ಸುಲಿಗೆ ಪ್ರಕರಣ :
ರಾಘವೇಂದ್ರ
ನಗರ ಠಾಣೆ : ದಿನಾಂಕ 10-07-2017 ರಂದು ಮದ್ಯಾನ 1.45 ಗಂಟೆಗೆ ಶ್ರೀ ಬಸವರಾಗ ತಂದೆ ಅಪ್ಪಾರಾವ ಪಾಟೀಲ ಸಾ : ಮಾಣಿಕೇಶ್ವರಿ
ಕಾಲೂನಿ ಕಲಬುರಗಿ ರವರು ಸಂಗಮೇಶ್ವರ ಕಾಲೋನಿ ಎಸ್,ಬಿ,ಐ ಬ್ಯಾಕಿಗೆ ಹಣ ಡ್ರಾ ಮಾಡಿಕೊಳ್ಳಲು ನಾನು ಮತ್ತು ನನ್ನ ಹೆಂಡತಿ ಅನ್ನಪೂರ್ಣ ಇಬ್ಬರೂ
ಕೂಡಿ ಬ್ಯಾಂಕಿಗೆ ಹೋಗಿ ನನ್ನ ಅಕೌಂಟ ನಂ 52204306601
ನೇದ್ದರ ಮೂಲಕ ಮದ್ಯಾನ 2.00 ಗಂಟೆಗೆ 6,00,000
ರೂ ಡ್ರಾ ಮಾಡಿಕೊಂಡು ಕೌಂಟರ ನಂ 7 ರ ಮುಂದೆ ಕುಳಿತು
ಹಣ ಎಣಸಿಕೊಂಡಿದ್ದು ಎಲ್ಲಾ ನೋಟುಗಳು 2000/-ರೂಪಾಯಿಗಳದ್ದಾಗಿರುತ್ತವೆ.
ಪ್ಲಾಸ್ಟೀಕ ಕ್ಯಾರಿ ಬ್ಯಾಗಿನಲ್ಲಿ ಹಾಕಿಕೊಂಡು ಸುತ್ತಿ ಅವುಗಳನ್ನು ನನ್ನ ಹೆಂಡತಿ ಅನ್ನಪೂರ್ಣ
ಇವಳ ಕೈಯಲ್ಲಿ ಕೊಟ್ಟು ಇಬ್ಬರು ಕೂಡಿ ಬ್ಯಾಂಕಿನ ಹೊರಗಡೆ ಬಂದು ಒಂದು ಆಟೋದಲ್ಲಿ ಕುಳಿತು
ಮಹಾಲಕ್ಷ್ಮಿ ಲೇಔಟ ಕ್ರಾಸಿಗೆ 2.15 ಗಂಟೆಗೆ ಬಂದು ಆಟೋದಿಂದ ಕೆಳಗೆ
ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ನನ್ನ ಹೆಂಡತಿ ಮುಂದೆ ನಡೆದುಕೊಂಡು ಹೊಗುತ್ತಿದ್ದು
ಅವಳ ಹಿಂದೆ ನಾನು ಹೋಗುತ್ತಿದ್ದೆ ಎದುರಿನಿಂದ ಇಬ್ಬೂರು ಮೋಟಾರ ಸೈಕಲ ಮೆಲೆ ಬಂದು ನನ್ನ ಹೆಂಡತಿಯ
ಬಗಲಲ್ಲಿ ಹಿಡಿಕೊಂಡಿದ್ದ 6,00,000 ರೂ ಹಾಗೂ ಬ್ಯಾಂಕ ಪಾಸಬುಕ್ಕ ಇದ್ದ
ಪ್ಲಾಸ್ಟೀಕ ಕ್ಯಾರಿ ಬ್ಯಾಗ ಕಸಿದುಕೊಂಡು ಮೋಟಾರ ಸೈಕಲ ಮೇಲೆ ಶಹಾಬಜಾರ ನಾಕಾ ಕಡೆಗೆ ಹೋದರು
ಮೋಟಾರ ಸೈಕಲ ನಡೆಸುತಿದ್ದವನು ದಪ್ಪಗೆ ಗುಂಡುಮುಖವಾಗಿದ್ದು ಚೌಕಡಿ ಶರ್ಟ, ಜಿನ್ಸಪ್ಯಾಂಟ ಧರಸಿರುತ್ತಾನೆ ಹಿಂದೆ ಕುಳಿತವು ತೆಳಗ್ಗೆ ಇದ್ದು ಬೀಳಿ ಶರ್ಟ ಹಾಕಿದ್ದು
ಮುಖ ನೊಡಿರುವುದಿಲ್ಲಾ ಮತ್ತು ಮಾಟಾರ ಸೈಕಲ ನಂಬರ
ನೊಡಿರುವುದಿಲ್ಲಾ ಅವರಿಗೆ ನೊಡಿದರೆ ಗುರುತ್ತಿಸುತ್ತೇನೆ
ನಮ್ಮ ಹಣ ದೋಚಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ
ಠಾಣೆ :ಮಹ್ಹಮ್ಮದ ರಸೂಲ ತಂದೆ ರಹೂಫ ಪಟೇಲ ಸಾ : ಗಣೇಶ
ನಗರ ಕಲಬುರಗಿ ರವರು ದಿನಾಂಕ 09-07-17 ರಂದು 10
ಪಿ,ಎಮ್ ಕ್ಕೆ ಆಪಾದಿತನು ತನ್ನ ವಶದಲ್ಲಿದ್ದ ಸ್ಕಾರ್ಪಿಯೋ ಕಾರ ನಂ; ಕೆಎ-28ಎಮ-8444 ನೇದ್ದನ್ನು
ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮಳಖೇಡ ಗ್ರಾಮದ ಹತ್ತಿರ ಒಮ್ಮೆಲೆ ಕಟ್
ಹೊಡೆದಿದ್ದರಿಂದ ಕಾರ ಪಲ್ಟಿ ಆಗಿ ಚಾಲಕನಿಗೆ ಹಾಗು ಕಾರಿನಲ್ಲಿದ್ದ ಇತರೆ ಇಬ್ಬರಿಗೆ ಸಾದಾ ಹಾಗು
ಭಾರಿ ಗಾಯ ಪಡಿಸಿದ್ದು ಇರುತ್ತದೆ ಅಂತಾ ಶ್ರೀ ಉಸ್ಮಾನ ತಂದೆ ಸೈಯದ ಇನಾಯತ್ ಖದರಿ ಸಾ : ಎಮ್.ಬಿ.
ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment