ಕಳವು ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :- ದಿನಾಂಕ 26/05/17 ರಂದು ಶ್ರೀ ಸೈಯದ್
ಅಲಾವುದ್ದೀನ ಅಹಮ್ಮದ್ ಖಾದರಿ ಸಾ: ಜಂಜಂ ಕಾಲನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ಮಧ್ಯಾನ್ನ 12-00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಹೋಗಿ
ಮರಳಿ ಮಧ್ಯಾಹ್ನ 2-00 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯೊಳೆಗೆ
ಪ್ರವೇಶ ಮಾಡಿ ಬೆಡ ರೂಮನಲ್ಲಿದ್ದ ಕಬ್ಬಿಣದ ಅಲಮಾರಿ ಲಾಕರಿ ಮುರಿದು ನಗದು ಹಣ 40,000/-
ರೂ ಮತ್ತು ವಿವಿಧ ನಮೂನೆಯ 09 ತೊಲಿಯ ಬಂಗಾರ ಆಭರಣಗಳು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಫಜಲಪೂರ
ಠಾಣೆ: ದಿನಾಂಕ 26-05-2017 ರಂದು
ಕ್ಕೆ ಶ್ರೀಶೈಲ ತಂದೆ
ಶ್ರೀಮಂತ ಗೌಡಗಾಂವ ಸಾ||
ಮಾಶಾಳ ಇವರು ಠಾಣೆಗೆ
ಹಾಜರಾಗಿ ನಮ್ಮ ಮನೆಯ
ಹಿಂದೆ ಗಿರಿಮಲ್ಲ ತಂದೆ
ಕಲ್ಯಾಣಿ ನಾಗಣಸೂರ ಇವರ
ಮನೆಗೆ ಹತ್ತಿಕೊಂಡಿದ್ದು ಸದ್ಯ ನಾವು
ನಮ್ಮ ಮನೆಯ ಹಿಂದಿನ ಸದರಿ ಗೋಡೆಯನ್ನು
ಬಿಚ್ಚಿ ರಿಪೇರಿ ಕೆಲಸ ಮಾಡುತ್ತಿದ್ದು. ಹಿಗಿದ್ದು ಇಂದು
ದಿನಾಂಕ 26-05-2017 ರಂದು
ನಾನು ಮತ್ತು ನನ್ನ
ಅಣ್ಣ ಹಣಮಂತ, ನಮ್ಮ
ದೊಡ್ಡಪ್ಪನ ಮಗ ಕಲ್ಯಾಣಿ
,
ಹಾಗೂ ನಮ್ಮ ಸಂಭಂದಿಕ
ಗುರಪ್ಪ ಎಲ್ಲರೂ ಕೂಡಿ
ನಮ್ಮ ಮನೆಯ ಬಿಚ್ಚಿದ
ಗೊಡೆಯ ಕಲ್ಲು ಮಣ್ಣು
ತಗೆಯುತ್ತಿದ್ದಾಗ, 1) ಗಿರಿಮಲ್ಲ
ತಂದೆ ಕಲ್ಯಾಣಿ ನಾಗಣಸೂರ
2) ಶರಣಪ್ಪ ತಂದೆ ಕಲ್ಯಾಣಿ
ನಾಗಣಸೂರ 3) ಗುರುನಾಥ ತಂದೆ
ಗಿರಿಮಲ್ಲ ನಾಗಣಸೂರ 4) ನಾಗು
ತಂದೆ ಶರಣಬಸು ನಾಗಣಸೂರ
5) ಬಸವರಾಜ ತಂದೆ ಗಿರಿಮಲ್ಲ
ನಾಗಣಸೂರ 6) ಶಂಕರಲಿಂಗ ತಂದೆ
ಧರೇಪ್ಪ ನಾಗಣಸೂರ 7) ಸುರೇಶ
ತಂದೆ ಧರೇಪ್ಪ ನಾಗಣಸೂರ
8) ಯಲ್ಲವ್ವ ಗಂಡ ಗಿರಿಮಲ್ಲ
ನಾಗಣಸೂರ 9) ಮಹಾಂತಮ್ಮ ಗಂಡ
ಶರಣಬಸು ನಾಗಣಸೂರ ಸಾ||
ಎಲ್ಲರೂ ಮಾಶಾಳ ಗುಂಪುಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಎಲ್ಲರೂ ಕೂಡಿ
ನಮಗೆ ನಾಲ್ಕು ಜನರಿಗೂ
ಸುತ್ತು ಹಾಕಿ ಕೈಯಿಂದ
ಹೊಡೆಯುವುದು ಕಾಲಿನಿಂದ ಒದೆಯುವುದು
ಮಾಡುತ್ತಿದ್ದರು, ಗುರುನಾಥ
ನಾಗಣಸೂರ ಈತನು ಅಲ್ಲಿಯೆ
ಇದ್ದ ಕಬ್ಬಿಣದ ಸಲಿಕೆಯಿಂದ ನನ್ನ ಅಣ್ಣ
ಹಣಮಂತನಿಗೆ ಹೊಡೆದನು, ಸದರಿಯವರು
ಹೊಡೆಯುತ್ತಿದ್ದಾಗ ಅಲ್ಲೆ
ಇದ್ದ ದುಂಡಪ್ಪ ಗೌಡಗಾಂವ,
ವಿಠ್ಠಲ ಸುತಾರ, ಕರೇಪ್ಪ
ಪೂಜಾರಿ, ಸಿದ್ರಾಮ ನಾಗಣಸೂರ,
ಶ್ರೀಮಂತ ಗೌಡಗಾಂವ ಎಲ್ಲರೂ
ಕೂಡಿ ನಮಗೆ ಹೊಡೆಯುದನ್ನು
ಬಿಡಿಸಿರುತ್ತಾರೆ. ಕಾರಣ ಸದರಿ
ನಮ್ಮ ಮೇಲೆ ಹಲ್ಲೆ
ಮಾಡಿದವರ ಮೇಲೆ ಕಾನೂನು
ಕ್ರಮ ಜರುಗುಸುವಂತೆ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment