ಕೊಲೆ ಪ್ರಕರಣ :
ಸೇಡಂ ಠಾಣೆ
: ಶ್ರೀ ಅಡೆವೆಪ್ಪ ತಂದೆ ದೇವರಾಯ ಕೊಳ್ಳಿ, ಸಾ:ಮುಗನೂರ ಗ್ರಾಮ, ತಾ:ಸೇಡಂ. ರವರು ಮುಗನೂರ ಗ್ರಾಮದ ಹೊಲ ಸರ್ವೆನಂ-73/1 ನೇದ್ದರಲ್ಲಿ
ನಮ್ಮದು ಒಟ್ಟು 27 ಎಕರೇ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ
ನನ್ನತಂದೆ ದೇವರಾಯ ಇವರಿಗೆ ‘9’ ಎಕರೇ, ನನ್ನ
ಚಿಕ್ಕಪ್ಪ ಬಸವರಾಜ ಇವರಿಗೆ ‘9’ ಎಕರೇ ಬಂದಿದ್ದು ಉಳಿದ ‘9’ ಎಕರೇ ನಮ್ಮ ಅಣ್ಣ ತಮ್ಮಕ್ಕಿ ಭೀಮರಾಯ ಇವರ ಪಾಲಿಗೆ ಬಂದಿರುತ್ತದೆ. ಸದರಿ ಭೀಮರಾಯಇತನು
ತನ್ನ ಪಾಲಿಗೆ ಬಂದ ‘9’ ಎಕರೇ ಜಮೀನನ್ನು ನಮ್ಮೂರಿನ ಚಂದ್ರಮ್ಮ ಗಂಡ
ಚಂದ್ರಕಾಂತ ಕಲಾಲಇವರಿಗೆ ಮಾರಾಟ ಮಾಡಿರುತ್ತಾರೆ. ಸದರಿ ಜಮೀನು ಖರೀದಿ ಮಾಡಿದ ಚಂದ್ರಮ್ಮ ಇವಳು
ಜಮೀನಿಗೆ ಬಂದಾಗನಮ್ಮ ತಂದೆಯಾದ ದೇವರಾಯ ಇವರು ಚಂದ್ರಮ್ಮ ಇವರಿಗೆ ನಿಮಗೆ ಮಾರಿದ ಜಮೀನು ನಮ್ಮದು
ಇದೆ. ನೀವುಖರೀದಿಸಿದ ಜಮೀನು ಬೇರೆ ಕಡೆ ಇರುತ್ತದೆ ಅಂತ ಹೇಳಿದಾಗ ಸದರಿ ಚಂದ್ರಮ್ಮ ಗಂಡ
ಚಂದ್ರಕಾಂತ ಕಲಾಲಹಾಗೂ ಅವರ ಮನೆಯವರು ಮತ್ತು ನಮ್ಮ ಮಧ್ಯ ಬಾಯಿ ಮಾತಿನ ತಕರಾರು ಆಗಿದ್ದು ಈಗ
ಸುಮಾರು 5-6 ವರ್ಷಗಳಿಂದ ಸದರಿ ಜಮೀನು ಬೀಳುಬಿದ್ದಿರುತ್ತದೆ. ಈ ಬಗ್ಗೆ
ನ್ಯಾಯಾಲಯದಲ್ಲಿ ನಮ್ಮ ಮಧ್ಯೆಸಿವಿಲ್ ಕೇಸ್ ಕೂಡಾ ನಡೆದಿರುತ್ತದೆ. ನಾನು ಹೊಲಕ್ಕೆ ಹೋದಾಗ
ಚಂದ್ರಕಾಂತ ಕಲಾಲ ಹಾಗೂ ಅವನಮನೆಯವರು ನಮಗೆ ನೀವು ಆ ಹೊಲಕ್ಕೆ ಹೋದರೆ ನಿಮ್ಮ ವಂಶನೇ ಸರ್ವನಾಶ
ಮಾಡುತ್ತೇವೆ ಅಂತ ಆಗಾಗಹೆದರಿಸುತ್ತಿದ್ದನು. ಇತ್ತೀಚೆಗೆ ಮಾನ್ಯ ಡಿ.ಸಿ. ಸಾಹೇಬರು
ಕಲಬುರಗಿರವರಲ್ಲಿ ತೀರ್ಪು ನಮ್ಮಪರವಾಗಿ ಬಂದಿರುತ್ತದೆ. ಅಂತ ನಮ್ಮ ತಂದೆಯವರು ನನ್ನ ಮುಂದೆ
ಹೇಳಿದ್ದರು. ದಿ:16-07-2017 ರಂದುಮುಂಜಾನೆ 11-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂದೆ ದೇವರಾಯ, ತಾಯಿ
ಕಾಳಮ್ಮ, ಚಿಕ್ಕಮ್ಮಳಾದ ಜಗದೇವಿ, ಚಿಕ್ಕಪ್ಪನ
ಮಗನಾದ ದೆವರಾಯ ಮತ್ತು ರಾಜಶೇಖರ, ನಾವೆಲ್ಲರೂ ಕೂಡಿಕೊಂಡುಸದರಿ
ಜಮೀನಿನಲ್ಲಿ ಗಳೆ ಹೊಡೆಯಬೇಕೆಂದು ಜಮೀನಿಗೆ ಹೋದೇವು. ಸದರಿ ಜಮೀನಿನಲ್ಲಿ ನಾವೆಲ್ಲರೂಗಳೆ
ಹೊಡೆಯುತ್ತಿದ್ದೇವು. ಅಂದಾಜು ಮುಂಜಾನೆ 11-30 ಗಂಟೆ ಸುಮಾರಿಗೆ ಸದರಿ
ಜಮೀನಿನ ಬಗ್ಗೆತಕರಾರು ಮಾಡುತ್ತಿರುವ, 1] ಚಂದ್ರಕಾಂತ ಕಲಾಲ, ಆತನ ಹೆಂಡತಿ 2] ಚಂದ್ರಮ್ಮ ಮತ್ತು ಆತನಮಕ್ಕಳಾದ 3] ಮಲ್ಲು, 4] ನಾರಾಯಣ ಹಾಗೂ ಚಂದ್ರಕಾಂತನ ಅಳೆಯನಾದ 5]
ಲಕ್ಷ್ಮಯ್ಯಸಾ:ಗಡಿಕೇಶ್ವರ, ತಾ:ಚಿಂಚೋಳಿ. ಹೀಗೆ ‘5’
ಜನರು ನಾವಿದ್ದಲಿಗೆ ಕೈಯಲ್ಲಿ ಬಡಿಗೆಗಳು ಮತ್ತುಕೊಡಲಿ ಹಿಡಿದುಕೊಂಡು ಬಂದರು
ಅವರಲ್ಲಿ ಚಂದ್ರಕಾಂತ ಕಲಾಲ ಇತನು ನನ್ನ ತಂದೆ ದೇವರಾಯ ಕೊಳ್ಳಿಇವರಿಗೆ “ ಏ ಭೋಸಡಿ ಮಗನೇ ದೇವ್ಯಾ, ರಂಡಿ ಮಗನೇ ನಮ್ಮ ಹೊಲಕ್ಕೆ ಹ್ಯಾಂಗ
ಗಳೆ ಹೊಡೆಯುತ್ತಿರೊಭೋಸಡಿ ಮಕ್ಕಳೇ ನಿಮ್ಮೆಲ್ಲರಿಗ ಹೊಡೆದು ನಿಮ್ಮ ವಂಶಾನೆ ಸರ್ವನಾಶ
ಮಾಡುತ್ತೇವೆ” ಅಂತ ಅಂದವನೇತನ್ನ ಕೈಯಲ್ಲಿಯ ಬಡಿಗೆಯಿಂದ ಹೊಡೆಯಲು
ಹೋದಾಗ ನನ್ನ ತಂದೆ ಎರಡೂ ಕೈಗಳು ಅಡ್ಡ ತಂದಾಗ ಅವರಎರಡೂ ಕೈಗಳು ಮುರಿದವು. ಸದರಿ
ಚಂದ್ರಕಾಂತನೊಂದಿಗೆ ಇದ್ದ ಆತನ ಮಗ ಮಲ್ಲು ಇತನು ನಮ್ಮೆಲ್ಲರಿಗೆ “ ಭೋಸಡಿ
ಮಕ್ಕಳೇ ನಿಮ್ಮದು ಬಹಾಳ ಆಗಿದೆ ನಾವ ಈ ಹೊಲ ಖರಿದಿ ಮಾಡಿದರು ನಮಗೆ ಹೊಲ ಕೊಡದೇ ಬೀಳುಹಾಕಿದ್ದಿರಿ
ರಂಡಿ ಮಕ್ಕಳೇ” ಅಂತ ಒದರಾಡುತ್ತಿರುವಾಗ ಮಲ್ಲುವಿನ ತಾಯಿ ಚಂದ್ರಮ್ಮ
ಇವಳು ಒಂದುಕಾಗದದಲ್ಲಿ ಕಟ್ಟಿಕೊಂಡು ತಂದ ಖಾರದ ಪುಡಿ ನಮ್ಮೆಲ್ಲರ ಕಣ್ಣಿಗೆ ಎರಚಿದಳು
ನಾವೆಲ್ಲರೂಕಣ್ಣಲ್ಲಿ ಬಿದ್ದ ಖಾರದ ಪುಡಿ ಒರೆಸಿಕೊಳ್ಳುವಾಗ ಮಲ್ಲು ಇತನು ತನ್ನ ಕೈಯಲ್ಲಿದ್ದ
ಕೊಡಲಿಯಿಂದನಮ್ಮ ಕಾಕನ ಮಗನಾದ ರಾಜಶೇಖರನ ಕಾಲುಗಳಿಗೆ ಜೋರಾಗಿ ಹೊಡೆದನು ಅದರಿಂದ ಅವನ ಎಡಗಾಲಿನ
ಮೊಳಕಾಲಿನಕೆಳಗೆ ಭಾರಿ ರಕ್ತಗಾಯವಾಗಿ ರಕ್ತ ಸೋರಹತ್ತಿತ್ತು. ಅಲ್ಲದೇ ಆತನ ಬಲಗೈ ಮುಂಗೈಗೆ ಸಾಹ
ಹೊಡೆದುರಕ್ತಗಾಯ ಪಡಿಸಿದನು. ಇದನ್ನು ನೋಡಿ ಜಗಳ ಬಿಡಿಸಲು ಬಂದ ನನ್ನ ತಾಯಿ ಕಾಳಮ್ಮ
ಚಿಕ್ಕಮ್ಮಳಾದಜಗದೇವಿ ಮತ್ತು ಚಿಕ್ಕಪ್ಪನ ಮಗನಾದ ಭೀಮರಾಯ ಮತ್ತು ನಾನು ಎಲ್ಲರೂ ಸೇರಿ ಜಗಳ
ಬಿಡಿಸಲು ಹೋದಾಗಚಂದ್ರಕಾಂತನ ಇನ್ನೊಬ್ಬನ ಮಗನಾದ ನಾರಾಯಣ ಮತ್ತು ಆತನ ಅಳೆಯ ಲಕ್ಷ್ಮಯ್ಯ
ಇವರಿಬ್ಬರೂ ಬಡಿಗೆಗಳಿಂದನನಗೆ ಮತ್ತು ನನ್ನ ತಾಯಿ ಕಾಳಮ್ಮ ಹಾಗೂ ತಮ್ಮನಾದ ಭೀಮರಾಯ ಹಾಗೂ
ಚಿಕ್ಕಮ್ಮಳಾದ ಜಗದೇವಿಇವಳಿಗೆ ಬಡಿಗೆಗಳಿಂದ ಸಿಕ್ಕಾಪಟ್ಟೆ ಹೊಡೆಯ ಹತ್ತಿದರು. ಜಗಳದಲ್ಲಿ
ಚಂದ್ರಕಾಂತ ಹೆಂಡತಿಯಾದಚಂದ್ರಮ್ಮ ಇವಳು “ ಈ ರಂಡಿ ಮಕ್ಕಳದು ಬಹಾಳ
ಆಗಿದೆ ಇವರಿಗೆ ಇವತ್ತು ಜೀವ ಸಹಿತ ಬಿಡಬ್ಯಾಡರಿಹೊಡೆದು ಖಲಾಸ ಮಾಡರಿ” ಅಂತ
ಒದರಾಡುತ್ತ ಅವಳು ಸಹಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಾಯಿಕಾಳಮ್ಮ ಮತ್ತು ಚಿಕ್ಕಮ್ಮ
ಜಗದೇವಿ ಇವರಿಗೆ ಹೊಡೆಬಡೆ ಮಾಡಹತ್ತಿದರು. ಹೀಗೆ ಹೊಡೆಬಡೆಮಾಡಿದ್ದರಿಂದ ನನ್ನ ತಾಯಿ ಕಾಳಮ್ಮ ಇವರ
ಬಲಗಾಲ ಮೊಳಕಾಲಿನ ಕೆಳಗೆ ಕಾಲು ಮುರಿದು ಭಾರಿರಕ್ತಗಾಯವಾಯಿತು ಮತ್ತು ಅವರ ಬಲಗೈ ಮುಂಗೈಗೆ
ರಕ್ತಗಾಯವಾಗಿ ಅವರು ಕುಸಿದು ಬಿದ್ದರು. ನನಗೂಸಹಾ ಹೊಡೆಬಡೆ ಮಾಡಿದ್ದರಿಂದ ನನ್ನ ಎಡಗೈ ಮೊಳಕೈ,
ಬಲಗೈ ಮೊಳಕೈ ಕೆಳಗೆ ಬಲಗಡೆ ತಲೆಗೆ ಕಿವಿಯಹಿಂದೆ ಮತ್ತು ಬಲಗಾಲ ಮೊಳಕಾಲು ಕೆಳಗೆ
ಭಾರಿ ರಕ್ತಗಾಯವಾಯಿತು. ನನ್ನ ಚಿಕ್ಕಮ್ಮ ಜಗದೇವಿ ಇವರಎರಡು ಕಾಲುಗಳಿಗೆ ಭಾರಿ ರಕ್ತಗಾಯ,
ಎಡಗೈ ಮೊಳಕೈಗೆ ಮತ್ತು ಹಸ್ತದ ಮೇಲೆ ರಕ್ತಗಾಯಗಳಾದವು, ಚಿಕ್ಕಪ್ಪನ ಮಗನಾದ ಭೀಮರಾಯನಿಗೆ ಬಲಗೈ ಮೊಳಕೈಗೆ, ಮೊಳಕಾಲಿನ
ಕೆಳಗೆ ಎಡಗೈ ಭುಜದಿಂದಮೊಳಕೈವರೆಗೆ ಮತ್ತು ತಲೆಯ ಬಲಗಡೆ ಮೆಲಕಿನ ಮೇಲೆ ಗಾಯಗಳಾದವು. ಸದರಿ
ಚಂದ್ರಕಾಂತ ಕಲಾಲ ಮತ್ತಅವನೊಂದಿಗೆ ಇದ್ದ ನಾಲ್ಕು ಜನರು ಕೂಡಿಕೊಂಡು ನಮ್ಮೆಲ್ಲರಿಗೆ ಕೊಡಲಿ
ಮತ್ತು ಬಡಿಗೆಗಳಿಂದಹೊಡೆದು ಭಾರಿ ರಕ್ತಗಾಯಪಡಿಸಿದ್ದರಿಂದ ನಾವೆಲ್ಲರೂ ಜಮೀನಿನ ಸ್ಥಳದಲ್ಲಿಯೇ
ಬಿದ್ದುನರಳಾಡುತ್ತಿದ್ದೇವು. ಸದರಿ ಘಟನೆಯನ್ನು ನಮ್ಮ ಜಮೀನಿನ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿರುವನಮ್ಮೂರ
ದೇವಿಂದ್ರಪ್ಪ ಆಂದೇಲಿ, ಶರಣಪ್ಪ ಹೂಗಾರ ಮತ್ತು ನಿರ್ಮಲಾ ಗಂಡ
ದೇವಿಂದ್ರಪ್ಪ ಮತ್ತುಅವರೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದ ಹೆಣ್ಣು ಮಕ್ಕಳು ನೋಡಿದ್ದು. ನಮ್ಮ
ಎದುರಾಳಿಗಳಕೈಯಲ್ಲಿ ಕೊಡಲಿ ಮತ್ತ ಬಡಿಗೆಗಳು ಇದ್ದುದ್ದರಿಂದ ಅವರು ಅಂಜಿಕೊಂಡು ಜಗಳ
ಬಿಡಿಸಲುಬಂದಿರುವದಿಲ್ಲ. ನಾವು ಹೊಲದಲ್ಲಿ ಬಿದ್ದು ನರಳಾಡುತ್ತಿರುವ ಸುದ್ದಿ ಕೇಳಿ ನಮ್ಮೂರಿನ
ಕೆಲವುಜನರು ನೋಡುತ್ತಾ ನಾವಿದ್ದಲಿಗೆ ಬಂದು, ಅಷ್ಟರಲ್ಲಿ ಅಂಬೂಲೆನ್ಸ
ಬಂದಿದ್ದು ಅದರಲ್ಲಿನಮ್ಮೆಲ್ಲರಿಗೆ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆ ಸೇಡಂಕ್ಕೆ ನಂತರ
ಕಲಬುರಗಿ ಜಿಲ್ಲಾಆಸ್ಪತ್ರೆಗೆ ಉಪಚಾರ ಕುರಿತು ತಂದರು ನಮ್ಮೆಲ್ಲರನ್ನು ಆಸ್ಪತ್ರೆಯಲ್ಲಿ
ಪರೀಕ್ಷಿಸಿದ ಡಾಕ್ಟರ್ಸಾಹೇಬರು ನಾವು ಆರು ಜನರ ಪೈಕಿ ನಮ್ಮ ತಂದೆ ದೇವರಾಯ, ತಾಯಿ ಕಾಳಮ್ಮ ಮತ್ತು ನಮ್ಮ ಚಿಕ್ಕಪ್ಪನಮಗನಾದ ರಾಜಶೇಖರ ಈ ಮೂರು ಜನರು
ಮೃತಪಟ್ಟಿರುತ್ತಾರೆ ಎಂದು ತಿಳಿಸಿದರು. ನಂತರ ಸುದ್ದಿ ಕೇಳಿಸರಕಾರಿ ಆಸ್ಪತ್ರೆಗೆ ಬಂದ ನಮ್ಮ
ಸಂಭಂದಿಕ ಕಾಶಿನಾಥ ತಂದ ಸುಭಾಶ್ಚಂದ್ರ ಎಳ್ಳಿ, ಸಾ:ಸಿಂಧನಮಡುಹಾಗೂ
ಇತರರು ನನಗೆ ಮತ್ತು ನಮ್ಮ ಚಿಕ್ಕಮ್ಮಳಾದ ಜಗದೇವಿ, ಚಿಕ್ಕಪ್ಪನ ಮಗ
ಭೀಮರಾಯ ಮೂರುಜನರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ, ಕೆ.ಎಸ್.ಎಮ್
ಆಸ್ಪತ್ರೆಗೆ ತಂದು ಸೇರಿಕೆಮಾಡಿರುತ್ತಾರೆ.
ಅಪಘಾತ ಪ್ರಕರಣ :
ಶಾಹಾಬಾದ
ನಗರ ಠಾಣೆ : ದಿನಾಂಕ: 13/07/2017 ರಂದು ಮುಂಜಾನೆ ನಮ್ಮ ಕಾಕನ ಮಗನಾದ ರವಿಚಂದ್ರ ತಂದೆ ಸಾಬಣ್ಣ ಇತನು ಮರತೂರ
ಗ್ರಾಮದ ಕಲಬುರಗಿ ರಸ್ತೆಯ ಹಳ್ಳದ ಹತ್ತಿರ ಇರುವ ಕುತಿ ದೊಡ್ಡಿಕಡೆಯಿಂದ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಒಬ್ಬ ಮೋಟಾರ ಸೈಕಲ
ನಂಬರ ಕೆ.ಎ. 32 ಇ ಎಲ್ 5978 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಅತೀ ವೇಗ ಮತ್ತು
ಅಲಕ್ಷತನದಿಂದ ನಡೆಸುತ್ತಾ ಬಂದು ಪಿರ್ಯಾದಿ ಕಾಕನ ಮಗನಾದ ರವಿಚಂದ್ರ ಇತನಿಗೆ ಹಿದಿನಿಂದ ಡಿಕ್ಕಿ
ಪಡಿಸಿದ್ದರಿಂದ ಅವನಿ ಎಡಕಾಲಿನ ಹತ್ತಿರ ಮತ್ತು ಎಡಕಾಲಿನ ಕಪಗಂಡನ ಹತ್ತಿರ ಭಾರಿ ಗುಪ್ತ
ಪೆಟ್ಟಾಗಿ ಮತ್ತು ಬಲಕೈಗೆ ತರಚಿದ ಗಾಯಾವಾಗಿ ಬೇಹೋಷಾಗಿದ್ದರಿಂದ ಮೋಟಾರ ಸೈಕಲ ಚಾಲಕನು ತನ್ನ
ಮೋಟಾರ ಸೈಕಲ ಸ್ಥಳದಲ್ಲಿಯೇ ಬೀಟ್ಟು ಓಡಿ ಹೋಗಿರುತ್ತಾನೆ. ಅವನಿಗೆ ಉಪಚಾರ ಕುರಿತು ಕಲಬುರಗಿ
ಬಾವಗಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಶ್ರೀ ರವಿ ತಂದೆ ಸೂರ್ಯಕಾಂತ ಚಮನಗೋಳ
ಸಾ: ಮರತೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಆಬಾದ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ
ಠಾಣೆ : ಸಿದ್ದಣ್ಣಾ ತಂದೆ ಬಾಬುರಾವ ಈತನು ಸರಕಾರದಿಂದ
ತೊಗರಿ ಖರಿದಿಸುವ ಸಮಯದಲ್ಲಿ ತನ್ನ ತೊಗರಿಯನ್ನು ಷಣ್ಮಖಮ್ಮಳ ಹೆಸರಿಗೆ ಹಾಕಿದ್ದು ತೊಗರಿ ಹಣ ಆಕೆಯ ಭ್ಯಾಂಕ ಖಾತೆಗೆ ಜಮಾ ಆಗಿದ್ದು ನಾನು ದಿನಾಂಕ
14-07-2017 ರಂದು ನಾನು ಹಣ ಕೇಳಲು ಹೋದಾಗ ಸಿದ್ದಣ್ಣಾ ತಂದೆ ಬಾಬುರಾವ ರೇವಣ ಸಂಗಡ ಇನ್ನೂ 4
ಜನರು ಸಾಃ ಎಲ್ಲರೂ ಹಾಗರಗುಂಡಗಿ ಗ್ರಾಮದವರು
ನನ್ನೊಂದಿಗೆ ಜಗಳ ತೆಗೆದು ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ಷಣ್ಮಖಮ್ಮ ಹಾಗೂ ಅವಳ ಮಗ
ಸಚೀನ ಜಗಳ ಬೀಡಿಸಲು ಬಂದಾಗ ಸಿದ್ದಣ್ಣಾ ಇತನು ಷಣ್ಮಖಮ್ಮಳಿಗೆ ಸೀರೆ ಹಿಡಿದು ಎಳೆದಾಡಿ ಮಾನಭಂಗ
ಮಾಡಲು ಪ್ರಯತ್ನ ಮಾಡಿ ಅವರಿಗೂ ಸಹ ಹೋಡೆ ಮಾಡಿ ಜೀವದ ಭಯ ಹಾಕಿರುತ್ತಾರೆ. ಅಂತಾ ಶ್ರೀ ಗೌರಿಶಂಕರ ತಂದೆ
ಕಲ್ಯಾಣರಾವ ರಾವೂರ ಸಾ : ಹಾಗರಗುಂಡಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ
ಠಾಣೆ : ದಿನಾಂಕ 14-07-2017 ರಂದು ನಾನು ಹಾಗು ನನ್ನ
ತಮ್ಮಂದಿರು ಮಾತನಾಡುತ್ತಾ ಕುಳಿತಿರುವಾಗ ಅದೆ ಸಮಯಕ್ಕೆ ಷಣ್ಂಉಖಮ್ಮ ಹಾಗು ಆಕೆಯ ಮಕ್ಕಳಾದ ಸಚೀನ
ಶರಣು ಮತ್ತು ಸಂಭಂಧಿಕರಾದ ಗೌರಿಶಂಕರ ತಂದೆ ಕಲ್ಯಾಣರಾವ ಇವರು ಬಂದು ತಕರಾರುಮಾಡುತ್ತಾ ಸೈಕಲ
ಕೊಡು ಅಂತಾ ತಂಟೆ ತಕರಾರು ಮಾಡಿ ಹೊಡೆ ಬಡೆ ಮಾಡುತ್ತಿರುವಾಗ ನನ್ನ ಹೆಂಡತಿ ಜಗಳ ಬಿಡಿಸಲು ಬಂದಾಗ
ಆಕೆಗೆ ಹಿಡಿದು ಎಳೆದಾಡಿ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡು ಪ್ರಯತ್ನಿಸಿ ಜೀವದ ಭಯ
ಹಾಕಿರುತ್ತಾರೆ ಅಂತಾ ಶ್ರೀ ಸಿದ್ದಣ್ಣಾ ತಂದೆ ಬಾಬುರಾವ ರೇವಣ ಸಾಃ ಹಾಗರಗುಂಡಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ
ಠಾಣೆ : ದಿನಾಂಕ 15-07-2017 ರಂದು
ರೂಟ್ ನಂ 25-26
ಅಫಜಲಪೂರದಿಂದ ಜೆವರ್ಗಿ(ಕೆ) ಮಾರ್ಗವಾಗಿ ಕೆಎಸ್ ಆರ್ ಟಿ ಬಸ್ಸ ನಂ ಕೆ-32 ಎಫ್-1531
ನೇದ್ದರ ಮೇಲೆ ಕರ್ತವ್ಯ ಕುರಿತು ನಾನು ಹಾಗು ಬಸ್ಸ ಚಾಲಕನಾದ ಸಿದ್ದಲಿಂಗ ಜಿಡ್ಡಿಮನಿ ಇಬ್ಬರು
ಅಫಜಲಪೂರ ಬಸ್ಸ ನಿಲ್ದಾಣದಿಂದ ಜೇವರ್ಗಿ(ಕೆ) ಗ್ರಾಮಕ್ಕೆ ಹೊರಟಾಗ ನಮ್ಮ ಬಸ್ಸಿನಲಿದ್ದ
ಪ್ರಯಾಣಿಕನಾದ ಗೌರ(ಬಿ) ಗ್ರಾಮದ ಮಲ್ಲಣ್ಣಗೌಡ ಈತನು ಗೌರ(ಕೆ) ಗ್ರಾಮದೊರೆಗೆ ಟಿಕೇಟ್ ತಗೆದುಕೊಂಡಿದ್ದು ಇರುತ್ತದೆ ಗೌರ(ಕೆ) ಗ್ರಾಮಕ್ಕೆ
ನಾವು ಹೊದಾಗ ಗೌರ(ಕೆ) ಗ್ರಾಮದ ಪ್ರಯಾಣಿಕರು ಬಸ್ಸಿನಿಂದ ಇಳಿದು ಹೋದರು ನಾನು ಮಲ್ಲಣ್ಣಗೌಡ
ರವರಿಗೆ ನಿಮ್ಮ ಟಿಕೇಟ್ ಗೌರ(ಕೆ) ಗ್ರಾಮದೊರೆಗೆ ಇದೆ ಇಲ್ಲೆ ಇಳಿದುಕೊಳ್ಳಿ ಅಂತ ಹೇಳಿಕೆ ಬಳಿಕ
ಸದರಿ ಮಲ್ಲಣ್ಣಗೌಡ ಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ರಂಡಿ ಮಗನೆ ಈ ಏರಿಯಾ ನಮ್ದು ಇದೆ ನನ್ನ ಮನಸ್ಸಿಗೆ
ಬಂದಲ್ಲಿ ನಾ ಇಳಿತಿನಿ ನಿ ಏನು ಕೇಳ್ತಿ ಅಂತ ಅನ್ನುತಿದ್ದಾಗ ಬಸ್ಸಿನಲಿದ್ದ ನಮ್ಮ ಚಾಲಕ ಹಾಗು
ಪ್ರಯಾಣಿಕರು ಸದರಿಯವನಿಗೆ ತಿಳುವಳಿಕೆ ಹೇಳಿ ಬಿಡಿಸಿರುತ್ತಾರೆ ಆಗ ಮಲ್ಲಣ್ಣಗೌಡ ಇತನು ನನಗೆ
ರಂಡಿ ಮಗನೇ ಮರಳಿ ಯಾಂಗ್ ಈ ರೂಟಿಗೆ ಬರ್ತಿ ನೋಡ್ತಿನಿ ಅಂತ ಅಂದು ದಿಕ್ಸಂಗಾ ಗ್ರಾಮದ ಸಮೀಪ
ಇಳಿದುಕೊಂಡಿರುತ್ತಾನೆ. ನಾವು ಮರಳಿ 3.30 ಪಿಎಮ್
ಸುಮಾರಿಗೆ ಅಫಜಲಪೂರಕ್ಕೆ ಬರುವಾಗ ದಿಕ್ಸಂಗಾ ಹತ್ತಿರ ಮಲ್ಲಣ್ಣಗೌಡ ಈತನು ತನ್ನ ಸಂಗಡ 7-8 ಜನರಿಗೆ
ಕರೆದುಕೊಂಡು ಬಂದು ನಮ್ಮ ಬಸ್ಸ ತಡೆದು ನಿಲ್ಲಿಸಿ ನನಗೆ ಬಸ್ಸಿನಿಂದ ಕೆಳಗೆ ಎಳೆದನು ಆಗ ಅವನ
ಸಂಗಡ ಇದ್ದ 7-8
ಜನರು
ನಮ್ಮ ಚಾಲಕನಿಗೆ ಎದೆಯ ಮೇಲಿನ ಅಂಗಿ ಹಿಡಿದು ರಂಡಿ ಮಕ್ಕಳೆ ನಮ್ಮ ಗೌಡ್ರಗೆ ಎದುರು ವಾದ
ಮಾಡ್ತಿರಿ ಅಂತ ಅಂದು ಚಾಲಕ ಸಿದ್ದಲಿಂಗಪ್ಪನಿಗೆ
ಹಾಗು ನನಗೆ ತಮ್ಮ ಕೈ ಮುಷ್ಠಿ ಮಾಡಿ ಅಡ್ಡಾತಿಡ್ಡಿ ಹೊಡೆ ಬಡಿ ಮಾಡುತಿದ್ದಾಗ
ಬಸ್ಸಿನಲಿದ್ದ ಪ್ರಯಾಣಿಕರಾದ ಖಾಜಪ್ಪ ತಳಕೇರಿ, ಅಶೋಕ ತಳಕೇರ
ಇವರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ಸದರಿಯವರು ನಮಗೆ ಹೊಡೆಬಡೆ ಮಾಡಿದ್ದರಿಂದ
ನನಗೆ ಕುತ್ತಿಗೆ ಬಲಭಾಗಕ್ಕೆ ತರಚಿದ ಗಾಯ ಮೈಕೈಗೆ ಗುಪ್ತಗಾಯ ಹಾಗು ಚಾಲಕನಿಗೆ ತುಟಿಗೆ ರಕ್ತಗಾಯ
ಹೊಟ್ಟೆ ಬೆನ್ನಿಗೆ ಮುಖಕ್ಕೆ ಗುಪ್ತಗಾಯ ವಾಗಿರುತ್ತದೆ ಚಾಲಕನ ಕೈಯಲಿದ್ದ ಅರ್ಧ ತೊಲೆಯ ಬಂಗಾರದ
ಉಂಗುರ ಹಾಗು ನನ್ನ ಹತ್ತಿರ ಇದ್ದ 6,000/-ರೂ
ಅಲ್ಲೆ ಎಲ್ಲೋ ಬಿದ್ದಿರುತ್ತವೆ ಸದರಿ ಯವರು ಅಲ್ಲಿಂದ
ಹೋಗುವಾಗ ನಮಗೆ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ದಾಸ್ತಾನು ಮಾಡಿದವರ ವಿರುದ್ಧ ಕ್ರಮ :
ಅಫಜಲಪೂರ
ಠಾಣೆ : ಶ್ರೀ ಸಂಜಯಕುಮಾರ ಶಿರಸ್ಥೆದಾರ
ಪ್ರಭಾರ ತಹಸಿಲ್ದಾರರು ಅಫಜಲಪೂರ ರವರು ದಿನಾಂಕ 13-07-2017
ರಂದು
ಬೆಳಿಗ್ಗೆ ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರು ತಾಲೂಕಿನ ಬನ್ನೆಟ್ಟಿ ಗ್ರಾಮಕ್ಕೆ ಬೇಟಿ
ನಿಡಿದಾಗ ಸದರಿ ಗ್ರಾಮದಲ್ಲಿ ಟ್ರ್ಯಾಕ್ಟರ ಮೂಲಕ ಸರ್ವೇ ನಂ 30 ರ
ಜಮೀನಿನ ಪಟ್ಟೇದಾರರಾದ 1) ಶ್ರೀ ಶರಣಪ್ಪ ತಂದೆ ಜೇಟ್ಟೆಪ್ಪ ಜಮಾದಾರ ಇವರ
ಜಮೀನಿನಲ್ಲಿ ಅಂದಾಜು 40 ಟ್ರೀಪ್, ಸರ್ವೇ
ನಂ 02
ಪ
ಪಟ್ಟೇದಾರರಾದ 2)
ಸೋಮನಾಥ
ತಂದೆ ವಿಠ್ಠಲ ಪ್ಯಾಟಿ ಇವರ ಜಮೀನಿನಲ್ಲಿ ಅಂದಾಜು 45 ಟ್ರೀಪ್, ಸರ್ವೇ ನಂ 01 ರ
ಪಟ್ಟೇದಾರರರಾದ 3)
ಅರ್ಜುನ
ತಂದೆ ಫಕೀರಪ್ಪ ಇವರ ಜಮೀನಿನಲ್ಲಿ ಅಂದಾಜು 30 ಟ್ರೀಪ್, ಸರ್ವೇ
ನಂ 02
ರ
ಪಟ್ಟೇದಾರರರಾದ 4)
ಶರಣಪ್ಪ
ತಂದೆ ಕಲ್ಲಪ್ಪ ಇವರ ಜಮೀನಿನಲ್ಲಿ 30 ಟ್ರೀಪ್, ಸರ್ವೇ
ನಂ 01
ರ
ಪಟ್ಟೇದಾರರರಾದ ಶ್ರೀಮತಿ ಅರ್ಚಣ ಗಂಡ ದಾದಾರಾವ ಇವರ ಜಮೀನಿಲ್ಲಿ 25 ಟ್ರೀಪ್
ಅನಧೀಕೃತವಾಗಿ ಮರಳು ಸಂಗ್ರಹಿಸಿದ್ದನ್ನು ಜಪ್ತಿ ಮಾಡಲಾಗಿದ್ದು ಅದರಂತೆ ಸದರಿ ಮರಳು ಲೋಕೊಪಯೋಗಿ
ಇಲಾಖೆ ಇವರಿಗೆ ಹಸ್ತಾಂತರಿಸಲಾಗಿರುತ್ತದೆ. ಸದರಿ ಮರಳು ಸಂಗ್ರಹಣೆ ಮಾಡಿರುವ ಜಮೀನ ಮಾಲಿಕರ
ಮತ್ತು ಪಟ್ಟೆದಾರರ ವಿರುದ್ದ ಕಾನೂನು ರೀತಿ ಕ್ರಮ
ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ
ಸಂಜಯಕುಮಾರ ಶಿರಸ್ಥೆದಾರರು ಪ್ರಭಾರ ತಹಸಿಲ್ದಾರರು ಅಫಜಲಪೂರ ಹಾಗು ಸಹಾಯಕ ಆಯುಕ್ತರು ಕಲಬುರಗಿ ರವರ ತಾಲೂಕಿನ ಶಿವಪೂರ
ಗ್ರಾಮಕ್ಕೆ ಬೇಟಿ ನೀಡಿದಾಗ ಸದರಿ ಗ್ರಾಮದಲ್ಲಿ ಟ್ರ್ಯಾಕ್ಟರ ಮೂಕಲ ಶ್ರೀ ಖಾಜಪ್ಪ ತಂದೆ ಕಲ್ಲಪ್ಪ
ರವರು ತಮ್ಮ ಮನೆಯ ಮುಂದೆ 06 ಟ್ರೀಪ್, ಶ್ರೀ
ಪರಮೇಶ್ವರ ತಂದೆ ಕಲ್ಲಪ್ಪ ಬನ್ನೆಟ್ಟಿ ಇವರ ಮನೆಯ ಮುಂದೆ 07 ಟ್ರೀಪ್, ಶ್ರೀ
ಮಹಾದೇವಪ್ಪ ತಂದೆ ದಾದಪ್ಪ ರವರ ಮನೆಯ ಮುಂದೆ 05 ಟ್ರೀಪ್
ಅನಧಿಕೃತವಾಗಿ ಮರಳು ಸಂಗ್ರಹಿಸಿದ್ದನ್ನು ಜಪ್ತಿ ಮಾಡಲಾಗಿದ್ದು , ಅದರಂತೆ
ಸದರಿ ಮರಳು ಲೋಕೋಪಯೋಗಿ ಇಲಾಖೆ ಇವರಿಗೆ ಹಸ್ತಾಂತರಿಸಲಾಗಿರುತ್ತದೆ. ಸದರಿ ಮರಳು ಸಂಗ್ರಹಣೆ
ಮಾಡಿರು ಜಮೀನಿನ ಮಾಲಿಕರ ಮತ್ತು ಪಟ್ಟೇದಾರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ
ಸಂಜಯಕುಮಾರ ಶಿರಸ್ಥೆದಾರರು ಪ್ರಭಾರ ತಹಸಿಲ್ದಾರರು ಅಫಜಲಪೂರ ರವರು ದಿನಾಂಕ 09-07-2017
ರಂದು
ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮಕ್ಕೆ ಬೇಟಿ ನೀಡಿದಾಗ ಸದರಿ ಗ್ರಾಮದಲ್ಲಿ ಟ್ರ್ಯಾಕ್ಟರಗಳ ಮೂಲಕ ಗ್ರಾಮದಲ್ಲಿ ಸರ್ವೇ ನಂ 44/ಎ
ಪಟ್ಟೆದಾರರರಾದ ಶ್ರೀ ಚಂದ್ರಶೇಖರ ತಂದೆ ಶಿವಣ್ಣ ಭಾಸಗಿ ಇವರು ಅಂದಾಜು 50 ಟ್ರೀಪ್, ಸರ್ವೇ
ನಂ 61/7ರ
ಪಟ್ಟೆದಾರರರಾದ ಶ್ರೀ ಬಮ್ಮರಾಯ ತಂದೆ ಸಾಯಬಣ್ಣ
ವರ್ಗಿ ಇವರ ಜಮೀನಿನಲ್ಲಿ 100 ಟ್ರೀಪ್, ಸರ್ವೇ
ನಂ 60
ಪಟ್ಟೆದಾರರರಾದ
ಶ್ರೀ ಯಲ್ಲಪ್ಪ ತಂದೆ ಜೇಟ್ಟೆಪ್ಪ ಉಕ್ಕಲಿ ( ಸದರಿ ಪಟ್ಟೆದಾರರು ಮರಣ ಹೊಂದಿದ್ದು ಇವರ ಮಗನಾದ
ಶ್ರೀ ಜೇಟ್ಟಿ ಇವರು ಸಾಗುವಳಿ ಮಾಡುತ್ತಿರುತ್ತಾರೆ.) ಇವರ ಜಮೀನಿನಲ್ಲಿ ಅಂದಾಜು 30 ಟ್ರೀಪ್, ಸರ್ವೇ
ನಂ 60
ಪಟ್ಟೆದಾರರರಾದ
ಶ್ರೀ ಯಲ್ಲಪ್ಪ ತಂದೆ ಚಂದ್ರಾಮ ಇವರ ಜಮೀನಿನಲ್ಲಿ ಅಂದಾಜು 40 ಟ್ರೀಪ್, ಸರ್ವೇ
ನಂ 43/2
ರ
ಪಟ್ಟೆದಾರರರಾದ ಶ್ರೀ ಅಮೀತ ತಂದೆ ಬಸವರಾಜ ಇವರ ಜಮೀನಿನಲ್ಲಿ 20 ಟ್ರೀಪ್
ಅನಧೀಕೃತವಾಗಿ ಮರಳು ಸಂಗ್ರಹಿಸಿದನ್ನು ಜಪ್ತಿ ಮಾಡಲಾಗಿದ್ದು ಅದರಂತೆ ಸದರಿ ಮರಳು ಲೋಕೋಪಯೋಗಿ
ಇಲಾಖೆ ಇವರಿಗೆ ಹಸ್ತಾಂತರಿಸಲಾಗಿದೆ ಸದರಿ ಮರಳು ಸಂಗ್ರಹಣೆ ಮಾಡಿದ ಜಮೀನ ಮಾಲಿಕ/ಪಟ್ಟೇದಾರರ ವಿರುದ್ದ ಕಾನೂನು ರೀತಿ ಕ್ರಮ
ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment