¢£ÀA¥Àæw C¥ÀgÁzsÀUÀ¼À ªÀiÁ»w
¢£ÁAPÀ 20-09-2017
ºÀ½îSÉÃqÀ (©) ¥Éưøï oÁuÉ AiÀÄÄ.r.Dgï £ÀA. 10/2017, PÀ®A. 174
¹.Dgï.¦.¹ :-
ದಿನಾಂಕ 18-09-2017
ರಂದು
ಫಿರ್ಯಾದಿ ಮಹೇಶ ತಂದೆ ಜಗನ್ನಾಥ ಶಿರಸೆ ವಯ 28 ವರ್ಷ, ಜಾತಿ: ಲಿಂಗಾಯ, ಸಾ: ಹಿಲಾಲಪೂರ ರವರ ತಾಯಿಗೆ
ಮೈಲ್ಲಿ ಆರಾಮ ಇಲ್ಲದಿರುವುದರಿಂದ ತನ್ನ ತಾಯಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರಲು ತನ್ನ ಹಿರೊ
ಹೊಂಡಾ ಫ್ಯಾಶನ್ ಪ್ರೋ ಮೋಟಾರ ಸೈಕಲ ನಂ. ಕೆಎ-39/ಎಲ್-5895 ನೇದ್ದರ ಮೇಲೆ ತನ್ನ ತಾಯಿಗೆ ಹಿಂದುಗಡೆ
ಕೂಡಿಸಿಕೊಂಡು ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಹಿಲಾಲಪೂರ
ಹಳ್ಳಿಖೇಡ (ಬಿ) ರೋಡ ಹಳ್ಳಿಖೇಡ (ಬಿ) ಗ್ರಾಮದ ಭಾಯಿ ಬನ್ಸಿಲಾಲ ಪ್ರೌಢ ಶಾಲೆ ಹತ್ತಿರ ರೋಡಿನ
ಮೇಲೆ ಫಿರ್ಯಾದಿಯು ತನ್ನ ಮೋಟಾರ ಸೈಕಲ ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಹಿಂದುಗಡೆ
ಕುಳಿತ ಫಿರ್ಯಾದಿಯ ತಾಯಿ ಒಮ್ಮೇಲೆ ನನಗೆ ತಲೆ ಸುತ್ತುತಿದೆ ಅಂತ ಅನ್ನಲು ಫಿರ್ಯಾದಿಯು ತನ್ನ
ಮೋಟಾರ ಸೈಕಲ ನಿಲ್ಲಿಸುವಷ್ಟರಲ್ಲಿ ತಾಯಿ ಒಮ್ಮೇಲೆ ಚೆಕರ್ ಬಂದು ಆಕಸ್ಮಿಕವಾಗಿ ಮೋಟಾರ ಸೈಕಲ
ಮೇಲಿಂದ ಕೆಳಗಡೆ ಬಿದ್ದಿರುತ್ತಾಳೆ, ಕೆಳಗೆ ಬಿದ್ದ ಪರಿಣಾಮ ಫಿರ್ಯಾದಿಯ ತಾಯಿಗೆ ತಲೆಯ ಹಿಂದುಗಡೆ
ಹತ್ತಿ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ತನ್ನ ತಾಯಿಗೆ ಚಿಕಿತ್ಸೆ ಕುರಿತು
ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು, ಅಲ್ಲಿಂದ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ
ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಗಳ
ಸಲಹೆ ಮೇರೆಗೆ ತನ್ನ ತಾಯಿಗೆ ಹೈದ್ರಬಾದ ಗಾಂಧಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಿನಾಂಕ 19-09-2017
ರಂದು
ದಾಖಲು ಮಾಡಿದಾಗ ಫಿರ್ಯಾದಿಯ ತಾಯಿ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ
ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಗುನ್ನೆ ನಂ. 165/2017, ಕಲಂ. 457, 380 ಐಪಿಸಿ :-
ದಿನಾಂಕ 17-9-2017 ರಂದು ಫಿರ್ಯಾದಿ ಸೈಯದ ಇಬ್ರಾಹಿಂ ತಂದೆ ಮಹೆಬೂಬಸಾಬ ಮೌಜನ ವಯ:
36 ವರ್ಷ, ಜಾತಿ: ಮುಸ್ಲಿಂ, ಸಾ: ಮುತ್ತಂಗಿ,
ತಾ: ಹುಮನಾಬಾದ ರವರು ತಮ್ಮ ಹೊಲದಲ್ಲ ನೇಗಿಲು ಹೊಡೆಯು ಪ್ರಯುಕ್ತ ಮಾಣಿಕ ತಂದೆ ರಾಚಪ್ಪಾ
ಎಖೆಳ್ಳಿ ವಯ: 50 ವರ್ಷ, ಸಾ: ಮುತ್ತಂಗಿ ಇವರ ಕಡೆಯಿಂದ
ಒಂದು ಕೆಂಪು ಹಂಡ ಬಣ್ಣವುಳ್ಳ ಎತ್ತು ಕೆಲಸಕ್ಕೆಂದು ತೆಗೆದುಕೊಂಡು ತನ್ನ ಕರಿ ಹಂಡ ಒಂದು ಎತ್ತು
ಕೊಟ್ಟಿಗೆಯಿಂದ ಬಿಟ್ಟುಕೊಂಡು ತಮ್ಮ ಹೊಲಕ್ಕೆ ಹೊಗಿ ಅಲ್ಲಿ ಹೊಲದ ಕೆಲಸಗಳನ್ನು ಮಾಡಿ ಆ ಎರಡು
ಎತ್ತುಗಳು ಮರಳಿ ತಮ್ಮ ಮನೆಗೆ ತೆಗೆದುಕೊಂಡು
ಬಂದು ಅವುಗಳನ್ನು ತಮ್ಮ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಕಟ್ಟಿ 2200 ಗಂಟೆಗೆ ಅವುಗಳಿಗೆ
ಮೇವು ಹಾಕಿ ಫಿರ್ಯಾದಿಯು ಮನೆಯಲ್ಲಿ ಬಂದು ಮಲಗಿಕೊಂಡಿದ್ದು, ಎಂದಿನಂತೆ ಬೆಳಿಗ್ಗೆ 0600 ಗಂಟೆಗೆ ಎದ್ದು ಕೊಟ್ಟಿಗೆಯ ಕಡೆಗೆ ಹೊದಾಗ
ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಂದು ಕರಿ ಹಂಡ ಮತ್ತು ಇನ್ನೊಂದು ಕೆಂಪು ಹಂಡ ಬಣ್ಣವುಳ್ಳ ಎರಡು
ಎತ್ತುಗಳು ಕಾಣಲಿಲ್ಲ, ನಂತರ ಫಿರ್ಯಾದಿಯು ತನ್ನ ತಂದೆ ಮತ್ತು ಮನೆಯವರಿಗೆ ಎಬ್ಬಿಸಿ ತಿಳಿಸಲು
ಅವರು ಬಂದು ನೋಡಿದ್ದು ಅಲ್ಲದೆ ಕೆಂಪು ಹಂಡ ಎತ್ತಿನ ಮಾಣಿಕ ಇತನಿಗೆ ಸದರಿ ವಿಷಯ ತಿಳಿಸಿದ್ದು, ಸದರಿಯವರು
ಸಹ ಊರಲ್ಲಿ ಎಲ್ಲಾ ಕಡೆ ತಿರುಗಾಡಿದರು ಸಹ ಪತ್ತೆಯಾಗಿಲ್ಲಾ, ಇಲ್ಲಿಯವರೆಗೆ ಎಲ್ಲಾ ಕೆಡೆಗೆ
ಹುಡುಕಾಡಿದರು ಒಂದು ಕೆಂಪು ಮತ್ತು ಒಂದು ಕರಿ
ಹಂಡ ಬಣ್ಣವುಳ್ಳ ಎರಡು ಎತ್ತುಗಳು ಅ.ಕಿ 45,000/- ರೂ. ನೇದ್ದವುಗಳು
ಪತ್ತೆಯಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-9-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment