Yadgir District Reported Crimes
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 107/2017 ಕಲಂ, 78(3) ಕೆ.ಪಿ.ಆ್ಯಕ್ಟ್ ;- ದಿನಾಂಕ:
17/07/2017 ರಂದು 7-00 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ
ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು
ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ
ಸಾರಾಂಶವೆನೆಂದರೆ, ಇಂದು ದಿನಾಂಕ: 17/07/2017 ರಂದು 5-00 ಪಿಎಮ್ ಕ್ಕೆ
ಠಾಣೆಯಲ್ಲಿದ್ದಾಗ ಗೋಗಿ ಪೇಠ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬನು
ಸಾರ್ವಜನಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಜೂಜಾಟ
ಬರೆದುಕೊಳ್ಳುತ್ತಿದ್ದಾಳೆ ಅಂತಾ ಭಾತ್ಮೀ ಮೇರೆಗೆ ಇಬ್ಬರೂ ಪಂಚರು ಹಾಗೂ
ಸಿಬ್ಬಂದಿಯವರೊಂದಿಗೆ ಗೋಗಿ ಪೇಠ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ
ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ
ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು
ಖಾತ್ರಿ ಪಡಿಸಿಕೊಂಡು 5-30 ಪಿಎಮ್ ಕ್ಕೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ
ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ರಾಜಕುಮಾರ ತಂದೆ ತಿಪ್ಪಣ್ಣ ಜಿಂದೆ ವಯ|| 31
ವರ್ಷ ಜಾ|| ಸ್ವಕುಳಸಾಳೆ ಉ|| ಪಾನಶಾಪ್ ವ್ಯಾಪಾರ ಸಾ: ಗೋಗಿ ಪೇಠ ತಾ: ಶಹಾಪೂರ ಅಂತಾ
ತಿಳಿಸಿದ್ದು ಸದರಿಯವನ ಅಂಗ ಪರಿಶೀಲಿಸಲಾಗಿ ನಗದು ಹಣ 1500/- ರೂ ಹಾಗೂ ಒಂದು ಮಟಕಾ
ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 5-45 ಪಿಎಮ್ ದಿಂದ 6-45 ಪಿಎಮ್
ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ವರದಿಯ
ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 8-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ:
107/2017 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ 379 ಐಪಿಸಿ & 41(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994.;-
ದಿನಾಂಕ: 17/07/2017 ರಂದು 9-30 ಪಿಎಮ್ ಕ್ಕೆ ಶ್ರೀ ವೀರಣ್ಣ ದೊಡ್ಡಮನಿ ಸಿಪಿಐ
ಶಹಾಪೂರ ವೃತ್ತ ರವರು ಠಾಣೆಗೆ ಬಂದು ಒಂದು ಉಸುಕು ತುಂಬಿದ ಟ್ರ್ಯಾಕ್ಟರನ್ನು
ಚಾಲಕನೊಂದಿಗೆ ಠಾಣೆಗೆ ತಂದು ಹಾಜರ್ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು
ದಿನಾಂಕ: 17/07/2017 ರಂದು ಗೋಗಿ ಪೊಲೀಸ್ ಠಾಣೆಯ ಬೇಟಿ ಕುರಿತು ಬಂದು
ಠಾಣೆಯಲ್ಲಿದ್ದಾಗ 7-00 ಪಿಎಮ್ ಕ್ಕೆ ಒಂದು ಟ್ರ್ಯಾಕ್ಟರದಲ್ಲಿ ಕೃಷ್ಣಾ ನದಿಯಲ್ಲಿನ
ಸರಕಾರದ ಮರಳನ್ನು ಕಳ್ಳತನ ಮಾಡಿಕೊಂಡು ಸಗರ-ಶೆಟ್ಟಿಕೇರಾ ಮಾರ್ಗವಾಗಿ ಬರುತ್ತಿದ್ದಾರೆ
ಖಚಿತ ಬಾತ್ಮಿ ಬಂದಿದ್ದರಿಂದ ನಾನು ಮತ್ತು ಕೃಷ್ಣ ಸುಬೇದಾರ ಪಿಎಸ್.ಐ ಮತ್ತು ಇಬ್ಬರೂ
ಪಂಚರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-153 ನೇದ್ದರಲ್ಲಿ ಹೋಗಿ 10.40 ಎಎಂಕ್ಕೆ
ಮಹಲ್ ರೋಜಾ ಗ್ರಾಮದ ಹತ್ತಿರ ಇರುವ ಸಗರ ಯಲ್ಲಮ್ಮ ದೇವಿ ಗುಡಿ ಕ್ರಾಸ್ ಹತ್ತಿರ ಮಹಲ್
ರೋಜಾ ಕಡೆಯಿಂದ ಒಂದು ಒಂದು ಜಾನ್ ಡೀರ ಕಂಪನಿಯ ನಂಬರ ಪ್ಲೇಟ್ ಟ್ರ್ಯಾಕ್ಟರ್ ಇಂಜೀನ್
ನಂ:ಕಙ3029ಆ212697 ಮತ್ತು ಚೆಸ್ಸಿ ನಂ: ಕಙ5204ಃ003459 ಹಾಗೂ ಟ್ರ್ಯಾಲಿ ನಂಬರ
ಪ್ಲೇಟ್ ಇರದ ಹಸಿರು ಬಣ್ಣ ಟ್ರ್ಯಾಲಿ ನೇದ್ದರ ಚಾಲಕ ಪರಮಣ್ಣ ತಂದೆ ಬಸಲಿಂಗಪ್ಪ ಗುಡಿಮನಿ
ಸಾ|| ಕರಡಕಲ್ ತಾ|| ಸುರಪೂರ ಮತ್ತು ಮಾಲೀಕ ಕನಕಪ್ಪ ತಂದೆ ಮಾನಶಪ್ಪ ದೊರಿ ಸಾ||
ಕರಡಕಲ್ ಇತನು ತನ್ನ ಟ್ರ್ಯಾಕ್ಟರ್ ದಲ್ಲಿ ಸರಕಾರಕ್ಕೆ ಹಣ ತುಂಬದೇ ಕೃಷ್ಣಾ ನದಿಯಿಂದ
ಮರಳು ತುಂಬಿಕೊಂಡು ಮಾಲೀಕ ಶಹಾಪೂರಕ್ಕೆ ಹೋಗಿದ್ದು ಚಾಲಕನು ಮರಳನ್ನು ಮಾರಾಟ ಮಾಡಲು
ಸಾಗಿಸುತ್ತಿರುವಾಗ ಹಿಡಿದು ಮರಳು ಸಮೇತ ಟ್ರ್ಯಾಕ್ಟರ್ನ್ನು ಚಾಲಕನೊಂದಿಗೆ ಠಾಣೆಗೆ ತಂದು
ಟ್ರ್ಯಾಕ್ಟರ್ ಚಾಲಕ ಮತ್ತು ವಾಹನ ಮಾಲೀಕನ ಮೇಲೆ ಸೂಕ್ತ ಕ್ರಮ ಕೈಕೊಳ್ಳುವಂತೆ ಸೂಚಿಸಿ
ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 108/2017 ಕಲಂ 379 ಐಪಿಸಿ &
41(1) ಕೆ.ಎಂ.ಎಂ.ಆರ್.ಸಿ ಆಕ್ಟ್-1994 ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಅದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 19/2017 ಕಲಂ 323, 504 506 498 (ಎ) 307 ಸಂಗಡ 149 ಐಪಸಿ ಮತ್ತು 3& 4 ಡಿಪಿ ಅಕ್ಟ;- ದಿನಾಂಕ;
17.7.2017 ರಂದು 5 ಪಿಎಮ ಠಾಣೆಗೆ ಹಾಜರಾಗಿ ಸಾರಂಶವೆನಂದರೆ ನಾನು ರೇಖಾ ಗಂಡ ಗೋವಿಂದ
ಚಿನ್ನಾ ರಾಠೋಡ್ ವಯಾ|| 22 ವರ್ಷ ಜಾ|| ಲಂಬಾಣಿ ಉ: ಮನೆಗೆಲಸ ಸಾ: ಚಾಮನಾಳ ಹಾ: ವ:
ಚಿರಂಜೀವಿ ನಗರ ಯದಗಿರಿ ಈ ಅಜರ್ಿಯ ಮೂಲಕ ವಿನಂತಿಸಿಕೊಳ್ಳುವುದೆನೆಂದರೆ, ನಮ್ಮ ತಂದೆ
ತಾಯಿ ಮತ್ತು ಕುಟುಂಬ ಸದಸ್ಯರು ಶಿವಪುರ ತಾಂಡಾದಲ್ಲಿದ್ದು ನಮ್ಮ ಸಹೋದರ ಸುನೀಲ ತಂದೆ
ಹರಿ ರಾಠೋಡ್ ಇವರಿಗೆ ಗುಲಬಗರ್ಾದ ಚಂದ್ರಶೇಖರ ಜಾಧವ ಇವರ ಮಗಳೊಂದಿಗೆ 2011 ರಲ್ಲಿ
ಮದುವೆ ಆಗಿರುತ್ತದೆ. ಈ ಮದುವೆ ಆದ ನಂತರ ನಮ್ಮ ಮನೆಯವರು ನನ್ನ ಸಲುವಾಗಿ ಚಾಮನಾಳ
ತಾಂಡಾದ ಗೋವಿಂದ ತಂದೆ ಗುರುನಾಥ ಎಂಬುವನನ್ನು ನೋಡಿ ಮಾತುಕತೆಯಾಡಿ ನೀಶ್ಷಯ ಮಾಡಿದ್ದು ,
ಗೋವಿಂದ ಇತನು ಯಾಳಗಿ ತಾಂಡಾದ ನಮ್ಮ ಸಂಬಂದಿಕನಾದ ಕಿಶನ ತಂದೆ ನಂದು ರಾಠೋಡ ಮತ್ತು
ಲಾಲು ರಾಠೋಡ ಇವರುಗಳು ಗೋವಿಂದನ ಮಾವಂದಿರು ಆಗುತ್ತಿದ್ದು ಇವರ ಪರಿಚಯ ಮೇಲಿಂದ ನನ್ನ
ಸಲುವಾಗಿ ಗೋವಿಂದನನ್ನು ನೋಡಿ ನೀಶ್ಚಯ ಮಾಡಿದ್ದರು. ಮತ್ತು 2015 ನೇ ಸಾಲಿನಲ್ಲಿಯೆ
ನಮ್ಮ ತಾಂಡಾದಲ್ಲಿ ನಿಶ್ಚಯ ಕಾರಣ ನಡಿದಿರುತ್ತದೆ.
ನಿಶ್ಚಯ ಕಾರಣ ಆದ
ಮೇಲೆ ಮುಂದೆ ದಿನಾಂಕ 26/03/2016 ರಂದು ಗುರುಹಿರಿಯರು ಸೇರಿ ಮದುವೆ ಕಾರ್ಯ ಕ್ರಮ
ನಿಶ್ಚಯ ಮಾಡಿದ್ದು ಮದುವೆ ಸಲುವಾಗಿ ನಮ್ಮ ತಂದೆ ತಾಯಿಯವರು ಮದುವೆಗೆ ಬೇಕಾಗುವ ಎಲ್ಲಾ
ಸಾಮಾನುಗಳು ಖರೀದಿಸಿ ತಂದಿಟ್ಟಿದ್ದರು. ಮೂರು ನಾಲ್ಕು ದಿವಸದಲ್ಲಿ ಮದುವೆ ಕಾರಣ
ಇರುವದಲ್ಲಿ ಗೋವಿಂದ ಇತನು ಈ ಮುಂಚೆ ಮದುವೆ ಆಗಿರುವುದಾಗಿ ನಮ್ಮಗೆ ಮದುವೆಯಾದ ಹುಡಗಿ
ನೊಂದಣಿ ಮದುವೆ ಪತ್ರ ಕಳಿಹಿಸಿಕೋಟ್ಟಿದ್ದು ಪರಿಣಾಮ ನನ್ನ ಮದುವೆ ತಾತ್ಕಾಲಕವಾಗಿ ರದ್ದು
ಗೋಳಿಸಿದ್ದರು. ನಂತರ ಯಾಳಗಿ ತಾಂಡಾದವರಾದ ಗೋವಿಂದನ ಮಾವಂದಿರಾದ ಕಿಶನ ತಂದೆ ನಂದು
ರಾಠೋಡ ಮತ್ರು ಲಾಲು ತಂದೆ ನಂದು ರಾಠೋಡ ಇವರು ಮತ್ತು ಗೋವಿಂದ ಇತನು ನನ್ನಗೆ ಮೇಲಿಂದ
ಮೇಲೆ ಪೋನ ಮಾಡಿ ಮೋದಲು ಮದುವೆಯಾಗಿದ್ದು ಮರೆತು ಬೀಡು ಅವಳನ್ನು ಬಿಟ್ಟು ಬೀಡುತ್ತೇವೆ
ಮದುವೆಯಾಗು ಅಂತಾ ಅವಳ ಮೇಲೆ ಒತ್ತಡ ಹಾಕಿ ಅವಳ ಮನ ಒಲಿಸಿದ್ದು ಮತ್ತು ಬೇರೆ ಕಡೆ ಮದುವೆ
ನಿಶ್ಚಯ ಮಾಡಿದರೆ ಆ ಮದುವೆ ರದ್ದು ಮಾಡುತ್ತೆವೆ ಅಂತಾ ಅಂದಾಡಿದ್ದರಿಂದ ನನ್ನ ತಂದೆ
ತಾಯಿ ಮತ್ತು ಹಿರಿಯರು ಒಪ್ಪಿಕೋಳ್ಳದೆ ಇರುವುದರಿಂದ ನನ್ನನ್ನು ಹೆದರಿಕೆ ಹಾಕುತ್ತಾ
ಬಂದಿದ್ದು ದಿನಾಂಕ 01/04/2016 ರಂದು ನಾನು ಗೋಗಿಯಲ್ಲಿರುವ ನನ್ನ ಅಣ್ಣ ಸುನೀಲ್ ರಾಠೋಡ
ಇವರ ಹತ್ತಿರ ಉಳಿದಾಗ ನಾನು ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿದ್ದಾಗ ಗೋವಿಂದ ಇತನ
ಚಿಕ್ಕಮ್ಮನಾದ ಸುನೀತಾಬಾಯಿ ಸುಬಾಸ ಗೇಳೆಯನೊಂದಿಗೆ ಬಂದು ಬಲವಂತವಾಗಿ ನನ್ನನ್ನು ಕರೆದು
ಕೊಂಡು ಬಂದು ಗುಲ್ಬಗರ್ಾದ ಸುನೀತಾಬಾಯಿ ಇವರ ಮನೆಯಲ್ಲಿ ಇಟ್ಟು ಕಮಲಾಪೂರದ ಒಂದು
ದೇವಾಸ್ಥಾನದಲ್ಲಿ ನಮ್ಮ ಇಬ್ಬರ ಮದುವೆ ಮಾಡಿದ್ದು ಮದುವೆಯಾದ ನಂತರ ನಾನು ಗೋವಿಂದ
ಜೋತೆಯಲ್ಲಿ ಯಾದಗಿರಿ ನಗರದಲ್ಲಿ ವಾಸವಾಗಿರುವ ಕಿಶನ ರಾಠೋಡ ಇವರ ಮನೆಯಲ್ಲಿ ಉಳಿದು
ಕೊಂಡೆವು ಒಂದು ವಾರ ಕಿಶನ ರಾಠೋಡ ಇವರ ಮನೆಯಲ್ಲಿ ಉಳಿದ ಕೊಂಡು ನಂತರ ಚಾಮನಾಳ ತಾಂಡಾದ
ನಮ್ಮ ಅತ್ತೆ ಮಾವ ಮನೆಗೆ ಹೋಗಿ ಸುಮಾರು ಮೂರರಿಂದ ನಾಲ್ಕು ತಿಂಗಳು ಉಳಿದುಕೊಂಡೆವು.
ಮುಂದೆ ಮನೆಯಲ್ಲಿ ಗಂಡ ಗೋವಿಂದ , ಮಾವ ಗುರುನಾಥ , ಮೈದುನ , ರಾಜು , ರವಿ ಇವರುಗಳು
ತವರು ಮನೆಯಿಂದ ಹಣ ಮತ್ತು ಬಂಗಾರ ತಗೆದುಕೊಂಡು ಬಾ ಅಂತಾ ನನಗೆ ತೊಂದರೆ ಕೋಟ್ಟಿದ್ದರಿಂದ
ನಾನು ತವರು ಮನೆಗೆ ತಾಯಿ ತಂದೆ ಹತ್ತಿರ ಉಳಿದು ಕೊಂಡಿರುತ್ತೇನೆ.
ಆಮೇಲೆ ನಮ್ಮ ತಂದೆ ತಾಯಿ ಅಣ್ಣ ಮತ್ತು ನಮ್ಮ ತಾಂಡಾದ ಹಿರಿಯರರಾದ ಶಾಂತಿಲಾಲ ರಾಠೋಡ
ಸೇವು ಪವಾರ , ಸುಬಾಸ ತಂದೆ ಶಾಂತಿಲಾಲ ರಾಠೋಡ , ಶಿವುಬಾಯಿ ಗಂಡ ಚೋಕಲು ರಾಠೋಡ ಹೀಗೆ
ಎಲ್ಲರು ಸೇರಿ ಯಾದಗಿರಿಯಲ್ಲಿ ನ್ಯಾಯ ಪಂಚಾಯಿತಿ ಮಾಡಿದ್ದು .ಆ ವೇಳೆಗೆ ಗುರುಹಿರಿಯರ
ಸೇರಿ ನನ್ನ ಗಂಡ ಮತ್ತು ಗಂಡನ ಮನೆಯವರಿಗೆ ನನ್ನನ್ನು ಸರಿಯಾಗಿ ನೋಡಿಕೋಳ್ಳುವಂತೆ
ತಿಳುವಳಿಕೆ ಹೇಳಿ ಅವಳಿಗೆ ಯಾವುದೆ ರೀತಿಯ ತೋಂದರೆ ಕೋಡಬೇಡರಿ ಮತ್ತು ರಜ್ಟೀಸ್ಟರ
ಮದುವೆಯಾಗಿ ಸರಿಯಾಗಿ ಸಂಸಾರ ಮಾಡಿರಿ ಅಂತಾ ಬುದ್ದಿ ಮಾತಿ ಹೇಳಿದ್ದರಿಂದ ದಿನಾಂಕ
27/03/2017 ರಂದು ಶಹಾಪೂರದಲ್ಲಿ ನಾನು ಮತ್ತು ಗೋವಿಂದ ರಜೀಸ್ಟರ ಮದುವೆ ಯಾಗಿರುತ್ತೇವೆ
ಆಗಿನಿಂದ ಯಾದಗಿರಿಯಲ್ಲಿ ಗಂಡನ ಜೋತೆಯಲ್ಲಿ ಸಂಸಾರ ಮಾಡಿಕೊಂಡು ಬಂದಿರುತ್ತೇನೆ.
ಸ್ವಲ್ಪ ದಿವಸ ಕಳೆದ ಮೇಲೆ ನನ್ನ ಗಂಡ ಮತ್ತು ಗಂಡನ ಮಾವನಾದ ಕಿಶನ ರಾಠೋಡ ಇವರು ನನ್ನಗೆ
ತವುರು ಮನೆಯಿಂದ 2,ಲಕ್ಷ ಹಣ ಮತ್ತು ಐದು ತೋಲೆ ಬಂಗಾರ ತೆಗೆದುಕೊಂಡು ಬಂದರೆ ಮನೆಯಲ್ಲಿ
ಇಟ್ಟು ಕೊಳ್ಳುತ್ತೇವೆ ಇಲ್ಲದಿದ್ದರೆ ನಿನಗೆ ವಿಷ ಹಾಕಿ ಸಾಯಿಸಿ ಬೀಡುತ್ತೇವೆ ಅಂತಾ
ಹೆದರಿಸುತ್ತಾ. ಇದ್ದರು ನನ್ನ ಮಾವನಾದ ಗುರುನಾಥ ಮೈದುನಾದ ರವಿ, ರಾಜು, ಹಾಗು ಇವರ
ಮಾವನಾದ ಲಾಲು ರಾಠೋಡ ಇವರುಗಳು ಆಗಾಗ ಯಾದಗಿರಿಯ ಮುಂಡರಗಿ ಎರಿಯಾದಲ್ಲಿ ನಾವು
ವಾಸವಾಗಿರುವ ಮನೆಗೆ ಬಂದು ನನಗೆ ರಂಡಿ , ಬೋಸಡಿ ,ಚಿನಾಲಿ ಅಂತಾ ಅವಾಚ್ಯ ಶಬ್ದಗಳಿಂದ
ಬೈದು ನಾವು ಗೋವಿಂದನಿಗೆ ಬೇರೆ ಹೆಣ್ಣಿನೊಂದಿಗೆ ಮದುವೆ ಮಾಡಿದರೆ ಸಾಕಷ್ಟು ಬಂಗಾರ ಹಣ
ಕೂಡುತ್ತಿದ್ದರು.ನೀನು ತವರು ಮನೆಯಿಂದ ಹಣ ಬಂಗಾರ ತಗೆದುಕೊಂಡು ಬಂದಿರುವುದಿಲ್ಲ. ನಿನಗೆ
ಮನೆಯಲ್ಲಿ ಇಟ್ಟು ಕೋಳ್ಳುವುದಿಲ್ಲ.ಮನೆಯಲ್ಲಿ ಇದ್ದರೆ ವಿಷ ಹಾಕಿ ಸಾಯಿಸಿ ಬೀಡುತ್ತೇವೆ
ಅಂತಾ ಹೆದರಿಕೆ ಹಾಕಿ ಕೈಯಿಂದ ಹೋಡೆ ಬಡೆ ಮಾಡುತ್ತಾ ಬಂದಿರುತ್ತಾರೆ.ನಂತರ ನಾವು
ಚಿರಂಜಿವಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಉಳಿದೆವು .
ನಿನ್ನೆ
ದಿನಾಂಕ 13/07/2017 ರಂದು ಬೆಳಗ್ಗೆ ಗಂಡನಾದ ಗೋವಿಂದ ಇತನು ನನ್ನ ಜೋತೆ ಜಗಳ ತಗೆದು
ನನ್ನ ಮತ್ತು ತಂದೆ ಹಾಗು ಮಾವಂದಿರ ಮಾತು ಕೇಳುತ್ತಿಲ್ಲ. ಹಾಗು ತವರು ಮನೆಯಿಂದ ಹಣ ಹಾಗು
ಬಂಗಾರ ತರುತ್ತಿಲ್ಲ. ನಿನ್ನನ್ನು ಮುಗಿಸಿಬಿಡುತ್ತೇನೆ ಅಂತಾ ಕೋಲೆ ಬೆದರಿಕೆ ಹಾಕಿ
ನನ್ನನ್ನು ಜೋರಾಗಿ ಹೀಡಿದು ಕೊಂಡು ನೆಲಕ್ಕೆ ಹಾಕಿ ಕೋಲೆ ಮಾಡಿಬಡುತ್ತೇನೆ ಅಂತಾ ಯಾವುದೂ
ವಿಷದ ಬಾಟಲಿ ತೆರೆದು ನನ್ನ ಬಾಯಿಯಲ್ಲಿ ವಿಷ ಹಾಕಿದ್ದು ನಾನು ಚಿರಾಡಿ ಗಂಡನಿಂದ
ಬೀಡಿಸಿಕೊಂಡು ಓಡಿ ಹೋರ ಬಂದಿರುತ್ತೇನೆ. ಆಗ ಸಮಯ ಬೆಳಗ್ಗೆ 9-30 ಗಂಟೆಯಾಗಿತ್ತು .
ನಾನು ಅದೆ ಪರಿಸ್ಥಿತಿಯಲ್ಲಿ ಮಹಿಳಾ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದಾಗ ನನ್ನನ್ನು
ತುತರ್ಾಗಿ ಉಪಾಚಾರಕ್ಕಾಗಿ ಕಳಿಸಿಕೋಟ್ಟಿದ್ದು ವೈದ್ಯಾದಿಕಾರಿಗಳು ಹೆಚ್ಚಿನ ಉಪಚಾರ
ಸಲುವಾಗಿ ಕಲಬುಗರ್ಿ ಬಸವೇಶ್ವರ ಆಸ್ಪತ್ರೆಗೆ ಕಳಿಸಿಕೋಟ್ಟಾಗ ನಾನು ಮೂರು ತಿಂಗಳ
ಗಬರ್ಿಣಿ ಇದ್ದು ಬಸವೇಶ್ವರ ಆಸ್ಪತ್ರೆ ಕಲಬುಗರ್ಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ
13/07/2017 ರಂದು ಯಾದಗಿರಿಯ ಮಹಿಳಾ ಠಾಣೆ ಪೊಲೀಸರು ಅಲ್ಲಿಗೆ ಬಂದು ನನ್ನ
ಹೇಳಿಕೆಯನ್ನು ಪಡೆದುಕೊಂಡಿದ್ದು ನಾನು ಈ ಮೇಲಿನಂತೆ ಸವಿಸ್ತರವಾದ ಹೇಳಿಕೆ ನೀಡಿ ಆದರೂ
ಕೂಡಾ ನಾನು ಉಪಚಾರ ಹೊಂದಿ ಬಿಡುಗಡೆಯಾದ ನಂತರ ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಬಂದು
ದೂರು ಸಲ್ಲಿಸುವುದಾಗಿ ತೀಳಿಸಿದ್ದೇನು .ಅದರಂತೆ ಇಂದು ದಿನಾಂಕ 17/07/2017 ರಂದು
ತಡವಾಗಿ ಠಾಣೆಗೆ ಬಂದು ಹೇಳಿಕೆ ಸಲ್ಲಿಸುತ್ತಿದ್ದೇನೆ.
ಕಾರಣ ನನಗೆ ನನ್ನ
ಗಂಡನಾದ 1) ಗೋವಿಂದ 2) ಕಿಶನ ತಂದೆ ನಂದು ರಾಠೋಡ 3) ಮಾವನಾದ ಗುರುನಾಥ 4) ಮೈದನರಾದ
ರಾಜು ತಂದೆ ಗುರುನಾಥ 5) ರವಿ ತಂದೆ ಗುರುನಾಥ 6) ಲಾಲು ತಂದೆ ನಂದು ರಾಠೋಡ ನನ್ನ
ಗಂಡನ ಚಿಕ್ಕಮ್ಮಳಾದ 7) ಸುನೀತಾಬಾಯಿ ಮತ್ತು 8) ಸುಬಾಸ ತಂದೆ ಗೇಮು ರಾಠೋಡ ಇವರೆಲ್ಲರೂ
ಸೇರಿ ನನ್ನಗೆ ತವರು ಮನೆಯಿಂದ ಹಣ ಬಂಗಾರ ತರುವಂತೆ ಬೇಡಿಕೆ ಇಟ್ಟು ಕೈಯಿಂದ ಹೋಡೆ ಬಡೆ
ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ಬಲವಂತವಾಗಿ ವಿಷ ಕೂಡಿಸಿ ನನ್ನನ್ನು ಕೋಲೆ
ಮಾಡಲು ಪ್ರಯತ್ನಿಸಿರುತ್ತಾರೆ . ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ
ದೋರಕಿಸಿ ಕೋಡಬೇಕು ಅಂತಾ ವಿನೆಂತಿ .
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 68/2017 ಕಲಂ 323,324,504,506 ಸಂ. 34 ಐಪಿಸಿ;- :-ದಿನಾಂಕ:16/07/2017
ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಫಿಯರ್ಾದಿಯು ಹಣಮಂತ ದೇವರ ಗುಡಿ ಹತ್ತಿರ ಕುಳಿತಾಗ
ಆರೋಪಿತರು ಬಂದವರೇ ಭೋಸಡಿ ಮಗನೆ ನೀನು ಮಾಡುತ್ತಿರುವ ಹೊಲದಲ್ಲಿ ರೇಣುಕಪ್ಪ, ಅಂಬ್ರೇಶ
ಇವರಿಗೆ ಪಾಲು ಬರುತ್ತದೆ ಪಾಲು ಕೊಡು ಅಂತಾ ಅಂದಾಗ ಫಿಯರ್ಾದಿಯು ಅವರಿಗೆ ಚಂದಾಪುರ
ಸೀಮಾಂತರದ ಹೊಲದಲ್ಲಿ ಪಾಲು ಬಂದಿದೆ ಈಗ ನಾನ್ಯಾಕೆ ಪಾಲು ಕೊಡಲಿ ಅಂತಾ ಅಂದಿದ್ದರಿಂದ
ಆರೋಪಿತರು ಭೋಸಡಿ ಮಗನೆ ನಿನ್ನ ಸೊಕ್ಕು ಬಹಳವಾಗಿದೆ ಅಂತಾ ಅಂದವರೇ ಫಿಯರ್ಾದಿಗೆ ಕೈಯಿಂದ
ಹೊಡೆಬಡೆ ಮಾಡುತ್ತಿರುವಾಗ ಆರೋಪಿ ಶರಣಪ್ಪ ಈತನು ಕಲ್ಲಿನಿಂದ ಎಡ ಹಣೆಗೆ ಹೊಡೆದು
ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 279/2017 ಕಲಂ 110 (ಇ &ಜಿ) ;- ದಿನಾಂಕ
17/07/2017 ರಂದು ಮದ್ಯಾಹ್ನ 02:30 ಗಂಟೆಗೆ ಸರಕಾರಿ ತಫರ್ೇ ಪಿಯರ್ಾದಿ ಶ್ರೀ
ವೆಂಕಣ್ಣ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆರವರು ಶಹಾಪೂರ ಹಳೆ ಬಸ್ ನಿಲ್ದಾಣದ
ಮುಂಭಾಗದಲ್ಲಿ ಸಂಚಾರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 02:00 ಪಿ.ಎಮ್ ಸುಮಾರಿಗೆ
ಭೀಮರಾಯನಗುಡಿ ಕಡೆಗೆ ಹೋಗುವ ರಸ್ತೆಯ ಮೇಲೆ ಅಮಂತ್ರಣ ಹೊಟಲ್ ಮುಂಭಾಗದಲ್ಲಿ ಒಬ್ಬ
ವ್ಯಕ್ತಿಯು ಜೋರಾಗಿ ಒದರಾಡುತ್ತಾ ಚೀರಾಡುತ್ತಾ ತನ್ನ ದೇಹದಾಡ್ರ್ಯತೆ ಪ್ರದಶರ್ಿಸುತ್ತಾ
ಹೋಗು ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ಮಕ್ಕಳೆ ಯಾರಾದರೂ ನನ್ನ ತಂಟೆಗೆ
ಬಂದರೆ ನಿಮಗೆ ಸುಮ್ಮನೆ ಬಿಡುವದಿಲ್ಲಾ ಒಂದು ಕೈ ನೋಡೆ ಬಿಡುತ್ತೇನೆ ಅನ್ನುತ್ತ
ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿತ್ತಿರುವದನ್ನು ನೋಡಿ ಅವನ ಹತ್ತಿರ ಹೋಗಿ ಹೆಸರು
ವಿಚಾರ ಮಾಡಲಾಗಿ ಹೆಸರು ಅಂಜಪ್ಪ ತಂದೆ ಸಿನಪ್ಪ ದಂಡನೊರ್ ವಯಾ: 22 ಜಾತಿ: ಉಪ್ಪಾರ ಉ:
ಒಕ್ಕಲುತನ ಸಾ: ಶೇಟ್ಟಕೇರಾ ಅಂತಾ ತಿಳಿಸಿದನು. ಈತನನ್ನು ಹಾಗೆಯೇ ಬಿಟ್ಟಲ್ಲಿ ತನ್ನ
ರೌಡಿ ಪ್ರವೃತ್ತಿ ಮುಂದುವರೆಸಿ ಸಾರ್ವಜನಿಕ ಅಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿ ಮಾಡುವ
ಸಂಭವ ಇರುವದರಿಂದ ಸದರಿಯವನಿಗೆ ಹಿಡಿದುಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ
ಮುಂಜಾಗ್ರತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ
ನಂಬರ 279/2017 ಕಲಂ 110 (ಇ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ
ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 200/2017 ಕಲಂಃ 379 ಐ.ಪಿ.ಸಿ. ಮತ್ತು 21 (3), 21 (4), 22 ಎಮ್.ಎಮ್.ಆರ್.ಡಿ ಆಕ್ಟ 1957;- ದಿನಾಂಕ:
17-07-2017 ರಂದು 7-30 ಎ.ಎಮ್.ಕ್ಕೆ ಶ್ರೀ ಕೇದಾರನಾಥ ಆರ್.ಪಿ.ಐ, ಡಿ.ಎ.ಆರ್ ಘಟಕ
ಯಾದಗಿರಿ ಇವರು ಠಾಣೆಗೆ ಬಂದು ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೇನಂದರೆ ಮಾನ್ಯ
ಎಸ್.ಪಿ ಸಾಹೇಬರು ಯಾದಗಿರಿರವರು ನನಗೆ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು
ಪೆಟ್ರೋಲಿಂಗ ಹೋಗಲು ಸೂಚಿಸಿದ್ದರಿಂದ ನಾನು ಸಕರ್ಾರಿ ಜೀಪ ನಂಬರ ಕೆ.ಎ 33 ಜಿ 228
ನೇದ್ದರಲ್ಲಿ ನಮ್ಮ ಸಿಬ್ಬಂದಿಯವರೊಂದಿಗೆ ಇಂದು ದಿನಾಂಕಃ 17/07/2017 ರಂದು 1-00
ಎ.ಎಮ್ ಕ್ಕೆ ಯಾದಗಿರಿಯಿಂದ ಹೊರಟು ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಿದ್ದಾಗ
ತಿಂಥಣಿ ಬ್ರಿಡ್ಜ್ ವರೆಗೆ ಹೋಗಿ ಅಲ್ಲಿಂದ ಮರಳಿ ಬರುತ್ತಿರುವಾಗ ರುಕ್ಮಾಪೂರ ಕ್ರಾಸ್
ಹತ್ತಿರ ಒಟ್ಟು 6 ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಹೊರಟಿದ್ದು ಅವುಗಳನ್ನು
ತಡೆದು ನಿಲ್ಲಿಸಲಾಗಿ ಎಲ್ಲಾ ಟ್ರ್ಯಾಕ್ಟರಗಳ ಚಾಲಕರು ಓಡಿ ಹೋಗಿದ್ದು ಸದರಿ
ಟ್ರ್ಯಾಕ್ಟರಗಳನ್ನು ಪರಿಶಿಲಿಸಿ ನೋಡಲಾಗಿ 1) ಒಂದು ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ
ನಂಬರ ಕೆ.ಎ.33-ಟಿ.ಎ-1774 ಹಾಗು ಟ್ರ್ಯಾಲಿ ನಂಬರ ಕೆ.ಎ 33-ಟಿ.ಎ-5596, 2) ಒಂದು
ಸ್ವರಾಜ್ ಟ್ರ್ಯಾಕ್ಟರ ಪಾಸಿಂಗ್ ನಂಬರ ಇರುವದಿಲ್ಲ. ಅದರ ಇಂಜಿನ್ ನಂಬರ 39
1357/ಎಸ್.ವೈ.ಡಿ 04916 ಇದ್ದು ಹಾಗು ಅದರೊಂದಿಗೆ ಇರುವ ಟ್ರ್ಯಾಲಿಗೆ ಸಹ ಪಾಸಿಂಗ ನಂಬರ
ಇರುವದಿಲ್ಲ. 3) ಒಂದು ಸ್ವರಾಜ್ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ 7634 ಹಾಗು
ಟ್ರ್ಯಾಲಿ ನಂಬರ ಕೆ.ಎ 33 ಟಿ 7635 4) ಒಂದು ಮಹಿಂದ್ರಾ ಟ್ರ್ಯಾಕ್ಟರ ನಂಬರ ಕೆ.ಎ 33
ಟಿ.ಎ 7717 ಹಾಗು ಟ್ರ್ಯಾಲಿ ಚೆಸ್ಸಿ ನಂಬರ 26/2017 5) ಒಂದು ಸ್ವರಾಜ್ 735 ಎಕ್ಸ್.ಟಿ
ಕಂಪನಿಯ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 8731 ಹಾಗು ಟ್ರ್ಯಾಲಿ ನಂಬರ ಕೆ.ಎ 33
ಟಿ.ಎ 8732 6) ಒಂದು ಸ್ವರಾಜ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 5010 ಹಾಗು ಟ್ರ್ಯಾಲಿ
ನಂಬರ ಕೆ.ಎ 33 ಟಿ.ಎ 5011 ಇರುತ್ತದೆ. ಸದರಿ 6 ಟ್ರ್ಯಾಕ್ಟರಗಳಲ್ಲಿ ಒಟ್ಟು 12 ಘನ
ಮೀಟರ ಮರಳು ಇದ್ದು ಅದರ ಒಟ್ಟು ಅಂದಾಜು ಮೊತ್ತ 12,800/-ರೂ ಆಗುತ್ತದೆ. 6
ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೇ ಕೃಷ್ಣಾ
ನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಹೊರಟಿದ್ದು ಇರುತ್ತದೆ. ಸದರಿ
ಟ್ರ್ಯಾಕ್ಟರಗಳ ಚಾಲಕರು ಓಡಿ ಹೋಗಿದ್ದು ಅವರ ಹೆಸರು, ವಿಳಾಸ ಗೊತ್ತಾಗಿರುವದಿಲ್ಲ.
ಆದ್ದರಿಂದ ಸದರಿ 6 ಟ್ರ್ಯಾಕ್ಟರಗಳನ್ನು ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು, ಸದರಿ
ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ
ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 200/2017 ಕಲಂ. 379
ಐ.ಪಿ.ಸಿ. ಮತ್ತು 21 (3), 21 (4), 22 ಎಮ್.ಎಮ್.ಆರ್.ಡಿ ಆಕ್ಟ 1957 ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 136/2017 ಕಲಂ:323,498(ಎ),302,109 ಸಂ 149 ಐಪಿಸಿ ;- ದಿನಾಂಕ:
17/07/2017 ರಂದು 6-30 ಪಿ.ಎಮ್ ಕ್ಕೆ ಶ್ರೀ ವೀರಣ್ಣ ಎ.ಎಸ್.ಐ ಯಾದಗಿರಿ ನಗರ ಠಾಣೆ
ರವರು ಒಂದು ಲಿಖಿತ ಅಜರ್ಿ ತಂದು ಹಾಜರು ಪಡಿಸಿದ್ದು ಸದರಿ ಅಜರ್ಿ ಸಾರಾಂಶವೇನೆಂದರೆ,
ನಾನು ಈರಪ್ಪ ತಂದೆ ಭೀಮಪ್ಪ ಒಕ್ಕಲದಿನ್ನಿ ವ|| 50 ವರ್ಷ ಜಾ|| ಮಾದಿಗ ಉ|| ಒಕ್ಕಲುತನ
ಸಾ|| ಕೊಪ್ಪರ ತಾ|| ದೇವದುರ್ಗ ಜಿ|| ರಾಯಚೂರು ಆದ ನಾನು ದೂರು ನೀಡುವುದೇನೆಂದರೆ, 2009
ನೇ ಸಾಲಿನಲ್ಲಿ ಹನುಮಂತಿಯನ್ನು ಕಿಲ್ಲನಕೇರಿ ಗ್ರಾಮದ ನಮ್ಮ ಜಾತಿಯವರಾದ ರಾಮಣ್ಣನವರ
ಮಗನಾದ ಮಹೇಂದ್ರನೊಂದಿಗೆ ಹಿಂದೂ ಸಾಂಪ್ರದಾಯದ ಪ್ರಕಾರ ಮದುವೆಮಾಡಿ ಕೊಟ್ಟಿರುತ್ತೇವೆ.
ಮದುವೆಯಾಗಿ ಸುಮಾರು 8 (ಎಂಟು) ವರ್ಷಗಳಾಗಿದ್ದು ನನ್ನ ಮಗಳು ಮತ್ತು ಅಳಿಯನಿಗೆ
ಮಕ್ಕಳಾಗಿರುವುದಿಲ್ಲ. ಇದರಿಂದ 5-6 (ಐದಾರು) ವರ್ಷಗಳವರೆಗೆ ಇಬ್ಬರು ದಾಂಪತ್ಯ ಜೀವನ
ಸುಖಕರವಾಗಿತ್ತು. ಈ ಎರಡು ವರ್ಷಗಳಿಂದ ಮಹೇಂದ್ರನು ನನ್ನ ಮಗಳಿಗೆ ನೀನು ವಿಚ್ಚೇದನವನ್ನು
ನೀಡು ನಾನು ಬೇರೆ ಮದುವೆಯಾಗುತ್ತೇನೆ ಅಂತಾ ಕಿರುಕುಳ ನೀಡುತ್ತಿದ್ದನು ಮತ್ತು ಅನೇಕ
ಬಾರಿ ದೈಹಿಕ ಹಲ್ಲೆ ಮಾಡಿರುತ್ತಾನೆ. ಈ ವಿಷಯವನ್ನು ನನ್ನ ಮಗಳು ನನಗೆ ತಿಳಿಸಿದಾಗ ನಾನು
ಮತ್ತು ನನ್ನ ಮಗನಾದ ಅಜರ್ುನ ಸೇರಿಕೊಂಡು ಯಾದಗಿರಿಗೆ ಹೋಗಿ ನನ್ನ ಅಳಿಯ ಮಹೇಂದ್ರನಿಗೆ
ಬುದ್ದಿವಾದ ಹೇಳಿ ಬಂದಿರುತ್ತೇವೆ. ತದ ನಂತರ ನನ್ನ ಮಗಳಿಗೆ ಮಕ್ಕಳು ಆಗದ ಕಾರಣ ನಾವು
ಬಹಾಳ ಚಿಂತೆಯಲ್ಲಿದ್ದೆವು. ನನ್ನ ಮಗಳನ್ನು ಬೆಂಗಳೂರಿನ ನುರಿತ ವೈದ್ಯರಲ್ಲಿ ಚಿಕಿತ್ಸೆ
ಕೊಡಿಸಿರುತ್ತೇವೆ. ಡಾಕ್ಟರ್ ಏನು ತೊಂದರೆ ಇಲ್ಲ ಮುಂದೆ ಮಕ್ಕಳು ಆಗುತ್ತೇವೆ ಎಂದು
ತಿಳಿಸಿದ್ದಾರೆ. ಇದಾದ ನಂತರ ನನ್ನ ಅಳಿಯನಾದ ಮಹೇಂದ್ರನನ್ನು ಚಿಕಿತ್ಸೆಗೆ ಕರೆದಾಗ ನನಗೆ
ಏನಾಗಿದೆ ಚೆನ್ನಾಗಿದ್ದೇನೆ ನಿನ್ನ ಮಗಳಿಗೆ ಮಕ್ಕಳ ದೋಷವಿದೆ ಎಂದು ಚಿಕಿತ್ಸೆಯನ್ನು
ನಿರಾಕರಿಸಿ ನನ್ನ ಮಗಳಿಗೆ ಮೋಸ ಮಾಡಿರುತ್ತಾನೆ. ಮಕ್ಕಳು ಆಗದೆ ಇರುವಂತಹ ತೊಂದರೆಗಳು
ತನ್ನಲ್ಲೇ ಇಟ್ಟುಕೊಂಡು ನನ್ನ ಮಗಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ
ಬಂದಿರುತ್ತಾನೆ. ಈತನು 2 (ಎರಡು) ವರ್ಷಗಳ ಹಿಂದೆ ಗೌಡಿಗೇರಿ ಗ್ರಾಮದ ಹೇಮಾವತಿ ತಾಯಿ
ಮಹಾದೇವಮ್ಮ ಈಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನ್ನು ತನ್ನ ಮಗಳು
ಪ್ರಶ್ನಿಸಿದ್ದಕ್ಕೆ ನನ್ನ ಮಗಳ ಮೇಲೆ ಹಲ್ಲೆ ಮಾಡಿರುತ್ತಾನೆ. ನಾವು ಈ ವಿಷಯ ನಮಗೆ
ಗೊತ್ತಾದ ಮೇಲೆ ಕಿಲ್ಲನಕೇರಿ ಗ್ರಾಮದ ಮಹೇಂದ್ರನ ಮನೆಯಲ್ಲಿ ಹಿರಿಯರೆಲ್ಲ ಸೇರಿಕೊಂಡು
ಆಕೆಯ ಸಂಬಂಧವನ್ನು ಬಿಡಿಸಿರುತ್ತೇವೆ. ಇದಾದ ಮೇಲೆ ಈ ಮೂರು ತಿಂಗಳ ಹಿಂದಿನಿಂದ ಮಂಡ್ಯ
ಜಿಲ್ಲೆಯ ಗಾಯತ್ರಿ ಎಂಬ ಯುವತಿಯನ್ನು ಪುನಃ ಅಕ್ರಮ ಸಂಬಂಧ ಹೊಂದಿದ್ದು ಇದರ ಬಗ್ಗೆ ನನ್ನ
ಮಗಳಿಗೆ ಗೊತ್ತಾಗಿ ನಮ್ಮ ಮುಂದೆ ಈ ವಿಷಯವನ್ನು ತಿಳಿಸಿದ್ದಾಳೆ. ಆಗ ನಾವು ದೂರವಾಣಿಯ
ಮುಖಾಂತರ ಕರೆಮಾಡಿ ಮಹೇಂದ್ರನಿಗೆ ಮತ್ತು ಆತನ ತಾಯಿಯಾದ ಮಹಾದೇವಮ್ಮಳಿಗೆ ಮಾತನಾಡಿ ನಮ್ಮ
ಮಗಳಿಗೆ ತೊಂದರೆ ಕೊಡಬೇಡಿರಿ ನಾವು ಬರುತ್ತೇವೆ ಎಲ್ಲರು ಸೇರಿಕೊಂಡು ಮಾತನಾಡೋಣ ನನ್ನ
ಮಗಳಿಗೆ ಇವತ್ತಿಲ್ಲ ನಾಳೆಯ ದಿನಗಳಲ್ಲಿ ಮಕ್ಕಳು ಆಗುತ್ತೇವೆಂದು ಡಾಕ್ಟರ್ ಬರವಸೆಯನ್ನು
ಕೊಟ್ಟಿರುತ್ತಾರೆ ಎಂದು ದೂರವಾಣಿಯ ಮುಖಾಂತರ ತಿಳಿಸಿ ನಾವು ಸೋಮವಾರ (17-07-2017)
ರಂದು ಯಾದಗಿರಿಗೆ ಬರುತ್ತೇವೆ ಹಿರಿಯರ ಸಮ್ಮುಖದಲ್ಲಿ ಮಾತನಾಡೋಣ ಎಂದು ಹೇಳಿದೆವು.
ನಿನ್ನೆ ದಿನಾಂಕ: 16-07-2017 ಭಾನುವಾರದಂದು ಸಮಯ ಸುಮಾರು ಏಳು ಗಂಟೆಗೆ (7 ಸಾಯಂಕಾಲ)
ಚಂದ್ರಶೇಖರ ತಂದೆ ರಾಮಣ್ಣ ಈತನು ಫೋನ್ (ದೂರವಾಣಿ) ಮಾಡಿ ನನ್ನ ಅಣ್ಣನಾದ
ಮಲ್ಲಿಕಾಜರ್ುನನಿಗೆ ಮತ್ತು ನನಗೆ ನಿಮ್ಮ ಮಗಳು ಮತ್ತು ಅಳಿಯ ಜಗಳವಾಡಿದ್ದಾರೆ ಅದಕ್ಕಾಗಿ
ನಿಮ್ಮ ಮಗಳನ್ನು ಕಿಲ್ಲನಕೇರಿಗೆ ಕರೆದುಕೊಂಡು ಹೋಗುತ್ತೇನೆ ನೀವು ಅಲ್ಲಿಗೆ ಸೋಮವಾರ
ಬರ್ರೀ ಎಂದು ಹೇಳಿದನು.
ಇಂದು ಬೆಳಿಗ್ಗೆ 04.38 ನಿಮಿಷಕ್ಕೆ ನನ್ನ ಮಗ
ಅಜರ್ುನಗೆ ಕರೆಮಾಡಿ ಹನುಮಾತಿ ಎಣ್ಣೆ (ಪಾಯಿಜನ್) ಕುಡಿದಿದ್ದಾಳೆ ರಿಮ್ಸ್ ಆಸ್ಪತ್ರೆ
ರಾಯಚೂರಿಗೆ ಬಂದಿದ್ದೇವೆ ಬರ್ರೀ ಎಂದು ಹೇಳಿದರು ಎಂದು ನನ್ನ ಮಗ ನನಗೆ ತಿಳಿಸಿದನು.
ಗಾಬರಿಗೊಂಡು ನಾನು ಮತ್ತು ಕುಟುಂಬದ ಸಂಬಂಧಿಕರು ಸೇರಿಕೊಂಡು ಗಾಡಿಮಾಡಿ ರಿಮ್ಸ್
ಆಸ್ಪತ್ರೆಗೆ 6.30 ಕ್ಕೆ ಬಂದು ನೋಡಲಾಗಿ ನನ್ನ ಮಗಳ ಸತ್ತ ಶವವನ್ನು ಶವಗಾರ ಕೋಣೆಯಲ್ಲಿ
ಇಟ್ಟಿದ್ದರು. ಆದರೆ ನನ್ನ ಮಗಳು ಆತ್ಮ ಹತ್ಯೆ ಮಾಡಿಕೊಳ್ಳುವಂತಹ ಹೇಡಿ ಅಲ್ಲ
ವಿದ್ಯಾವಂತೆ ಹಾಗೂ ಧೈರ್ಯಶಾಲಿಯಾಗಿದ್ದಳು.
ನಿನ್ನೆ ರಾತ್ರಿಯಲ್ಲಿ 1]
ಮಹೇಂದ್ರ ತಂದೆ ರಾಮಣ್ಣ 2] ಮಹಾದೇವಮ್ಮ ಗಂಡ ರಾಮಣ್ಣ 3] ಚಂದ್ರಶೇಖರ ತಂದೆ ರಾಮಣ್ಣ 4]
ಶರಣಪ್ಪ ತಂದೆ ರಾಮಣ್ಣ ಇವರೆಲ್ಲರು ಸೇರಿಕೊಂಡು ಸುಮಾರು ಒಂಬತ್ತು ಗಂಟೆಗೆ ಪೊಲೀಸ್
ಕ್ವಾಟ್ರಸ್ ಯಾದಗಿರಿಯ ಮನೆ ನಂ. ಏಳರಲ್ಲಿ (7) ಕೂಡಾಕಿ ದೈಹಿಕ ಹಲ್ಲೆ ಮಾಡಿ ಬಲವಂತವಾಗಿ
ವಿಚ್ಚೇದನ ಸಹಿ ಹಾಕು ಎಂದು ಇವರೆಲ್ಲ ಒತ್ತಾಯ ಮಾಡುತ್ತಿದ್ದಾಗ ನನ್ನ ಮಗಳು ಇದಕ್ಕೆ
ಒಪ್ಪದಿದ್ದಾಗ ಆಕೆಗೆ ಶೌಚಾಲಯ ತೊಳೆಯುವಂತ ಔಷಧವನ್ನು (ಫೆನಾಯಿಲ್) ಕುಡಿಸಿ ಆಕೆಯನ್ನು
ಸಾಯಿಸಿರುತ್ತಾರೆ.
No comments:
Post a Comment