಕೂಲಿ ಸಾ|| ತೋಟ್ಲೂರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪಿರ್ಯಾಧಿ ನಿಡಿದ್ದ
ಸಾರಾಂಶ ವೆನಂದರೆ. ನನಗೆ 6 ವರ್ಷದ
ಹಿಂದೆ ತೋಟ್ಲೂರ ಗ್ರಾಮದ ರಾಜು ಇತನೊಂದಿಗೆ ಮದುವೆ ಮಾಡಿಕೊಟ್ಟದ್ದು ಇರುತ್ತದೆ. ನನಗೆ ಇಬ್ಬರು
ಹಣ್ಣು ಮಕ್ಕಳಿದ್ದು ನನಗೆ ಮದುವೆ ಆದ 2-3
ವರ್ಷ ಚೆನ್ನಾಗ ನೋಡಿಕೊಂಡು ನಂದತರವಾಗಿ ಗಂಡ ಅತ್ತೆ ಬಾವ ನಾದಿನಿಯರು ವರದಕ್ಷಿಣ ಕಿರುಕುಳ ಮತ್ತು
ಮಾನಸಿಕ ದೈಹಿಕ ಕರುಕೊಳ ಕೊಟ್ಟು ದಿನಾಂಕ 12/04/2017 ರಂದು ಹೊಡೆ ಬಡೆ ಮಾಡಿ ಅವಾಚ್ಯದಿಂದ ಬೈದು ಜೀವದ ಬೇದರಿಕೆ ಹಾಕಿ
ಕೋಣಿಯಲ್ಲಿ ಕೂಡಿ ಹಾಕಿರುತ್ತಾರೆ ಅಂತ ಪರ್ಯಾದಿ ಇರುತ್ತದೆ.
ಸೈದಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 50/2017 ಕಲಂ 279,337,338
ಐಪಿಸಿ;- ದಿನಾಂಕ: 12-04-2017 ರಂದು ಪಿಯರ್ಾದಿ ಹಾಗೂ ಇನ್ನೊಬ್ಬರು ತಮ್ಮ ಬಜಾಜ ಪಲ್ಸರ ಮೊಟರ
ಸೈಕಲ ನಂ, ಕೆಎ-33, ಜಿ-5671 ನೇದ್ದರ ಮೇಲೆ ಮದುವೆ ಮುಗಿಸಿ ಕಾಳೆಬೆಳಗುಂದಿಯಿಂದ ಮರಳಿ ಸೈದಾಪೂರಕ್ಕೆ ಬರುತಿದ್ದಾಗ 1.30ಪಿಎಮ್ ಸುಮಾರಿಗೆ ಎದುರಿನಿಂದ ಬಂದ ಮೊಟರ ಸೈಕಲ
ನಂ.ಎಪಿ-22, ಎಹೆಚ್-8442 ನೇದ್ದರ ಚಾಲಕನಾದ ಆರೊಪಿತನು ಅತೀವೇಗ ಮತ್ತು
ನಿರ್ಲಕ್ಷ್ಯತನದಿಂದ ನಡೆಸಿ ಪಿಯರ್ಾದಿಯ ಮೊಟರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಅಪಘಾತದಲ್ಲಿ
ಪಿಯರ್ಾದಿಗೆ ಮತ್ತು ಆರೊಪಿತರಿಗೆ ಮತ್ತು ಇನ್ನಿಬ್ಬರಿಗೆ ಸಾದಾಗಾಯ ಮತ್ತು ರಕ್ತ ಗಾಯ ಮತ್ತು
ಭಾರಿ ಗುಪ್ತ ಗಾಯಗಳಾದ ಬಗ್ಗೆ ಅಪರಾಧ
ಗೋಗಿ
ಪೊಲೀಸ್ ಠಾಣೆ ಗುನ್ನೆ ನಂ. 49-2017 ಕಲಂ, 323, 324, 498(ಎ), 504, 506 ಐಪಿಸಿ;- ದಿನಾಂಕ: 14/04/2017 ರಂದು 10-00 ಎಎಮ್ ಕ್ಕೆ ಠಾಣಾ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶಹಾಪೂರ ಸರಕಾರಿ ಆಸ್ಪತ್ರೆಯಿಂದ
ಪೋನ್ ಮುಖಾಂತರ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಪಡೆಯುತ್ತಿದ್ದ
ಗಾಯಾಳು ಶ್ರೀಮತಿ ಲಕ್ಷ್ಮೀ ಗಂಡ ಕಿಶನ್ ರಾಠೋಡ ಸಾ|| ನಾಗನಟಗಿ ಭೀಮ್ಲಾ ನಾಯಕ ತಾಂಡಾ ಇವರ ಹೇಳಿಕೆ ಪಡೆದುಕೊಂಡು ಮರಳಿ
ಠಾಣೆಗೆ 12-15 ಪಿಎಮ್ ಕ್ಕೆ ಬಂದಿದ್ದು
ಸದರಿ ಪಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ, ಈಗ ಸುಮಾರು 15 ವರ್ಷಗಳ ಹಿಂದೆ
ನಾಗನಟಗಿ ಭೀಮ್ಲಾನಾಯಕ ತಾಂಡಾ ಕಿಶನ್ ತಂದೆ ಬದ್ದುನಾಯಕ ರಾಠೋಡ ಇವನೊಂದಿಗೆ ಮದುವೆಯಾಗಿದ್ದು
ರೂಪಾಲಿ (10), ದೀಪಾಲಿ (08),
ಅಂತಾ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಲೋಕೇಶ (06)
ಒಬ್ಬ ಗಂಡು ಮಗನಿರುತ್ತಾನೆ. ಮದುವೆಯಾದ ಕೆಲವು ವರ್ಷಗಳವರೆಗೆ
ನನ್ನ ಗಂಡ ಸರಿಯಾಗಿದ್ದು ಸಂಸಾರ ಮಾಡಿಕೊಂಡು ಹೋಗುತ್ತಿದ್ದ ಇತ್ತಿಚೀಗೆ ಪ್ರತಿದಿನ ಕುಡಿದು ಬಂದು
ಊಟ ಮಾಡುವಾಗ, ಕೆಲಸ ಮಾಡುವಾಗ ನಿನಗೆ
ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ಕೆಲಸ ಮಾಡಲು ಬರುವುದಿಲ್ಲಾ ಅಂತಾ ಬೈಯುವುದು ಹೊಡೆಯುವುದು
ಮಾಡುತ್ತಿದ್ದ. ಆದರೂ ಕೂಡಾ ನಾನು ಸಹಿಸಿಕೊಂಡು ಸಂಸಾರ ಮಾಡಿಕೊಂಡು ಹೋಗುತ್ತಿದ್ದೆನು.
ಇತ್ತಿಚಿಗೆ ಹೊಡೆಯುವುದು ಬಡಿಯುವುದು ಹೆಚ್ಚಿಗೆ ಮಾಡುತ್ತಾ ಎರಡು ಮೂರು ದಿವಸಕ್ಕೊಮ್ಮೆ ಮನೆಗೆ
ಬರುವುದು ಮಾಡುತ್ತಿದ್ದನು. ಮನೆಗೆ ಬಂದಾಗ ಆಗಾಗ
ನಮ್ಮ ಬಾವನ ಹೆಂಡತಿಯಾದ ಕಮಲಾಬಾಯಿ ಗಂಡ ಚಂದುರಾಠೋಡ ಇವರ ಮನೆಯಲ್ಲಿ ಊಟ ಮಾಡುತ್ತಿದ್ದನು. ಹೀಗಿದ್ದು
ನಿನ್ನೆ ದಿನಂಕ: 13/04/2017 ರಂದು
ರಾತ್ರಿ 9-00 ಗಂಟೆ ಸುಮಾರಿಗೆ ನನ್ನ
ಗಂಡ ಕಿಶನ್ ಈತನು ಕಮಲಿಬಾಯಿ ಇವರ ಮನೆಯಲ್ಲಿ ಊಟ ಮಾಡಿ ಮನೆಗೆ ಬಂದಾಗ ಅದಕ್ಕೆ ನಾನು ಮನೆಗೆ ಬಂದು
ಊಟ ಮಾಡಬೇಕು ಅಲ್ಲಿ ಏಕೆ ಊಟ ಮಾಡಿದೀ ಅಂತಾ ಕೇಳಿದಕ್ಕೆ ಸಿಟ್ಟಿಗೇರಿ ನೀನು ನನಗೆ ಏನು ಕೇಳುತ್ತೀ
ಸೂಳಿ ರಂಡಿ ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲಾ ಅದಕ್ಕೆ ನಾನು ಕಮಲಿಬಾಯಿ ಇವರ
ಮನೆಯಲ್ಲಿಯೇ ಊಟ ಮಾಡುತ್ತೇನೆ ಅಂತಾ ಅಂದವನೇ ಅಲ್ಲೇ ಇದ್ದ ಬಡಿಗೆಯಿಂದ ನನ್ನ ಬಲಗಾಲ ಮೊಳಕಾಲ
ಕೆಳಗೆ ಹೊಡೆದಿದ್ದರಿಂದ ಕಾಲು ಮುರಿದಂತಾಗಿದ್ದು, ಅದೇ ಬಡಿಗೆಯಿಂದ ಹೊಡೆದು ಹಣೆಗೆ, ತಲೆಗೆ, ರಕ್ತಗಾಯವಾಗಿದ್ದು,
ಬೆನ್ನಿಗೆ ಕೈಗೆ ಗುಪ್ತಗಾಯಗಳು ಮಾಡಿರುತ್ತಾನೆ.
ಆಗ ಮೈದುನನಾದ ಶಿವ ತಂದೆ ಬದ್ದುನಾಯಕ ರಾಠೋಡ ಇತನು ಬಂದು ನನಗೆ ಹೊಡೆಯುವುದನ್ನು ನೋಡಿ
ಬಿಡಿಸಿಕೊಂಡನು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದ ಆಗ ನನ್ನ ಗಂಡನು ಇವತ್ತ ನನ್ನ ತಮ್ಮ
ಬಿಡಿಸಿಕೊಂಡಾನ ಅಂತಾ ಉಳಿದಿ ಇನ್ನೊಮ್ಮೆ ನಿನಗೆ ಜೀವದಿಂದ ಹೊಡೆದು ಖಲಾಸ ಮಾಡುತ್ತೇನೆ ಅಂತಾ
ಜೀವದ ಬೇದರಿಕೆ ಹಾಕಿ ಹೊರಟು ಹೋದನು. ನಿನ್ನೆ ರಾತ್ರಿಯಾಗಿದ್ದರಿಂದ ತಾಂಡಾದಿಂದ ಬರಲು ವಾಹನ ಇರದ
ಕಾರಣ ನಾನು ಈ ವಿಷಯವನ್ನು ನಮ್ಮ ತಂದೆ ಮತ್ತು ನಮ್ಮಣ್ಣನಿಗೆ ಪೋನ್ ಮಾಡಿ ತಿಳಿಸಿದ್ದು ಇಂದು
ನನ್ನ ತಂದೆ ಪೋಮಣ್ಣ, ನಮ್ಮಣ್ಣ ಚಂದು
ಇವರು ನಮ್ಮ ತಾಂಡಾಕ್ಕೆ ಬಂದಿದ್ದು ಅವರು ಮತ್ತು ನನ್ನ ಮೈದುನನಾದ ಶಿವಾ ಇವರು ಕೂಡಿ ಉಪಚಾರ
ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಅಡುಗೆ ಮಾಡಲು, ಕೆಲಸ ಮಾಡಲು ಸರಿಯಾಗಿ ಬರುವುದಿಲ್ಲಾ ಅಂತಾ ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ
ಕಿರುಕುಳ ನೀಡಿ ಜೀವದ ಬೇದರಿಕೆ ಹಾಕಿದ ನನ್ನ ಗಂಡ ಕಿಶನ್ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು
ಅಂತಾ ಹೇಳೀಕೆ ಮೇಲಿಂದ ಠಾಣೆ ಗುನ್ನೆನಂ: 49/2017 ಕಲಂ, 323, 324, 504, 506, 498(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ
ಪೊಲೀಸ್ ಠಾಣೆ ಗುನ್ನೆ ನಂ. 50/2017 ಕಲಂ, 143, 147, 148, 323,
324, 504, 506, ಸಂ 149 ಐಪಿಸಿ;- ದಿನಾಂಕ:
14/04/2017 ರಂದು 07:00 ಎಎಮ್ ಕ್ಕೆ ಪಿರ್ಯದಿದಾರನಾದ ಭೀಮಣ್ಣ ತಂದೆ ಕರೆಪ್ಪ
ಗುಂಡಾಪೂರ ಸಾ||ಬೂದನೂರ ಈತನು ಠಾಣೆಗೆ
ಬಂದು ಪಿಯರ್ಾದಿ ಹೇಳೀಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶವೆನೆಂದರೆ ಇಂದು ದಿನಾಂಕ:14/04/2017 ರಂದು ಸಾಯಾಂಕಾಲ 04:30 ಗಂಟೆ ಸುಮಾರಿಗೆ ಬೂದುನೂರ ಸಿಮಾಂತರದಲ್ಲಿರುವ ನಮ್ಮ ಹೊಲಕ್ಕೆ
ಹೋದಾಗ ಹೊಲದಲ್ಲಿ ನಮ್ಮೂರಿನ ಸೋಮಣ್ಣ ತಂದೆ ನಿಂಗಪ್ಪ ಟಂಕಸಾಲಿ ಈತನು ತನ್ನ ಕುರಿಗಳನ್ನು ನಮ್ಮ
ಹೊಲದಲ್ಲಿ ಬಿಟ್ಟಿದ್ದು ಅದಕ್ಕೆ ನಾನು ಸೋಮಣ್ಣ ಈತನಿಗೆ ನಮ್ಮ ಹೊಲದಲ್ಲಿ ಕುರಿಗಳು ಯಾಕೆ
ಬಿಟ್ಟಿದಿ ಅಂತಾ ಕೆನಾಲ್ ಬಾಜು ರಸ್ತೆಯ ಮೇಲೆ ನಿಂತಿದ್ದ ಸೋಮಣ್ಣ ಈತನಿಗೆ ಕೇಳಿದಕ್ಕೆ ಹೊಲ ಹಾಳು
ಬಿದ್ದಿದ್ದು ಬಿಟ್ಟರೆ ಏನಾಯಿತು ಅಂತಾ ಅಂದಿದ್ದು ಅದಕ್ಕೆ ನಾನು ನಮ್ಮ ಹೊಲದಲ್ಲಿ ಕುರಿಗಳು
ಬಿಡಬೇಡ ಅಂತಾ ಅಂದಿದ್ದಕ್ಕೆ 1] ಸೋಮಣ್ಣ
ತಂದೆ ನಿಂಗಪ್ಪ ಟಂಕಸಾಲಿ ಈತನು "ಲೇ ಸೋಳೆ ಮಗನೇ ಹಾಳ ಹೊಲದಾಗ ಬಿಟ್ಟರೆ ಏನಾಯಿತು ಊರಾಗ
ಸೋಕ್ಕ ಬಹಳ ಬಂದಾದ" ಅಂತಾ ಅಂದವನೇ ಕೈಯಿಂದ ಕಪಾಳಕ್ಕೆ ಹೊಡೆದಿದ್ದು ಆಗ ಅಲ್ಲೆ ಇದ್ದ 2]ಮಲ್ಲಪ್ಪ ತಂದೆ ನಿಂಗಪ್ಪ ಟಂಕಸಾಲಿ 3] ಮಾಥರ್ಾಂಡಪ್ಪ ತಂದೆ ನಿಂಗಪ್ಪ ಟಂಕಸಾಲಿ 4] ನಿಂಗವ್ವ ಗಂಡ ನಿಂಗಪ್ಪ ಟಂಕಸಾಲಿ 5]ಶೀಲವ್ವ 6] ನಿಂಗಪ್ಪ ತಂದೆ ಮಲ್ಲಪ್ಪ ಟಂಕಸಾಲಿ 7]ಮಲ್ಲಪ್ಪ ತಂದೆ ಭೀಮರಾಯ ಪರಸನಳ್ಳಿ ಇವರೆಲ್ಲರೂ ಕೂಡಿ
ಬಂದ್ದಿದ್ದು ಅವರಲ್ಲಿ ಮಾಥರ್ಾಂಡಪ್ಪ ತಂದೆ ನಿಂಗಪ್ಪ ಟಂಕಸಾಲಿ ಈತನು ತನ್ನ ಕೈಯಲ್ಲಿದ್ದ
ಕಲ್ಲಿನಿಂದ ನನ್ನ ಬಲಗಣ್ಣಿಗೆ ಹೊಡೆದಿದ್ದರಿಂದ
ಗುಪ್ತಗಾಯವಾಗಿದ್ದು ಮತ್ತು ಕೈಯಿಂದ ಎದೆಗೆ, ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದ್ದು, ಸೋಮಣ್ಣ ಈತನು ನನಗೆ ಹಿಡಿದುಕೊಂಡಿದ್ದು ಉಳಿದವರೆಲ್ಲರೂ ಕೈಯಿಂದ
ಮೈ ಮೇಲೆ ಹೊಡೆ ಬಡೆ ಮಾಡಿದಾಗ ನಾನು ಚೀರಾಡುವದನ್ನು ಕೇಳಿ ಬಾಜು ಹೋಲದವರಾದ ಸಾಬಣ್ಣ ತಂದೆ
ಕರೆಪ್ಪ ಬಿಜೆಸಪೂರ, ಮುದಕಪ್ಪ ತಂದೆ
ನಿಂಗಪ್ಪ ಬಿಜೆಸಪೂರ ಇವರು ಜಗಳವನ್ನು ನೋಡಿ ಬಿಡಿಸಿಕೊಂಡರು. ಆರೋಪಿತರೆಲ್ಲರೂ ಹೊಡೆದು ಹೋಗುವಾಗ
ಇವತ್ತು ಉಳಿದುಕೊಂಡಿದಿ ಇನ್ನೋಮ್ಮೆ ಸಿಗು ನಿನ್ನಗೆ ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ
ಜೀವದ ಬೆದರಿಕೆ ಹಾಕಿ ಹೋದರು. ಕಾರಣ ನನಗೆ ಕೈಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋದವರ ಮೇಲೆ
ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.50/2017 ಕಲಂ 143,147,148,323,324,504,506 ಸಂ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ: 463, 464, 415, 471,
166, 167, 109 ಸಂಗಡ 149
ಐಪಿಸಿ ;- ಮಾನ್ಯ ನ್ಯಾಯಾಲಯದ ಖಾಸಗಿ ದಾವೆ ನಂ.
9/2017 ವಸೂಲಾಗಿದ್ದು ಅದರ ಸಾರಾಂಶವೇನೆಂದರೆ ದಿನಾಂಕ: 08/07/1983 ರಂದು ಆರೋಪಿತರು ಫಿರ್ಯಾದಿಯವರ ಹೊಲ ಸರ್ವೆ.ನಂ.
16 ನೇದ್ದರ 4 ಎಕರೆ ಜಮೀನಿನ ಬಗ್ಗೆ ಸುಳ್ಳು
ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅರ್ಜಿದಾರರಿಗೆ ತೊಂದರೆ ಕೊಡುವ ಉದ್ದೇಶದಿಂದ ತಮ್ಮ
ಹೆಸರಿಗೆ ಪಹಣಿ ವರ್ಗಾವಣೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ದೂರಿನ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ. 105/2017 ಕಲಂ 463, 464, 415, 471, 166, 167, 109 ಸಂ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ: 143, 147, 148, 341, 323,
448, 420, 419, 506(2), 504 ಸಂಗಡ 149
ಐಪಿಸಿ;-
ದಿನಾಂಕ 14/04/2017
ರಂದು ಸಾಯಂಕಾಲ 7.45 ಪಿ.ಎಂ ಕ್ಕೆ ಠಾಣೇಯ ನ್ಯಾಯಾಲಯ ಕರ್ತವ್ಯದ ಪಿ.ಸಿ 271 ಮಾನಪ್ಪ ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಒಂದು ಖಾಸಗಿ ದಾವೆ ನಂ 17/2017 ತಂದು ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ಆರೋಪಿ ನಂ 1 ನೇದ್ದವನು ಪಿರ್ಯಾದಿಯ ಹೆಸರಿನಲ್ಲಿದ್ದ ಜಾಗೆಯನ್ನು ಸುಳ್ಳು ದಾಖಲೆ ಸೃಷ್ಟಿಸಿ
ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದು ದಿನಾಂಕ 24/03/2017 ರಂದು
ಆರೋಪಿತರೆಲ್ಲರೂ ಬಂದು ಪಿರ್ಯಾದಿದಾರರಿಗೆ ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೀವ
ಬೆದರಿಕೆ ಹಾಕಿದ್ದು ಇರುತ್ತದೆ ವಗೈರೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 106/2017 ಕಲಂ 143.147.148.341.323.420.419.448.504.506(2) ಸಹವಾಚಕ 149 ಐ.ಪಿ.ಸಿ
ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಅದೆ.
ಸಂಚಾರಿ
ಪೊಲೀಸ್ ಠಾಣೆ ಗುನ್ನೆ ನಂ. 22/2017 ಕಲಂ 279,337,338
ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ್;- ದಿನಾಂಕ 13/04/2017 ರಂದು 2.30 ಪಿ.ಎಮ್ ಸುಮಾರಿಗೆ ಪಿಯರ್ಾದಿ ಮತ್ತು ಜಾನಸನ್ ಇಬ್ಬರೂ ಕೂಡಿ ಹಳೆ ಬಸ್ ನಿಲ್ದಾಣದ
ಹತ್ತಿರ ಊಟ ಮಾಡಿಕೊಂಡು ಮರಳಿ ಮನೆಯ ಕಡೆಗೆ ಹೋಗುವ ಕುರಿತು ಯಾದಗಿರಿಯ ಶ್ರೀ ಶಿರಡಿ ಸಾಯಿ
ಹೋಟೆಲ್ ಹತ್ತಿರ ರಸ್ತೆ ದಾಟುತ್ತಿರುವಾಗ ಹೊಸ ಬಸ್ ನಿಲ್ದಾಣದ ಕಡೆಯಿಂದ ಮೊಟಾರ್ ಸೈಕಲ್ ನಂ ಕೆಎ 05 ಹೆಚ್.ಬಿ 2424 ನೇದ್ದರ ಚಾಲಕ ತನ್ನ ಮೊಟಾರ್ ಸೈಕಲನ್ನು ಅತಿವೇಗ
ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿ ಪಡಿಸಿದ್ದರಿಂದ ಜಾನಸನ್ ಇವರಿಗೆ ತಲೆಗೆ
ಭಾರಿ ರಕ್ತಗಾಯ ಹಾಗೂ ಪಿಯರ್ಾದಿಗೆ ಕಾಲಿಗೆ ತರಚಿದ ರಕ್ತಗಾಯವಾದ ಬಗ್ಗೆ ಅಪರಾಧ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.;- 49/2017 ಕಲಂ: 143,147,323,341,354,504, 506 ಸಂ 34 ಐ.ಪಿ.ಸಿ;- ದಿ: 15/4/2017 ರಂದು 1.00 ಪಿ.ಎಮ್ ಕ್ಕೆ ಠಾಣೆಯ
ಹೆಚ್.ಸಿ 44 ರವರು ಮಾನ್ಯ ಜೆ.ಎಮ್.ಎಫ್.ಸಿ
ನ್ಯಾಯಾಲಯ ಸುರಪೂರ ರವರಿಂದ ವಸೂಲಾದ ಖಾಸಗಿ ಫಿರ್ಯಾದಿ ಸಂ 16/2017 ನೇದ್ದು ತಂದು ಹಾಜರುಪಡಿಸಿದ್ದು ಸದರಿ ಖಾಸಗಿ ದಾವೆಯ
ಫಿರ್ಯಾದಿದಾರನಾದ ಭಾಗಪ್ಪ ತಂದೆ ಹಣಮಪ್ಪ ಬಡಿಗೇರ ಸಾ|| ಯಕ್ತಾಪೂರ ಈತನು ನೀಡಿದ ಖಾಸದಿ ದಾವೆಯ ಸಾರಾಂಶವೇನೆಂದರೆ ದಿ: 25/2/2017 ರಂದು 10.00 ಪಿ.ಎಮ್ ಸುಮಾರಿಗೆ ನಾನು
ಮತ್ತು ನನ್ನ ಹೆಂಡತಿ ಮಕ್ಕಳೆಲ್ಲರೂ ಕೂಡಿ ಊಟ ಮಾಡಿ ಮಾತನಾಡುತ್ತ
ಕುಳಿತಿದ್ದಾಗ ನಮ್ಮ ಅಣ್ಣ ತಮ್ಮಕೀಯ ಸಿದ್ದಪ್ಪ ತಂದೆ ಶರಣಪ್ಪ ಬಡಿಗೇರ ಮತ್ತು ಆತನ ಮಕ್ಕಳಾದ
ಬಸಪ್ಪ, ರವಿ ಮತ್ತು ಆತನ ಹೆಂಡತಿಯಾದ
ಪೀರಮ್ಮ ಇವರೆಲ್ಲರೂ ಕೂಡಿ ಬಂದು ನನಗೆ ಏನಲೇ ಭಾಗ್ಯಾ ನೀನು ಹೊಲಕ್ಕೆ ಎಷ್ಟು ಖರ್ಚು ಮಾಡಿದಿಯಾ
ಯಾವುದಕ್ಕೆ ಖರ್ಚು ಮಾಡಿದ್ದೀಯಾ ಹೇಳಲೇ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ
ಬೈಯುತ್ತಿದ್ದೀರಿ ಅಂತಾ ಕೇಳಲು ಅವರ ಹತ್ತಿರ ಬಂದಾಗ ಅವರು ನನಗೆ ತಡೆದು ಕೈಯಿಂದ ಹೊಡೆಯಲು
ಹತ್ತಿದಾಗ ನನ್ನ ಹೆಂಡತಿಯಾದ ಶರಣಮ್ಮಳು ಬಿಡಿಸಲು ಬಂದಾಗ ಅವರು ನನ್ನ ಹೆಂಡತಿಯ ಸೀರೆ ಹಿಡಿದು
ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದು ಆಗ ಅವರೆಲ್ಲರೂ ಕೈಯಿಂದ ಹೊಡೆಯಲು ಹತ್ತಿದ್ದರಿಂದ ನನ್ನ
ಮಕ್ಕಳಾದ ಸುನೀತಾ, ಪ್ರೇಮ ಮತ್ತು ಮೌನೇಸ ಇವರು ಬಂದು ಜಗಳ ಬಿಡಿಸಿದರು ಆಗ ಇದೊಂದು ಸಾರಿ ಉಳಿದಿದಿಯಾ ಮಗನೇ
ಇನ್ನೊಮ್ಮೆ ಸಿಕ್ದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ
ಅಂತಾ ಅರ್ಜಿಯ ಸಾರಾಂಶದ ಮೇಲಿಂದ ಕೆಂಬಾವಿ ಠಣೆಯ ಗುನ್ನೆ ನಂ 49/2017 ಕಲಂ 143,147,323,341,354,504,506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
No comments:
Post a Comment