Police Bhavan Kalaburagi

Police Bhavan Kalaburagi

Thursday, July 27, 2017

Yadgir District Reported Crimes

                                  Yadgir District Reported Crimes

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ: 78 (3) ಕೆಪಿ ಆಕ್ಟ ;- ದಿನಾಂಕ 26-07-2017 ರಂದು 12.00 ಪಿ.ಎಂಕ್ಕೆ ಆರೋಪಿತನು  ಯಾಳಗಿ ಗ್ರಾಮದ ಹನುಮಾನ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಜನರಿಂದ ಹಣ ಪಡದು ಮಟಕಾ ನಂಬರ ಬರೆದುಕೊಳುತ್ತಿದ್ದಾಗ ಫಿಯರ್ಾದಿದಾರರು, ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ವಶಕ್ಕೆ ಪಡೆದು 2750/- ನಗದು ಹಣ, ಒಂದು ಪೆನ್ನು ಮತ್ತು 2 ಮಟಕಾ ಚೀಟಿಗಳನ್ನು ಜಪ್ತಿ ಪಡಿಸಿಕೊಂಡು ಬಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದರಿಂದ ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 140/2017 ಕಲಂ 78 (3) ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 122-2017 ಕಲಂ 143, 323, 498(ಎ), 494 ಸಂಗಡ 149 ಐಪಿಸಿ & 3 4 ಡಿಪಿ ಯಾಕ್ಟ್ ;- ಫಿರ್ಯಾದಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ಸುರೇಶ ತಂದೆ ಅಂಬ್ರಪ್ಪ ಹವಲ್ದಾರ ಇವನೊಂದಿಗೆ ಹುಣಸಗಿಯ ಯು.ಕೆ.ಪಿ ಕ್ಯಾಂಪಿನ ಬಸವಣ್ಣಪ್ಪ ದೇವಾಲಯದಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ಆರು ತೊಲೆ ಬಂಗಾರ ಹಾಗೂ ಅರವತ್ತು ಸಾವಿರ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು, ಎರಡು ವರ್ಷಗಳ ಕಾಲ ಫಿರ್ಯಾದಿಗೆ ಆರೋಪಿತರು ಸರಿಯಾಗಿ ನೋಡಿಕೊಂಡು ನಂತರ ಫಿರ್ಯಾದಿಗೆ ಆರೋಪಿತರೆಲ್ಲರೂ ಕೂಡಿ ಇನ್ನೂ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿ ಈಗ ಒಂದು ತಿಂಗಳ ಹಿಂದೆ ಫಿರ್ಯಾದಿಯ ಗಂಡ ಎರಡನೆ ಮದುವೆ ಮಾಡಿಕೊಂಡಿರುತ್ತಾನೆ ಅಂತಾ ಇತ್ಯಾದಿ ಲಿಖಿತ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಅದೆ.


ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 123-2017 ಕಲಂ 78(3)  ಕೆ.ಪಿ ಯಾಕ್ಟ ;- ದಿನಾಂಕ:25/07/2017 ರಂದು 18.39 ಗಂಟೆಯ ಸುಮಾರಿಗೆ ಆರೋಪಿತರು ಗುಂಡಲಗೇರಾ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಎ.ಎಸ್.ಐ (ಸಿ) ಹೆಚ್.ಸಿ-130 ಪಿ.ಸಿ-288 305 ರವರೊಂದಿಗೆ ದಾಳಿ ಮಾಡಿದ್ದು ಒಬ್ಬನು ಸಿಕ್ಕಿದ್ದು ಇಬ್ಬರೂ ಓಡಿಹೋಗಿದ್ದು, ಸಿಕ್ಕವನಿಂದಾ 790=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಒಂದು ಮೋಬೈಲ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

No comments: