ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 17-06-2017
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ
ನಂ. 73/17 ಕಲಂ 279,304(ಎ) ಐಪಿಸಿ ಜೊತೆ 187 ಐ.ಎಮ್.ವಿ
ಎಕ್ಟ :-
ದಿನಾಂಕ:17/06/2017
ರಂದು
0600 ಗಂಟೆಗೆ ಫಿರ್ಯಾದಿಯಾದ ಶೇಷರಾವ ಪವಾಡೆ
ಸಾ:ಹುಮನಾಬಾದ
ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ
17/06/2017 ರಂದು ನಸುಕಿನ ಜಾವ ಫಿರ್ಯಾದಿ
ಹಾಗು
ವಿಜಯಕುಮಾರ ತಂದೆ. ರಾಚಪ್ಪಾ ಪಟ್ಟಣಶೆಟ್ಟಿ ವಯ
43 ವರ್ಷ ಮತ್ತು ಬಾಬುರಾವ ತಂದೆ ಸಿದ್ದಪ್ಪ ಪೊಚಂಪಳ್ಳಿ ಮೂವರು ಕೂಡಿಕೊಂಡು
ತಮ್ಮ ಓಣಿಯಿಂದ ವಾಯು ವಿಹಾರಕ್ಕೆಂದು ರಾ.ಹೆ.9
ರ
ಕಡೆಗೆ ಒಬ್ಬರ ಹಿಂದೆ ಒಬ್ಬರು
ನಡೆದುಕೊಂಡು ಹೋಗುತ್ತಿರುವಾಗ ಮುಂಜಾನೆ 0515 ಎ.ಎಂ
ಗಂಟೆಯ ಸುಮಾರಿಗೆ ರಾ.ಹೆ.9
ರ
ಮೇಲೆ ನೂರ ಧಾಬಾದ ಹತ್ತಿರ ಹೋದಾಗ ಹಿಂದಿನಿಂದ ಹುಡಗಿ ಕಡೆಯಿಂದ ಬಂದ ಒಂದು ಅಪರಿಚಿತ ಕ್ರುಜರ ಜೀಪ
–ನೇದರ ಚಾಲಕನು ತನ್ನ ಜೀಪನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು
ಬಂದು ಫಿರ್ಯಾದಿಯ ಹಿಂದೆ
ಇದ್ದ ವಿಜಯಕುಮಾರ ರವರಿಗೆ ಡಿಕ್ಕಿ
ಹೊಡೆದು ಅಪಘಾತ ಮಾಡಿ ತನ್ನ ವಾಹನ ನಿಲ್ಲಿಸಿದೆ ಓಡಿಸಿಕೊಂಡು ಹೋಗಿರುತ್ತಾನೆ.
ಸದರಿ
ಅಪಘಾತದಿಂದ ವಿಜಯಕುಮಾರ ರವರು ಸುಮಾರು 40 ಅಡಿ ದೂರದಲ್ಲಿ
ಹೋಗಿ ಬಿದ್ದಿದ್ದರಿಂದ ಅವರ ಎಡ ಕಣ್ಣಿಗೆ, ಹಣೆಗೆ,
ಟೊಂಕಿನ
ಮೇಲೆ ಹೊಟ್ಟೆಯ ಮೇಲೆ ಬಲ ಮೋಳಕಾಲಿನ ಮೇಲೆ ಭಾರಿ ರಕ್ತಾಗವಾಗಿದ್ದು ಎಡ ಕಾಲಿಗೆ ಭಾರಿ ಗುಪ್ತಗಾಯವಾಗಿ
ಮುರಿದಿದ್ದರಿಂದ ಸ್ಧಳದಲ್ಲೆ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಗುನ್ನೆ ನಂ. 82/17 ಕಲಂ 279,337,338,304 (ಎ) ಐಪಿಸಿ ;-
ದಿನಾಂಕ: 16-06-2017 ರಂದು 2215 ಗಂಟೆಗೆ ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಅಪಘಾತವಾದ
ಬಗ್ಗೆ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪ್ರಕಾಶ ತಂದೆ ದೇವದಾಸ ಶ್ರೀಗಣ
ಸಾ: ಜನವಾಡಾ ಗ್ರಾಮ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿ: 16-06-2017 ರಂದು ಮುಂಜಾನೆ ಫಿರ್ಯಾದಿ
ಮತ್ತು ಗೆಳೆಯನಾದ ದತ್ತು ತಂದೆ ಶರಣಪ್ಪಾ ವಡಗಾಂವಕರ ಇಬ್ಬರು ಕೂಡಿಕೊಂಡು ಟ್ರಾಕ್ಟರ್ ನಂ ಎಪಿ-23-ವಿ-3652
ನೇದರಲ್ಲಿ ಶಿವಾರದಲ್ಲಿನ ಕಲ್ಲುಗಳನ್ನು ತುಂಬಿಕೊಂಡು ಗ್ರಾಮದ ದಲಿತ ಸಮುದಾಯ ಭವನ ಹತ್ತಿರ ಹಾಕುತ್ತಿದ್ದು
ಹಿಗೆ ಸಾಯಂಕಾಲ 1830 ಗಂಟೆಗೆ ಸುಮಾರಿಗೆ ಕೊನೆಯ ಟ್ರಿಪನಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬರುತ್ತಿರುವಾಗ
ಯುನುಸ್ ಇತನು ಟ್ರಾಕ್ಟರ್ ಚಲಾಯಿಸುತ್ತಿದ್ದು ಭವಾನಿ ಮರಾಠ ಖಾನಾವಳಿ ಎದುರುಗಡೆ ರಾತ್ರಿ 1900 ಗಂಟೆ
ಸುಮಾರಿಗೆ ಎದುರಿನಿಂದ ಲಾರಿ ನಂ. ಕೆಎ-39-788 ನೇದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ
ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಟ್ರಾಕ್ಟರಗೆ ಡಿಕ್ಕಿ ಮಾಡಿದರಿಂದ ಫಿರ್ಯಾದಿಗೆ
ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ದತ್ತು ಇತನಿಗೆ ನೋಡಲು ಆತನ ಎದೆಯ ಮೇಲೆ ಬಲ ಭುಜಕ್ಕೆ ಹೊಟ್ಟೆಯ
ಹತ್ತಿರ ಗಾಯಗಳಾಗಿದ್ದರಿಂದ ಮಾತಾಡಲಾರದ ಸ್ಥಿತಿಯಲ್ಲಿದ್ದರಿಂದ ಆಸ್ಪತ್ರೆಗೆ ದಾಖಲಿಸಿದಾಗ ಚಿಕತ್ಸೆ
ಫಲಲಾರಿಯಾಗದೆ ದಿನಾಂಕ: 16-06-2017 ರಂದು ರಾತ್ರಿ 2000 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೋಳ್ಳಲಾಗಿದೆ.
No comments:
Post a Comment