ಆಕ್ರಮವಾಗಿ
ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 11-07-2017 ರಂದು ರಾತ್ರಿ ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಆನೂರ
ಮಾರ್ಗವಾಗಿ ಮಲ್ಲಾಬಾದ ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾತೋಳಿ ಹತ್ತಿರ ಇರುವ ಆನೂರ ಕ್ರಾಸ ಹತ್ತಿರ ಹೋಗುತಿದ್ದಾಗ
ಆನೂರ ರೋಡಿನ ಕಡೆಯಿಂದ ಒಂದು ಟಿಪ್ಪರ ಬರುತಿತ್ತು , ಆಗ ಸದರಿ ಟಿಪ್ಪರ
ಚಾಲಕನಿಗೆ ಟಿಪ್ಪರ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟಿಪ್ಪರ ಚಾಲಕ ನಮ್ಮ
ಪೊಲೀಸ್ ಜೀಪನ್ನು ನೋಡಿ ಟಿಪ್ಪರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ
ಸದರಿ ಟಿಪ್ಪರ ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಸಿ-6232 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು.
ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು
ತುಂಬಿದ ಟಿಪ್ಪರನ್ನು ಪಂಚರ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ
ಅಫಜಲಪೂರ ಠಾಣೆ : ದಿನಾಂಕ 11-07-2017 ರಂದು ಬೆಳಗಿನಜಾವ ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಆನೂರ
ಕಡೆಗೆ ಬರುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾತೋಳಿ ಹತ್ತಿರ ಆನೂರ ಗ್ರಾಮದ ಹೈಸ್ಕೂಲ ಹತ್ತಿರ ಹೋಗುತ್ತಿದ್ದಾಗ
ಆನೂರ ರೋಡಿನ ಕಡೆಯಿಂದ ಒಂದು ಟಿಪ್ಪರ ಬರುತಿತ್ತು , ಆಗ ಸದರಿ ಟಿಪ್ಪರ
ಚಾಲಕನಿಗೆ ಟಿಪ್ಪರ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟಿಪ್ಪರ ಚಾಲಕ ನಮ್ಮ
ಪೊಲೀಸ್ ಜೀಪನ್ನು ನೋಡಿ ಟಿಪ್ಪರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ
ಸದರಿ ಟಿಪ್ಪರ ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-28 ಬಿ-7454 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ ಇರಬಹುದು.
ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು
ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಪೂರ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 08-07-2017 ರಂದು ರಾತ್ರಿ ಅಫಜಲಪೂರ ತಾಲೂಕಿನ ಮಣೂರ ಗ್ರಾಮದಲ್ಲಿ
ಅನದಿಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನೀರಿಕರ್ಷಕರು ಕರಜಗಿ, ರಮೇಶ ಗ್ರಾಮ ಲೆಕ್ಕಾಧಿಕಾರಿ ಕರಜಗಿ, ಹಾಗೂ ಶ್ರೀ
ಅಣವೀರಪ್ಪ ಗ್ರಾಮ ಲೆಕ್ಕಾಧಿಕಾರಿ ನಂದರ್ಗಾ ಇವರೆಲ್ಲರೂ ಸೇರಿ ಮಣೂರ ಗ್ರಾಮದಲ್ಲಿ ಅನಧಿಕೃತವಾಗಿ
ಮರಳೂ ಸಾಗಾಣಿಕೆ ಮಾಡುತ್ತಿದ್ದ ಮರಳು ತುಂಬಿದ ಎರಡು ಟಿಪ್ಪರಗಳನ್ನು ನಿಲ್ಲಿಸಿ
ವಿಚಾರಿಸುತ್ತಿದ್ದಾಗ, ಟಿಪ್ಪರ ಚಾಲಕರು ಟಿಪ್ಪರನ್ನು ನಿಲ್ಲಿಸದೆ ಹಾಗೆ ತಗೆದುಕೊಂಡು
ಹೋಗಿರುತ್ತಾರೆ. ಕತ್ತಲು ಇದ್ದರಿಂದ ಸದರಿ ಮರಳು ತುಂಬಿದ ಟಿಪ್ಪರಗಳ ನಂಬರ ಕಂಡಿರುವುದಿಲ್ಲಾ
ಕಾರಣ ಸದರಿ ಅಕ್ರಮ ಮಗಳು ಸಾಗಾಣಿಕೆ ಮಾಡುತ್ತಿದ್ದ ಎರಡು ಟಿಪ್ಪರಗಳನ್ನು ಪತ್ತೆ ಮಾಡಿ ಸದರಿ
ಟಿಪ್ಪರಗಳ ಮಾಲಿಕರ ಮೇಲೆ ಹಾಗೂ ಚಾಲಕರ ವಿರುದ್ದ ಪ್ರಕರಣ ದಾಖಲಿಸಿಲು ಕೋರಲಾಗಿದೆ ಅಂತಾ ಕೊಟ್ಟ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment