Police Bhavan Kalaburagi

Police Bhavan Kalaburagi

Friday, May 5, 2017

Yadgir District Reported Crimes




Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 75/2017 ಕಲಂ: 143,147,148,323,324, 326,307, 302,  504, 506 ಸಂ 149 ಐಪಿಸಿ ;- ದಿನಾಂಕ 04/05/2017 ಸಾಯಂಕಾಲ 7-45 ಗಂಟೆಗೆ ಶ್ರೀಮತಿ ತಾಯಮ್ಮ ಗಂಡ ಸಿದ್ದಪ್ಪ ಮಾಡಗೇರ ವಯ;30, ಜಾ;ಪ.ಜಾತಿ(ಹೊಲೆಯ), ;ಕೂಲಿ, ಸಾ;ತಳಕ ತಾ;ಜಿ;ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆಯನ್ನು ನೀಡಿದ್ದು, ಸದರಿ ಹೇಳಿಕೆ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಗಂಡನೊಂದಿಗೆ ಉಪಜೀವಿಸುತ್ತಿದ್ದೇನೆ. ಹೀಗಿದ್ದು ನಮ್ಮ ಗ್ರಾಮದ ಸವರ್ೆ ನಂ:1/1 ನೇದ್ದರಲ್ಲಿ 46 * 38 ಫೀಟ ಉದ್ದ ಅಳತೆಯವುಳ್ಳ ( ನಿವೇಶನ) ಜಮೀನ ನನ್ನ ಗಂಡನಾದ ಸಿದ್ದಪ್ಪ ತಂದೆ ರಾಯಪ್ಪ ಮಾಡಗೇರ ಇವರು ನಮ್ಮ ಊರಿನವರಾದ ಶ್ರೀ ವಿಶ್ವನಾಥ ಗೌಡ ಎಂಬುವರಿಂದ ಖರೀದಿ ಮಾಡಿರುತ್ತಾನೆ. ಈ ಜಮೀನ ಪಕ್ಕದ ಮನೆಯವರಾದ  1) ಸಿದ್ರಾಮ ತಂದೆ ಹಣಮಂತ ಮ್ಯಾಗಿನಮನಿ 2) ಬೋಜಪ್ಪ ತಂದೆ ಸಾಬಣ್ಣ ಸಾಧು 3) ಶಿವಯೋಗಿ ತಂದೆ ಸಾಬಣ್ಣ ಸಾಧು 4) ಶರಬಣ್ಣ ತಂದೆ ಹಣಮಂತ ಪಟ್ಟಿಬಾಯಿ 5) ಹಣಮಂತ ತಂದೆ ಶರಭಣ್ಣ ಪಟ್ಟಿಬಾಯಿ 6) ಅಯ್ಯಪ್ಪ ತಂದೆ ಸಾಬಣ್ಣ ಸಾಧು 7) ಚಂದಪ್ಪ ತಂದೆ ಶಿವಯೋಗಿ ಸಾಧು 8) ನಿಂಗಪ್ಪ ತಂದೆ ಹಣಮಂತ ಗೋಪಾಳೆ 9) ಶರಣಪ್ಪ ತಂದೆ ಶಿವಯೋಗಿ ಸಾಧು 10) ಮೋನಪ್ಪ ತಂದೆ ರಾಯಪ್ಪ ಮೂಕರಾಯಪ್ಪನೋರ ಇವರಿಗೆ ಸಂಬಂಧಿಸಿದ ಮನೆಗಳು ಮತ್ತು ನಿವೇಶನಗಳು ಇರುತ್ತವೆ. ಸದರಿಯವರು ನನ್ನ ಗಂಡನ ನಿವೇಶನ (ಜಮೀನ) ನೇದ್ದರಲ್ಲಿ ನಮ್ಮ ಓಣಿಗೆ ಹೋಗಲು ರಸ್ತೆಗೆ ಜಾಗ ಕೊಡಬೇಕು ಅಂತಾ ಈ ಹಿಂದೆ ಬಾಯಿ ಮಾತಿನ ತಕರಾರು ಆಗಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 03-05-2017 ರಂದು ಸಾಯಂಕಾಲ 04-00 ಗಂಟೆಗೆ ನಮ್ಮ ನಿವೇಶನ ಎದುರಗಡೆ ಇರುವ ರಸ್ತೆಯು ನಮ್ಮ  ಗ್ರಾಮದಿಂದ ಅಚೋಲಾ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಸರಕಾರದ ವತಿಯಿಂದ ಚರಂಡಿ ಕೆಲಸ ನಡೆದಿದ್ದು ಸದರಿ ಚರಂಡಿಯ ಮೇಲೆ ಈ ಮೇಲೆ ತಿಳಿಸಿದ  ಸಿದ್ರಾಮ ತಂದೆ ಹಣಮಂತ ಮ್ಯಾಗಿನಮನಿ,  ಬೋಜಪ್ಪ ತಂದೆ ಸಾಬಣ್ಣ ಸಾಧು,  ಶಿವಯೋಗಿ ತಂದೆ ಸಾಬಣ್ಣ ಸಾಧು, ಶರಬಣ್ಣ ತಂದೆ ಹಣಮಂತ ಪಟ್ಟಿಬಾಯಿ, ಹಣಮಂತ ತಂದೆ ಶರಭಣ್ಣ ಪಟ್ಟಿಬಾಯಿ, ಅಯ್ಯಪ್ಪ ತಂದೆ ಸಾಬಣ್ಣ ಸಾಧು,  ಚಂದಪ್ಪ ತಂದೆ ಶಿವಯೋಗಿ ಸಾಧು, ನಿಂಗಪ್ಪ ತಂದೆ ಹಣಮಂತ ಗೋಪಾಳ,ೆ ಶರಣಪ್ಪ ತಂದೆ ಶಿವಯೋಗಿ ಸಾಧು, ಮೋನಪ್ಪ ತಂದೆ ರಾಯಪ್ಪ ಮೂಕರಾಯಪ್ಪನೋರ ಎಲ್ಲರೂ ಕೂಡಿಕೊಂಡು ನಮ್ಮ ನಿವೇಶನ ಹತ್ತಿರ ಇರುವ ಚರಂಡಿಗೆ ನಮ್ಮ ನಿವೆಶನದ ಹತ್ತಿರದಿಂದ ತಮ್ಮ ಓಣಿಗೆ ಹೋಗಲು ರಸ್ತೆ ಸಲುವಾಗಿ ಬಂಡೆಕಲ್ಲು ಹಾಕುತ್ತಿರುವಾಗ ನನ್ನ ಭಾವನಾದ ಹಣಮಂತ ತಂದೆ ರಾಯಪ್ಪ ಮಾಡಗೇರ ಈತನು ಸ್ಥಳಕ್ಕೆ ಬಂದು ಯಾಕರೊ ಇಲ್ಲಿ ರಸ್ತೆ ಬರುವುದಿಲ್ಲ ಅಂತಾ ಈಗಾಗಲೆ ಹಲವು ಸಲ ನಿಮಗೆ ಹೇಳಿದ್ದರೂ ನೀವು ರಸ್ತೆ ಸಲುವಾಗಿ ಬಂಡೆಕಲ್ಲು ಹಾಕುತ್ತಿರುವಿರಿ ಅಂತಾ ಅಂದಾಗ ಅವರಿಗೂ ಮತ್ತು ನಮಗೂ ಜಗಳವಾಗಿ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ. ಹೀಗಿದ್ದು ಇಂದು ದಿನಾಂಕ 04/05/2017 ರಂದು ನಮ್ಮ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಡೆಯಿಂದ ನಡೆದ ಚರಂಡಿ ಕಾಂಕ್ರಿಟ್ ಕೆಲಸಕ್ಕೆ ನಾನು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದೆನು. ಸಾಯಂಕಾಲ ಅಂದಾಜು 5 ಪಿ.ಎಂ. ಸುಮಾರಿಗೆ ಕೆಲಸವು ನಮ್ಮೂರಿನ ಅಯ್ಯಪ್ಪ ಮಾಡಗೇರ ಇವರ ಮನೆಯ ಹಿಂದೆ ನಡೆದಿದ್ದಾಗ ಆಗ ಚರಂಡಿ ಮೇಲೆ ಚಾವಣಿ ಹಾಕಿ ಹರಿಜನ ವಾಡಾ ಓಣಿಗೆ ಹೋಗುವ ರಸ್ತೆ ಮಾಡುತ್ತಿದ್ದಾಗ  ಅದೇ ಸಮಯಕ್ಕೆ ನನ್ನ ಭಾವನರಾದ ಹಣಮಂತ ಮಾಡಗೇರ ಇವರು ಬಂದು ಕೆಲಸ ಮಾಡುವವರಿಗೆ ನಮ್ಮ ಹರಿಜನ ವಾಡಾಕ್ಕೆ ಹೋಗುವ ರಸ್ತೆಯನ್ನು ಚೆನ್ನಾಗಿ ಮಾಡಿ ಅನ್ನುತ್ತಿದ್ದಾಗ ನಮ್ಮೂರಿನ  ಸಿದ್ರಾಮ ತಂದೆ ಹಣಮಂತ ಮ್ಯಾಗಿನಮನಿ, ಬೋಜಪ್ಪ ತಂದೆ ಸಾಬಣ್ಣ ಸಾಧು, ಶಿವಯೋಗಿ ತಂದೆ ಸಾಬಣ್ಣ ಸಾಧು, ಶರಬಣ್ಣ ತಂದೆ ಹಣಮಂತ ಪಟ್ಟಿಬಾಯಿ, ಹಣಮಂತ ತಂದೆ ಶರಭಣ್ಣ ಪಟ್ಟಿಬಾಯಿ, ಅಯ್ಯಪ್ಪ ತಂದೆ ಸಾಬಣ್ಣ ಸಾಧು,  ಚಂದಪ್ಪ ತಂದೆ ಶಿವಯೋಗಿ ಸಾಧು, ನಿಂಗಪ್ಪ ತಂದೆ ಹಣಮಂತ ಗೋಪಾಳ,ೆ ಶರಣಪ್ಪ ತಂದೆ ಶಿವಯೋಗಿ ಸಾಧು, ಮೋನಪ್ಪ ತಂದೆ ರಾಯಪ್ಪ ಮೂಕರಾಯಪ್ಪನೋರ ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದವರೇ ಅವರಲ್ಲಿ ಸಿದ್ರಾಮ ಈತನು ಲೇ, ಹಣಮಂತ ಸೂಳೇ ಮಗನೇ ನೀನು ನಿನ್ನ ತಮ್ಮನ ನಿವೇಶನದ ಹತ್ತಿರ ದಾರಿ ಕೊಡಬೇಕಾಗುತ್ತದೆ ಅಂತಾ ಇಲ್ಲಿಯ ದಾರಿ ಮಾಡಲು ಹೇಳುತ್ತೀ ಸೂಳೇ ಮಗನೇ ದಾರಿ ವಿಚಾರವಾಗಿ ನೀನು ಈ ಹಿಂದೆ ಹಲವಾರು ಬಾರಿ ತಕರಾರು ಮಾಡುತ್ತಾ ಬಂದಿರುವಿ ಇದರಿಂದ ನಮಗೆ ಸಾಕಾಗಿದೆ ನಿನ್ನದು ಊರಲ್ಲಿ ಬಹಳ ಸೊಕ್ಕಾಗಿದೆ ಇವತ್ತು ನಿನಗ ಖಲಾಸ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಅಂತಾ ಅಂದವರೇ  ಅವರಲ್ಲಿ ಸಿದ್ರಾಮ ಈತನು ತನ್ನ  ಕೈಯಲ್ಲಿದ್ದ ಕೊಡಲಿಯಿಂದ ಹಣಮಂತನ ತಲೆಗೆ ಹೊಡೆದು ಬಾರೀ ರಕ್ತಗಾಯ ಮಾಡಿದಾಗ ಆಗ ಹಣಮಂತನು ಚೀರಾಡುತ್ತಾ ಚರಂಡಿಯ ಮೇಲೆ ಬಿದ್ದನು. ಆಗ ಬೋಜಪ್ಪನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಎಡಗಾಲಿನ ಮೊಣಕಾಲಿನ ಕೆಳಗೆ ಹಾಗೂ ಶಿವಯೋಗಿ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಬಲಗಾಲಿನ ತೊಡೆಗೆ, ಮೊಣಕಾಲು ಕೆಳಗೆ ಹೊಡೆದು ಭಾರೀ ರಕ್ತಗಾಯ ಮಾಡಿದರು. ಶರಬಣ್ಣ ತಂದೆ ಹಣಮಂತ ಪಟ್ಟಿಬಾಯಿ, ಹಣಮಂತ ತಂದೆ ಶರಭಣ್ಣ ಪಟ್ಟಿಬಾಯಿ, ಅಯ್ಯಪ್ಪ ತಂದೆ ಸಾಬಣ್ಣ ಸಾಧು,  ಚಂದಪ್ಪ ತಂದೆ ಶಿವಯೋಗಿ ಸಾಧು, ನಿಂಗಪ್ಪ ತಂದೆ ಹಣಮಂತ ಗೋಪಾಳ,ೆ ಶರಣಪ್ಪ ತಂದೆ ಶಿವಯೋಗಿ ಸಾಧು ಇವರುಗಳು ಕೆಳಗೆ ಬಿದ್ದಿದ್ದ ಹಣಮಂತನ ಹೊಟ್ಟೆಗೆ, ಬೆನ್ನಿಗೆ ಮನಬಂದಂತೆ ಕಾಲಿನಿಂದ ಒದ್ದು ಬಾರೀ ಗುಪ್ತಗಾಯ ಮಾಡಿರುತ್ತಾರೆ ಆಗ ಅಲ್ಲೇ ಇದ್ದ ನಾನು ಜಗಳ ಬಿಡಿಸಲು ಹೋದಾಗ ನನಗೆ ಮೋನಪ್ಪ ತಂದೆ ರಾಯಪ್ಪ ಮೂಕರಾಯಪ್ಪನೋರ ಈತನು ಲೇ, ರಂಡೀ ನೀನು ಜಗಳ ಬಿಡಿಸಲು ಬರುತ್ತಿಯಾ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಕೆಳಗೆ ನೂಕಿದನು. ಅಷ್ಟರಲ್ಲಿ ಜಗಳವಾಗುವ ಸಪ್ಪಳ ಕೇಳಿ ಅಲ್ಲಿಗೆ ಬಂದ ನಮ್ಮ ಸಂಬಂಧಿ ಮೋನಪ್ಪ ತಂದೆ ಭೀಮರಾಯ ಮಾಡಗೇರ ಈತನು ಸಿದ್ರಾಮ ಮತ್ತು ಇತರರಿಗೆ ನೀವು ನಮ್ಮ ಚಿಕ್ಕಪ್ಪ ಹಣಮಂತ ಮತ್ತು ಸಣ್ಣಮ್ಮ ತಾಯಮ್ಮ ಇವರಿಗೆ ಯಾಕೆ ಹೊಡೆಯುತ್ತಿರುವಿರಿ ಅಂತಾ ಅಂದಾಗ ಅವರಲ್ಲಿ ಸಿದ್ರಾಮ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಮೋನಪ್ಪನಿಗೆ ಬಲಗಡೆ ಭುಜಕ್ಕೆ ಹೊಡೆದನು ಮತ್ತು ಬೋಜಪ್ಪ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಬಲಗಡೆ ತೊಡೆಗೆ ಹೊಡೆದನು ಮತ್ತು ಶಿವಯೋಗಿ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಎಡಗಣ್ಣಿನ ಹುಬ್ಬಿಗೆ ಹೊಡೆದು ಬಾರೀ ರಕ್ತಗಾಯ ಮಾಡಿದರು ಉಳಿದವರಾದ ಶರಬಣ್ಣ ತಂದೆ ಹಣಮಂತ ಪಟ್ಟಿಬಾಯಿ, ಹಣಮಂತ ತಂದೆ ಶರಭಣ್ಣ ಪಟ್ಟಿಬಾಯಿ, ಅಯ್ಯಪ್ಪ ತಂದೆ ಸಾಬಣ್ಣ ಸಾಧು,  ಚಂದಪ್ಪ ತಂದೆ ಶಿವಯೋಗಿ ಸಾಧು, ನಿಂಗಪ್ಪ ತಂದೆ ಹಣಮಂತ ಗೋಪಾಳ,ೆ ಶರಣಪ್ಪ ತಂದೆ ಶಿವಯೋಗಿ ಸಾಧು ಇವರುಗಳು ಕೆಳಗೆ ಬಿದ್ದಿದ್ದ ಮೋನಪ್ಪನ ಹೊಟ್ಟೆಗೆ, ಬೆನ್ನಿಗೆ ಮನಬಂದಂತೆ ಕಾಲಿನಿಂದ ಒದ್ದು ಕೊಲೆ ಮಾಡುವ ಉದ್ದೇಶದಿಂದ ಮರಣಾಂತಿಕ ಹಲ್ಲೆ ಮಾಡಿರುತ್ತಾರೆ.  ಮೋನಪ್ಪ ತಂದೆ ರಾಯಪ್ಪ ಮೂಕರಾಯಪ್ಪನೋರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಮೋನಪ್ಪನ ಬೆನ್ನಿಗೆ ಹೊಡೆದನು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ನನ್ನ ಗಂಡ ಸಿದ್ದಪ್ಪ ತಂದೆ ರಾಯಪ್ಪ ಮತ್ತು ಕಾಂಕ್ರಿಟ್ ಕೆಲಸ ಮಾಡುವ ಕೂಲಿ ಕೆಲಸದವರು ಜಗಳ ಬಿಡಿಸಿದರು. ನಂತರ ನಾನು ಮತ್ತು ಮೋನಪ್ಪ ಹಾಗೂ ನನ್ನ ಗಂಡ ಸಿದ್ದಪ್ಪ ಮೂರು ಜನರು ಸೇರಿ ಕೆಳಗೆ ಬಿದ್ದಿದ್ದ ನಮ್ಮ ಬಾವ ಹಣಮಂತ ತಂದೆ  ರಾಯಪ್ಪ ಮಾಡಗೇರ ಈತನಿಗೆ ನೋಡಲು ಆತನು ಜಗಳದಲ್ಲಾದ ಬಾರೀ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಿದ್ರಾಮ ಮತ್ತು ಇತರರು ಸೆರಿಕೊಂಡು ಕೊಡಲಿಗಳು ಮತ್ತು ಬಡಿಗೆಯಿಂದ ಹೊಡೆದು  ಹಾಗೂ ಕೈಕಾಲಿನಿಂದ ಹೊಡೆಬಡೆ ಮಾಡಿ ಹಣಮಂತ ಈತನಿಗೆ ಕೊಲೆ ಮಾಡಿರುತ್ತಾರೆ. ನಂತರ 108 ವಾಹನದಲ್ಲಿ ಮೋನಪ್ಪ ಈತನಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಇರುತ್ತದೆ. ಜಗಳದಲ್ಲಿ ನನಗೂ ಗಾಯಪೆಟ್ಟುಗಳಾಗಿದ್ದು ಉಪಚಾರ ಕುರಿತು ಆಸ್ಪತೆಗೆ ಕಳಿಸಿಕೊಡಲು ಮತ್ತು ನಮ್ಮ ಭಾವ ಹಣಮಂತ ಈತನಿಗೆ ಕೊಲೆ ಮಾಡಿದ, ಮೋನಪ್ಪ ಈತನಿಗೆ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿದ ಹಾಗೂ ನನಗೆ ಹೊಡೆಬಡೆ ಮಾಡಿದ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ ಗುನ್ನೆ ನಂ. 75/2017 ಕಲಂ 143, 147, 148, 323, 324, 326, 307, 302, 504, 506 ಸಂ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ: 504,324,323 ಐಪಿಸಿ;- ದಿನಾಂಕ: 04/05/2017 ರಂದು 1-30 ಪಿಎಮ್ ಜಿಜಿಹೆಚ್ ಯಾದಗಿರಿಯಿಂದ ಫೋನ ಮೂಲಕ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಭಗವಂತ್ರಾಯ ಹೆಚ್.ಸಿ 169 ರವರು ವಿಚಾರಣೆ ಕುರಿತು ಆಸ್ಪತ್ರೆಗೆ 2-30 ಪಿಎಮ್ ಕ್ಕೆ ಭೇಟಿ ನೀಡಿ ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಗಾಯಾಳು ವಿಠ್ಠಲ್ ತಂದೆ ಕಮಲಾಕರ ಈತನ ಹೇಳಿಕೆ ಫಿರ್ಯಾಧಿಯನ್ನು 3-30 ಪಿಎಮ್ ವರೆಗೆ ಪಡೆದುಕೊಂಡು 5-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಾವು 5 ಜನ ಅಣ್ಣತಮ್ಮಂದಿರು ಇರುತ್ತೇವೆ. ಎಲ್ಲರೂ ಬೇರೆ ಬೇರೆಯಾಗಿ ನಮ್ಮ ಜಮೀನುಗಳನ್ನು ಹಂಚಿಕೊಂಡಿರುತ್ತೇವೆ. ನಮ್ಮ ಅಣ್ಣ ರಾಜು ತಂದೆ ಕಮಲಾಕರ ರಾಠೋಡ ಸಾ:ಗುಂಡಳ್ಳಿ ತಾಂಡಾ ಈತನ ಪಾಲಿಗೆ ಒಂದುವರೆ ಎಕರೆ ಜಮೀನು ಬಂದಿದ್ದು, ಅವನ ತನ್ನ ಸಂಸಾರದ ಅಡಚಣೆ ಸಂಬಂಧ ಸದರಿ ಜಮೀನನ್ನು ಈಗ ಸುಮಾರು 3 ವರ್ಷಗಳ ಹಿಂದೆ ನಮ್ಮ ತಂಗಿ ಗಂಡನಾದ ಶಾಂತಪ್ಪ ತಂದೆ ತಿಪ್ಪಣ್ಣ ಚವ್ಹಾಣ ಈತನಿಗೆ 5 ಲಕ್ಷ ಹಣಕ್ಕೆ 2 ವರ್ಷದ ಅವಧಿಗೆ ಮುದ್ದತ್ತು ರಜಿಸ್ಟರ ಮಾಡಿಕೊಟ್ಟಿರುತ್ತಾನೆ. ನಾನು ನಡುವೆ ಆಗಿದ್ದು ಇರುತ್ತದೆ. ಸದರಿ ಮುದ್ದತ್ತ ರಜಿಸ್ಟರದ ಅವಧಿ 2 ವರ್ಷಕ್ಕೆ ಮುಗಿದರು ರಾಜು ಈತನು ಬಂದು 5 ಲಕ್ಷ ರೂ. ಹಣ ಮರಳಿ ಕೊಡಲಿಲ್ಲ. ಆಗ ಸದರಿ ಹೊಲ ಅಳಿಯ ಶಾಂತಪ್ಪನ ಹೆಸರಿನಿಂದ ಆಗಿರುತ್ತದೆ. ಹೀಗಿದ್ದು ಇಂದು ದಿನಾಂಕ: 04/05/2017 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಾನು ನಮ್ಮ ತಾಂಡಾದ ತಿಪ್ಪಣ್ಣ ಇವರ ಹೊಟೆಲ ಹತ್ತಿರ ಇದ್ದಾಗ ಅಲ್ಲಿಗೆ ಬಂದ ರಾಜು ಈತನು ಶಾಂತಪ್ಪನ ಹತ್ತಿರ ತಾನು ತೆಗೆದುಕೊಂಡು ಹಣ ಮರಳಿ ಕೊಡುತ್ತೇನೆ. ನನ್ನ ಹೊಲ ನನಗೆ ಬಿಟ್ಟುಕೊಡು ಎಂದರೆ ಬಿಡುತ್ತಿಲ್ಲ. ನೀನು ನಡುವೆ ಆಗಿದಿ ಅವನಿಗೆ  ಹೇಳಿ ಬಿಡಿಸಿಕೊಡು ಅಂತಾ ಅಂದಾಗ ನಾನು ವಾಯದೆ ಪ್ರಕಾರ ನೀನು ಹಣ ಮರಳಿ ಕೊಡದೆ ಇದ್ದದ್ದಕ್ಕೆ ಹೊಲ ಅವನ ಹೆಸರಿನಿಂದ ರಜಿಸ್ಟರ ಆಗಿದೆ ಈಗ ನಾನೇನು ಹೇಳಲಿ ಅಂತಾ ಅಂದಾಗ ಮಗನೆ ಇದರಲ್ಲಿ ಎಲ್ಲಾ ನಿನ್ನದೆ ಕೈವಾಡ ಇದೆ ನಿನಗೆ ಬಿಡುವುದಿಲ್ಲವೆಂದು ಜಗಳ ತೆಗೆದವನೆ ಅಲ್ಲೆ ಬಿದ್ದ ಹಿಡಿಗಲ್ಲು ತೆಗೆದುಕೊಂಡು ನನ್ನ ತೆಲೆ ಮೇಲೆ ಹೊಡೆದು ರಕ್ತಗಾಯ ಪಡಿಸಿದನು ಮತ್ತು ನನಗೆ ನೆಲೆಕ್ಕೆ ಅಂಗಾತ ಕೆಡವಿ ಮೊಳಕಾಲಿನಿಂದ ಹೊಟ್ಟೆಗೆ ಬಲವಾಗಿ ಗುದ್ದಿದ್ದನು. ಆಗ ಜಗಳವನ್ನು ಅಲ್ಲೆ ಇದ್ದ ನಮ್ಮ ತಾಂಡಾದ ಬಲರಾಮ ತಂದೆ ಸುಬ್ಬಣ್ಣ ಪೂಜಾರಿ, ಭೀಮು ತಂದೆ ಶೇಟು ನಾಯ್ಕ ಇವರು ಬಂದು ಜಗಳ ಬಿಡಿಸಿರುತ್ತಾರೆ. ನನಗೆ ತೆಲೆಗೆ ರಕ್ತಗಾಯವಾಗಿ ರಕ್ತ ಸೋರುತ್ತಿದ್ದರಿಂದ ಮತ್ತು ಹೊಟ್ಟೆ ನೋವಾಗಲಾರಂಭಿಸಿದ್ದರಿಂದ ಉಪಚಾರಕ್ಕಾಗಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ನನಗೆ ಹೊಡೆಬಡೆ ಮಾಡಿದ ರಾಜು ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 63/2017 ಕಲಂ: 504,324,323 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 43/2017 ಕಲಂ 279,337 ಐಪಿಸಿ;- ದಿನಾಂಕ:03/05/2017 ರಂದು ಮದ್ಯಾನ್ಹ 2-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಆಗ ನನ್ನ ಅಣ್ಣನಾದ ಗುರಣ್ಣ ಈತನು ನನಗೆ ಕರೆದು ನಾನು ಮತ್ತು  ಮಲ್ಲಣ್ಣಗೌಡ ತಂದೆ ಶಂಕರಗೌಡ ಮಾಲಿ ಪಾಟೀಲ ಈತನೊಂದಿಗೆ ಅವನ ಮೋಟಾರ ಸೈಕಲ್ ಮೇಲೆ ಶಹಾಪೂರ ನಗರಕ್ಕೆ ಬಟ್ಟೆ ಖರೀದಿ ಮಾಡಲು ಹೋಗಿ ಬರುತ್ತೇವೆ ಅಂತಾ ಹೇಳಿದಾಗ ಆಗ ನಾನು ಆಯಿತು ಹೋಗಿ ಬಾ ಅಂತಾ ಹೇಳಿದೆನು ಆಗ ನನ್ನ ಅಣ್ಣ ಮಲ್ಲಣ್ಣಗೌಡ ಈತನ ಮೋಟಾರ ಸೈಕಲ್ ನಂ.ಕೆ.ಎ33 ಕೆ-8236 ನೆದ್ದರ ಮೇಲೆ ಹಿಂದೆ ಕುಳಿತು ಶಹಾಪೂರಕ್ಕೆ ನಮ್ಮೂರಿನಿಂದ ಹೋದನು. ನಂತರ ನಾನು ನಮ್ಮ ಮನೆಯಲ್ಲಿ ನಿನ್ನೆ ದಿನಾಂಕ:03/05/2017  ರಂದು 7-45 ಪಿ.ಎಮ್.ಕ್ಕೆ ಇದ್ದಾಗ ಆಗ ಹುಲಕಲ್ ಗ್ರಾಮದ ನನ್ನ ಗೆಳೆಯನಾದ ನಿಂಗಣ್ಣ ಬಿರೆದಾರ ಈತನು ಫೋನ ಮಾಡಿ ತಿಳಿಸಿದ್ದೇನೆಂದರೆ ನಿನ್ನ ಅಣ್ಣ ಮೋಟರ ಸೈಕಲ್ ನಂ.ಕೆ.ಎ-33 ಕೆ-8236 ನೇದ್ದರ ಮೇಲೆ ಶಹಾಪೂರ ಜೇವರಗರ್ಿ ರೋಡಿನ ಮೇಲೆ ಹುಲಕಲ್ ಗ್ರಾಮದ ಹತ್ತಿರ ರೋಡ ಬ್ರೆಕರ್ ಹತ್ತಿರ ಮೋಟರ ಸೈಕಲ್ನ್ನು ನಡೆಸುತ್ತಿದ್ದ ಮಲ್ಲಣ್ಣಗೌಡ ತಂದೆ ಶಂಕರಗೌಡ ಮಾಲಿ ಪಾಟೀಲ ಸಾ||ಮುಡಬೂಳ ಈತನು ತನ್ನ ಮೋಟರ ಸೈಕಲ್ ನಂ.ಕೆ.ಎ.33 ಕೆ-8236 ನೆದ್ದನ್ನು  7-30 ಪಿ.ಎಮ್.ಕ್ಕೆ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಒಮ್ಮೇಲೆ ರೋಡ ಬ್ರೆಕರ ಹತ್ತಿರ ಬ್ರೆಕ್ ಹಾಕಿ ಒಮ್ಮೆಲೆ ಸ್ಕಿಡ್ ಆಗಿ ಅಪಘಾತ ಮಾಡಿ ಬಿದ್ದಿದ್ದು ಅಪಘಾತದಲ್ಲಿ ಗುರಣ್ಣ ಈತನಿಗೆ ತಲೆಯ ಹಿಂದುಗಡೆ ಹುಬ್ಬಿದ ಗಾಯ, ಬಲ ಕಿವಿಯಲ್ಲಿ ರಕ್ತಗಾಯ, ಮತ್ತು ಬಲಗೈಗೆ ರಕ್ತಗಾಯ, ಬಲಬುಜಕ್ಕೆ ರಕ್ತಗಾಯವಾಗಿದ್ದು ಮಲ್ಲಣ್ಣಗೌಡ ಈತನಿಗೆ ಬಲಗಾಲ ಮೊಳಕಾಲಿಗೆ ರಕ್ತಗಾಯವಾಗಿದ್ದು  ಗುರಣ್ಣ ಈತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅಂತಾ ನಮಗೆ ವಿಷಯ ತಿಳಿಸಿದಾಗ ಆಗ ನಾನು ಮತ್ತು ನನ್ನ ಗೆಳೆಯರಾದ ಮಲ್ಲಿಕಾಜರ್ುನ ಚನ್ನಪಟ್ಟಣ, ಸಾಹೇಬಗೌಡ ಸಂಗ್ರಾವತಿ  ಎಲ್ಲರೂ ಕೂಡಿ ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತವಾಗಿದ್ದು ನಿಜವಿದ್ದು ಗುರಣ್ಣ ಮತ್ತು ಮಲ್ಲಣ್ಣಗೌಡ ಇವರಿಗೆ ಗಾಯವಾಗಿದ್ದು ಇದ್ದು. ಆಗ ಸದರಿಯವರಿಗೆ ಉಪಚಾರ ಕುರಿತು ಕಲಬುರಗರ್ಿಯ ಯುನೈಟೆಡ್ ಆಸ್ಪತ್ರೆಗೆ ನಿನ್ನೆ ಸೇರಿಕೆ ಮಾಡಿದ್ದು   ಇರುತ್ತದೆ. ನನ್ನ ತಮ್ಮನು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ನಾನು ಹೇಳಿಕೆ ನೀಡಿದ್ದು ಅಪಘಾತ ಮಾಡಿದ ಮೋಟಾರ ಸೈಕಲ್ ನಡೆಸಿದ ಮಲ್ಲಣ್ಣಗೌಡ ತಂದೆ ಶಂಕರಗೌಡ ಮಾಲಿ ಪಾಟೀಲ ಸಾ||ಮುಡಬೂಳ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಯಿಸಿ ಹೇಳಿಕೆ ನಿಜವಿದೆ.

No comments: