Yadgir District Reported Crimes
ಸಂಚಾರಿ
ಪೊಲೀಸ್ ಠಾಣೆ ಗುನ್ನೆ ನಂ. 19/2017 ಕಲಂ 279
ಐಪಿಸಿ;- ದಿನಾಂಕ:
05-04-2017 ರಂದು ಮಾನ್ಯ ಪಿ.ಐ ಸಾಹೇಬರು ಸುಭಾಸ ಚೌಕ ಹತ್ತಿರ ಸಂಚಾರಿ ನಿಯಂತ್ರಣ
ಕರ್ತವ್ಯದಲ್ಲಿದ್ದಾಗ 10 ಎ.ಎಂ. ಸುಮಾರಿಗೆ
ಹಳೆಯ ಬಸ್ಸ ನಿಲ್ದಾಣದ ಕಡೆಯಿಂದ ಆರೋಪಿಯತನು ತನ್ನ ಟಾಟಾ ಮ್ಯಾಜಿಕ ವಾಹನ ನಂಬರ ಕೆ.ಎ-33, ಎಮ್-4864 ಅತೀ ವೇಗ
ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವಾಗ ಕೈ ಮಾಡಿ ನಿಲ್ಲಲು ಹೇಳಿದರು. ಸದರಿ ಚಾಲಕನು
ತನ್ನ ವಾಹನವನ್ನು ನಿಲ್ಲಿಸದೆ ಹಾಗೇ ಹೋಗುತ್ತಿರುವಾಗ ಸಿಬ್ಬಂಧಿಯವರ ಸಹಾಯದಿಂದ ವಾಹನವನ್ನು
ಬೆನ್ನು ಹತ್ತಿ ಹಿಡಿದು ನಿಲ್ಲಿಸಿ ಚಾಲಕನಿಗೆ ವಾಹನ ಕಾಗದ ಪತ್ರದ ಬಗ್ಗೆ ವಿಚಾರಿಸಲು ಯಾವುದೆ
ಕಾಗದ ಪತ್ರಗಳು ಇರುವದಿಲ್ಲ ಅಂತಾ ತಿಳಿಸಿದ್ದು ಸದರಿ ವಾಹನ ಚಾಲಕನ ಸಮೇತ ಮುಂದಿನ ಕ್ರಮ ಕುರಿತು ಠಾಣೆಗೆ ತಂದು ಹಾಜರು ಪಡಿಸಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ
ಮೇರೆಗೆ ಕ್ರಮ ಜರುಗಿಸಿದ್ದು ಇರುತ್ತದೆ.
ಗುರಮಿಠಕಲ
ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ 379
ಐಪಿಸಿ;-
ದಿನಾಂಕ: 03.04.2017 ರಂದು ರಾತ್ರಿ 10.30 ಗಂಟೆಗೆ ಗುರುಮಠಕಲ್ ಹೊರವಲಯದ ಐ.ಟಿ.ಐ ಕಾಲೇಜಿನ ಹತ್ತಿರ ಈ
ಮೇಲೆ ಹೇಳಲಾದ ಟ್ಯಾಕ್ಟರ್ ನಂ: ಕೆಎ-.33- ಟಿಎ.- 3998 ಟ್ಯ್ರಾಲಿ ನಂ:
ಕೆಎ-33-ಟಿ-6370 ನೇದ್ದರ ಚಾಲಕ ಶ್ರಿನಿವಾಸ ತಂದೆ ಶರಣಪ್ಪ ಬಡಿಗೇರ ವಯಾ||
20 ವರ್ಷ ಉ|| ಡ್ರೈವರ ಜಾತಿ|| ಕಬ್ಬಲೀಗ ಸಾ|| ಬೊರಾಬಂಡ
ಟ್ಯಾಕ್ಟರ್ ನಂ: ಟಿಎಸ್-06-ಇಎಂ-2823 ಅದರ ಟ್ರ್ಯಾಲಿಗೆ ನಂಬರ ಇರುವುದಿಲ್ಲ ನೇದ್ದರ ಚಾಲಕನ
ಹೆಸರು :- ಸಂತೋಷ ತಂದೆ ಬುಗ್ಯಾ ನಾಯಾಕ ರಾಠೋಡ್ ವಯಾ|| 22 ಸಾ|| ಬೆಟ್ಟದಳ್ಳಿ
ಟ್ಯಾಕ್ಟರ್ ನಂ: ಕೆಎ-.33- ಟಿಎ.-8041 ಮತ್ತು ಟ್ರ್ಯಾಲಿ ನಂಬರ - ಕೆಎ-.33- ಟಿ.- 7116 ನೇದ್ದರ ಚಾಲಕ ಸಂತೋಷ ತಂದೆ ಮೋತಿಲಾಲ ಪವ್ಹಾರ ವಯಾ||
23 ವರ್ಷ ಉ|| ಡ್ರೈವರ ಸಾ|| ಬೊರಾಬಂಡಾ ನೇದ್ದವುಗಳಲ್ಲಿ ಕೊಂಕಲ್ ಹಳ್ಳದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು
ಸಾಗಿಸುತ್ತಿದ್ದಾರೆ ಅಂತ ಮಾಹಿತಿ ಮೇರೆಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ದಾಳಿ
ಮಾಡಿ ಹಿಡಿದು ಜಪ್ತಿ ಪಂಚನಾಮೆ ಅಡಿಯಲ್ಲಿ ಮರಳು ಉಂಬಿರುವ ವಾಹಗಳನ್ನು ಜಪ್ತಿ ಪಡಿಸಿಕೊಂಡು
ಆರೋಪಿತರ ಸಮೇತ ಠಾಣೆಗೆ ತಂದು ಒಪ್ಪಿಸಿದ್ದು ಸಕರ್ಾರಿ ತಫರ್ೆ ಪಿರ್ಯಾಧಿ ವತಿಯಿಂದ ನಾನು
ಎ.ಎಸ್.ಐ ರಾಜೇಂದ್ರ ಗುನ್ನೆ ನಂ: 45/2017 ಕಲಂ: 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡೆನು
ಹುಣಸಗಿ
ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ 87
ಕೆಪಿ ಯಾಕ್ಟ;- ದಿನಾಂಕಃ04/04/2017 ರಂದು ಬೆನಕನಳ್ಳಿ ಸೀಮೆಯ ಸಿದ್ದಾಪುರ ರೋಡಿಗೆ ಅಂದರ ಬಾಹರ ಎಂಬ
ನಶೀಭದ ಇಸ್ಪೀಟ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಮರಳಿ ಠಾಣೆಗೆ ಬರುವಾಗ ಸಮಯ 17:30 ಗಂಟೆಗೆ ವಜ್ಜಲ ಸೀಮೆಯ ಪೆಟ್ರೋಲ ಪಂಪ್ ಪಕ್ಕದಲ್ಲಿ
ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ
ಎಂಬ ನಶೀಭದ ಇಸ್ಪೀಟ ಜೂಜಾಟ ಆಡುವಾಗ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130,
133, 399, 328 ರವರೊಂದಿಗೆ ದಾಳಿ ಮಾಡಲ 3 ಜನರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಹಾಗು ಖಣದಿಂದ ಪಂಚರ ಸಮಕ್ಷಮದಲ್ಲಿ 900=00 ರೂ. ನಗದು ಹಣ ಮತ್ತು 52 ಇಸ್ಫೀಟ್ ಎಲೆಗಳು ಜಪ್ತಿ ಮಾಡಿದ್ದು ಸೂಕ್ತ ಕ್ರಮ ಜರುಗಿಸಲು
ಜ್ಞಾಪನ ಪತ್ರ ನೀಡದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಗೋಗಿ
ಪೊಲೀಸ್ ಠಾಣೆ ಗುನ್ನೆ ನಂ. 44/2017 ಕಲಂ, 87
ಕೆ.ಪಿ.ಆ್ಯಕ್ಟ್ ;- ದಿನಾಂಕ: 04/04/2017 ರಂದು 7-15 ಪಿಎಮ್ ಕ್ಕೆ ಮಾನ್ಯ ಶ್ರೀ. ಕೃಷ್ಣಾ ಸುಬೇದಾರ ಪಿಎಸ್ಐ ಗೋಗಿ ಠಾಣೆ ಸಾಹೇಬರು 7 ಜನ ಆರೋಪಿತರು ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ
ಬಂದು ಒಂದು ಜಪ್ತಿ ಪಂಚನಾಮೆ, ವರದಿ
ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ, ಇಂದು
ದಿನಾಂಕ: 04/04/2017 ರಂದು 3-20 ಪಿಎಮ್ ಕ್ಕೆ ಠಾಣೆಯಲ್ಲಿದ್ದಾ ಖಚಿತ ಭಾತ್ಮೀ ಮೇರೆಗೆ
ಇಬ್ಬರೂ ಪಂಚರು ಸಿಬ್ಬಂದಿಯವರೊಂದಿಗೆ ಗೋಗಿಯಿಂದ 03.40 ಪಿಎಂ ಕ್ಕೆ ಹೋರಟು ಹಾರಣಗೇರಾ ಗ್ರಾಮಕ್ಕೆ 04.30 ಪಿಎಂ ಕ್ಕೆ ಹೋಗಿ ಅಲ್ಲಿ ದ್ಯಾವಮ್ಮ ಗುಡಿಯ ಹತ್ತೀರ
ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ
ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು
ಪಂಚರ ಸಮಕ್ಷಮ 4-45 ಪಿಎಮ್ ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 7 ಜನರು ಸಿಕ್ಕಿಬಿದ್ದಿದ್ದು, ಒಟ್ಟು
2020/- ರೂ, ಮತ್ತು 52
ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 05:00 ಪಿಎಮ್ ದಿಂದ 06:00 ಪಿಎಮ್
ದವರೆಗೆ ಜಪ್ತಿ ಪಂಚನಾಮೆ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 07.15 ಪಿಎಂ ಕ್ಕೆ ಹಾಜರಾಗಿ ವರದಿ ಕೊಟ್ಟು ಸೂಚಿಸಿದ ಮೇರೆಗೆ ಪ್ರಕರಣ
ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 8-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 44/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡೆನು.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 83/2017 ಕಲಂ 379
ಐ.ಪಿ.ಸಿ. ಮತ್ತು ಕಲಂ.21(3)21(4)22
ಎಮ್.ಎಮ್.ಡಿ.ಆರ್.ಆಕ್ಟ ;- ದಿನಾಂಕ:
04-04-2017 ರಂದು 12:15 ಪಿ.ಎಮ್.ಕ್ಕೆ ಮಾನ್ಯ ಪಿ.ಐ. ಸಾಹೇಬರು ಠಾಣೆಗೆ ಬಂದು
ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ಮತ್ತು ಒಬ್ಬ ಆರೋಪಿತನನ್ನು ತಂದು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ್ದು
ಇಂದು ದಿನಾಂಕ: 04-04-2017 ರಂದು 9:30 ಎ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಕನರ್ಾಳ ಕೃಷ್ಣಾ ನದಿಯ ತೀರದಿಂದ ಯಾರೋ ತಮ್ಮ
ಟಿಪ್ಪರದಲ್ಲಿ ಅಕ್ರಮವಾಗಿ ಮರಳು
ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ವೆಂಕಟೇಶ ತಂದೆ ರಾಮಣ್ಣ ಕಿಲಾರಿ ಸಾ:ವೆಂಕಟಾಪೂರ 2) ಮುನಿಯಪ್ಪ ತಂದೆ ಭೀಮಣ್ಣ ಶುಕ್ಲಾ ಸಾ: ಲಕ್ಷ್ಮೀಪುರ
ಇವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಮತ್ತು ಸಿಬ್ಬಂದಿಯವರಾದ ಮನೋಹರ ಹೆಚ್.ಸಿ.105, ಪರಮೇಶ ಪಿ.ಸಿ.142, ಸೋಮಯ್ಯ ಪಿ.ಸಿ.235 ರವರು ಕೂಡಿ ಸದರಿ ಪಂಚರೊಂದಿಗೆ ಸರಕಾರಿ ಜೀಪ್ ನಂ:ಕೆಎ-33,
ಜಿ-0098 ವಾಹನದಲ್ಲಿ ಠಾಣೆಯಿಂದ 10.00 ಎ.ಎಮ್ಕ್ಕೆ ಹೊರಟು 10:30 ಎ.ಎಮ್ ಕ್ಕೆ ಲಕ್ಷ್ಮೀಪೂರ ದಿಂದ ಬೀರನೂರ ಕಡೆ ಹೋಗುವ
ರಸ್ತೆಯಲ್ಲಿ ಶಾಖಾಪೂರ ಕ್ರಾಸ ಹತ್ತಿರ ಹೊರಟಾಗ
ಒಂದು ಟಿಪ್ಪರ ಮರಳು ತುಂಬಿಕೊಂಡು
ಹೊರಟಿದ್ದು ನಾವು ಸದರಿ ವಾಹನವನ್ನು ತಡೆದು
ನಿಲ್ಲಿಸಲಾಗಿ ಅದರ ಚಾಲಕನಿಗೆ ವಿಚಾರಿಸಲಾಗಿ
ತನ್ನ ಹೆಸರು ಮಡಿವಾಳಪ್ಪ ತಂದೆ ಚನ್ನಪ್ಪ ಹೊಸಮನಿ ವಯ:32 ವರ್ಷ ಜಾ: ಎಸ್.ಸಿ. ಉ: ಟಿಪ್ಪರ ನಂ. ಕೆ.ಎ.33/ಎ-4395 ನೇದ್ದರ ಚಾಲಕ ಸಾ: ಕಾಕಂಡಗಿ ತಾ: ಜೇವಗರ್ಿ ಅಂತಾ ತಿಳಿಸಿದ್ದು ಸದರಿ ಟಿಪ್ಪರದಲ್ಲಿ
ಅಂದಾಜು 10 ಘನ ಮೀಟರ ಮರಳು ತುಂಬಿದ್ದು
ಇರುತ್ತದೆ. ಅವನು ತಾನು ಕನರ್ಾಳ ಕೃಷ್ಣಾ ನದಿಯಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಶಹಾಪೂರ
ಕಡೆಗೆ ಸಾಗಿಸುತ್ತಿದ್ದೇನೆ ಅಂತಾ ತಿಳಿಸಿದನು. ಸದರಿ
ಟಿಪ್ಪರದ ಚಾಲಕನು ಕನರ್ಾಳ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ
ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ)
ಪಡೆದುಕೊಳ್ಳದೆ ಕಳ್ಳತನದಿಂದ ಅಕ್ರಮ ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ.
ಟಿಪ್ಪರದಲ್ಲ್ಲಿ 10 ಘನ ಮೀಟರ ಮರಳು ಇದ್ದು ಮರಳಿನ ಒಟ್ಟು ಅಂದಾಜು ಬೆಲೆ 8000=00 ರೂ ಆಗುತ್ತದೆ. ಮರಳನ್ನು ಮತ್ತು ವಾಹನವನ್ನು ಜಪ್ತಿ
ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 10:40 ಎ.ಎಮ್ ದಿಂದ 11:40 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ.ಕಾರಣ ಸಕರ್ಾರಕ್ಕೆ
ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ)
ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿನ ಒಟ್ಟು 8000=00 ರೂ ಕಿಮ್ಮತ್ತಿನ
ಅಂದಾಜು 10 ಘನ ಮೀಟರ್
ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು
ಕ್ರಮ ಜರುಗಿಸಲು ಸದರಿ ಟಿಪ್ಪರನ್ನು ಮತ್ತು ಒಬ್ಬ ಆರೋಪಿತನನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ. ಅಂತಾ ಇದ್ದ ಫಿಯರ್ಾದಿ
ಆಧಾರದ ಮೇಲಿಂದ ಠಾಣೆ ಗುನ್ನೆ ನಂ.83/2017 ಕಲಂ. 379 ಐ.ಪಿ.ಸಿ ಸಂ: 21(3),
21(4), 22 ಎಮ್.ಎಮ್.ಡಿ.ಆರ್ ಆಕ್ಟ್ 1957 ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ
ಕೈಗೊಂಡೆನು.
ಯಾದಗಿರಿ
ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 55/2016 ಕಲಂ 279, 338
ಐಪಿಸಿ;- ದಿನಾಂಕ 04/04/2017 ರಂದು ಮಧ್ಯಾಹ್ನ 3-30 ಪಿ.ಎಮ್ ಕ್ಕೆ ಫಿರ್ಯಾದಿಯು ತಮ್ಮೂರಿನಿಂದ ಸೋಲಾಪೂರಕ್ಕೆ ಹೋಗುವ
ಕುರಿತು ತನ್ನ ಮೋಟಾರ ಸೈಕಲ್ ನಂ ಎಮ್.ಎಚ್.-13-ಬಿಪಿ-2506 ನೆದ್ದರ ಮೇಲೆ
ಕುಳಿತುಕೊಂಡು ಹೋಗುವಾಗ ಮಾರ್ಗಮಧ್ಯ ಎದುರುಗಡೆ ಮೈಲಾಪೂರ ಕಡೆಯಿಂದ ರಾಯಚೂರ-ಯಾದಗಿರಿ ರೋಡಿನ
ಮೇಲೆ ಆರೋಪಿತನು ತನ್ನ ಟ್ರ್ಯಾಕ್ಟರ ಇಂಜಿನ ನಂ ಎ.ಪಿ-28-ಬಿಬಿ-5584 ಮತ್ತು ಟ್ರ್ಯಾಲಿ ನಂ ಎ.ಪಿ.-22-ಎಡಿ-2852 ನೆದ್ದನ್ನು ಅತೀವೇಗ
ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಅಪಾಯಕಾರಿ ರೀತಿಯಲ್ಲಿ ವರ್ಕನಳ್ಳಿ ಕಡೆಗೆ ಕಟ್
ಹೊಡೆದು ಟ್ರ್ಯಾಕ್ಟರ ಓಡಿಸಿಕೊಂಡು ಹೋಗುವಾಗ ಫಿರ್ಯಾಧಿ ಕುಳಿತುಕೊಂಡು ಹೋಗುವ ಮೋಟಾರ ಸೈಕಲ
ಟ್ರ್ಯಾಕ್ಟರಕ್ಕೆ ಡಿಕ್ಕಿ ಹೊಡೆದು ಅಪಘಾತ ವಾಗಿದ್ದರಿಂದ ಫಿರ್ಯಾದಿಯ ಹಣೆಗೆ, ಮೂಖಕ್ಕೆ ಭಾರಿ ಮತ್ತು ಸಾದಾ ರಕ್ತಗಾಯ, ಗುಪ್ತಗಾಯ ಹಾಗೂ ತರಚಿದಗಾಯಗಳು ಆಗಿದ್ದು ಇರುತ್ತದೆ.
ಅಂತಾ ಫಿಯರ್ಾದಿ ಅದೆ.
ವಡಗೇರಾ
ಪೊಲೀಸ್ ಠಾಣೆ ಗುನ್ನೆ ನಂ.;- 48/2017 ಕಲಂ 498(ಎ), 323,504,506
ಸಂ. 34
ಐಪಿಸಿ ಮತ್ತು 3& 4 ಡಿ.ಪಿ. ಕಾಯ್ದೆ ;- ದಿನಾಂಕ: 04/04/2017 ರಂದು 06-00 ಪಿ.ಎಮ್ ಕ್ಕೆ ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ ರವರ ಕಾಯರ್ಾಲಯದ ಪತ್ರ ಸಂ:282/ಡಿಸಿಆರ್ಬಿ/ಯಾಜಿ/2017 ನೇದ್ದರಅನ್ವಯ ಹದ್ದಿಯ ಆಧಾರದ ಮೇಲಿಂದ ವಾಡಿ ಪೊಲೀಸ್ ಠಾಣೆಯಿಂದ
ವಡಗೇರಾ ಪೊಲೀಸ್ ಠಾಣೆಗೆ ವಗರ್ಾವಣೆಯಾಗಿದ್ದು, ಆರೋಪಿತರು ಪಿಯರ್ಾದಿಗೆ ಹೊಡೆಬಡೆ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ
ವರದಕ್ಷಣೆ ಬೇಡಿಕೆ ಇಟ್ಟ ಬಗ್ಗೆ ಪಿಯರ್ಾದಿಯ ಸಾರಂಶವಿದ್ದು ಈ ಮೇಲಿನಂತೆ ಪ್ರಕರಣ ದಾಖಲಾಗಿದ್ದು
ಇರುತ್ತದೆ.
ಕೊಡೇಕಲ
ಪೊಲೀಸ್ ಠಾಣೆ ಗುನ್ನೆ ನಂ. 23/2017 ಕಲಂ: 379 ಕಅ .
ಸಂಗಡ 21(3), 21(4) ಒಒಆಖ ಂಅಖಿ 1957 ;- ದಿನಾಂಕ 04.04.2017 ರಂದು ಬೆಳಿಗ್ಗೆ 07:30 ಗಂಟೆಗೆ ಎ.ಎಸ್.ಐ ಶಾಂಸುಂದರ್ ನಾಯಕ್ ರವರು ಠಾಣೆಗೆ ಹಾಜರಾಗಿ
ತಾವೂ ಪೂರೈಸಿದ ಜಪ್ತಿ ಪಂಚನಾಮೆ ಹಾಗೂ ಆರೋಪಿತರಾದ 1) ಅಬ್ದುಲ್ ಕರೀಮ್ ತಂದೆ ರಸೂಲ್ ಸಾಬ್ ಇನಾಮದಾರ್ ವಯ:27, ಉ:ಚಾಲಕ, ಜಾ:ಮುಸ್ಲಿಂ, ಸಾ:ತುರಕನಗೇರಿ ತಾ:ಸಿಂದಗಿ ಜಿ:ವಿಜಯಪೂರ, 2) ಮೋದಿನ್ ಪಟೇಲ್ ತಂದೆ ಮಹಮ್ಮದ ಪಟೇಲ್ ಬಿರಾದಾರ ವಯ:31, ಉಃಚಾಲಕ,
ಜಾಃಮುಸ್ಲಿಂ, ಸಾಃರಾಮಪೂರ, ತಾ:ಸಿಂದಗಿ ಜಿ:ವಿಜಯಪೂರ, 3) ದಾವೂದ್
ತಂದೆ ಅಲ್ಲಾಭಕ್ಷ್ ಆಲಗೂರು ವಯ:25, ಉಃಚಾಲಕ,
ಜಾಃಃಮುಸ್ಲಿಂ, ಸಾ:ತುರಕನಗೇರಿ ತಾ:ಸಿಂದಗಿ ಜಿ:ವಿಜಯಪೂರ, ಮತ್ತು ಜಪ್ತುಮಾಡಿದ 3 ಮರಳು ತುಂಬಿದ ಟಿಪ್ಪರ್ಗಳನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ
ಕ್ರಮಕ್ಕಾಗಿ ಹಾಜರು ಪಡಿಸಿದ್ದು ಎ.ಎಸ್.ಐ ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ
ಸಾರಾಂಶವೆನೆಂದರೆ ಇಂದು ದಿನಾಂಕ: 04.04.2017 ರಂದು ಬೆಳಿಗ್ಗೆ 05:00
ಗಂಟೆಗೆ ನಾನು ಎನ್.ಆರ್.ಸಿ ಕರ್ತವ್ಯ ಮುಗಿಸಿಕೊಂಡು ಬಂದು ಠಾಣೆಯಲ್ಲಿದ್ದಾಗ ನನಗೆ ಖಚಿತ ಮಾಹಿತಿ
ಬಂದಿದ್ದೆನೆಂದರೆ ಕೊಡೇಕಲ್ ಕೆ.ಇ.ಬಿ ಹತ್ತಿರದ ನಾರಾಯಣಪೂರ ಜಲಾಶಯದ ಮುಖ್ಯ ಕಾಲುವೆಯ ಪಕ್ಕದ
ರಸ್ತೆಯ ಮೇಲಿಂದ ರಾಜನಕೊಳೂರು ಕಡೆಯಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಟಿಪ್ಪರಗಳು
ಹೋಗುತ್ತಿವೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಪಿಸಿ 248 ವೆಂಕಟರಮಣ ರವರಿಗೆ ಹಾಗು ಇಬ್ಬರು ಪಂಚರಿಗೆ ಕರೆದುಕೊಂಡು ಬರಲು
ತಿಳಿಸಿದ್ದು, ಪಿಸಿ-248 ರವರು 05:30 ಎ.ಎಮ್ ಕ್ಕೆ ಪಂಚರನ್ನಾಗಿ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ,
ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ: ಇಬ್ಬರು
ಕೊಡೆಕಲ್ಲ ರವರಿಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿಯಲ್ಲಿ ಬಾಗವಹಿಸಿ
ಪಂಚನಾಮಗೆ ಪಂಚರಾಗಿ ಪಂಚನಾಮೆ ಬರೆಹಿಸಿಕೊಡುವಂತೆ ಕೊರಿಕೊಂಡು ಸಿಬ್ಬಂದಿಯವರಾದ ಬಸನಗೌಡ ಹೆಚ್ ಸಿ
100, ಪಿಸಿ-248 ವೆಂಕಟರಮಣ, ಪಿಸಿ319
ವಿಶ್ವನಾಥ, ಪಿಸಿ-260 ನಿಂಗಪ್ಪ, ಪಿಸಿ-298
ಹಣಮಂತ್ರಾಯ ರವರಿಗೆ ಹಾಗೂ ಪಂಚರನ್ನು ಕರೆದುಕೊಂಡು ಠಾಣೆಯಿಂದ 05:35 ಗಂಟೆಗ ಒಂದು ಖಾಸಗಿ ವಾಹನದಲ್ಲಿ ಕುಡಿಸಿಕೊಂಡು ಹೊರಟು ಬಾತ್ಮಿ
ಬಂದ ಸ್ಥಳವಾದ ಕೊಡೇಕಲ್ ಕೆ.ಇ.ಬಿ ಹತ್ತಿರದ ನಾರಾಯಣಪೂರ ಜಲಾಶಯದ ಮುಖ್ಯ ಕಾಲುವೆಯ ಪಕ್ಕದ ರಸ್ತೆಯ
ಮೇಲೆ ಹೋಗಿ ವಾಹನವನ್ನು ನಿಲ್ಲಿಸಿ ಎಲ್ಲರೂ
ವಾಹನದಿಂದ ಕೆಳಗೆ ಇಳಿದು 10-15
ನಿಮಿಷದ ವರೆಗೆ ಕಾಯುತ್ತಾ ನಿಂತಾಗ ರಾಜನಕೊಳೂರು ಕಡೆಯಿಂದ 3 ಟಿಪ್ಪರ್ಗಳು ಮರಳನ್ನು ತುಂಬಿಕೊಂಡು ಬಂದಾಗ ನಾನು ಮತ್ತು
ಸಿಬ್ಬಂದಿಯವರು ಕೂಡಿ 3 ಟಿಪ್ಪರಗಳನ್ನು
ನಿಲ್ಲಿಸಿ 3 ಟಿಪ್ಪರ್ಗಳ ಚಾಲಕರಿಗೆ
ಮರಳು ತುಂಬಿಕೊಂಡು ಹೋಗಲು ಸರಿಯಾದ ದಾಖಲೆಗಳು ಪರವಾನಿಗೆ ಪತ್ರ ಇದ್ದುದರ ಬಗ್ಗೆ ವಿಚಾರಿಸಲಾಗಿ
ತಮ್ಮ ಹತ್ತಿರ ಯಾವುದೆ ಕಾಗದ ಪತ್ರಗಳು ಇರುವದಿಲ್ಲ ನಮ್ಮ ಟಿಪ್ಪರ್ಗಳ ಮಾಲಿಕರು ನಮಗೆ ತಿಂಥಣಿ
ಬ್ರಿಡ್ಜ್ ಹತ್ತಿರ ಕೃಷ್ಣಾ ನದಿಗೆ ಹೋಗಿ ಮರಳು ತುಂಬಿಕೊಂಡು ಬರಬೇಕು ಅಲ್ಲಿಯಾರು ಇರುವದಿಲ್ಲ
ನೀವು ಮರಳು ತುಂಬಿಕೊಂಡು ಬರುವದನ್ನು ಯಾರು ನೋಡುವದಿಲ್ಲ ಅಂತಾ ಹೇಳಿ ಕಳುಹಿಸಿದ್ದರಿಂದ ನಾವು
ತಿಂಥಣಿ ಬ್ರಿಡ್ಜ್ ಹತ್ತಿರ ಕೃಷ್ಣಾ ನದಿಗೆ ಹೋಗಿದ್ದು ಅಲ್ಲಿ ಯಾರು ಇಲ್ಲದ್ದರಿಂದ ನಮ್ಮ
ಟಿಪ್ಪರ್ಗಳಲ್ಲಿ ಮರಳು ತುಂಬಿ ಕೃಷ್ಣಾನದಿಯಿಂದ ತಗೆದುಕೊಂಡು ಬಂದಿದ್ದು ನಮ್ಮ ಹತ್ತಿರ ಯಾವುದೆ
ದಾಖಲೆಗಳು ಇರುವದಿಲ್ಲ ಅಂತಾ ತಿಳಿಸಿದ್ದರಿಂದ ಸದರಿ ಟಿಪ್ಪರ್ ಚಾಲಕರು ಸರಕಾರಕ್ಕೆ ಯಾವುದೆ
ರಾಜಧನ (ರಾಯಲ್ಟಿ) ಭರಿಸದೆ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳನ್ನು ಕಳ್ಳತನ ಮಾಡಿಕೊಂಡು
ಟಿಪ್ಪರ್ಗಳಲ್ಲಿ ಸಾಗಿಸುತ್ತಿರುವದು ಕಂಡು
ಬಂದಿದ್ದರಿಂದ ನಾನು ಸದರಿ 3
ಟಿಪ್ಪರ್ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತು ಪಡಿಸಿಕೊಂಡಿದ್ದು ಸದರಿ ಜಪ್ತುಪಡಿಸಿಕೊಂಡ 3 ಟ್ರ್ಯಾಕ್ಟರ ಚಾಲಕರು ಹಾಗೂ ಮಾಲಿಕರ ಹೆಸರು ವಿಳಾಸ ವಿಚಾರಿಸಲಾಗಿ ಮೊದಲನೆ ಟಿಪ್ಪರ್
ನೋಡಲಾಗಿ ಬಿಳಿ ಬಣ್ಣದ ಕ್ಯಾಬೀನ್ದ ನೀಲಿ ಬಣ್ಣದ ಟ್ರಾಲಿಯ ಟಾಟಾ 2518 ಸಿ-6*4
ಕಂಪನಿಯ ಟಿಪ್ಪರ್ ನಂಬರ್ ಎಮ್.ಹೆಚ್-06
ಬಿ.ಡಿ-1052 ಟಿಪ್ಪರ್ದಲ್ಲಿ ಮರಳು
ತುಂಬಿದ್ದು, ಟಿಪ್ಪರನ ಅ:ಕಿ:2 ಲಕ್ಷ ರೂ, ಮರಳಿನ ಅಃಕಿಃ 8000/- ಆಗುತ್ತಿದ್ದು ಚಾಲಕನು ತನ್ನ ಹೆಸರು ಅಬ್ದುಲ್ ಕರೀಮ್ ತಂದೆ
ರಸೂಲ್ ಸಾಬ್ ಇನಾಮದಾರ್ ವಯ:27, ಉ:ಚಾಲಕ,
ಜಾ:ಮುಸ್ಲಿಂ, ಸಾ:ತುರಕನಗೇರಿ ತಾ:ಸಿಂದಗಿ ಜಿ:ವಿಜಯಪೂರ, ಅಂತಾ
ಹಾಗು ಟಿಪ್ಪರ್ದ ಮಾಲೀಕನ ಹೆಸರು ಶಬ್ಬೀರ್ ತಂದೆ ಅಬ್ದುಲ್ ಹಮೀದ್ ಗಂಟಾರೆ ಸಾ:ಪಬಾರೆ, ತಾ:ಮಸಳಾ ಜಿ:ರಾಯಗಡ್ ರಾ:ಮಹಾರಾಷ್ಟ್ರ. ಅಂತಾ
ತಿಳಿಸಿದ್ದು, ಎರಡನೆಯ ಟಿಪ್ಪರ್
ನೋಡಲಾಗಿ ಬಿಳಿ ಬಣ್ಣದ ಕ್ಯಾಬೀನ್ದ ನೀಲಿ ಬಣ್ಣದ ಟ್ರಾಲಿಯ ಟಾಟಾ 2518 ಸಿ-6*4
ಕಂಪನಿಯ ಟಿಪ್ಪರ್ ನಂಬರ್ ಕೆ.ಎ-51 ಡಿ-9229 ಟಿಪ್ಪರ್ದಲ್ಲಿ ಮರಳು ತುಂಬಿದ್ದು, ಟಿಪ್ಪರನ ಅ:ಕಿ:2 ಲಕ್ಷ ರೂ, ಮರಳಿನ ಅಃಕಿಃ 8000/- ಆಗುತ್ತಿದ್ದು,
ಚಾಲಕನು ತನ್ನ ಹೆಸರು ಮೋದಿನ್ ಪಟೇಲ್ ತಂದೆ
ಮಹಮ್ಮದ ಪಟೇಲ್ ಬಿರಾದಾರ ವಯ:31, ಉಃಚಾಲಕ, ಜಾಃಮುಸ್ಲಿಂ, ಸಾಃರಾಮಪೂರ, ತಾ:ಸಿಂದಗಿ
ಜಿ:ವಿಜಯಪೂರ, ಅಂತಾ ತಿಳಿಸಿ ಟಿಪ್ಪರ್
ಮಾಲೀಕನ ಹೆಸರು ಮೈಹಿಬೂದ್ ತಂದೆ ಖಾದರಸಾಬ್ ಇಂಚನಾಳ ಸಾಃಕಲಕೇರಿ ತಾ:ಸಿಂದಗಿ ಜಿ:ವಿಜಯಪೂರ,
ಅಂತಾ ತಿಳಿಸಿದ್ದು, ಮೂರನೆಯ ಟಿಪ್ಪರ್ ನೋಡಲಾಗಿ ಹಳದಿ ಬಣ್ಣದ ಕ್ಯಾಬೀನ್ದ ನೀಲಿ
ಬಣ್ಣದ ಟ್ರಾಲಿಯ ಎ.ಎಮ್.ಡಬ್ಲೂ 2518
ಟಿ.ಪಿ ಕಂಪನಿಯ ಟಿಪ್ಪರ್ ನಂಬರ್ ಕೆ.ಎ-40
ಎ-3812 ಟಿಪ್ಪರ್ದಲ್ಲಿ ಮರಳು
ತುಂಬಿದ್ದು, ಟಿಪ್ಪರನ ಅ:ಕಿ:2 ಲಕ್ಷ ರೂ, ಮರಳಿನ ಅಃಕಿಃ 8000/- ಆಗುತ್ತಿದ್ದು, ಅದರ ಚಾಲಕನು ತನ್ನ ಹೆಸರು ದಾವೂದ್ ತಂದೆ ಅಲ್ಲಾಭಕ್ಷ್ ಆಲಗೂರು ವಯ:25, ಉಃಚಾಲಕ, ಜಾಃಃಮುಸ್ಲಿಂ, ಸಾ:ತುರಕನಗೇರಿ ತಾ:ಸಿಂದಗಿ ಜಿ:ವಿಜಯಪೂರ, ಅಂತಾ ತಿಳಿಸಿದ್ದು, ಟಿಪ್ಪರ್ ಮಾಲೀಕನ ಹೆಸರು ಕಿರಣ ತಂದೆ ನರಸಪ್ಪ ಯಾದವ್
ಸಾಃದೇವನಹಳ್ಳಿ, ತಾ:ದೇವನಹಳ್ಳಿ
ಜಿಃಬೆಂಗಳೂರು ಗ್ರಾಮಾಂತರ. ಅಂತಾ ತಿಳಿಸಿದ್ದು, ಸದರಿ 3 ಟಿಪ್ಪರ್ಗಳನ್ನು ಪಂಚರ
ಸಮಕ್ಷಮದಲ್ಲಿ ಚಾಲಕರ ಸಮೇತ ಜಪ್ತುಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವಶಕ್ಕೆ ತಗೆದುಕೊಂಡು ಈ
ಬಗ್ಗೆ ಪಂಚರ ಸಮಕ್ಷಮದಲ್ಲಿ 06:00
ಗಂಟೆಯಿಂದ 07:00 ಗಂಟೆ ವರೆಗೆ ಜಪ್ತಿ
ಪಂಚನಾಮೆ ಮಾಡುವ ಮೂಲಕ ಜಪ್ತಿ ಮಾಡಿ 3
ಜನ ಆರೋಪಿತರು ಹಾಗು ಜಪ್ತಿ ಮಾಡಿದ ಮರಳು ತುಂಬಿದ 3 ಟಿಪ್ಪರ್ಗಳೊಂದಿಗೆ 07:30 ಗಂಟೆಗ ಠಾಣೆಗೆ ಬಂದು ಪಂಚನಾಮೆಯೊಂದಿಗೆ ನಿಮಗೆ
ಹಾಜರುಪಡಿಸಿದ್ದು ಈ ಬಗ್ಗೆ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳುಲು ಸೂಚಿಸಿದ್ದರಿಂದ ನಾನು ಎ ಎಸ್ ಐ ರವರು ಹಾಜರು ಪಡಿಸಿದ ಪಂಚನಾಮೆ ಮತ್ತು
ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 23/2017 ಕಲಂ 379
ಐಪಿಸಿ ಸಂಗಡ ಕಲಂ 21(3), 21(4) ಎಂ.ಎಂ.ಡಿ.ಆರ್.
ಕಾಯ್ದೆ-1957 ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ
ಕೈಕೊಂಡೆನು
ಕೊಡೇಕಲ
ಪೊಲೀಸ್ ಠಾಣೆ ಗುನ್ನೆ ನಂ. 24/2017 ಕಲಂಃ323, 324, 504, 506,
498(ಎ), ಸಂಗಡ 34
ಐಪಿಸಿ;- ದಿನಾಂಕ 04.04.2017 ರಂದು 6:30 ಪಿ.ಎಂ ಕ್ಕೆ ಪಿಯರ್ಾದಿದಾರಳಾದ
ಶ್ರೀಮತಿ ಹಣಮವ್ವ ಗಂಡ ಸೋಮಣ್ಣ ಅಡಿವೇರ ವಯಃ28, ಉಃ ಮನೆಗೆಲಸ, ಜಾಃಹಿಂದೂ ಬೇಡರ,
ಸಾಃಅಡಿವೇರ ದೊಡ್ಡಿ ಕಕ್ಕೇರಾ ತಾಃಸುರಪೂರ ಇವರು
ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿಯರ್ಾದಿ ಅಜರ್ಿಯನ್ನು
ಹಾಜರುಪಡಿಸಿದ್ದು, ಅದರ
ಸಾರಾಂಶವೆನೆಂದರೆ, ನನಗೆ ಈಗ 8-9 ವರ್ಷಗಳ ಹಿಂದೆ ಪೂಲಬಾವೇರ ದೊಡ್ಡಿಯ ಸೋಮಣ್ಣ ತಂದೆ
ಚಂದಪ್ಪ ರವರೊಂದಿಗೆ ನಮ್ಮ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯು ನನ್ನ ಗಂಡನ ಮನೆಯ ಮುಂದೆ ಆಗಿದ್ದು, ಮದುವೆಯ ಕಾಲಕ್ಕೆ ನಮ್ಮ ಸಂಬಂಧಿಕರು ಮತ್ತು ಅವರ
ಸಂಬಂಧಿಕರು ಹಾಜರಿದ್ದು, ನನ್ನ
ಗಂಡನಿಗೆ ಪರಮಣ್ಣ ಮತ್ತು ಮುತ್ತಣ ಅಂತಾ ತಮ್ಮಂದಿರಿದ್ದು, ಮದುವೆಯಾದ ಮೇಲೆ ನಾನು ಗಂಡನ ಮನೆಯಲ್ಲಿ ಇದ್ದು, ಗಂಡನ ಮನೆಯಲ್ಲಿ ಅತ್ತೆ ಪರಮವ್ವ ಮಾವ ಚಂದಪ್ಪ ಮತ್ತು
ಮೈದುನರಾದ ಪರಮಣ್ಣ ಮತ್ತು ಮುತ್ತಣ್ಣ ರವರೆಲ್ಲರೂ ಕೂಡಿಯೇ ಇದ್ದು, 3-4 ವರ್ಷ ಇವರೆಲ್ಲರೂ ನನ್ನೊಂದಿಗೆ ಚನ್ನಾಗಿ ಇದ್ದು, ಈಗ ಕೆಲವು ದಿನಗಳಿಂದ ನನ್ನ ಗಂಡನು ಸರಾಯಿ ಕುಡಿಯುವ
ಚಟಕ್ಕೆ ಬಲಿಯಾಗಿದ್ದು, ಯಾವುದೇ ಕೆಲಸ
ಮಾಡದೇ ಸೋಮಾರಿಯಾಗಿ ತಿರುಗಾಡುತ್ತಿದ್ದು, ನನ್ನ ಮಾವ ಚಂದಪ್ಪ ಮತ್ತು ಗಂಡ ಸೋಮಣ್ಣ ರವರು ನನಗೆ ವಿನಾಕಾರಣ ಹಿಯಾಳಿಸುವದು ಸೂಳಿದಾಳಿ
ಅಂತಾ ಬೈಯುವದು ಮತ್ತು ನೀನು ಚಂದ ಇಲ್ಲ, ನಿನಗೆ
ಅಡಿಗೆ ಮಾಡಲು ಬರುವದಿಲ್ಲ, ನಾವು
ಮತ್ತೊಂದು ಮದುವೆ ಮಾಡಿಕೊಳ್ಳುತ್ತೇವೆ ಅಂತಾ ಬೈಯುವದು ಮತ್ತು ಹಿಯಾಳಿಸುವದು ಹೊಡೆಬಡೆ ಮಾಡುವದು
ಮಾಡುತ್ತಿದ್ದು, ನಾನು ತವರು ಮನೆಗೆ
ಹೋದಾಗ ಈ ವಿಷಯವನ್ನು ನನ್ನ ತಾಯಿ ಮತ್ತು ಯಲ್ಲಮ್ಮ ಮತ್ತು ನಮ್ಮ ಅಣ್ಣತಮ್ಮಕೀಯವರಾದ ಬಾಲಪ್ಪ
ತಂದೆ ಗೌಡಪ್ಪ ಪೂಲಬಾವಿ, ಸೋಮಣ್ಣ ತಂದೆ
ಪಕೀರಪ್ಪ ಪೂಲಬಾವಿ ಹಾಗು ಜಾಲಿಬೆಂಚೆರ ದೊಡ್ಡಿಯ ಅಯ್ಯಪ್ಪ ತಂದೆ ಚಂದಪ್ಪ ಜಾಲಿಬೆಂಚಿ ರವರ ಮುಂದೆ
ಹೇಳಿದಾಗ ಅವರೆಲ್ಲರೂ ನನಗೆ ಸಮಾಧಾನ ಪಡಿಸಿ ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಮತ್ತು ಮಾವನಿಗೆ
ನನ್ನೊಂದಿಗೆ ಚೆನ್ನಾಗಿ ಇರಲು ತಿಳಿಸಿ ಹೇಳಿದ್ದು, ಅದಕ್ಕೆ ಅವರು ಒಪ್ಪಿ ಕೆಲ ದಿನಗಳು ಚೆನ್ನಾಗಿ ನೋಡಿಕೊಂಡು ಕೆಲ
ದಿನಗಳಾದ ಮೇಲೆ ನನಗೆ ಮತ್ತೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು,
ಅಲ್ಲದೇ ನನ್ನ ಮೇಲೆ ಸಂಶಯ ತಾಳುವದು
ಮಾಡುತ್ತಿದ್ದು, ನಾನು ಕೂಲಿನಾಲಿ ಮಾಡಿ
ನನ್ನ ಮಕ್ಕಳನ್ನು ಸಾಕಿಕೊಂಡು ಬರುತ್ತಿದ್ದು, ಇವರು ಕೊಡುವ ಕಿರುಕುಳ ತಾಳಲಾರದೇ ಈಗ 8-10 ದಿವಸಗಳ ಹಿಂದೆ
ನನ್ನ ತವರು ಮನೆಯಾದ ಪೂಲಬಾವಿಯರ ದೊಡ್ಡಿಗೆ ಬಂದು ಇದ್ದಿರುತ್ತೇನೆ.
ಹೀಗಿರುವಾಗ ನಾನು ದಿನಾಂಕಃ02.04.2017 ರಂದು
ರಾತ್ರಿ 9 ಗಂಟೆಯ ಸುಮಾರಿಗೆ ನನ್ನ
ತವರೂರಾದ ಪೂಲಬಾವಿರ ದೊಡ್ಡಿಯಲ್ಲಿ ನನ್ನ ತಾಯಿಯ ಮನೆಯ ಮುಂದೆ ನನ್ನ ತಾಯಿಯೊಂದಿಗೆ ಮಾತನಾಡುತ್ತ
ಕುಳಿತಿದ್ದಾಗ ನನ್ನ ಗಂಡ ಸೋಮಣ್ಣನು ಮತ್ತು ನನ್ನ ಗಂಡನ ತಂದೆ ಮಾವ ಚಂದಪ್ಪ ತಂದೆ ಬಸಣ್ಣ ಅಡಿವೇರ ಇವರಿಬ್ಬರೂ ಬಂದವರೆ ನನಗೆ ಏ ಸೂಳಿ ನೀನು
ಯಾರಿಗೆ ಕೇಳಿ ತವರು ಮನೆಗೆ ಬಂದಿದಿ ನಿನ್ನದು ಸೊಕ್ಕು ಬಹಳ ಆಗಿದೆ, ನಾವು ಇನ್ನೊಂದು ಮದುವೆ
ಮಾಡಿಕೊಳ್ಳುತ್ತೇವೆ ಅಂತಾ ಒದರಾಡಹತ್ತಿದ್ದು, ಆಗ ನಾನು ಮತ್ತು ನನ್ನ ತಾಯಿ ನನ್ನ ಗಂಡ ಮತ್ತು ಮಾವನಿಗೆ ಯಾಕೆ ಒದರಾಡುತ್ತಿದ್ದೀರಿ
ನೀವು ಸರಿಯಾಗಿ ನಡೆಸಿಕೊಂಡರೆ ನಾನೇಕೆ ತವರು ಮನೆಗೆ ಬರುತ್ತಿದ್ದೇ ಅಂತಾ ಅನ್ನುತ್ತಿರುವಾಗಲೇ
ನನ್ನ ಗಂಡ ಸೋಮಣ್ಣನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿನ
ಮೇಲೆ ಹೊಡೆದು ಗುಪ್ತಗಾಯ ಮಾಡಿದ್ದು, ನನ್ನ ಮಾವ ಚಂದಪ್ಪನು ನನ್ನ ಗಂಡನಿಗೆ ಈ ಸೂಳಿದು ಬಹಳ
ಆಗಿದೆ ಇನ್ನೂ ಹೊಡೆ ಅಂತಾ ನನ್ನ ಗಂಡನಿಗೆ ಅಂದಾಗ
ನನ್ನ ಗಂಡನು ಮತ್ತೇ ನನಗೆ ನೆಲಕ್ಕೆ ಕೆಡವಿ ಮೈಮೇಲೆಲ್ಲ ಕಾಲಿನಿಂದ ಒದ್ದು ಗುಪ್ತಗಾಯಪಡಿಸಿದ್ದು,
ಆಗ ನಾನು ಮತ್ತು ನನ್ನ ತಾಯಿ ಯಲ್ಲಮ್ಮ ರವರು
ಚೀರಾಡಲು ನಮ್ಮ ಮನೆಯ ಪಕ್ಕದ ಮನೆಯವರಾದ ಸೋಮಣ್ಣ ತಂದೆ ಭೀಮಣ್ಣ ಗೋವಿಂದರ್, ಅಂಬ್ರಪ್ಪ
ತಂದೆ ತಿಮ್ಮಯ್ಯ ರಾಯದುರ್ಗ, ಭೀಮಣ್ಣ
ಸ್ವಾಮಣ್ಣ ಗೋವಿಂದರ ಆಗು ಇತರರು ಬಂದು ನೋಡಿ ಬಿಡಿಸಿದ್ದು, ಹೋಗುವಾಗ ನನ್ನ ಗಂಡ ಮತ್ತು ಮಾವ ರವರು ನನಗೆ ಸೂಳಿ ಇವತ್ತು ನಮ್ಮ ಕೈಯಲ್ಲಿ ಉಳಿದೀದಿ
ಇನ್ನೊಂದು ಸಲ ಸಿಕ್ಕಾಗ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ
ಹೋಗಿದ್ದು, ನಾನು ಮತ್ತು ನನ್ನ
ತಾಯಿ ಮತ್ತು ನಮ್ಮ ಸಂಬಂಧಿಕರೊಂದಿಗೆ ಈ ಬಗ್ಗೆ ವಿಚಾರಿಸಿ ಈ ದಿವಸ ತಡವಾಗಿ ಬಂದು ಫೀಯರ್ಾದಿ
ಕೊಡುತ್ತಿದ್ದು, ನನಗೆ ವಿನಾಕಾರಣ
ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ
ಜೀವದ ಬೆದರಿಕೆ ಹಾಕಿದ ನನ್ನ ಗಂಡ ಮತ್ತು ಮಾವ ಚಂದಪ್ಪ ತಂದೆ ಬಸಣ್ಣ ಅಡಿವೇರ ರವರ ಮೇಲೆ ಕಾನೂನು
ಪ್ರಕಾರ ಕ್ರಮ ಜರುಗಿಸಬೇಕು ನನಗೆ ಈ ಘಟನೆಯಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲ. ಉಪಚಾರಕ್ಕೆ
ಆಸ್ಪತ್ರೆಗೆ ಹೋಗುವದಿಲ್ಲ. ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 24/2017 ಕಲಂಃ323, 324, 504, 506, 498(ಎ), ಸಂಗಡ 34 ಐಪಿಸಿ ಪ್ರಕಾರ
ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು
No comments:
Post a Comment