Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 47/2017 ಕಲಂ 78(3) ಕೆ.ಪಿ ಎಕ್ಟ್ 1963 ಮತ್ತು ಕಲಂ 420 ಐಪಿಸಿ;-ದಿನಾಂಕ: 03/04/2017 ರಂದು 1-15 ಪಿ.ಎಮ್ ಕ್ಕೆ ಪಿ.ಎಸ್.ಐ (ಕಾಸು) ರವರು ಠಾಣೆಗೆ ಬಂದು ಒಬ್ಬ ಆರೋಪಿ ಮುದ್ದೆಮಾಲು,
ಜಪ್ತಿ ಪಂಚನಾಮೆ ಹಾಜರಪಡಿಸಿ ಜ್ಞಾಪನ
ನೀಡಿದ್ದೇನಂದರೆ ಇಂದು ದಿನಾಂಕ: 03/04/2017 ರಂದು 11-30 ಎಎಮ್ ಸುಮಾರಿಗೆ
ನಾನು ಮತ್ತು ಸಿಬ್ಬಂದಿಯವರಾದ ಮೋನಪ್ಪ ಪಿಸಿ 269, ರವಿ ರಾಠೋಡ ಪಿ.ಸಿ 269 ರವರು ಠಾಣೆಯಲ್ಲಿದ್ದಾಗ ಯಾದಗಿರಿಯ ಮದನಪೂರ ಗಲ್ಲಿಯ ಟಿ.ಬಿ
ರೋಡಿನ ಮೇಲೆ ಯಾರೋ ಒಬ್ಬನು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು
ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರಾದ 1) ಬಾಬಾ ತಂದೆ ಬಾಷುಮಿಯಾ ಜಜ್ಜಾರ, 2) ಅಬ್ದುಲ್ ಗಫೂರ ತಂದೆ ಮಹಿಬೂಬಸಾಬ ಬಳಿಚಕ್ರ ಇವರನ್ನು
ಬರಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ಮಾಡುವ ಬಗ್ಗೆ ತಿಳಿಸಿ,
ಜಪ್ತಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡು
ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ ಠಾಣೆಯಿಂದ ಹೊರಟು 11-50 ಎ.ಎಮ್ ಸುಮಾರಿಗೆ ಟಿ.ಬಿ ರೋಡ ಹತ್ತಿರ ಜಲಮಂಡಳಿ
ಕಛೇರಿ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಟಿ.ಬಿ
ರೋಡಿನ ದಶರಥ ಠಾಕೂರ ಇವರ ಮನೆ ಹತ್ತಿರ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ 1/-
ರೂ. ಗೆ 80/- ರೂ. ಗೆಲ್ಲಿರಿ ಮಟ್ಕಾ ನಂಬರಗಳನ್ನು ಬರೆಸಿರಿ ಅಂತಾ ಕೂಗಿ ಕರೆದು
ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಂಡು ಮೋಸ ಮಾಡುತ್ತಿದ್ದನ್ನು ನೋಡಿ
ಖಚಿತಪಡಿಸಿಕೊಂಡು 12 ಪಿ.ಎಮ್ ಕ್ಕೆ
ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ನಾಮದೇವ ತಂದೆ
ಪಾಂಡುರಂಗ ಟಿಂಗ್ರೆ, ವ:45, ಜಾ:ಮರಾಠ, ಉ:ಪಾನಶಾಪ ಸಾ:ಮದನಪೂರಗಲ್ಲಿ ಯಾದಗಿರಿ ಅಂತಾ ಹೇಳಿದನು. ಅವನ
ಅಂಗಶೋಧನೆ ಮಾಡಲಾಗಿ ನಗದು ಹಣ 450=00
ರೂ., ಮಟ್ಕಾ ನಂಬರಗಳನ್ನು ಬರೆದ ಒಂದು
ಚೀಟಿ ಮತ್ತು ಒಂದು ಬಾಲ್ ಪೆನ್ ಇವುಗಳು ದೊರೆತ್ತಿದ್ದು, 12 ಪಿಎಮ್ ದಿಂದ 1 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡು ಆರೋಪಿ ಮತ್ತು
ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನದೊಂದಿಗೆ ನಿಮಗೆ
ಹಾಜರಪಡಿಸುತ್ತಿದ್ದು, ಈ ಬಗ್ಗೆ
ಮುಂದಿನ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ಕೊಟ್ಟ ಜ್ಞಾಪನ ಪತ್ರ ಮತ್ತು
ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2017 ಕಲಂ: 78(3) ಕೆ.ಪಿ ಎಕ್ಟ್ 1963 ಮತ್ತು
ಕಲಂ 420 ಐಪಿಸಿ ಪ್ರಕಾರ ಗುನ್ನೆ ದಾಖಲ
ಮಾಡಿಕೊಂಡು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 48/2017 ಕಲಂ 379
ಐಪಿಸಿ;-
ದಿನಾಂಕ: 03/04/2017 ರಂದು 3-30 ಪಿಎಮ್ಕ್ಕೆ ಪಾಂಡುರಂಗ ಎಸ್. ಡಿ.ವೈ.ಎಸ್.ಪಿ ಯಾದಗಿರಿ
ಉಪ-ವಿಭಾಗ ರವರು ಪೊಲೀಸ್ ಠಾಣೆಗೆ ಹಾಜರಾಗಿ ಇಂದು ದಿನಾಂಕ: 03/04/2017 ರಂದು ಬೆಳಗ್ಗೆ 5-30 ಗಂಟೆಗೆ ಯಾದಗಿರಿ ನಗರದಲ್ಲಿ ಇರುವಾಗ ಯಾದಗಿರಿ ನಗರ ರಾಚೋಟಿ
ಗುಡಿ ಹತ್ತಿರದ ಹಳ್ಳದಿಂದ ಮರಳು ಆಕ್ರಮವಾಗಿ ತುಂಬಿಕೊಂಡು ಟ್ರ್ಯಾಕ್ಟರನಲ್ಲಿ ಬರುತ್ತಿದ್ದಾರೆ
ಅಂತಾ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ 1) ಶ್ರೀಮಂತ ಸಿಂಗೆ ಹೆಚ್.ಸಿ, 2) ಶಿವರಾಜರೆಡ್ಡಿ
ಹೆಚ್.ಸಿ ಮತ್ತು ಚಾಲಕನಾದ ಸುಭಾಸ ಎಪಿಸಿ 108 ರವರಿಗೆ ಬರಲು ಹೇಳಿ ಅವರು 6
ಎಎಮ್ ಕ್ಕೆ ಬಂದಿದ್ದು, ನಾವೆಲ್ಲರೂ
ಕೂಡಿಕೊಂಡು ನಮ್ಮ ಸರಕಾರಿ ವಾಹನ ಕೆಎ 33
ಜಿ 127 ರಲ್ಲಿ ಬೆಳಗ್ಗೆ 6-15 ಗಂಟೆ ಸುಮಾರಿಗೆ ಹೊರಟು ಬೆಳಗ್ಗೆ 6-30 ಗಂಟೆಗೆ ಹೋಗಲಾಗಿ ಯಾದಗಿರಿ ನಗರದ ಸುಭಾಶ್ಚಂದ್ರ
ವೃತ್ತದಲ್ಲಿ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದು, ಕೂಡಲೇ ನಾವು ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ,
ಕೆಳಗೆ ಇಳಿದು ಟ್ರ್ಯಾಕ್ಟರನ್ನು
ನಿಲ್ಲಿಸಿದೆವು. ಅದರಲ್ಲಿ ಚಾಲಕನಿದ್ದು ನಮ್ಮನ್ನು ನೋಡಿ ಅವರು ಟ್ರ್ಯಾಕ್ಟರನ್ನು ಚಾಲಕ
ನಿಲ್ಲಿಸಿ, ಓಡಿ ಹೋಗಿರುತ್ತಾನೆ.
ಟ್ರ್ಯಾಕ್ಟರ ಚಾಲಕ, ಮಾಲಿಕರ ಹೆಸರು
ವಿಳಾಸ ಗೊತ್ತಾಗಿರುವುದಿಲ್ಲ. ನಾನು ಸಿಬ್ಬಂದಿಯವರೊಂದಿಗೆ ಟ್ರ್ಯಾಕ್ಟರನ್ನು ಪರಿಶೀಲಿಸಿ
ನೋಡಲಾಗಿ ಟ್ರ್ಯಾಕ್ಟರ ಇಂಜನ ನಂ. ಕೆಎ 33
ಟಿಎ 6044 ಇದ್ದು, ಟ್ರ್ಯಾಲಿಗೆ ನಂಬರ ಇರಲಿಲ್ಲ. ಅದರಲ್ಲಿ ಆಕ್ರಮವಾದ
ಮರಳು ತುಂಬಿದ್ದು ಇತ್ತು. ಶಿವರಾಜರೆಡ್ಡಿ ಹೆಚ್.ಸಿ ಯವರಿಗೆ ಟ್ರ್ಯಾಕ್ಟರದಲ್ಲಿ ಕುಳ್ಳರಿಸಿ ನಗರ
ಠಾಣೆಗೆ ಹೋಗಲು ತಿಳಿಸಿ, ನಾನು ಸರಕಾರಿ
ವಾಹನದಲ್ಲಿ ಟ್ರ್ಯಾಕ್ಟರದ ಹಿಂದೆ ನಗರ ಠಾಣೆಗೆ ಬೆಳಗ್ಗೆ 7 ಗಂಟೆಗೆ ಬಂದು ಟ್ರ್ಯಾಕ್ಟರನ್ನು ಠಾಣೆ ಮುಂದೆ ನಿಲ್ಲಿಸಿ,
ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ
ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಒಪ್ಪಿಸಿ, ನಂತರ ನಾನು ಸುಭಾಸ ನಮ್ಮ ಕಛೇರಿಗೆ ಹೋಗಿ ನಮ್ಮ ಕಛೇರಿ ಕಂಪ್ಯೂಟರ
ಆಪರೇಟರ ಹನುಮನಗೌಡ ಎಪಿಸಿ 71 ಇವರಿಗೆ
ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಮಾಡಿಸಿ, ಕಛೇರಿಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ
ಸದರಿ ಫಿರ್ಯಾಧಿಯನ್ನು ಬೆಳಗ್ಗೆ 7-30
ಗಂಟೆಗೆ ಯಾದಗಿರಿ ನಗರ ಠಾಣೆಗೆ ಹೋಗಿ ಸರಕಾರಿ ತಫರ್ೆ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು
ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ ಎಂದು ಕೊಟ್ಟ ಲಿಖಿತ ವರದಿ ಸಾರಾಂಶದ ಮೇಲಿಂದ
ಠಾಣೆ ಗುನ್ನೆ ನಂ. 48/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡೆನು.
ಯಾದಗಿರಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 49/2017 ಕಲಂ 379
ಐಪಿಸಿ;- ದಿನಾಂಕ: 04/04/2017 ರಂದು 8-30 ಎಎಮ್ಕ್ಕೆ ಶ್ರೀ ಸಿದ್ದಣ್ಣ ಎ.ಎಸ್.ಐ ಯಾದಗಿರಿ ನಗರ ಪೊಲೀಸ್ ಠಾಣೆರವರು ಪೊಲೀಸ್
ಠಾಣೆಗೆ ಹಾಜರಾಗಿ ಇಂದು ದಿನಾಂಕ: 04/04/2017 ರಂದು ನಾನು ಯಾದಗಿರಿ ನಗರದಲ್ಲಿ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯದಲ್ಲಿ ಬಸಣ್ಣ
ಪಿಸಿ 109 ಜೀಪ ಚಾಲಕ ಇವರೊಂದಿಗೆ
ಇದ್ದಾಗ ಬೆಳಗ್ಗೆ 4-30 ಗಂಟೆ
ಸುಮಾರಿಗೆ ಯಾದಗಿರಿ ನಗರ ಕಡೆ ರಾಚೋಟಿ ಗುಡಿ ಹತ್ತಿರದ ಹಳ್ಳದಿಂದ ಮರಳು ಆಕ್ರಮವಾಗಿ ತುಂಬಿಕೊಂಡು
ಟ್ರ್ಯಾಕ್ಟರನಲ್ಲಿ ಬರುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಚಾಲಕನಾದ ಬಸಣ್ಣ ಪಿಸಿ 109 ರವರೊಂದಿಗೆ ನಮ್ಮ ಸರಕಾರಿ ವಾಹನ ಕೆಎ 33 ಜಿ 0075 ರಲ್ಲಿ ಬೆಳಗ್ಗೆ 4-35 ಗಂಟೆ ಸುಮಾರಿಗೆ ಹೊರಟು ಬೆಳಗ್ಗೆ 4-45 ಗಂಟೆಗೆ ಡಾನಬೋಸ್ಕೊ ಶಾಲೆ ಹತ್ತಿರ ಹೋಗಲಾಗಿ ಒಂದು
ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದು, ಅದರ ಮುಂದುಗಡೆ ಇಬ್ಬರೂ ಮೋಟರ್ ಸೈಕಲಗಳ ಮೇಲೆ ಮರಳು ಖಾಲಿ ಮಾಡಲು
ಮುಂದೆ ಮುಂದೆಯಾಗಿ ಮರಳಿನ ಟ್ರ್ಯಾಕ್ಟರನ್ನು ಕರೆದುಕೊಂಡು ಹೋಗುತ್ತಿದ್ದರು. ಕೂಡಲೇ ನಾವು ಹೋಗಿ
ನಮ್ಮ ವಾಹನವನ್ನು ನಿಲ್ಲಿಸಿ, ಕೆಳಗೆ
ಇಳಿದು ಟ್ರ್ಯಾಕ್ಟರನ್ನು ನಿಲ್ಲಿಸಿದೆವು. ಅದರಲ್ಲಿ ಚಾಲಕನಿದ್ದು ನಮ್ಮನ್ನು ನೋಡಿ ಅವನು
ಟ್ರ್ಯಾಕ್ಟರನ್ನು ನಿಲ್ಲಿಸಿ, ಓಡಿ
ಹೋದನು. ಇಬ್ಬರೂ ಮೋಟರ್ ಸೈಕಲಗಳ ಸವಾರರು ಕೂಡ ತಮ್ಮ ಮೋಟರ್ ಸೈಕಲಗಳನ್ನು ಬಿಟ್ಟು ಓಡಿ ಹೋದರು.
ಟ್ರ್ಯಾಕ್ಟರ ಚಾಲಕ, ಮಾಲಿಕರ ಹೆಸರು
ವಿಳಾಸ ಗೊತ್ತಾಗಿರುವುದಿಲ್ಲ. ನಾನು ಸಿಬ್ಬಂದಿಯವರೊಂದಿಗೆ ಟ್ರ್ಯಾಕ್ಟರನ್ನು ಪರಿಶೀಲಿಸಿ
ನೋಡಲಾಗಿ ಟ್ರ್ಯಾಕ್ಟರ ಇಂಜನ ನಂ. ಕೆಎ 32
ಟಿಎ 7904 ಇದ್ದು, ಟ್ರ್ಯಾಲಿ ನಂ. ಕೆಎ 32 ಟಿಎ 7905 ಇರುತ್ತದೆ. ಅದರಲ್ಲಿ ಆಕ್ರಮವಾದ ಮರಳು ತುಂಬಿದ್ದು ಇತ್ತು. ಮೋಟರ್ ಸೈಕಲಗಳು ನೋಡಲಾಗಿ 1)
ಪ್ಯಾಶನ ಎಕ್ಸಪ್ರೋ ಇದ್ದು ನೊಂದಣಿ ನಂಬರ
ಇರುವುದಿಲ್ಲ. ಚೆಸ್ಸಿ ನಂ. ಒಃಐಎಂ12ಂಅಈಉಊ01733 ಇಂಜನ ನಂ. ಎಂ12ಂಃಉಊ02370 ಇರುತ್ತದೆ. 2) ಇನ್ನೊಂದು
ಮೋಟರ್ ಸೈಕಲ್ ಸ್ಪೆಲಂಡರ್ ಪ್ಲಸ್ ಇದ್ದು ನೋಂದಣಿ ನಂಬರ ಇರುವುದಿಲ್ಲ. ಚೆಸ್ಸಿ ನಂ. ಒಃಐಊಂ10ಅಉಉಊಂ72207 ಇಂಜನ ನಂ. ಊಂ10ಇಖಉಊ60407 ಇರುತ್ತದೆ. ಮೋಟರ್
ಸೈಕಲಗಳ ಸವಾರರು ಓಡಿ ಹೋಗಿರುತ್ತಾರೆ ಅವರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಚಾಲಕ ಬಸಣ್ಣ
ಪಿಸಿ ಯವರಿಗೆ ಟ್ರ್ಯಾಕ್ಟರದಲ್ಲಿ ಕುಳ್ಳರಿಸಿ ನಗರ ಠಾಣೆಗೆ ಹೋಗಲು ತಿಳಿಸಿ, ನಾನು ಅಲ್ಲಿಗೆ ಬಂದ ಒಂದು ಖಾಸಗಿ ಟಾಟಾ ಎಸ ವಾಹನದಲ್ಲಿ
ಎರಡು ಮೋಟರ್ ಸೈಕಗಳ್ಗನು ಹಾಕಿಕೊಂಡು ನಮ್ಮ ಸರಕಾರಿ ವಾಹನದಲ್ಲಿ ಟಾಟಾ ಎಸ್ ವಾಹನದ ಹಿಂದೆ ನಗರ
ಠಾಣೆಗೆ ಬೆಳಗ್ಗೆ 6-30 ಗಂಟೆಗೆ ಬಂದು
ಟ್ರ್ಯಾಕ್ಟರ ಮತ್ತು ಮೋಟರ್ ಸೈಕಲಗಳನ್ನು ಠಾಣೆಯ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಮರಳು
ತುಂಬಿದ ಟ್ರ್ಯಾಕ್ಟರ ಮತ್ತು ಮೋಟರ್ ಸೈಕಲಗಳನ್ನು ಒಪ್ಪಿಸಿ, ನಂತರ ಠಾಣೆಯ ಕಂಪ್ಯೂಟರ ಆಪರೇಟರ ಮೋನಪ್ಪ ಸಿಪಿಸಿ 263 ಇವರಿಗೆ ಫೋನ ಮೂಲಕ ಠಾಣೆಗೆ ಕರೆಸಿಕೊಂಡು ನನ್ನ ಉಕ್ತ
ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ
ಫಿರ್ಯಾಧಿಯನ್ನು ಬೆಳಗ್ಗೆ 8-30
ಗಂಟೆಗೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು
ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ ಎಂದು ಕೊಟ್ಟ ಲಿಖಿತ ವರದಿ ಸಾರಾಂಶದ ಮೇಲಿಂದ
ಠಾಣೆ ಗುನ್ನೆ ನಂ. 49/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡೆನು.
ಶಹಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ 143 147 148 336 324 427
ಸಂ 149
ಐ.ಪಿ.ಸಿ;- ದಿನಾಂಕ 03/04/2017 ರಂದು ಮುಂಜಾನೆ 08-45 ಗಂಟೆಗೆ ಸರಕಾರಿ ತಫರ್ೆ ಪಿಯರ್ಾದಿ ಶ್ರೀ. ಎ.ಎಂ ಕಮಾನಮನಿ ಪಿ.ಐ
ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಂಶವೇನಂದರೆ, ದಿನಾಂಕ 02/04/2017 ರಂದು ಸಾಯಂಕಾಲ 19-30 ಗಂಟೆಗೆ ಪಿಯರ್ಾದಿಯವರು ಠಾಣೆಯಲ್ಲಿದ್ದಾಗ, ರಸ್ತಾಪೂರ ಗ್ರಾಮದ ಸಬ್ ಬೀಟ್ ಸಿಬ್ಬಂಧಿಯಾದ
ಸಿದ್ರಾಮಯ್ಯ ಸಿ.ಪಿ.ಸಿ 258 ಇವನು
ರಸ್ತಾಪೂರ ಗ್ರಾಮದ ಅಂಬೇಡ್ಕರ ಕಟ್ಟೆಯ ಹತ್ತಿರ ಕೆಲವು ಜನರ ಗುಂಪೊಂದು ಅಕ್ರಮ ಕೂಟ ರಚಿಸಿಕೊಂಡು ಕಲ್ಲು ತೂರಾಟ
ಮಾಡುತಿದ್ದಾರೆ ಅಂತ ಮಾಹಿತಿ ತಿಳಿಸಿದ ಮೇರೆಗೆ,
ಪಿಯರ್ಾದಿಯವರು ಮತ್ತು ಠಾಣೆಯ
ಸಿಬ್ಬಂದಿಯವರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138
ನೇದ್ದರಲ್ಲಿ ಎಲ್ಲರೂ ಕೂಡಿ ಠಾಣೆಯಿಂದ ಸಾಯಂಕಾಲ 19-40 ಗಂಟೆಗೆ
ಹೊರಟು, ರಸ್ತಾಪೂರ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ರಾತ್ರಿ 20-00 ಗಂಟೆಗೆ ಹೋಗಿ
ಜೀಪ್ ನಿಲ್ಲಿಸಿ ಅಲ್ಲಿಂದ ಎಲ್ಲರೂ ನಡೆದುಕೊಂಡು ಅಂಬೇಡ್ಕರ ಕಟ್ಟೆಯ ಹತ್ತಿರ ಹೋದಾಗ, ಅಲ್ಲಿ
ಕೆಲವು ಜನರು, ಲೈಟಿನ
ಬೆಳಕಿನಲ್ಲಿ ಗುಂಪು ಕಟ್ಟಿಕೊಂಡು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಠಿಮಾಡಿ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿ ಮಾಡುತಿದ್ದರು,
ಮತ್ತು ಜೈಕಾರ ಕೇ ಕೇ ಹಾಕುತ್ತಾ ದಾಂದಲೇ ಮಾಡುತ್ತಾ ಮನೆಯ ಮುಂದೆ ನಿಲ್ಲಿಸಿದ ಮೋಟರ
ಸೈಕಲ್ಗಳನ್ನು ಎತ್ತಿಕೊಂಡು ಬಂದು ರೋಡಿನ ಮೇಲೆ ಹಾಕಿ ಕಲ್ಲು ಎತ್ತಿ ಹಾಕುತಿದ್ದರು, ಗುಂಪು
ಘರ್ಷಣೆಯಲ್ಲಿ ಕೆಲವು ಜನರಿಗೆ ಗಾಯಗಳಾಗಿದ್ದು ಸದರಿಯವರಿಗೆ ಉಪಚಾರ ಕುರಿತು
ಅಂಬುಲೇನ್ಸವಾಹನದಲ್ಲಿ ಕೂಡಿಸಿ ಸಿಬ್ಬಂದಿಯವರೊಂದಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ
ಕಳುಹಿಸಿಕೊಟ್ಟಿದ್ದು, ಸದರಿ
ಸ್ಥಳದಲ್ಲಿ ಅಂಬೇಡ್ಕರ ಕಟ್ಟೆಯ ಎದರುಗಡೆ ಎರಡು ಮೋಟರ ಸೈಕಲ್ಗಳು ಜಖಂಗೋಳಿಸಿದ್ದು, ಎರಡು ಮೋಟರ ಸೈಕಲ್ಗಳ ಅಂ.ಕಿ 3,000=00 ರೂಪಾಯಿಷ್ಟು
ಹಾನಿಯಾಗಿರುತ್ತವೆ. ಗುಂಪುಘರ್ಷಣೆ ಮಾಡಿ ಕಲ್ಲೂ ತೂರಾಟ ಮಾಡಿ ಸಾರ್ವಜನಿಕರ
ಶಾಂತತಾಭಂಗವನ್ನುಂಟು ಮಾಡಿ ಓಡಿ ಹೋದ ಜನರ ಹೆಸರು 1] ಚೇತನ ತಂದೆ ಭೀಮಸೇನ ಆರಬೋಳ 2]
ನಾಗಪ್ಪ ತಂದೆ ದೊಡ್ಡ ಚಂದ್ರಾಮಪ್ಪ
ಶಿವನೂರ 3] ಪರಮಣ್ಣ ತಂದೆ ಮರೇಪ್ಪ
ಕಜ್ಜೆ 4] ಶಾಂತಪ್ಪ ತಂದೆ ಮಲ್ಲಪ್ಪ
ದೋರನಳ್ಳಿ 5] ಹೈಯ್ಯಾಳಪ್ಪ ತಂದೆ
ನಿಂಗಪ್ಪ ದೇವಿಕೇರಿ 6] ಶರಬಣ್ಣ ತಂದೆ
ಮಲ್ಲಪ್ಪ ಕೊಂಕಲ್ 7] ಮಲ್ಲಪ್ಪ ತಂದೆ
ಮರೇಪ್ಪ ಆರಬೋಳ 8] ಬಸವರಾಜ ತಂದೆ
ಮಲ್ಲಪ್ಪ ತಳವಾರ 9] ಭಾಗಪ್ಪ ತಂದೆ
ತಿಪ್ಪಣ್ಣ ಅಯ್ಯಪ್ಪನೋರ 10] ಹಣಮಂತ
ತಂದೆ ಭೀಮರಾಯ ನಾಟೀಕಾರ ಹಾಗೂ ಇತರರು ಎಲ್ಲರೂ ಸಾ|| ರಸ್ತಾಪೂರ ಅಂತ ತಿಳಿದು ತಿಳಿದುಬಂದಿದ್ದು ಸದರಿಯವರ ಮೇಲೆ ಕ್ರಮ
ಕೈಕೊಳ್ಳಬೇಕು ಅಂತ ಇತ್ಯಾದಿ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 102/2017 ಕಲಂ 143, 147, 148, 336, 324, 427 ಸಂ 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ: 78(3)ಕೆ.ಪಿ
ಆಕ್ಟ ;- ದಿನಾಂಕ:03/04/2017 ರಂದು 3.55 ಪಿ.ಎಮ್.ಕ್ಕೆ ದಿವಳಗುಡ್ಡ ಶೋರಾಪೂರದ ಪಿಡ್ಡಣ್ಣ ಮುತ್ತ್ಯಾನ ಗುಡಿಯ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂ ಗೆ 80 ರೂ ಬರುತ್ತವೆಂದು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ
ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ನಂಬರ ಬರೆದು ಕೊಂಡ ನಗದು ಹಣ 750-00 ರೂ ಮತ್ತು ಒಂದು ಮಟಕಾ ಚೀಟಿ ಒಂದು ಬಾಲ ಪೆನ್ನ ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತನ ವಿರುಧ್ಧ
ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.
No comments:
Post a Comment