ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-06-2017
ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 17/17 ಕಲಂ 174 ಸಿಆರ್.ಪಿ.ಸಿ.:-
ದಿನಾಂಕ: 24/06/2017
ರಂದು
2115 ಗಂಟೆಗೆ ಫಿರ್ಯಾದಿ ಶ್ರೀಮತಿ ಪಲ್ಲವಿ ಗಂಡ ದಿ. ಲೋಕೆಶ
ಮಾನಕಾರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿ ಮದುವೆಯು 2015
ನೇ
ವರ್ಷದಲ್ಲಿ ಕೊನಮೆಳಕುಂದಾ ಗ್ರಾಮದ ಲೋಕೆಶ ಮಾನಕಾರ
ಎಂಬುವವರ ಜೋತೆಯಲ್ಲಿ ಆಗಿರುತ್ತದೆ. ಒಂದು ಗಂಡು ಮಗು
ಆಗಿರುತ್ತದೆ ಹಿಗಿರುವಲ್ಲಿ ಇವರಿಗೆ 15
ಎಕ್ಕರೆ
ಹೊಲ ಇದ್ದು ಆ ಹೊಲದಲ್ಲಿ ಇವರ ಗಂಡ ಒಕ್ಕಲುತನ ಮಾಡಿಕೊಂಡಿರುತ್ತಾರೆ. ಇವರ ಮಾವ ಹೊಲದಲ್ಲಿ
ಬೇಳೆ ಬೇಳೆಸಲು ಗೊಬ್ಬರ ಹಾಕಲು ವಿವಿಧ ಬ್ಯಾಂಕಗಳಿಂದ ಕೃಷಿ ಸಾಲ ತೆಗೆದುಕೊಂಡಿರುತ್ತಾರೆ. ಹೊದ ವರ್ಷ
ಹೊಲದಲ್ಲಿ ಸೊಯಾ, ಉದ್ದು,
ಹೆಸರು,
ಕಡಲೆ,
ಹಾಗು
ತೊಗರಿ ಹಾಕಿದ್ದು ಸರಿಯಾಗಿ ಬೇಳೆದಿರುವುದಿಲ್ಲ. ಆದ್ದರಿಂದ ಫಿರ್ಯಾದಿಯು ಸಾಲವು ಹೇಗೆ ಮರುಪಾವತಿ
ಮಾಡಬೇಕೆಂಬ ಚಿಂತೆಯಲ್ಲೆ ಇರುತ್ತಿದ್ದರು 1) ಕೆಜಿಬಿ
ಬ್ಯಾಂಕ ಸಿದ್ದೇಶ್ವರ ಒಂದು ಲಕ್ಷ, 2) ಪಿಕೆಪಿಎಸ್
ಬ್ಯಾಂಕ ಕೊನಮೆಳಕುಂದಾ ಒಂದು ಲಕ್ಷ ಐವತ್ತು ಸಾವಿರ, 3) ಓವರಸಿಸ
ಬ್ಯಾಂಕ ಭಾಲ್ಕಿ ಒಂದು ಲಕ್ಷ ಐವತ್ತು ಸಾವಿರ ಹಾಗು ಖಾಸಗಿ ಜನರ ಹದಿನೈದು ಲಕ್ಷ (15
ಲಕ್ಷ)
ಸಾಲ ಇರುತ್ತದೆ. ಹೀಗಿರುವಾಗ ದಿನಾಂಕ24/06/2017 ರಂದು
ಸಾಯಂಕಾಲ 6 ಗಂಟೆ ಸುಮಾರಿಗೆ ಮನೆಯಲ್ಲಿ ಬೆಳೆಗೆ ಹೊಡೆಯಲು ತಂದಿದ್ದ ವಿಷ ಕೊಡಿದು ಫೀರ್ಯಾದಿ
ಗಂಡ ಲೋಕೆಶ ವಯಛ 28 ವರ್ಷ, ರವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ
ಯು.ಡಿ.ಆರ್. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 161/17 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 25/06/17 ರಂದು 1630 ಗಂಟೆಗೆ ವಿಜಯಕುಮಾರ್ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಹಾಲಹಳ್ಳಿ(ಕೆ) ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂಬ ಖಚಿತ
ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ ಹಾಲಹಳ್ಳಿ(ಕೆ)
ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 6 ಜನ ಗುಂಪಾಗಿ ಕುಳಿತು ಹಣ ಹಚ್ಚಿ
ಪಣ ತೊಟ್ಟು ನಸಿಬೀನ ಅಂದರ ಬಾಹರ್ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವುದು ಮತ್ತು ಅವರಲ್ಲಿ ಒಬ್ಬರು
ಅಂದರಕ್ಕೆ 50ರೂ ಅಂತಲು ಮತೊಬ್ಬರೂ ಬಾಹರಕ್ಕೆ 100/ರೂ ಅಂತಲು ಹೇಳುತ್ತಿದ್ದು ಜೂಜಾಟ ಆಡುತ್ತಿರುವುದು ಖಚೀತ ಪಡಿಸಿಕೊಂಡು 1830 ಗಂಟೆಗೆ
ಜೂಜಾಟ
ಆಡುತ್ತಿರುವವರ ಮೇಲೆ ದಾಳಿ ಮಾಡಿದ್ದು 4 ಜನ ಓಡಿ ಹೋಗಿದ್ದು ಉಳಿದ ಇಬ್ಬರಿಗೆ ಹಿಡಿದು ಅವರವರ ಹೆಸರು
ವಿಳಾಸ ವಿಚಾರಿಸಲು ಕ್ರಮವಾಗಿ 1] ರಮೇಶ ತಂದೆ ಶಿವರಾಜ ಮೀನಕೆರಿ ವಯ: 35 ಜಾ:ಎಸ್.ಟಿ(ಗೊಂಡ) ಉ:ಶಿಕ್ಷಕ
ಸಾ:ಹಾಲಹಳ್ಳಿ(ಕೆ) ಅಂತ ಹೇಳಿದನು ಆತನ ಅಂಗ ಜಡ್ತಿ ಮಾಡಲು ಈತನ ವಶದಲ್ಲಿ 4700/ ರೂ ನಗದು ಹಣ ದೋರೆತಿರುತ್ತದೆ.
ಮತ್ತು 2) ದೂಳಪ್ಪಾ ತಂದೆ ಕಲ್ಲಪ್ಪಾ ಮೀನಕೆರೆ ವಯ:50 ಜಾ:ಎಸ್.ಟಿ(ಗೊಂಡ) ಉ:ರೈಲ್ವೆ ಇಲಾಖೆಯಲ್ಲಿ
ಕ್ಲರ್ಕ ಕೆಲಸ ಸಾ:ಹಾಲಹಳ್ಳಿ(ಕೆ) ಎಂದು ತಿಳಿಸಿದ್ದು ಈತನ ಅಂಗ ಜಡ್ತಿ ಮಾಡಲು 17,300/-ರೂ ದೊರೆತವು.
ಮತ್ತು ಎಲ್ಲರ ಮಧ್ಯೆದಲ್ಲಿ 2,500/ರೂ ನಗದು ಹಣ ದೊರೆತವು ಮತ್ತು ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ
52 ಇಸ್ಪೀಟ ಎಲೆಗಳು ದೊರೆತವು. ಸದರಿ ಜೂಜಾಟ ಆಡುತಿದ್ದು ಓಡಿ ಹೊದವರ ಹೆಸರು ವಿಳಾಸಲಾಗಿ 3) ಮಲ್ಲಪ್ಪಾ
ತಂದೆ ಸಂಗಪ್ಪಾ ಡೊಳ್ಳಿ ಜಾ:ಕುರುಬರು ಸಾ:ಹಾಲಹಳ್ಳಿ(ಕೆ), 4)
ಸಂಜು ತಂದೆ ಸುಭಾಷ ಕಾಡವಾದೆ ಸಾ:ಹಾಲಹಳ್ಳಿ(ಕೆ), 5)
ದಿಗಂಬರ ತಂದೆ ಮಲ್ಪಪ್ಪಾ ಮತ್ತು 6) ಅಜೀಜ ಜೀಪ ಚಾಲಕ ಎಂದು ತಿಳಿಸಿರುತ್ತಾರೆ. ಸದರಿ ಎಲ್ಲಾ ಒಟ್ಟು
ಹಣ ಸೇರಿ 24,500/- ರೂಪಾಯಿಗಳಿದ್ದು ಹಾಗೂ ಇಸ್ಪೀಟ
ಎಲೆಗಳು ಒಟ್ಟು 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment