Yadgir District Reported Crimes
ಯಾದಗಿರಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 56/2017 ಕಲಂ.
457,
380 ಐಪಿಸಿ;- ಯಾದಗಿರಯ
ಲಕ್ಷ್ಮೀ ನಗರದಲ್ಲಿರುವ ಪಿರ್ಯಾದಿಯ ಬಾಡಿಗೆ ಮನೆಯಲ್ಲಿ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲು ಕೊಂಡಿ ಮುರಿದು ಒಳಗೆ ಪ್ರವೆಶ ಮಾಡಿ
ಮನೆಯಲ್ಲಿದ್ದ ವೆನಿಟಿ ಬ್ಯಾಗಿನಲ್ಲಿಟ್ಟಿದ್ದ 1) ಮೂರುವರೆ ತೊಲೆಯ ಬಂಗಾರದ ಪಾಟ್ಲಿ ಅಂ.ಕಿ.87,500=00 2) ನಾಲ್ಕು ತೊಲೆಯ 3 ಎಳೆಯ ಬಂಗಾದ ಸರ ಅಂ.ಕಿ. 1,00,000=00 ರೂ ಒಟ್ಟು 1,87,500=00 ರೂ.
ಕಿಮ್ಮತ್ತಿನ ಬಂಗಾರದ ಸಾಮಾನುಗಳು, ಹಾಗೂ
3) 2000=00 ರೂ ನಗದು ಹಣ ಹೀಗೆ ಒಟ್ಟು
1,89,500=00 ರೂ. ಕಿಮ್ಮತ್ತಿನ
ಬಂಗಾರದ ಸಾಮಾನು ಮತ್ತು ಹಣವನ್ನು ಯಾರೋ ಕಳ್ಳರು ದಿನಾಂಕ 15/04/2017 ರಂದು ಸಾಯಂಕಾಲ 6 ಪಿಎಂದಿಂದ ಇಂದು ದಿನಾಂಕ 16/04/2017 ರಂದು ಬೆಳಿಗ್ಗೆ 5 ಗಂಟೆಯ
ಮದ್ಯದ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ಪಿರ್ಯಾದಿಯ ಮೇಲಿಂದ ಈ
ಮೇಲಿಂನತೆ ಪ್ರಕರಣ ದಾಖಲಾಗಿರುತ್ತದೆ.
ಯಾದಗಿರಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2017 ಕಲಂ.
379
ಐಪಿಸಿ;- ದಿನಾಂಕ 05/04/2017 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಪಿರ್ಯಾದಿಯು ಗಾಂದಿ ಚೌಕದಲ್ಲಿರು ಒಂದು ಹೋಟಲದಲ್ಲಿ ಚಹಾ ಕುಡಿದು
ಮನೆಗೆ ಹೋಗಬೇಕೆಂದುಕೊಂಡು ಗಾಂಧಿ ಚೌಕನಲ್ಲಿರುವ
ಶಮ್ಸು ಪಾನ ಶಾಪ ಮುಂದುಗಡೆ ನಿಲ್ಲಿಸಿದ ತನ್ನ ಮೋ.ಸೈಕಲ್ ನಂ. ಕೆಎ-32-ಕೆ-7850
ಕಾಣಿಸಲಿಲ್ಲಾ. ನಂತರ ಸುತ್ತ ಮುತ್ತ ನೋಡಲಾಗಿ ಎಲ್ಲಿಯೂ
ಮೋ.ಸೈಕಲ್ ಕಾಣಿಸಲಿಲ್ಲಾ. ಪಿರ್ಯಾದಿಯ
ಮೇಲ್ಕಂಡ ಮೋ.ಸೈಕಲ್ ನಂ. ಕೆಎ-32-ಕೆ-7850 ಅಂ.ಕಿ.30,000/-ರೂ ನೇದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.
ಅಂತಾಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಈ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.
ಯಾದಗಿರಿ
ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 64/2017 ಕಲಂ 147, 148, 323, 324, 504,
506 ಸಂ 149 ಐ.ಪಿ.ಸಿ;- ದಿನಾಂಕ 15/04/2017 ರಂದು ಸಮಯ ಸಾಯಂಕಾಲ 5-00 ಪಿ.ಎಂ. ಗಂಟೆಗೆ ಫಿರ್ಯಾಧಿದಾರನು ತನ್ನ ಮನೆಯ ಮುಂದೆ ನಿಂತು
ತನ್ನ ಹಿರಿಯರ ಆಸ್ತಿಯಲ್ಲಿ ಪಾಲು ಕೊಡು ಅಂತಾ ತನ್ನ ತಂದೆಗೆ ಕೇಳಿದಕ್ಕೆ ಆರೋಪಿತರೆಲ್ಲರೂ
ಕೂಡಿಕೊಂಡು ಜಗಳ ತೆಗೆದು ಫಿರ್ಯಾಧಿಗೆ ಅವಾಚ್ಯವಾಗಿ ಬೈದು ಕಟ್ಟಿಗೆಗಳಿಂದ ಮತ್ತು ಕೈಯಿಂದ ಹೊಡೆಬಡೆ
ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಕ್ರಮ ಕೈಕೊಂಡಿದ್ದು ಇರುತ್ತದೆ,
ಕೆಂಭಾವಿ
ಪೊಲೀಸ್ ಠಾಣೆ ಗುನ್ನೆ ನಂ. 50/2017 ಕಲಂ: 87
ಕೆಪಿ ಆಕ್ಟ ;- ದಿನಾಂಕ:
16/04/2017 ರಂದು 01.30 ಪಿಎಮ್ ಸುಮಾರಿಗೆ ಕೆಂಭಾವಿ ಪಟ್ಟಣದ ಕೆಬಿಜೆಎನ್‌ಎಲ್ ಆಫೀಸ್ ಹತ್ತಿರ
ಇರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಅಂದರ ಬಾಹರ ಜೂಜಾಟ
ಆಡುತ್ತಿದ್ದಾಗ ಪಿರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 07 ಜನ ಆರೋಪಿತರು
ಹಾಗೂ 5000/- ರು ನಗದು ಹಣ ಮತ್ತು 52ಇಸ್ಪೀಟ್ ಎಲೆಗಳನ್ನು ಜಪ್ತಿ ಪಡೆಸಿಕೊಂಡು ಕ್ರಮ
ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 48-2017 ಕಲಂ 279 337 338 ಐಪಿಸಿ;- ದಿ:16/04/2017 ರಂದು 17:45 ಗಂಟೆ ಸುಮಾರಿಗೆ ಫಿರ್ಯಾಧಿ ತಾನು ನಡೆಸುತ್ತಿರುವ ಬಸ್ ನಂ:
ಕೆಎ-33 ಎಫ್.-146 ನೇದ್ದನ್ನು ಕೆಂಭಾವಿಯಿಂದ ಹುಣಸಗಿ ನಡೆಯಿಸಿಕೊಂಡು
ಬರುತ್ತಿದ್ದಾಗ ಇಸ್ಲಾಂಪೂರ ಕ್ರಾಸ್ ಹತ್ತಿರ ಕೆಲವು ಜನ ಪ್ರಯಾಣಿಕರು ಇಳಿಯುವವರಿದ್ದರಿಂದ
ಪ್ರಯಾಣಿಕರಿಗೆ ಇಳಿಯಿಸಿ ಮುಂದೆ ಹುಣಸಗಿ ಹೋಗಬೇಕು ಅನ್ನುವಷ್ಟುವರಲ್ಲಿ ಹಿಂದುಗಡೆಯಿಂದ
ಆರೋಪಿತನು ತನ್ನ ಲಾರಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಬಸ್ಗೆ
ಹಿಂಭಾಗಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಹೋಗಿ ರೋಡ್ ಪಕ್ಕದಲ್ಲಿದ್ದ ಕಟಿಂಗ್ ಶಾಫ್ಗೆ
ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ
ಫಿರ್ಯಾದಿ ಮತ್ತು ಕಟಿಂಗ್ ಶಾಫ್ದಲ್ಲಿದ್ದ ಕೆಲವರಿಗೆ ಹಾಗೂ ಬಸ್ನಲ್ಲಿದ್ದವರಿಗೆ ಭಾರಿ ಮತ್ತು
ಸಾಧಾ ರಕ್ತಗಾಯವಾಗಿದ್ದು ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಠಾಣೆ ಕ್ರಮ ಜರುಗಿಸಿದ್ದು
ಇರುತ್ತದೆ.
ಹುಣಸಗಿ
ಪೊಲೀಸ್ ಠಾಣೆ ಗುನ್ನೆ ನಂ. 49-2017 ಕಲ 279, 337, 338, 304(ಎ) ಐಪಿಸಿ ಸಂ. 187
ಐ.ಎಮ್.ವ್ಹಿ ;- ದಿ:16/04/17 ರಂದು ಸಾಯಂಕಾಲ 5 ಗಂಟೆಗೆ ಮೃತ ಸಂತೋಷನು ಮೋಟಾರ್ ಸೈಕಲ ನಂ. ಜಿಎ-06 ಬಿ-8015
ನೇದ್ದರ ಮೇಲೆ ತಿಂಥಣಿಯಿಂದಾ ಅಂಕನಾಳಕ್ಕೆ ಕಕ್ಕೇರಾ ಬಲಶೆಟ್ಟಿಹಾಳ ಮಾರ್ಗವಾಗಿ ಹೊರಟಾಗ ಕಕ್ಕೇರಾ
ಹಿರಿಯ ಹಳ್ಳ ದಾಟಿದ ನಂತರ ಎದುರುಗಡೆಯಿಂದಾ ಬೋಲೆರೋ ಪಿಕಪ್ ಜೀಪ ನಂ. ಕೆಎ-33 ಎ-6134 ನೇದ್ದರ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿನತದಿಂದಾ ರೋಡಿನ ಮೇಲೆ
ಅಡ್ಡಾದಿಡ್ಡಯಾಗಿ ನಡೆಯಿಸಿಕೊಂಡು ಬಂದು ಮೋಟಾರ್ ಸೈಕಲ್ ನಂ. ಜಿಎ-06 ಬಿ-8015
ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು,
ಅಪಘಾತದಲ್ಲಿ ಸಂತೋಷನಿಗೆ ಭಾರಿ ಮತ್ತು
ಸಾಧಾ ರಕ್ತಗಾಯವಾಗಿದ್ದರಿಂದ ಉಪಚಾರಕ್ಕೆಂದು ಕಕ್ಕೇರಾ ಸರಕಾರಿ ದವಾಖಾನೆಗೆ ಸೇರಿಕೆ ಮಾಡಿದ್ದು
ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ಇತ್ಯಾದಿ ಫಿರ್ಯಾಧಿ ಹೇಳಿಕೆ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಹಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ 279. 337 304(ಎ)
ಐಪಿಸಿ ;- ದಿನಾಂಕ 16/04/2017 ರಂದು ರಾತ್ರಿ 22-00 ಗಂಟೆಗೆ ಫಿರ್ಯಾದಿ ಶ್ರೀಮತಿ ಮಲ್ಲಮ್ಮ ಗಂಡ ಶರಣಪ್ಪ
ಗುದ್ದಿಗೇರಿ ವಯ 40 ವರ್ಷ ಜಾತಿ
ಕಬ್ಬಲೀಗ ಉಃ ಕೂಲಿ ಕೆಲಸ ಸಾಃ ನಿಂಗೇರಿ ಕೌಳೂರ ತಾಃಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ
ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿರ್ಯಾದಿಯು ತನ್ನ ಹಿರಿಯ ಮಗಳಾದ ಶರಣಮ್ಮ ಇವಳಿಗೆ ತನ್ನ ಖಾಸಾ
ತಮ್ಮನಾದ ಹಣಮಂತ ಈತನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿದ್ದು, ಮದುವೆಯ ದಿನಾಂಕ ನಿಗಧಿ ಪಡಿಸುವ ಸಂಬಂದ ದಿನಾಂಕ 15/04/2017 ರಂದು ಫಿರ್ಯಾದಿಯು ತನ್ನ ಗಂಡ ಮತ್ತು ಮಕ್ಕಳಾದ
ಯಲ್ಲಪ್ಪ, ಮೈತ್ರಮ್ಮ, ಮಹೇಶ, ಭಾಗಮ್ಮ ಇವರನ್ನು ಕರೆದುಕೊಂಡು ತನ್ನ
ತವರುರಾದ ಗುಂಡಗುತರ್ಿ ಗ್ರಾಮಕ್ಕೆ ಬಂದಿರುತ್ತಾಳೆ.
ಗುಂಡಗುತರ್ಿ ಗ್ರಾಮದಲ್ಲಿ ಫಿರ್ಯಾದಿಯ ತವರು ಮನೆ ಸುರಪೂರ-ಯಾದಗಿರಿ ಮುಖ್ಯೆ ರಸ್ತೆಯ
ಪಕ್ಕಕ್ಕೆ ಇರುತ್ತದೆ. ಇಂದು ದಿನಾಂಕ 16/04/2017
ರಂದು ರಾತ್ರಿ 8-30 ಗಂಟೆ ಸುಮಾರಿಗೆ
ಮನೆಯಲ್ಲಿ ಫಿರ್ಯಾದಿಯು ತನ್ನ ಗಂಡ ಮತ್ತು ಮಗಳು
ಭಾಗಮ್ಮ, ಮತ್ತು ತಮ್ಮಂದಿರರಾದ ಹಣಮಂತ,
ತಿಪ್ಪಣ್ಣ ಇವರಿಗೆ ಊಟ ಬಡಿಸುತಿದ್ದಳು ಮನೆಯ ಮುಂದೆ ಹೊರಸಿನ ಮೇಲೆ ಯಲ್ಲಪ್ಪ ಮತ್ತು
ಮೈತ್ರೆಮ್ಮ ಮಲಗಿದ್ದರು ಮಹೇಶನು ಮನೆಯ ಬಾಗಿಲ
ಹತ್ತಿರ ಕುಳಿತಿದ್ದನು. ರಾತ್ರಿ 8-45
ಗಂಟೆ ಸುಮಾರಿಗೆ ಫಿರ್ಯಾದಿ ಮನೆಯ ಹೊರಗಡೆ ಬರುತಿದ್ದಾಗ ಸುರಪೂರ ಕಡೆಯಿಂದ ಲಾರಿ ನಂಬರ ಕೆಎ-01-ಎಡಿ-1269 ನೇದ್ದರ ಚಾಲಕ
ಗ್ಯಾನಪ್ಪ ತಂದೆ ಕಲ್ಲಪ್ಪ ಮಡಿವಾಳ ಈತನು ವಾಹನನ್ನು
ರೋಡಿನ ಮೇಲೆ ಅಡ್ಡಾ-ದಿಡ್ಡಿಯಾಗಿ
ಚಲಾಯಿಸಿಕೊಂಡು ಬಂದು ರೋಡಿನ ಕೆಳಗಡೆ ವಾಹನ ಇಳಿಸಿ ಹೊರಸಿನ ಮೇಲೆ ಮಲಗಿದ್ದ ಫಿರ್ಯಾದಿಯ ಇಬ್ಬರೂ ಮಕ್ಕಳ
ಮೇಲೆ ವಾಹನ ಹಾಯಿಸಿದ್ದರಿಂದ ಇಬ್ಬರೂ ಮಕ್ಕಳು ಭಾರಿ ಗಾಯಹೊಂದಿ ಸ್ಥಳದಲ್ಲಿಯೇ ಮೃತ
ಪಟ್ಟಿರುತ್ತಾರೆ. ಮತ್ತು ಮಹೇಶ ಈತನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ ಅಂತ ಇತ್ಯಾದಿ
ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ
117/2017 ಕಲಂ 279 337 304[ಎ]
ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
No comments:
Post a Comment